ದಿನಕ್ಕೊಂದು ಗ್ಲಾಸ್ 'ಕರಬೂಜ ಹಣ್ಣಿನ ಜ್ಯೂಸ್' ತಪ್ಪದೇ ಕುಡಿಯಿರಿ!

By: manu
Subscribe to Boldsky

ಒಂದು ವೇಳೆ ನೀವು ಹಣ್ಣುಗಳ ಜ್ಯೂಸ್ ಇಷ್ಟಪಡುವ ವ್ಯಕ್ತಿಯಾಗಿದ್ದರೆ ನಿಮಗೊಂದು ಸಿಹಿಸುದ್ದಿ ಇದೆ. ಬೂದು ಕರಬೂಜದ ಹಣ್ಣಿನ ರಸಕ್ಕೆ ಲಿಂಬೆರಸ ಬೆರೆಸಿ ಕುಡಿಯುವ ಮೂಲಕ ನಿಮ್ಮ ಜಿಹ್ವಾಚಾಪಲ್ಯ ತಣಿಯುವ ಜೊತೆಗೇ ಆರೋಗ್ಯವೂ ವೃದ್ಧಿಸುತ್ತದೆ. ಪ್ರಮುಖವಾಗಿ ಅಜೀರ್ಣತೆಯ ತೊಂದರೆ ಇದ್ದವರಿಗೆ ಈ ಜ್ಯೂಸ್ ಔಷಧಿಯಂತೆ ಕೆಲಸ ಮಾಡುತ್ತದೆ.  ಅಜೀರ್ಣ ಸಮಸ್ಯೆ ಬೆನ್ನು ಬಿಡದೆ ಕಾಡುತ್ತಿದೆಯೇ? ಇಲ್ಲಿದೆ ಪರಿಹಾರ

ಕೆಲವೊಮ್ಮೆ ಅಜೀರ್ಣದ ಕಾರಣದಿಂದಾಗಿ ಅತಿಯಾದ ನೋವು, ಹೊಟ್ಟೆಯಲ್ಲಿ ಉರಿಯುಂಟಾಗಿ ನೆಮ್ಮದಿ ಕದಡಬಹುದು. ಆದ್ದರಿಂದ ಅಜೀರ್ಣದ ತೊಂದರೆಯನ್ನು ನೈಸರ್ಗಿಕವಾಗಿ ಗುಣಪಡಿಸುವ ಇರಾದೆ ಇದ್ದರೆ ಈ ಜ್ಯೂಸ್‌ನಷ್ಟು ಆರೈಕೆಯನ್ನು ಬೇರಾವ ಜ್ಯೂಸ್ ನೀಡಲಾರದು. ಅಜೀರ್ಣತೆಯ ಪ್ರಭಾವ ಕಡಿಮೆಯೇ ಇದ್ದರೂ ಇದರ ಪರಿಣಾಮ ಮಾತ್ರ ಘೋರವಾಗಿರುತ್ತದೆ. ಬೇಗೆ ತಣಿಸುವ ಕರಬೂಜ ಹಣ್ಣಿನ ಸೀಕರಣೆ

ಹೀಗಿರುವಾಗ ಅಜೀರ್ಣತೆಯ ಪೂರ್ಣ ಪ್ರಮಾಣದ ಪ್ರಭಾವ ಹೇಗೆ ಪರಿಣಾಮ ಬೀರಬಹುದೆಂದು ಊಹಿಸಲು ಸಾಧ್ಯವಿಲ್ಲ. ವಿಶೇಷವಾಗಿ ಹೊಟ್ಟೆಯ ಮೇಲ್ಭಾಗದಲ್ಲಿ ಭಾರೀ ಉರಿ ಕಾಣಿಸಿಕೊಂಡು ರೋಗಿ ನರಳಲು ಪ್ರಾರಂಭಿಸುತ್ತಾನೆ. ಅಜೀರ್ಣಕ್ಕೆ ಹಲವಾರು ಕಾರಣಗಳಿವೆ. ಇದರಲ್ಲಿ ಪ್ರಮುಖವಾದವು ಎಂದರೆ ಅಸಮರ್ಪಕ ಆಹಾರಕ್ರಮ, ಸ್ಥೂಲಕಾಯ, ಹೊಟ್ಟೆಯಲ್ಲಿ ಹುಣ್ಣು, ಮಲಬದ್ಧತೆ, ಆಹಾರದಲ್ಲಿ ನಾರಿನ ಅಂಶವಿಲ್ಲದಿರುವುದು, ಇತರ ಕಾಯಿಲೆಗಳ ಅಥವಾ ಔಷಧಿಗಳ ಅಡ್ಡಪರಿಣಾಮಗಳು ಇತ್ಯಾದಿ.  ಕರಬೂಜ ಹಣ್ಣಿನ ಪಾನಕ

ಅಜೀರ್ಣತೆಯ ಇತರ ಪರಿಣಾಮಗಳೆಂದರೆ ಹೊಟ್ಟೆಯುಬ್ಬರಿಕೆ, ಕೆಳಹೊಟ್ಟೆಯಲ್ಲಿ ನೋವು, ವಾಯುಪ್ರಕೋಪ, ಬಿಕ್ಕಳಿಕೆ, ಹೊಟ್ಟೆಯಲ್ಲಿ ಗುಡುಗುಡುವಿಕೆ, ವಾಕರಿಕೆ, ವಾಂತಿ ಇತ್ಯಾದಿ. ಅಜೀರ್ಣತೆಗೆ ಸೂಕ್ತವಾದ ಪರಿಹಾರವನ್ನು ಒದಗಿಸುವ ಈ ಜ್ಯೂಸ್ ತಯಾರಿಸವುದು ಹೇಗೆ ಎಂಬುದನ್ನು ಈಗ ನೋಡೋಣ...   

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

*ಬೂದು ಕರಬೂಜದ ರಸ: ಒಂದು ಲೋಟ

*ಲಿಂಬೆರಸ: ಎರಡು ದೊಡ್ಡ ಚಮಚ

ಅಜೀರ್ಣ ಸಮಸ್ಯೆಗೆ ರಾಮಬಾಣ

ಅಜೀರ್ಣ ಸಮಸ್ಯೆಗೆ ರಾಮಬಾಣ

ಈ ಸರಳ ಮತ್ತು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ ಜ್ಯೂಸ್ ಅಜೀರ್ಣತೆಯ ಮೇಲೆ ಶೀಘ್ರವಾಗಿ ಪರಿಣಾಮ ಬೀರಿ ಅಜೀರ್ಣತೆಯ ಪರಿಣಾಮವನ್ನು ಕಡಿಮೆಗೊಳಿಸುತ್ತದೆ. ಅಲ್ಲದೇ ನಿಯಮಿತವಾಗಿ ಸೇವಿಸುತ್ತಾ ಬರುವ ಮೂಲಕ ಹಳೆಯ ತೊಂದರೆಗಳನ್ನೂ ಇಲ್ಲವಾಗಿಸಬಹುದು.

ಎಣ್ಣೆ ಮತ್ತು ಖಾರ ಇರುವ ಆಹಾರಗಳಿಂದ ದೂರವಿರಿ

ಎಣ್ಣೆ ಮತ್ತು ಖಾರ ಇರುವ ಆಹಾರಗಳಿಂದ ದೂರವಿರಿ

ಆದರೆ ಈ ಜ್ಯೂಸ್ ಕುಡಿದ ಬಳಿಕ ಅಜೀರ್ಣತೆ ಕಡಿಮೆಯಾಗುತ್ತದೆ ಎಂದು ಬೇಕಾಬಿಟ್ಟಿ ತಿನ್ನುವಂತಿಲ್ಲ. ಆಹಾರದಲ್ಲಿ ಕೊಂಚ ಕಡಿವಾಣ ಅಗತ್ಯ. ಅದರಲ್ಲೂ ಎಣ್ಣೆ ಮತ್ತು ಖಾರ ಇರುವ ಆಹಾರಗಳಿಂದ ದೂರವಿದ್ದಷ್ಟೂ ಉತ್ತಮ.ಬೂದು ಕರಬೂಜ ಹಣ್ಣಿನಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು, ವಿಟಮಿನ್ ಸಿ ಇದ್ದು ಇವು ಹೊಟ್ಟೆಯಲ್ಲಿ ಉಂಟಾಗಿರುವ ಆಮ್ಲೀಯತೆಯನ್ನು ಕಡಿಮೆಗೊಳಿಸುತ್ತದೆ.

ಕರಬೂಜ+ಲಿಂಬೆರಸ

ಕರಬೂಜ+ಲಿಂಬೆರಸ

ಕರಬೂಜದ ಹಣ್ಣು ಆರೋಗ್ಯಕ್ಕೆ ತಂಪಾಗಿರುವ ಕಾರಣ ಹೊಟ್ಟೆಯ ಉರಿಯನ್ನು ಕಡಿಮೆಗೊಳಿಸಿ ಆರಾಮ ನೀಡುತ್ತದೆ. ಇದರ ಜೊತೆ ಇರುವ ಲಿಂಬೆರಸದಲ್ಲಿಯೂ ವಿಟಮಿನ್ ಸಿ ಮತ್ತು ಲಿಮೋನೀನ್ ಎಂಬ ಪೋಷಕಾಂಶ ಹೊಟ್ಟೆಯಲ್ಲಿ ಅಗತ್ಯಕ್ಕೂ ಹೆಚ್ಚಿನ ಆಮ್ಲ ಉತ್ಪತ್ತಿಯಾಗದಂತೆ ತಡೆಯುತ್ತದೆ. ಇದರಿಂದ ಹೊಟ್ಟೆಯುರಿ ಹೆಚ್ಚಾಗುವ ಸಾಧ್ಯತೆ ಇನ್ನೂ ಕಡಿಮೆಯಾಗುತ್ತದೆ. ಈ ಕಾರಣಗಳಿಂದ ಈ ಎರಡೂ ರಸಗಳಿಂದ ತಯಾರಾದ ಜ್ಯೂಸ್ ಅಜೀರ್ಣತೆ ಹಾಗೂ ಆಮ್ಲೀಯತೆಯ ತೊಂದರೆಯನ್ನು ನಿವಾರಿಸಲು ಸಾಧ್ಯವಾಗುತ್ತದೆ.

ತಯಾರಿಕಾ ವಿಧಾನ

ತಯಾರಿಕಾ ವಿಧಾನ

* ಒಂದು ಲೋಟದಲ್ಲಿ ಈ ಎರಡೂ ರಸಗಳನ್ನು ಬೆರೆಸಿ

* ಕೆಲವು ನಿಮಿಷಗಳವರೆಗೆ ಚೆನ್ನಾಗಿ ಕಲಕಿ

* ಈ ರಸವನ್ನು ದಿನಕ್ಕೊಂದು ಬಾರಿ, ಊಟದ ಬಳಿಕ ಕನಿಷ್ಟ ಮೂರು ತಿಂಗಳವರೆಗೆ ಸತತವಾಗಿ ಸೇವಿಸುತ್ತಾ ಬನ್ನಿ.

English summary

What Happens When You Drink Muskmelon Juice With Lemon Juice?

If you are someone who loves fresh fruit juices, here is some good news for you! The yummy mixture of muskmelon juice and lemon juice has the ability to treat one of the most common ailments - indigestion! Indigestion can be extremely uncomfortable and sometimes painful too! So, if you want to get rid of indigestion naturally, there is an exceptional home remedy that can help!
Please Wait while comments are loading...
Subscribe Newsletter