ಉಪಹಾರಕ್ಕೆ ಒಂದು ಮೊಟ್ಟೆ ತಿಂದರೆ, ಆರೋಗ್ಯಕ್ಕೆ ಬಹಳ ಒಳ್ಳೆಯದು

By: Hemanth
Subscribe to Boldsky

ಮೊಟ್ಟೆಯಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಇರುವುದರಿಂದ ಪ್ರತಿ ನಿತ್ಯ ನಮ್ಮ ಆಹಾರ ಕ್ರಮದಲ್ಲಿ ಮೊಟ್ಟೆಯನ್ನು ಸೇರಿಸಿಕೊಂಡರೆ ಅದರಿಂದ ದೇಹದ ಆರೋಗ್ಯವು ಒಳ್ಳೆಯದಾಗಿರುವುದು. ಬೆಳಗ್ಗಿನ ಉಪಹಾರಕ್ಕೆ ಮೊಟ್ಟೆ ತಿಂದರೆ ಎಷ್ಟು ಒಳ್ಳೆಯದು ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಮೊಟ್ಟೆಯನ್ನು ಬೇಯಿಸುವುದು ಸುಲಭ ಮತ್ತು ಇದನ್ನು ಬೇರೆ ರೀತಿಯಿಂದಲೂ ಬಳಕೆ ಮಾಡಿಕೊಂಡು ಉಪಯೋಗಿಸಬಹುದು.

ಮೊಟ್ಟೆ ತಿಂದರೆ ನಮ್ಮ ದೇಹಕ್ಕೆ ಹೆಚ್ಚಿನ ಮಟ್ಟದ ಪ್ರೋಟೀನ್ ಲಭ್ಯವಾಗುವುದು. ದಿನನಿತ್ಯವು ಮೊಟ್ಟೆ ತಿಂದರೆ ಅದರಿಂದ ಹೃದಯಕ್ಕೆ ಸಮಸ್ಯೆಯಾಗುವುದು ಎಂದು ಹೆಚ್ಚಿನವರು ಭೀತಿಗೊಳ್ಳುತ್ತಾರೆ. ನೀವು ಆರೋಗ್ಯವಾಗಿರುವ ತನಕ ಯಾವುದೇ ತೊಂದರೆಯಿಲ್ಲದೆ ಮೊಟ್ಟೆ ಸೇವಿಸಬಹುದು. ಒಂದು ದೊಡ್ಡ ಮೊಟ್ಟೆಯಲ್ಲಿ ಸುಮಾರು 70ರಷ್ಟು ಕ್ಯಾಲರಿ ಮತ್ತು ಅಧಿಕ ಪ್ರೋಟೀನ್ ಇದೆ.

ಹುಷಾರ್, ಬಂದಿದೆ ಚೀನಾದ ಪ್ಲಾಸ್ಟಿಕ್ ಮೊಟ್ಟೆ! ಪತ್ತೆ ಹಚ್ಚುವುದು ಹೇಗೆ?

ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಂಡು ದೇಹವನ್ನು ವ್ಯವಸ್ಥಿತ ರೀತಿಯಲ್ಲಿಡುವುದು. ಮೊಟ್ಟೆಯಲ್ಲಿ ಅಮಿನೋ ಆಮ್ಲ ಮತ್ತು ಕಬ್ಬಿನಾಂಶವು ಅತ್ಯಧಿಕವಾಗಿದೆ. ಸರಿಯಾದ ರೀತಿಯಲ್ಲಿ ಕೆಲಸ ಮಾಡಲು ದೇಹವು ಸುಮಾರು 11 ಕೊಬ್ಬಿನಾಮ್ಲ ಬಿಡುಗಡೆ ಮಾಡುತ್ತದೆ. ಇಂತಹ 9 ಕೊಬ್ಬಿನಾಮ್ಲ ಮೊಟ್ಟೆಯಲ್ಲಿದೆ. ಇದರಿಂದ ಮೊಟ್ಟೆ ಸೇವಿಸುವುದು ಆರೋಗ್ಯಕ್ಕೆ ತುಂಬಾ ಲಾಭಕರ. ಬೆಳಗ್ಗಿನ ಉಪಹಾರಕ್ಕೆ ಮೊಟ್ಟೆ ಸೇವಿಸಿದರೆ ಏನಾಗುತ್ತದೆ ಎಂದು ಬೋಲ್ಡ್ ಸ್ಕೈ ಈ ಲೇಖನ ಮೂಲಕ ನಿಮಗೆ ಹೇಳಲಿದೆ...

ದೀರ್ಘ ಕಾಲ ಹೊಟ್ಟೆ ತುಂಬಿರುವುದು

ದೀರ್ಘ ಕಾಲ ಹೊಟ್ಟೆ ತುಂಬಿರುವುದು

ಬೆಳಗ್ಗಿನ ಉಪಹಾರಕ್ಕೆ ಬ್ರೆಡ್ ಅಥವಾ ಸೀರಲ್ ತಿನ್ನುವ ಬದಲು ಮೊಟ್ಟೆ ತಿಂದರೆ ಅದರಲ್ಲಿ ಇರುವಂತಹ ಪ್ರೋಟೀನ್ ಮತ್ತು ಕೊಬ್ಬು ದೇಹದ ಶಕ್ತಿಯ ಮಟ್ಟ ಕಾಪಾಡಿ ದೀರ್ಘ ಕಾಲ ತನಕ ಹೊಟ್ಟೆ ತುಂಬಿರುವಂತೆ ಮಾಡುವುದು. ಇದರಿಂದ ಮಧ್ಯಾಹ್ನ ಊಟಕ್ಕೆ ಮೊದಲು ಮತ್ತೊಮ್ಮೆ ತಿಂಡಿ ತಿನ್ನಬೇಕಾಗಿಲ್ಲ. ನೀವು ತಿನ್ನುವುದು ಕಡಿಮೆಯಾಗುವುದು.

ದಿನಕ್ಕೆ ಮೂರು ಮೊಟ್ಟೆಗಳನ್ನು ತಿಂದರೆ, ಆರೋಗ್ಯಕ್ಕೆ ಹತ್ತಾರು ಲಾಭ!

ಪ್ರೋಟೀನ್‪ನ ಮೂಲ

ಪ್ರೋಟೀನ್‪ನ ಮೂಲ

ಮೊಟ್ಟೆಯು ಸಂಪೂರ್ಣವಾಗಿ ಪ್ರೋಟೀನ್ ಮೂಲ ಹೊಂದಿರುತ್ತದೆ ಎನ್ನಲಾಗಿದೆ. ನಮ್ಮ ದೈನಂದಿನ ಆಹಾರದಲ್ಲಿ ಪಡೆಯುವಂತಹ ಅಮಿನೋ ಆಮ್ಲವು ಮೊಟ್ಟೆಯಲ್ಲಿರುವ ಕಾರಣದಿಂದ ಬೆಳಗ್ಗಿನ ಉಪಹಾರಕ್ಕೆ ಇದು ತುಂಬಾ ಲಾಭಕಾರಿ.

ತೂಕ ಕಳೆದುಕೊಳ್ಳಲು

ತೂಕ ಕಳೆದುಕೊಳ್ಳಲು

ಮೊಟ್ಟೆಯು ತೃಪ್ತಿಯ ಭಾವನೆ ನೀಡುವುದರಿಂದ ಇದು ಉಪಹಾರಕ್ಕೆ ಒಳ್ಳೆಯ ಆಹಾರ. ಇದರಿಂದ ಇನ್ನು ಬೇಕೆಂಬ ಭಾವನೆ ಕಡಿಮೆಯಾಗುವುದು ಮಾತ್ರವಲ್ಲದೆ ಹಸಿವು ನಿಯಂತ್ರಣವಾಗಿ ಅತಿಯಾಗಿ ತಿನ್ನುವ ಸಮಸ್ಯೆ ಕಡಿಮೆಯಾಗುವುದು. ಬೆಳಗ್ಗಿನ ಉಪಹಾರಕ್ಕೆ ಮೊಟ್ಟೆ ತಿನ್ನುವಂತಹವರು ದಿನದ ಉಳಿದ ಸಮಯದಲ್ಲಿ ಕಡಿಮೆ ಕ್ಯಾಲರಿ ಸೇವಿಸುತ್ತಾರೆ. ಇದರಿಂದ ತೂಕ ಕಳೆದುಕೊಳ್ಳಲು ಸಾಧ್ಯ.

ಪ್ರತಿರೋಧಕ ಶಕ್ತಿ ಹೆಚ್ಚಳ

ಪ್ರತಿರೋಧಕ ಶಕ್ತಿ ಹೆಚ್ಚಳ

ಪೋಷಕಾಂಶವಾಗಿರುವಂತಹ ಸೆಲೆನಿಯಂ ಪ್ರತಿರೋಧಕ ವ್ಯವಸ್ಥೆಯನ್ನು ಬೆಂಬಲಿಸುತ್ತದೆ ಮತ್ತು ಥೈರಾಯ್ಡ್ ಹಾರ್ಮೋನುಗಳನ್ನು ನಿಯಂತ್ರಿಸುವುದು. ಮೊಟ್ಟೆಯಲ್ಲಿ ಸೆಲೆನಿಯಂ ಅಂಶವು ಅಧಿಕವಾಗಿದೆ ಮತ್ತು ಬೆಳಗ್ಗಿನ ಉಪಹಾರಕ್ಕೆ ಒಂದು ಅಥವಾ ಎರಡು ಮೊಟ್ಟೆ ಸೇವನೆ ಮಾಡಿದರೆ ಸೋಂಕಿನ ವಿರುದ್ಧ ಹೋರಾಡಿ ಬಲಿಷ್ಠ ಮತ್ತು ಆರೋಗ್ಯಕರ ಪ್ರತಿರೋಧಕ ವ್ಯವಸ್ಥೆ ರಚಿಸಬಹುದು.

ಮೆದುಳನ್ನು ರಕ್ಷಿಸುವುದು

ಮೆದುಳನ್ನು ರಕ್ಷಿಸುವುದು

ಮೆದುಳಿನ ಬೆಳವಣಿಗೆಗೆ ಬೇಕಾಗುವಂತಹ ಕೋಲೀನ್ ಎನ್ನುವ ಅಂಶವು ಮೊಟ್ಟೆಯಲ್ಲಿದೆ. ಇದು ತುಂಬಾ ಪರಿಣಾಮಕಾರಿ ಪೋಷಕಾಂಶ. ಇದರಿಂದ ಮೊಟ್ಟೆಯನ್ನು ಮೆದುಳಿನ ಆಹಾರವೆನ್ನಲಾಗುತ್ತದೆ. ಕೋಲೀನ್ ಕೊರತೆಯಿಂದಾಗಿ ನರದ ಸಮಸ್ಯೆ ಮತ್ತು ಮೆದುಳಿನ ಕಾರ್ಯದಲ್ಲಿ ತೊಂದರೆಯಾಗಬಹುದು. ಕೋಲೀನ್ ಕಡಿಮೆಯಾದರೆ ಬುದ್ಧಿಮಾಂದ್ಯತೆ ಮತ್ತು ಆಲ್ಝೈಮರ್ ಕಾಯಿಲೆ ಬರಬಹುದು. ನಿಯಮಿತವಾಗಿ ಮೊಟ್ಟೆ ಸೇವಿಸಿದರೆ ಅದರಿಂದ ಕೋಲೀನ್ ಮಟ್ಟವು ಸಾಮಾನ್ಯವಾಗಿದ್ದು, ಮೆದುಳನ್ನು ರಕ್ಷಿಸುವುದು.

ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸುವುದು

ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸುವುದು

ದೇಹಕ್ಕೆ ಬೇಕಾಗುವಂತಹ ಸುಮಾರು 200 ಮಿಲಿಗ್ರಾಂನಷ್ಟು ಕೊಲೆಸ್ಟ್ರಾಲ್ ಒಂದು ಮೊಟ್ಟೆಯಲ್ಲಿರುತ್ತದೆ. ಮೊಟ್ಟೆಯಲ್ಲಿರುವ ಕೊಲೆಸ್ಟ್ರಾಲ್ ಅನ್ನು ಒಳ್ಳೆಯ ಕೊಲೆಸ್ಟ್ರಾಲ್ ಎಂದು ಪರಿಗಣಿಸಲಾಗಿದೆ. ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಇದು ಕಡಿಮೆ ಮಾಡುವುದು ಮತ್ತು ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿಸುವುದು. ಉಪಹಾರಕ್ಕೆ ಮೊಟ್ಟೆ ಸೇವಿಸಿದರೆ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣದಲ್ಲಿಟ್ಟುಕೊಂಡು ದಿನದ ಆರಂಭ ಮಾಡಬಹುದು.

English summary

What Happens When You Eat 1 Egg For Breakfast Every Day

Eggs provide all the essential amino acids and are rich in iron. Our body produces about 11 essential fatty acids which are required for the proper functioning of the body and eggs contain 9 more fatty acids which are also needed. Hence, it is often termed by many people as incredible, edible egg! Having discussed the health benefits of eggs, here, in this article we would like to discuss what happens when you eat an egg for breakfast.
Story first published: Tuesday, July 18, 2017, 7:05 [IST]
Subscribe Newsletter