ದಿನನಿತ್ಯ ಸೇವಿಸಿ-ಕ್ಯಾರೆಟ್+ಬೇವಿನ ರಸ, ಆರೋಗ್ಯಕ್ಕೆ ಒಳ್ಳೆಯದು

By: Hemanth
Subscribe to Boldsky

ಆರೋಗ್ಯವೇ ಭಾಗ್ಯ ಎನ್ನುವ ಮಾತಿದೆ. ಆದರೆ ಆರೋಗ್ಯ ಎನ್ನುವುದು ಕುಳಿತಲ್ಲಿಗೆ ನಿಮಗೆ ಬರುವುದಿಲ್ಲ. ಆರೋಗ್ಯವಂತರಾಗಲು ಆರೋಗ್ಯಕರ ಜೀವನಶೈಲಿ, ವ್ಯಾಯಾಮ, ಯೋಗ ಇತ್ಯಾದಿಗಳನ್ನು ಮಾಡುತ್ತಿರಬೇಕು. ಆಗ ಮಾತ್ರ ಉತ್ತಮ ಆರೋಗ್ಯ ಪಡೆಯಲು ಸಾಧ್ಯ. ಉತ್ತಮ ಆರೋಗ್ಯಕ್ಕಾಗಿ ಹಲವಾರು ಸೂತ್ರಗಳನ್ನು ಪಾಲಿಸಿಕೊಂಡು ಹೋಗಬೇಕು ಮತ್ತು ನಿಮಗೆ ಬಾಯಿಗೆ ರುಚಿ ಅನಿಸಿರುವುದನ್ನೆಲ್ಲಾ ತಿನ್ನಲು ಸಾಧ್ಯವಿಲ್ಲ.   ಪ್ರತಿನಿತ್ಯ ಕ್ಯಾರೆಟ್ ಜ್ಯೂಸ್ ಕುಡಿಯಿರಿ-ಆರೋಗ್ಯ ಪಡೆಯಿರಿ

ಆರೋಗ್ಯ ಪಥ್ಯ ಕೂಡ ಅತ್ಯಗತ್ಯವಾಗಿರಬೇಕು. ಆರೋಗ್ಯವಂತರಾಗಲು ನಮ್ಮ ಸುತ್ತಲು ಇರುವ ಕೆಲವೊಂದು ಗಿಡಮೂಲಿಕೆಗಳು ಹಾಗೂ ನಾವು ಅಡುಗೆ ಮನೆಯಲ್ಲಿ ಬಳಸುವಂತಹ ಸಾಂಬಾರ ಪದಾರ್ಥಗಳನ್ನು ಉಪಯೋಗಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ನಾವು ತಿನ್ನುವಂತಹ ಪ್ರತಿಯೊಂದು ಆಹಾರದಲ್ಲಿ ಹೆಚ್ಚಿನ ರಾಸಾಯನಿಕಗಳನ್ನು ಸೇರಿಸಿರುವ ಕಾರಣದಿಂದಾಗಿ ನಮ್ಮ ಆರೋಗ್ಯ ಕೆಡುವುದು ಸಹಜ.   ಕಹಿ ಬೇವಿನ ಜ್ಯೂಸ್‌ನಲ್ಲಿರುವ ಸಿಹಿ-ಸಿಹಿ ಗುಣಗಳು

ಇದಕ್ಕಾಗಿ ಮನೆಮದ್ದನ್ನು ಬಳಸಿಕೊಂಡು ಆರೋಗ್ಯ ಕಾಪಾಡುವುದು ಅತ್ಯಗತ್ಯ. ಬೇವು ಹಾಗೂ ಕ್ಯಾರೆಟ್ ಜ್ಯೂಸ್ ಅನ್ನು ಕುಡಿದರೆ ನಿಮ್ಮ ಆರೋಗ್ಯಕ್ಕೆ ಹಲವಾರು ರೀತಿಯ ಲಾಭಗಳು ಇವೆ. ಎರಡು ಚಮಚ ಬೇವಿನ ರಸ, ನಾಲ್ಕು ಚಮಚ ಕ್ಯಾರೆಟ್ ಜ್ಯೂಸ್ ಅನ್ನು ಮಿಶ್ರಣ ಮಾಡಿಕೊಂಡು ಪ್ರತೀದಿನ ಉಪಹಾರದ ಬಳಿಕ ಮೂರು ತಿಂಗಳ ಕಾಲ ಸೇವಿಸಿದರೆ ನಿಮ್ಮ ಆರೋಗ್ಯವು ಚೆನ್ನಾಗಿರುವುದು....

ಕರುಳನ್ನು ಸ್ವಚ್ಛಗೊಳಿಸುವುದು

ಕರುಳನ್ನು ಸ್ವಚ್ಛಗೊಳಿಸುವುದು

ಕ್ಯಾರೆಟ್ ಮತ್ತು ಬೇವಿನ ಜ್ಯೂಸ್‌ನಲ್ಲಿ ಇರುವಂತಹ ಲಿಮೊನೊಯ್ಸ್ ಮತ್ತು ಆ್ಯಂಟಿ ಆಕ್ಸಿಡೆಂಟ್ ಕರುಳಿನಲ್ಲಿ ಇರುವಂತಹ ವಿಷವನ್ನು ಹೊರಹಾಕುತ್ತದೆ. ಇದರಿಂದ ಹೊಟ್ಟೆಯ ರೋಗಗಳು ದೂರವಾಗುತ್ತದೆ. ಕರುಳನ್ನು ಶುದ್ಧ ಮಾಡುವ ಪ್ರಮುಖ 10 ಆಹಾರಗಳು

ಚರ್ಮಕ್ಕೆ ಪುರ್ನಶ್ಚೇತನ

ಚರ್ಮಕ್ಕೆ ಪುರ್ನಶ್ಚೇತನ

ಈ ಜ್ಯೂಸ್ ನಲ್ಲಿ ಆ್ಯಂಟಿಆಕ್ಸಿಡೆಂಟ್‌ನಿಂದ ಸಮೃದ್ಧವಾಗಿದೆ. ಇದು ಚರ್ಮದಲ್ಲಿನ ಕಾಲಜನ್ ಉತ್ಪತ್ತಿಯನ್ನು ಹೆಚ್ಚಿಸಿ ಚರ್ಮದ ಕೋಶಗಳನ್ನು ಪುರ್ನಶ್ಚೇತನಗೊಳಿಸಿ ಚರ್ಮವನ್ನು ಕಾಂತಿಯುತವಾಗಿಸುವುದು.

ದೃಷ್ಟಿ ಉತ್ತಮಪಡಿಸುವುದು

ದೃಷ್ಟಿ ಉತ್ತಮಪಡಿಸುವುದು

ನೈಸರ್ಗಿಕವಾಗಿರುವಂತಹ ಈ ಜ್ಯೂಸ್‌ನಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ. ಇದು ಕಣ್ಣಿನ ನರಗಳನ್ನು ಬಲಗೊಳಿಸಿ ದೃಷ್ಟಿಯನ್ನು ಉತ್ತಮಪಡಿಸುವುದು. ಇದರಿಂದ ಕಣ್ಣುಗಳು ಆರೋಗ್ಯವಾಗಿರುವುದು.

ಜ್ವರ ತಡೆಯುವುದು

ಜ್ವರ ತಡೆಯುವುದು

ಬೇವಿನ ಜ್ಯೂಸ್‌ನಲ್ಲಿ ಕಂಡುಬರುವಂತಹ ಕಿಣ್ವಗಳಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ. ಸೂಕ್ಷ್ಮಾಣು ಜೀವಿಗಳು ಉಂಟುಮಾಡುವಂತಹ ಕೆಲವೊಂದು ರೋಗಗಳನ್ನು ಇದು ತಡೆಗಟ್ಟುವುದು. ಇದರಿಂದ ಜ್ವರ ಮತ್ತು ಸೋಂಕನ್ನು ತಡೆಯಬಹುದು.ಜ್ವರ ಬಂದಾಗ ತಿನ್ನಬೇಕಾದ ಆಹಾರಗಳಿವು

ಹಸಿವು ಹೆಚ್ಚುವುದು

ಹಸಿವು ಹೆಚ್ಚುವುದು

ಈ ಜ್ಯೂಸ್‌ನಲ್ಲಿ ಫ್ಲಾವನಾಯ್ಡ್ ಅಂಶವು ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ನಿಮಗೆ ಹಸಿವಾಗದೆ ಇದ್ದರೆ ಇದು ಹಸಿವನ್ನು ಹೆಚ್ಚಿಸುವುದು.

ಕೊಲೆಸ್ಟ್ರಾಲ್ ಕಡಿಮೆ ಮಾಡುವುದು

ಕೊಲೆಸ್ಟ್ರಾಲ್ ಕಡಿಮೆ ಮಾಡುವುದು

ಬೇವು ಹಾಗೂ ಕ್ಯಾರೆಟ್ ಜ್ಯೂಸ್ ನಲ್ಲಿರುವ ನಾರಿನಾಂಶವು ರಕ್ತವು ಹೆಚ್ಚಿನ ಕೊಲೆಸ್ಟ್ರಾಲ್ ನ್ನು ಹೀರಿಕೊಳ್ಳುವುದನ್ನು ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ.ಆಯುರ್ವೇದ ಟಿಪ್ಸ್: ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸರಳ ಮನೆಮದ್ದು

English summary

What Happens When You Drink Neem Juice With Carrot Juice?

Check out the amazing health benefits of neem and carrot juice, that can be made at home!
Please Wait while comments are loading...
Subscribe Newsletter