Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಅಕಸ್ಮಾತ್ ಆಗಿ ಚೂಯಿಂಗ್ ಗಮ್ ಜಗಿದು-ಜಗಿದು ನುಂಗಿಬಿಟ್ಟರೆ!
ಕನ್ನಡಿಗರು ಚಿಂಗಮ್ ಎಂದೇ ಕರೆಯುವ ಚೂಯಿಂಗ್ ಗಮ್ ಜಗಿಯಲು ಮಾತ್ರವೇ ಹೊರತು ನುಂಗಬಾರದು. ಆದರೆ ಅಕಸ್ಮಾತ್ ನುಂಗಿಬಿಟ್ಟರೆ? ಇದು ಅಪಾಯಕಾರಿ ಎಂದು ಚಿಂಗಮ್ ತಿನ್ನುವ ಎಲ್ಲಾ ಮಕ್ಕಳಿಗೂ ಪಾಲಕರು ತಿಳಿಸುತ್ತಾರೆ. ಸಾಮಾನ್ಯವಾದ ನಂಬಿಕೆ ಎಂದರೆ ಇದು ಹೊಟ್ಟೆಯಲ್ಲಿ ಜೀರ್ಣವಾಗದೇ ಎಲ್ಲಾದರೊಂದು ಕಡೆ ಅಂಟಿಕೊಂಡುಬಿಡುತ್ತದೆ ಹಾಗೂ ಶಾಶ್ವತವಾಗಿ ಅಲ್ಲಿಯೇ ಉಳಿದುಬಿಡುತ್ತದೆ ಎಂದು. ಆದರೆ ಚ್ಯೂಯಿಂಗ್ ಗಮ್ ನುಂಗಿದರೆ ಇದೊಂದು ಮಾತ್ರವೇ ಅಪಾಯವೇ?
ವಾಸ್ತವವಾಗಿ ನಮ್ಮ ಜಠರದ ಒಳಗೋಡೆಗಳಿಂದ ಜೀರ್ಣರಸ ಸದಾ ಸ್ರವಿಸುತ್ತಾ ಇರುವ ಕಾರಣ ಈ ಗೋಡೆಗಳಿಗೆ ಅಂಟಿಕೊಳ್ಳುವ ಸಾಧ್ಯತೆ ಇಲ್ಲ. ಹಾಗೆಂದ ಮಾತ್ರಕ್ಕೆ ಚೂಯಿಂಗ್ ಗಮ್ ಅಪಾಯಕರವಲ್ಲ ಎಂದು ಅರ್ಥವಲ್ಲ. ಬನ್ನಿ, ನಿಜಕ್ಕೂ ಚೂಯಿಂಗ್ ಗಮ್ ಗಮ್ ನುಂಗುವುದರಿಂದ ಯಾವ ತರಹದ ಅಪಾಯ ಎದುರಾಗುತ್ತದೆ ಎಂದು ನೋಡೋಣ...

ಇದರ ಸಿಹಿಯಾದ ರಸ...ಬಹಳ ಅಪಾಯಕಾರಿ
ನಿಜವಾಗಿ ನೋಡಬೇಕೆಂದರೆ ಇವೆಲ್ಲವೂ ಆರೋಗ್ಯಕ್ಕೆ ಹಾನಿಕರವೇ ಸರಿ. ಇವನ್ನು ನಿವಾರಿಸಲು ನಮ್ಮ ಯಕೃತ್ ಶೋಧಿಸಿ ಕಲ್ಮಶಗಳನ್ನು ನಿವಾರಿಸುತ್ತದೆ. ಇಲ್ಲದಿದ್ದರೆ ಈ ವಸ್ತುಗಳಿಂದ ಅಲರ್ಜಿಯೂ ಎದುರಾಗಬಹುದು. ಆದ್ದರಿಂದ ಚೂಯಿಂಗ್ ಗಮ್ ಅನ್ನು ನುಂಗದೇ ಇದ್ದರೂ ಪ್ರಾರಂಭದಲ್ಲಿ ಲಾಲಾರಸದಲ್ಲಿ ಬೆರೆತ ಇದರ ಸಿಹಿಯಾಗಿರುತ್ತದೆ ಆದರೆ ಇದರಲ್ಲಿರುವ ವಿಷವಸ್ತುಗಳು ಆರೋಗ್ಯವನ್ನು ಕೆಡಿಸಬಹುದು.

ಆಕಸ್ಮಾತ್ ಆಗಿ ಚೂಯಿಂಗ್ ಗಮ್ ನುಂಗಿಬಿಟ್ಟರೆ...
ಹಾಗಾದರೆ ಚೂಯಿಂಗ್ ಗಮ್ ನುಂಗಿದ ಬಳಿಕ ಏನಾಗುತ್ತದೆ? ನಮ್ಮ ಜಠರದಲ್ಲಿರುವ ಹ್ರೈಡ್ರೋಕ್ಲೋರಿಕ್ ಆಮ್ಲ ಚೂಯಿಂಗ್ ಗಮ್ ನಲ್ಲಿರುವ ಕೆಲವು ವಸ್ತುಗಳನ್ನು ಮಾತ್ರವೇ ಬೇರ್ಪಡಿಸಲು ಶಕ್ತವಾಗುತ್ತದೆ. ಪ್ರಮುಖವಾಗಿ ಸಕ್ಕರೆ, ಗ್ಲಿಸರಿನ್ ನಂತಹ ಮೃದುಕಾರಕ ಹಾಗೂ ಸುಗಂಧಕ್ಕಾಗಿ ಬೆರೆಸಿರುವ ಪುದಿನಾ ಎಣ್ಣೆ ಮೊದಲಾದವು. ಆದರೆ ಮೂಲವಸ್ತು ಹಾಗೇ ಮುಂದುವರೆದು ಕರುಳುಗಳನ್ನು ತಲುಪುತ್ತದೆ. ಇಲ್ಲಿಯೂ ಇದು ಎಲ್ಲಿಯೂ ಅಂಟಿಕೊಳ್ಳದೇ, ಜೀರ್ಣವಾಗದೇ ಸುಮಾರು ಇಪ್ಪತ್ತೈದು ಇಪ್ಪತ್ತಾರು ಗಂಟೆಗಳ ವರೆಗೆ ಕರುಳಿನಲ್ಲಿದ್ದು ಬಳಿಕ ವಿಸರ್ಜಿಸಲ್ಪಡುತ್ತದೆ.

ವಿಸರ್ಜನೆಗೊಳ್ಳದೇ ಇದ್ದರೆ!
ಒಂದು ವೇಳೆ ಈ ಅವಧಿ ಮೀರಿದ ಬಳಿಕವೂ ವಿಸರ್ಜನೆಗೊಳ್ಳದೇ ಇದ್ದರೆ ಮಾತ್ರ ವೈದ್ಯರ ಸಲಹೆ ಪಡೆಯುವುದು ಅಗತ್ಯ. ವಿಸರ್ಜನೆಗೊಂಡಿಲ್ಲ ಎಂದು ಕಂಡುಕೊಳ್ಳುವುದು ಹೇಗೆ? ಈ ಸಮಯದ ಬಳಿಕ ದೇಹದ ತಾಪಮಾನ ಹೆಚ್ಚುತ್ತದೆ ಹಾಗೂ ರಕ್ತದೊತ್ತಡವೂ ಏರುತ್ತದೆ. ಇದಕ್ಕೆ ಚೂಯಿಂಗ್ ಗಮ್ ನಲ್ಲಿರುವ ಅಲರ್ಜಿಕಾರಕ ವಸ್ತುಗಳು ಕಾರಣವಾಗಿವೆ.

ಬೇರಾವ ಸೂಚನೆಗಳು ಕಾಣಬರುತ್ತವೆ?
ಸಾಮಾನ್ಯವಾಗಿ ಅತಿಸಾರ, ವಾಂತಿ, ವಾಕರಿಕೆ ಮೊದಲಾವುಗಳ ಮೂಲಕ ದೇಹ ಈ ಅನಗತ್ಯವಾದ ವಸ್ತುವನ್ನು ಹೊರಹಾಕಲು ಯತ್ನಿಸುತ್ತದೆ. ಕೆಲವರಿಗೆ ಈ ಅಲರ್ಜಿಯ ಪರಿಣಾಮವಾಗಿ ಚರ್ಮದಲ್ಲಿ ತುರಿಕೆ ಹಾಗೂ ಚರ್ಮ ಕೆಂಪಗಾಗುವುದೂ ಕಂಡುಬರುತ್ತದೆ. ವಾಸ್ತವವಾಗಿ ಚೂಯಿಂಗ್ಗಮ್ ನುಂಗುವುದರಿಂದ ಇದರಲ್ಲಿರುವ ವಸ್ತುಗಳು ಅಲರ್ಜಿ ಮೂಡಿಸಿ ಅಪಾಯಕಾರವಾಗಬಹುದೇ ವಿನಃ ಇದು ಹೊಟ್ಟೆಯಲ್ಲಿ ಅಥವಾ ಕರುಳುಗಳಲ್ಲಿ ಸಿಲುಕಿಕೊಳ್ಳುವುದರಿಂದ ಅಲ್ಲ. ಯಾವುದೇ ಅಲರ್ಜಿಕಾರಕ ಸೂಚನೆಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಕಂಡು ಚಿಕಿತ್ಸೆ ಪಡೆದುಕೊಳ್ಳಬೇಕು.



Click it and Unblock the Notifications