For Quick Alerts
ALLOW NOTIFICATIONS  
For Daily Alerts

ಅಧ್ಯಯನ ವರದಿ: ದ್ರಾಕ್ಷಿ ಮರೆವಿನ ಕಾಯಿಲೆಯನ್ನು ನಿಯಂತ್ರಿಸುತ್ತದೆ

By Hemanth
|

ವಯಸ್ಸಾಗುತ್ತಿರುವಂತೆ ಮರೆವು ಬರುವುದು ಸಹಜ. ಆದರೆ ವಯಸ್ಸಾಗುವುದಕ್ಕಿಂತ ಮೊದಲೇ ಮರೆವು ಕಾಣಿಸಿಕೊಳ್ಳುವುದು ಅಲ್ಜಮೈರ್ ಲಕ್ಷಣಗಳಲ್ಲಿ ಒಂದಾಗಿದೆ. ಅಕಾಲಿಕವಾಗಿ ಮರೆವು ಕಾಣಿಸಿಕೊಂಡವರನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಪ್ರತೀದಿನ ದ್ರಾಕ್ಷಿಯನ್ನು ತಿಂದರೆ ಅಲ್ಜಮೈರ್ ಬರುವಂತಹ ಸಾಧ್ಯತೆಯನ್ನು ಕಡಿಮೆ ಮಾಡಬಹುದು ಎಂದು ಕಂಡುಕೊಳ್ಳಲಾಗಿದೆ.

Grapes

ಅಲ್ಜಮೈರ್ ಗೆ ಸಂಬಂಧಿಸಿದ ಆರಂಭಿಕ ಲಕ್ಷಣಗಳು ಕಾಣಿಸಿಕೊಳ್ಳದಂತೆ ಮಾಡುವಲ್ಲಿ ದ್ರಾಕ್ಷಿಯು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ದ್ರಾಕ್ಷಿಯಲ್ಲಿರುವ ಕೆಲವೊಂದು ಅಂಶಗಳು ಮೆದುಳಿನ ರಕ್ಷಣೆ ಮಾಡುವ ಸಾಮರ್ಥ್ಯವಿದೆ ಎಂದು ಅಧ್ಯಯನದ ತನಿಖೆ ನಡೆಸಿರುವ ಅಮೆರಿಕಾದ ಲಾಸ್ ಏಂಜಲೀಸ್ ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಡೇನಿಯಲ್ ಸಿಲ್ವರ್ಮೆನ್ ಹೇಳಿದರು.

ಈ ಅಧ್ಯಯನದಿಂದ ಕಂಡುಕೊಂಡ ವಿಚಾರವೆಂದರೆ ದ್ರಾಕ್ಷಿಯು ನರ ಹಾಗೂ ಹೃದಯದ ಆರೋಗ್ಯಕ್ಕೆ ತುಂಬಾ ಪರಿಣಾಮಕಾರಿಯಾಗಿದೆ. ಆದರೆ ಇದನ್ನು ಸಂಪೂರ್ಣವಾಗಿ ದೃಢಪಡಿಸಲು ಪ್ರಯೋಗಾಲಯಗಳಲ್ಲಿ ಇನ್ನಷ್ಟು ಸಂಶೋಧನೆ ನಡೆಸುವ ಅಗತ್ಯವಿದೆ ಎಂದು ಸಿಲ್ವರ್ಮೆನ್ ತಿಳಿಸಿದರು. ದ್ರಾಕ್ಷಿ ರಸದಲ್ಲಿ ಅಡಗಿರುವ 7 ಸೌಂದರ್ಯದ ರಹಸ್ಯ

ದ್ರಾಕ್ಷಿಯನ್ನು ಆಹಾರ ಕ್ರಮದಲ್ಲಿ ಸೇರಿಸುವುದರಿಂದ ಚಯಾಪಚಯ ಕ್ರಿಯೆಯು ಕುಗ್ಗುವುದನ್ನು ತಡೆಯುತ್ತದೆ. ಮೆದುಳಿನ ಈ ಭಾಗಗಳಲ್ಲಿ ಚಯಾಪಚಯ ಕ್ರಿಯೆಯು ಕುಗ್ಗುವುದು ಅಲ್ಜಮೈರ್ ನ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ. ದ್ರಾಕ್ಷಿಯನ್ನು ಆಹಾರದಲ್ಲಿ ಸೇರಿಸಿಕೊಂಡವರ ಮೆದುಳಿನ ಚಯಾಪಚಯ ಕ್ರಿಯೆಯು ಸರಾಗವಾಗಿದ್ದು, ಅವರ ಏಕಾಗ್ರತೆ ಮತ್ತು ಕೆಲಸ ಮಾಡುವ ಜ್ಞಾಪಕಶಕ್ತಿಯು ದ್ರಾಕ್ಷಿ ಸೇವಿಸದೆ ಇರುವವರಿಗಿಂತ ಉತ್ತಮವಾಗಿತ್ತು.

ಈ ಅಧ್ಯಯನಕ್ಕೆ ಒಳಪಟ್ಟವರನ್ನು ಎರಡು ಕಪ್ ದ್ರಾಕ್ಷಿಗೆ ಸಮಾನವಾಗುವಷ್ಟು ದ್ರಾಕ್ಷಿಯ ಹುಡಿಯನ್ನು ಸೇವಿಸಲು ಸೂಚಿಸಲಾಗಿತ್ತು. ಈ ಹುಡಿಯನ್ನು ದ್ರಾಕ್ಷಿಯಂತಹ ಸುವಾಸನೆ ಮತ್ತು ರುಚಿ ಕಂಡುಬರುತ್ತಿತ್ತು. ಆರು ತಿಂಗಳು ಇದನ್ನು ಸೇವಿಸಿದ ಬಳಿಕ ಮೆದುಳಿನ ಚಯಾಪಚಯದಲ್ಲಿ ಗಣನೀಯ ಬದಲಾವಣೆ ಕಂಡುಬಂದಿದೆ. ಅಧ್ಯಯನಕ್ಕೆ ಒಳಪಟ್ಟವರನ್ನು ಆರಂಭಿಕ ಹಂತ ಹಾಗೂ ಆರು ತಿಂಗಳ ಬಳಿಕ ತಪಾಸನೆಗೆ ಒಳಪಡಿಸಲಾಯಿತು. ದ್ರಾಕ್ಷಿ ಹಣ್ಣು- ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದು

ದ್ರಾಕ್ಷಿಯು ಮೆದುಳಿನ ಕೆಲ ಭಾಗಗಳಲ್ಲಿ ಆರೋಗ್ಯಕರ ಚಯಾಪಚಯ ಕ್ರಿಯೆಯನ್ನು ಸಂರಕ್ಷಿಸುತ್ತದೆ. ಚಯಾಪಚಯ ಕ್ರಿಯೆಯು ಕುಗ್ಗಿದಾಗ ಅಲ್ಜಮೈರ್ ನ ಲಕ್ಷಣಗಳು ತಮ್ಮ ಹಿಡಿತ ಸಾಧಿಸುತ್ತವೆ. ದ್ರಾಕ್ಷಿ ಸೇವನೆ ಮಾಡದೆ ಇರುವವರ ಮೆದುಳಿನ ಈ ಭಾಗದಲ್ಲಿ ಚಯಾಪಚಯದ ಕುಗ್ಗುವಿಕೆ ಗಣನೀಯವಾಗಿತ್ತು ದ್ರಾಕ್ಷಿಯಲ್ಲಿರುವ ಪಾಲಿಪೆನಾಲ್ಸ್ ಆ್ಯಂಟಿಆಕ್ಸಿಡೆಂಟ್ ಮತ್ತು ಉರಿಯೂತದ ಕಾರ್ಯವನ್ನು ಹೆಚ್ಚಿಸುವುದು.

English summary

What Happens To Your Brain When You Eat Everyday?

Eating grapes daily can help protect the brain against early decline associated with Alzheimer's disease, show results of a pilot study involving people with early memory decline. Alzheimer's disease is a brain disease that results in a slow decline of memory and cognitive skills.
Story first published: Thursday, February 9, 2017, 19:44 [IST]
X
Desktop Bottom Promotion