For Quick Alerts
ALLOW NOTIFICATIONS  
For Daily Alerts

ಎಲೆಕೋಸಿನ ಜ್ಯೂಸ್‌ಗೆ, ಲಿಂಬೆ ರಸ ಬೆರೆಸಿ, ಆಮೇಲೆ ಸೇವಿಸಿ!

ಎಲೆಕೋಸಿನ ಕಾಲು ಭಾಗವನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಕೊಂಚ ನೀರು ಮತ್ತು ಎರಡು ದೊಡ್ಡ ಚಮಚ ಲಿಂಬೆರಸ ಬೆರೆಸಿ ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ಕಡೆದು, ಆಮೇಲೆ ಕುಡಿದರೆ ಆರೋಗ್ಯಕ್ಕೆ ಬಹಳ ಒಳ್ಳೆಯದು...

By Arshad
|

ತರಕಾರಿಗಳನ್ನು ಸಾಧ್ಯವಾದಷ್ಟು ಹಸಿಯಾಗಿ ತಿನ್ನಿ, ಆರೋಗ್ಯಕ್ಕೆ ಒಳ್ಳೆಯದು ಎಂದು ಹಿರಿಯರು ಹೇಳುತ್ತಾ ಬಂದಿದ್ದರೂ ನಾವು ಸುಲಭವಾಗಿ ಈ ಮಾತನ್ನು ಅಲಕ್ಷಿಸುತ್ತಾ ಬಂದಿದ್ದೇವೆ. ಅದರಲ್ಲಿಯೂ ಕೋಸು ಎಂದರೆ ಹೆಚ್ಚಿನವರಿಗೆ ಇಷ್ಟವಾಗದ ತರಕಾರಿ. ಅದರಲ್ಲಿಯೂ ಹಸಿಯಾಗಿ ತಿನ್ನುವುದು ಎಂದರೆ ಆಗುವುದೇ ಇಲ್ಲ ಎನ್ನುವಂತಹ ಮನಃಸ್ಥಿತಿಯಿದೆ. ನಿತ್ಯ ಎಲೆಕೋಸಿನ ಜ್ಯೂಸ್ ಕುಡಿದು ಆರೋಗ್ಯವಾಗಿರಿ!

ಏಕೆಂದರೆ ನಮಗೆ ಕಣ್ಣಿಗೆ ಸುಂದರವಾಗಿ ಕಾಣುವ ಪಿಜ್ಜಾ, ಪಾಸ್ತಾಗಳೇ ಹೆಚ್ಚು ಇಷ್ಟವಾಗುತ್ತವೆ. ಇವು ಕಡಿಮೆ ಆರೋಗ್ಯಕರ ಮತ್ತು ಹೆಚ್ಚು ಆರೋಗ್ಯಕ್ಕೆ ಹಾನಿಮಾಡುವ ಕಣಗಳನ್ನು ಹೊಂದಿರುವುದು ಗೊತ್ತಿದ್ದರೂ ಹೆಚ್ಚಿನವರು ಇವುಗಳ ಆಕರ್ಷಣೆಗೆ ಮಾರುಹೋಗುತ್ತಾರೆ. ಆದರೆ ಈ ತರಕಾರಿಗಳನ್ನು ಹಸಿಯಾಗಿ ಸೇವಿಸಲು ಇಷ್ಟವಿಲ್ಲದವರಿಗೆ ಇನ್ನೊಂದು ವಿಧಾನವಿದೆ. ಅದೆಂದರೆ ತರಕಾರಿಯ ಜ್ಯೂಸ್ ಮಾಡಿಕೊಂಡು ಕುಡಿಯುವುದು. ಒಂದು ಬಾರಿ ಕುಡಿದ ಬಳಿಕ ಇದು ನಿಜವಾಗಿಯೂ ತರಕಾರಿಯೇ ಎನ್ನುವಷ್ಟು ಇಷ್ಟವಾಗುತ್ತದೆ ಹಾಗೂ ಆರೋಗ್ಯವೂ ವೃದ್ಧಿಸುತ್ತದೆ. ಲಿಂಬೆ ಹಣ್ಣು- ಹುಳಿಯಾದರೂ, ಆರೋಗ್ಯಕ್ಕೆ ಸಿಹಿ!

ಸಾಮಾನ್ಯವಾಗಿ ಆರೋಗ್ಯ ನಾವು ಸೇಸಿಸುವ ಆಹಾರವನ್ನು ನೇರವಾಗಿ ಅವಲಂಬಿಸಿರುವ ಕಾರಣ ಆಹಾರ ಆರೋಗ್ಯಕರವಾದಷ್ಟೂ ಆರೋಗ್ಯವೂ ಉತ್ತಮವಾಗಿರುತ್ತದೆ. ಅಲ್ಲದೆ ರೋಗ ನಿರೋಧಕ ಶಕ್ತಿ ಅತ್ಯುತ್ತಮವಾಗಿದ್ದು ಹಲವಾರು ರೋಗಗಳಿಂದ ರಕ್ಷಣೆ ನೀಡುತ್ತದೆ. ಈ ನಿಟ್ಟಿನಲ್ಲಿ ಉತ್ತಮ ಆಯ್ಕೆಯ ಆಹಾರವೆಂದರೆ ಕೋಸಿನ ರಸ ಮತ್ತು ಲಿಂಬೆರಸದ ಮಿಶ್ರಣದ ಆರೋಗ್ಯಕರ ಲಾಭಗಳ ಬಗ್ಗೆ ಪರಿಚಯಿಸಿದ್ದೇವೆ... ಮುಂದೆ ಓದಿ....


ಈ ಪೇಯವನ್ನು ತಯಾರಿಸುವುದು ಹೇಗೆ?

ಈ ಪೇಯವನ್ನು ತಯಾರಿಸುವುದು ಹೇಗೆ?

ಚಿಕ್ಕ ಗಾತ್ರದ (ಅರ್ಧ ಕೇಜಿ ಸುಮಾರು) ಎಲೆಕೋಸಿನ ಕಾಲು ಭಾಗವನ್ನು ಚಿಕ್ಕದಾಗಿ ಕತ್ತರಿಸಿಕೊಂಡು ಕೊಂಚ ನೀರು ಮತ್ತು ಎರಡು ದೊಡ್ಡ ಚಮಚ ಲಿಂಬೆರಸ ಬೆರೆಸಿ ಮಿಕ್ಸಿಯ ಬ್ಲೆಂಡರಿನಲ್ಲಿ ಹಾಕಿ ಚೆನ್ನಾಗಿ ಕಡೆಯಿರಿ.

ಈ ಪೇಯವನ್ನು ತಯಾರಿಸುವುದು ಹೇಗೆ?

ಈ ಪೇಯವನ್ನು ತಯಾರಿಸುವುದು ಹೇಗೆ?

ಇನ್ನು ಈ ನೀರನ್ನು ಸೋಸದೇ ಬಾಟಲಿಯಲ್ಲಿ ಸಂಗ್ರಹಿಸಿ ಬೆಳಗ್ಗಿನ ಉಪಹಾರದ ಮುನ್ನ ಸೇವಿಸಿ. ಇದರ ಗುಣಗಳನ್ನು ಪಡೆಯಲು ಕನಿಷ್ಠ ಎರಡು ತಿಂಗಳಾದರೂ ನಿತ್ಯವೂ ಸೇವಿಸಬೇಕು.

ತೂಕ ಇಳಿಸಲು ನೆರವಾಗುತ್ತದೆ

ತೂಕ ಇಳಿಸಲು ನೆರವಾಗುತ್ತದೆ

ಈ ನೀರನ್ನು ಸೋಸದೇ ಕುಡಿಯುವ ಮೂಲಕ ಕೋಸಿನಲ್ಲಿರುವ ಹೆಚ್ಚಿನ ಪ್ರಮಾಣದ ಕರಗದ ನಾರು ಲಭ್ಯವಾಗುತ್ತದೆ. ಇದನ್ನು ಜೀರ್ಣೀಸಿಕೊಳ್ಳಲು ಹೆಚ್ಚಿನ ಕೊಬ್ಬು ಬಳಕೆಯಾಗುವ ಕಾರಣ ಹಾಗೂ ಜೀವಕೋಶಗಳು ಕೊಬ್ಬನ್ನು ಸಂಗ್ರಹಿಸಿಕೊಳ್ಳುವ ಸಾಮರ್ಥ ಕಡಿಮೆಯಾಗುವ ಕಾರಣ ತೂಕ ಇಳಿಯಲು ನೆರವಾಗುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಕೋಸು ಮತ್ತು ಲಿಂಬೆರಸಗೆಳೆರಡರಲ್ಲಿಯೂ ವಿಟಮಿನ್ ಸಿ ಉತ್ತಮ ಪ್ರಮಾಣದಲ್ಲಿದೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅಗತ್ಯವಾದ ಪೋಷಕಾಂಶವಾಗಿದ್ದು ನಿಯಮಿತ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಕ್ಯಾನ್ಸರ್ ನಿಂದ ರಕ್ಷಣೆ ನೀಡುತ್ತದೆ

ಕ್ಯಾನ್ಸರ್ ನಿಂದ ರಕ್ಷಣೆ ನೀಡುತ್ತದೆ

ಈ ಅದ್ಭುತ ಪೇಯದಲ್ಲಿ ಹೆಚ್ಚಿನ ಪ್ರಮಾಣದ ಫೈಟೋ ನ್ಯೂಟ್ರಿಯೆಂಟ್ ಮತ್ತು ಆಂಟಿ ಆಕ್ಸಿಡೆಂಟುಗಳಿವೆ. ಇವು ದೇಹದಲ್ಲಿ ಕ್ಯಾನ್ಸರ್ ರೂಪ ಹೊಂದುವ ಜೀವಕೋಶಗಳ ಬೆಳವಣಿಗೆಯನ್ನು ತಡೆದು ವಿವಿಧ ಬಗೆಯ ಕ್ಯಾನ್ಸರ್ ಗೆ ತುತ್ತಾಗುವ ಸಾಧ್ಯತೆಯನ್ನು ಅಪಾರವಾಗಿ ಕಡಿಮೆ ಮಾಡುತ್ತದೆ.

ಮೆದುಳಿನ ಆರೋಗ್ಯ ವೃದ್ಧಿಸುತ್ತದೆ

ಮೆದುಳಿನ ಆರೋಗ್ಯ ವೃದ್ಧಿಸುತ್ತದೆ

ಈ ಪೇಯದಲ್ಲಿ ಉತ್ತಮ ಪ್ರಮಾಣದ ಫೋಲಿಕ್ ಆಮ್ಲ ಹಾಗೂ ವಿಟಮಿನ್ ಬಿ ಇವೆ. ಇವೆರಡೂ ಮೆದುಳಿನ ಜೀವಕೋಶಗಳಿಗೆ ಹೆಚ್ಚಿನ ಪೋಷಣೆ ನೀಡುವ ಶಕ್ತಿ ಇರುವ ಕಾರಣ ಮೆದುಳಿನ ಕ್ಷಮತೆ ಹೆಚ್ಚುತ್ತದೆ.

ಮೂಳೆಗಳಿಗೂ ಉತ್ತಮ

ಮೂಳೆಗಳಿಗೂ ಉತ್ತಮ

ಕೋಸು ಮತ್ತು ಲಿಂಬೆಯಲ್ಲಿ ವಿಟಮಿನ್ ಡಿ ಪ್ರಮಾಣವೂ ಉತ್ತಮವಾಗಿದ್ದು ಮೂಳೆಗಳ ದೃಢತೆ ಹೆಚ್ಚಿಸಲು ನೆರವಾಗುತ್ತದೆ. ಹಾಲು ಮತ್ತು ಇತರ ಆಹಾರಗಳ ಮೂಲಕ ದೇಹಕ್ಕೆ ಲಭಿಸುವ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಈ ವಿಟಮಿನ್ ಡಿ ಅಗತ್ಯವಾಗಿದ್ದು ಮೂಳೆಗಳು ಕ್ಯಾಲ್ಸಿಯಂ ಹೀರಿಕೊಳ್ಳುವ ಮೂಲಕ ದೃಢಗೆ ಹೆಚ್ಚಲು ಸಾಧ್ಯವಾಗುತ್ತದೆ.

ಮಲಬದ್ಧತೆ ಕಡಿಮೆಗೊಳಿಸುತ್ತದೆ

ಮಲಬದ್ಧತೆ ಕಡಿಮೆಗೊಳಿಸುತ್ತದೆ

ಎಲೆಕೋಸಿನಲ್ಲಿ ಕರಗದ ನಾರು ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ ಹಾಗೂ ಕರುಳಿನಿಂದ ತ್ಯಾಜ್ಯಗಳು ಸುಲಭವಾಗಿ ವಿಸರ್ಜನೆಗೊಳ್ಳುತ್ತವೆ. ತನ್ಮೂಲಕ ಮಲಬದ್ಧತೆ ಹಾಗೂ ಮೂಲವ್ಯಾಧಿಯ ಸಾಧ್ಯತೆ ಅಪಾರವಾಗಿ ಕಡಿಮೆಯಾಗುತ್ತದೆ.

English summary

What Happens When You Drink Cabbage Juice With Lemon?

However, these days, as most people are too caught up with their busy lives, it may become harder for them to stick to a healthy diet, due to the lack of time. Another reason for people following unhealthy eating habits could be because of the mind-blowing variety of unhealthy food options available today. So, if you want to remain healthy, you must start eating healthy. You could start by consuming certain healthy homemade drinks
X
Desktop Bottom Promotion