For Quick Alerts
ALLOW NOTIFICATIONS  
For Daily Alerts

  ಹ್ಯಾಂಡ್ ಶೇಕ್ ಮಾಡಿದರೆ-ಇಲ್ಲಸಲ್ಲದ ರೋಗ ಬರುತ್ತದೆಯಂತೆ!!

  By Manu
  |

  ಬ್ರಿಟಿಷರು ನಮಗೆ ಕೊಟ್ಟು ಹೋದ ಅಪಾರ ಬದಲಾವಣೆಗಳಲ್ಲಿ ಹಸ್ತಲಾಘವವೂ (ಕೈಕುಲುಕು, ಹ್ಯಾಂಡ್ ಶೇಕ್) ಒಂದು. ಪ್ರತಿ ಬಾರಿ ನಾವು ಯಾರನ್ನಾದರೂ ಭೇಟಿಯಾದಾಗ ಹಸ್ತಲಾಘವ ನೀಡಿಯೇ ಸ್ವಾಗತಿಸುತ್ತೇವೆ ಅಥವಾ ಬೀಳ್ಕೊಡುತ್ತೇವೆ. ಅದರಲ್ಲೂ ಸ್ನೇಹಿತರ ನಡುವೆ ಯಾವುದೋ ಸಂದರ್ಭವನ್ನು ಸಂಭ್ರಮಿಸಬೇಕಾಗಿ ಬಂದರೆ ಇಬ್ಬರ ಹಸ್ತಗಳೂ ತಲೆಯ ಮೇಲೆ ತಾಕುವಂತೆ ಚಪ್ಪಾಳೆ ಹೊಡೆದು ಪ್ರಕಟಿಸಲಾಗುತ್ತದೆ.

  ವಾಸ್ತವವಾಗಿ ಭಾರತೀಯ ಸಂಸ್ಕೃತಿಯಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಸ್ಪರ್ಶಕ್ಕೆ ಅವಕಾಶವೇ ನೀಡದಂತೆ 'ನಮಸ್ತೆ' ಹೇಳಿ ಕೈಮುಗಿಯುವುದು ಆ ವ್ಯಕ್ತಿಗೆ ನೀಡುವ ಗೌರವದ ಸಂಕೇತವಾಗಿದೆ. ಇಂದು ಈ ಪದ್ಧತಿ ಅತ್ಯಂತ ಆರೋಗ್ಯಕರ ಎಂದು ಸಂಶೋಧಕರೂ ತಿಳಿಸುತ್ತಿದ್ದಾರೆ. ಅಚ್ಚರಿಯಾಯಿತೇ? ಈ ಸಂಶೋಧನೆಯ ಪ್ರಕಾರ ನಿಮ್ಮ ಕೈಗಳಲ್ಲಿ ಕೈಗವಸು ಇಲ್ಲದ ಹೊರತಾಗಿ ಹಸ್ತಲಾಘವ ನೀಡಬೇಡಿ. ಏಕೆ? ಈ ಪ್ರಶ್ನೆಗೆ ಕೆಳಗಿನ ಮಾಹಿತಿಗಳು ಉತ್ತರ ನೀಡುತ್ತವೆ.... 

  ವಾಸ್ತವಾಂಶ #1

  ವಾಸ್ತವಾಂಶ #1

  ಈ ಸಂಶೋಧನೆ ಹಸ್ತಲಾಘವ ನೀಡುವುದು ಅಪಾಯಕಾರಿ ಎಂದು ಬಣ್ಣಿಸುತ್ತಿದೆ. ಹಸ್ತಲಾಘವದಿಂದ ಆತ್ಮೀಯ ಸ್ಪರ್ಶವೇನೋ ದೊರಕಬಹುದು ಆದರೆ ಇದು ಸೂಕ್ಷ್ಮ ಮಟ್ಟದಲ್ಲಿ ಆರೋಗ್ಯಕ್ಕೆ ಮಾರಕವಾಗಬಹುದು ಎಂದು ಸಂಶೋಧಕರು ಎಚ್ಚರಿಸಿದ್ದಾರೆ.

  ವಾಸ್ತವಾಂಶ #2

  ವಾಸ್ತವಾಂಶ #2

  ಓರ್ವ ವ್ಯಕ್ತಿಯ ದೇಹದಲ್ಲಿರುವ ಸೋಂಕುಕಾರಕ ಕ್ರಿಮಿಗಳು ಹಸ್ತಲಾಘವ ಪಡೆದ ವ್ಯಕ್ತಿಗೆ ದಾಟಿಕೊಳ್ಳಬಹುದೇ? ಹೌದು ಎನ್ನುತ್ತಾರೆ ತಜ್ಞರು. ಒಂದು ವೇಳೆ ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದು ರೋಗಗಳು ಸುಲಭವಾಗಿ ಆಕ್ರಮಿಸುವಂತಿದ್ದರೆ ಹಸ್ತಲಾಘವ ಬೇಡವೇ ಬೇಡ ಎನ್ನುತ್ತಾರೆ.

  ವಾಸ್ತವಾಂಶ #3

  ವಾಸ್ತವಾಂಶ #3

  ಇಂದು ಹಸ್ತಗಳ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಸೂಕ್ತ ಕ್ರಮದಲ್ಲಿ ಕೈಗಳನ್ನು ತೊಳೆದುಕೊಳ್ಳಲು ವಿಶ್ವ ಆರೋಗ್ಯ ಸಂಸ್ಥೆ ಎಲ್ಲೆಡೆ ಅಭಿಯಾನಗಳ ಮೂಲಕ ಅರಿವನ್ನು ಮೂಡಿಸುತ್ತಾ ಬಂದಿದೆ. ಬರೇ ಕೈತೊಳೆದುಕೊಳ್ಳಲು ಇಷ್ಟೆಲ್ಲಾ ಕಷ್ಟಪಡುವ ಅಗತ್ಯವೇನಿತ್ತು ಎಂದು ಕುಹಕವಾಡುವವರೆಗೆ ಕೈ ತೊಳೆದುಕೊಳ್ಳದೇ ಇರುವ ಮೂಲಕ ಹರಡುಬ ಅತಿಸಾರದ ಪ್ರಕರಣಗಳ ಅಂಕಿ ಅಂಶಗಳೇ ಸರಿಯಾದ ಪಾಠ ಕಲಿಸುತ್ತವೆ.

  ವಾಸ್ತವಾಂಶ #4

  ವಾಸ್ತವಾಂಶ #4

  ಅಷ್ಟಕ್ಕೂ ಕೈಗಳನ್ನು ಸ್ವಚ್ಛವಾಗಿಸಿರಿಕೊಳ್ಳುವ ಮಹತ್ವವೇನು? ಈ ಬಗ್ಗೆ ನಡೆಸಿದ ಸಮೀಕ್ಷೆಗಳ ಅಂಕಿ ಅಂಶಗಳ ಪ್ರಕಾರ ಸಮಾಜದಲ್ಲಿ ಕಡಿಮೆ ಸಂಖ್ಯೆಯ ವ್ಯಕ್ತಿಗಳು ಯಾವುದಾದರೂ ಕೊಳೆಯಾಗಿದ್ದ ವಸ್ತುವನ್ನು ಮುಟ್ಟಿದ ಬಳಿಕ, ಶೌಚ, ಮೂಗು ಸ್ವಚ್ಛಗೊಳಿಸಿದ ಬಳಿ, ಸೀನಿದ ಬಳಿಕ, ಸಾರ್ವಜನಿಕ ಸಾರಿಗೆ ಹಾಗೂ ಅಡುಗೆಯ ಬಳಿಕ ಕೈಗಳನ್ನು ತೊಳೆಯುವುದೇ ಇಲ್ಲ. ಈ ಅಭ್ಯಾಸದಿಂದ ಹಸ್ತದಲ್ಲಿ ಉಳಿದೇ ಹೋಗುವ ಸೂಕ್ಷ್ಮಾಣುಗಳು ಇವರು ಹಸ್ತಲಾಘವ ನೀಡಿದ ವ್ಯಕ್ತಿಗಳಿಗೆ ಅಥವಾ ಇವರು ಮುಟ್ಟಿದ ವಸ್ತುಗಳನ್ನು ಉಳಿದವರು ಬಳಿಕ ಮುಟ್ಟುವ ಮೂಲಕ ಸುಲಭವಾಗಿ ದಾಟುತ್ತವೆ

  ವಾಸ್ತವಾಂಶ #5

  ವಾಸ್ತವಾಂಶ #5

  ಕೊಳೆಯಾಗಿದ್ದ ಹಸ್ತದಲ್ಲಿ ಹಲವಾರು ವಿಧದ ಸೂಕ್ಷ್ಮ ಜೀವಿಗಳಿರುತ್ತವೆ. ಈ ಸೂಕ್ಷ್ಮಜೀವಿಗಳು ಈ ವ್ಯಕ್ತಿಗಳಿಗೆ ಮಾರಕವಲ್ಲದಿದ್ದರೂ ಇವರು ಹಸ್ತಲಾಘವ ನೀಡಿದ ವ್ಯಕ್ತಿಗೆ ಮಾರಕವಾಗಬಹುದು. ಅತಿ ಭಯಂಕರ ಬ್ಯಾಕ್ಟೀರಿಯಾ ಆಗಿರುವ ಸಾಲ್ಮೋನೆಲ್ಲಾ ಸಹಾ ಹೀಗೆ ಹಸ್ತಲಾಘವದ ಮೂಲಕ ದಾಟಿಕೊಳ್ಳುವ ಕ್ರಿಮಿಯಾಗಿದೆ.

  ವೈರಿಗಳಂತೆ ಕಾಡುವ ಬ್ಯಾಕ್ಟೀರಿಯಗಳ ಇತಿಹಾಸ ಕೆಣಕಿದಾಗ...

  ವಾಸ್ತವಾಂಶ #6

  ವಾಸ್ತವಾಂಶ #6

  ಕೊಳೆಯಾದ ಹಸ್ತಗಳಿಂದ ಇನ್ನೇನು ಆವರಿಸಬಹುದು? ಒಂದು ವೇಳೆ ಓರ್ವ ವ್ಯಕ್ತಿಯ ಕೈಯಲ್ಲಿ ಅತಿ ಸೂಕ್ಷ್ಮ ಕ್ರಿಮಿಗಳಿದ್ದರೆ ಈ ವ್ಯಕ್ತಿಯಿಂದ ಹಸ್ತಲಾಘವ ಪಡೆದ ವ್ಯಕ್ತಿಗೆ ಶೀತ, ಜ್ವರ, ಸೀತಾಳ ಸಿಡುಬು (chicken pox) ಮೊದಲಾದ ಸೋಂಕಿನಿಂದ ಹರಡುವ ರೋಗಗಳು ದಾಟಿಕೊಳ್ಳಬಹುದು.

  ಬೇತಾಳದಂತೆ ಕಾಡುವ ಸಿಡುಬು ರೋಗಕ್ಕೆ ಬೇವಿನ ಚಿಕಿತ್ಸೆ

  ವಾಸ್ತವಾಂಶ #7

  ವಾಸ್ತವಾಂಶ #7

  ಈ ಸಂಶೋಧನೆಯಲ್ಲಿ ಕೆಲವು ಸ್ವಯಂಸೇವಕರನ್ನು ತೊಡಗಿಸಿಕೊಂಡು ಇವರು ಮೊದಲು ತಮ್ಮ ಕೈಗಳನ್ನು ಕ್ರಿಮಿರಹಿತಗೊಳಿಸಿದ ಬಳಿಕ ಸ್ಥಳೀಯ ರೈಲಿನಲ್ಲಿ ಪಯಣಿಸಿ ಜನಸಾಮಾನ್ಯರು ಮುಟ್ಟುವ ವಸ್ತುಗಳನ್ನು ಮುಟ್ಟಿ ಬಂದ ಬಳಿಕ ಹತ್ತಿಯ ಹೀರೊತ್ತು ಬಳಸಿ ಇವರ ಕೈಗಳಲ್ಲಿರುವ ಸೂಕ್ಷ್ಮಕ್ರಿಮಿಗಳನ್ನು ಸಂಗ್ರಹಿಸಲಾಯಿತು. ಈ ಪರೀಕ್ಷೆಯಲ್ಲಿ 20%ರಷ್ಟು ಜನರ ಕೈಯಲ್ಲಿ ಶೌಚಾಲಯದಲ್ಲಿ ಕಾಣಬರುವ ಬ್ಯಾಕ್ಟೀರಿಯಾಗಳು ಕಂಡುಬಂದಿದ್ದವು. ಆದರೆ ಎಲ್ಲಾ ಬ್ಯಾಕ್ಟೀರಿಯಾಗಳು ಸೋಂಕುಕಾರಕವಲ್ಲ. ಕೈ ಒಣಗಿದಂತೆಯೇ ಇವುಗಳಲ್ಲಿ ಕೆಲವು ಸಾಯುತ್ತವೆ. ಆದರೆ ಕೆಲವು ಮಾತ್ರ ಕೈ ಒಣಗಿದರೂ ಕೈಗಳಲ್ಲಿ ಅಂಟಿಕೊಂಡೇ ಇದ್ದು ಮುಂದಿನ ಬಾರಿ ಕೈ ತೇವಗೊಂಡಾಗ ಮತ್ತೆ ಜೀವಪಡೆದು ಸೋಂಕು ಹರಡುವ ಕೆಲಸವನ್ನು ಮುಂದುವರೆಸುತ್ತವೆ.

  ವಾಸ್ತವಾಂಶ #7

  ವಾಸ್ತವಾಂಶ #7

  ಹಸ್ತಲಾಘವದ ಹೊರತಾಗಿ ಸೋಂಕು ಹರಡಲು ಇತರ ಮಾಧ್ಯಮಗಳೂ ಇವೆ. ವಿಶೇಷವಾಗಿ ನಿಮ್ಮ ಸ್ನೇಹಿತರ ಮೊಬೈಲುಗಳನ್ನು ಮುಟ್ಟುವುದು. ಹೌದು, ವ್ಯಕ್ತಿಯ ವೈಯಕ್ತಿಯ ವಸ್ತುಗಳಲ್ಲಿಯೂ ಕೆಲವಾರು ಕ್ರಿಮಿಗಳು ಅಂಟಿಕೊಂಡಿದ್ದು ಇವು ಸಹಾ ಇತರರಿಗೆ ಅಂಟಿಕೊಂಡು ಸ್ವಾಸ್ಥ್ಯ ಕೆಡಿಸಬಹುದು. ಆದ್ದರಿಂದ ಹಸ್ತಲಾಘವದಿಂದ ದೂರವಿದ್ದಷ್ಟೂ ಈ ಸೋಂಕುಗಳಿಂದ ರಕ್ಷಣೆ ಪಡೆಯಬಹುದು. ಅಷ್ಟು ಮಾತ್ರವಲ್ಲ, ಪ್ರತಿ ಬಾರಿ ಹೊರಗೆ ಹೋದಾಗಲೂ ಅವಕಾಶ ಸಿಕ್ಕ ತಕ್ಷಣ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಇದೇ ಅಗತ್ಯತೆಯನ್ನು ಗಮನಿಸಿ ಬಹುತೇಕ ಎಲ್ಲಾ ಕಡೆ ಹ್ಯಾಂಡ್ ಡ್ರೈಯರ್ (ಬಿಸಿಗಾಳಿಯಿಂದ ಕೈಗಳನ್ನು ಒಣಗಿಸುವ ಯಂತ್ರ) ಗಳನ್ನು ಅಳವಡಿಸಲಾಗುತ್ತಿದ್ದು ಇವುಗಳನ್ನು ಬಳಸಿಕೊಂಡು ಕೈಗಳನ್ನು ಒಣದಾಗಿಯೇ ಇರಿಸಿಕೊಳ್ಳಬೇಕು.

  English summary

  what-diseases-can-you-get-from-shaking-hands

  Actually, Indians are accustomed to fold hands and say 'Namaste' when they have to greet someone. And now, researchers say that folding hands is much healthier than shaking hands? Surprised? Well, if you have a pair of gloves, then prefer a handshake. But otherwise, read these points.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more