ಸೂರ್ಯಗ್ರಹಣ ನೋಡುವ ಮೊದಲು ಈ ಮುನ್ನೆಚ್ಚರಿಕೆಗಳನ್ನು ವಹಿಸಿ

By: Divya Pandith
Subscribe to Boldsky

ಅಪರೂಪಕ್ಕೆ ನಿಸರ್ಗದಲ್ಲಿ ಕೊಂಚ ವ್ಯತ್ಯಾಸಗಳುಂಟಾಗುತ್ತವೆ. ಅವುಗಳಲ್ಲಿ ಗ್ರಹಣವೂ ಒಂದು. ಈ ಬಾರಿ ಗೋಚರಿಸುತ್ತಿರುವ ಸೂರ್ಯ ಗ್ರಹಣವು ಹಲವಾರು ವರ್ಷಗಳ ನಂತರ ಗೋಚರಿಸುತ್ತಿದೆ ಎನ್ನಲಾಗುತ್ತಿದೆ. ಸೂರ್ಯ ಗ್ರಹಣವು ಒಂದು ವಿಶೇಷವಾದ ಸಂಗತಿಯಾಗಿರುವುದರಿಂದ, ಅದನ್ನು ನೋಡಲು ಅನೇಕರು ಉತ್ಸುಕರಾಗಿದ್ದಾರೆ. ಆದರೆ ಬರಿ ಕಣ್ಣಿನಿಂದ ಗ್ರಹಣವನ್ನು ನೋಡಿದರೆ ನಮ್ಮ ಕಣ್ಣುಗಳು ಕುರುಡಾಗುವ ಸಾಧ್ಯತೆ ಇರುತ್ತದೆ.

ಗ್ರಹಣದಿಂದ ಹೊರ ಹೊಮ್ಮುವ ಸೌರ ಕಿರಣಗಳು ಅತ್ಯಂತ ಶಕ್ತಿಯುತವಾಗಿರುತ್ತವೆ. ಇವು ಕಣ್ಣಿನ ರೆಟಿನಾದ ಜೀವಕೋಶಗಳ ಮೇಲೆ ಕೆಟ್ಟ ಪರಿಣಾಮ ಬೀರುವುದು. ಶಾಶ್ವತವಾಗಿಯೇ ದೃಷ್ಟಿಕಳೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ. ಈ ಬಾರಿಯ ಸೂರ್ಯ ಗ್ರಹಣವು ಅಮೆರಿಕಾ ಸೇರಿದಂತೆ ಹಲವಾರು ದೇಶಗಳಲ್ಲಿ ಗೋಚರಿಸುತ್ತದೆ. ಆದರೆ ಭಾರತದಲ್ಲಿ ಸಂಭವಿಸುವುದಿಲ್ಲ ಎಂದು ಹೇಳಲಾಗುತ್ತಿದೆ.

ಹೀಗಿದ್ದರೂ ಸಹ ಗ್ರಹಣದ ಸಮಯದಲ್ಲಿ ಬರಿ ಕಣ್ಣಿನಿಂದ ಸೂರ್ಯನನ್ನು ನೋಡಬಾರದು. ನಿರಂತರವಾಗಿ ಸೂರ್ಯನನ್ನು ನೋಡುವುದರಿಂದ ದೃಷ್ಟಿಯನ್ನು ಕಳೆದುಕೊಳ್ಳಬಹುದು, ಬಣ್ಣಗಳನ್ನು ಗುರುತಿಸಲು ಸಾಧ್ಯವಾಗದೇ ಇರಬಹುದು ಅಥವಾ ದೃಷ್ಟಿಗೆ ಸಂಬಂಧಿಸಿದ ಯಾವುದೇ ಅಸ್ವಸ್ಥತೆ ಉಂಟಾದರೂ ತಕ್ಷಣವೇ ವೈದ್ಯರ ಸಹಾಯವನ್ನು ಪಡೆದುಕೊಳ್ಳಬೇಕು....

ವಿಶೇಷ ಕನ್ನಡಕವನ್ನು ಬಳಸಿ

ವಿಶೇಷ ಕನ್ನಡಕವನ್ನು ಬಳಸಿ

ಗ್ರಹಣವನ್ನು ವೀಕ್ಷಿಸಲು ಸಿದ್ಧಪಡಿಸಿರುವ ಹಾಗೂ ಐಎಸ್‍ಒ ಮಾನದಂಡವನ್ನು ಹೊಂದಿರುವ ಕನ್ನಡಕಗಳನ್ನೇ ಬಳಸಬೇಕು. ಈ ಕನ್ನಡಕಗಳು ಸೂರ್ಯನ ವಿಕಿರಣಗಳು ನೇರವಾಗಿ ಕಣ್ಣಿನ ಮೇಲೆ ಪರಿಣಾಮ ಬೀರುವುದನ್ನು ತಪ್ಪಿಸುತ್ತದೆ. ಸೂರ್ಯನಿಂದ ಹೊರ ಹೊಮ್ಮುವ ಅತಿಗೆಂಪು ಮತ್ತು ತೀಕ್ಷ್ಣವಾದ ಗೋಚರ ಬೆಳಕನ್ನು ನಿಬಂಧಿಸುತ್ತವೆ. ಹಾಗಾಗಿ ಈ ಕನ್ನಡಕಗಳು ಕಣ್ಣಿಗೆ ಸುರಕ್ಷತೆಯನ್ನು ನೀಡುತ್ತದೆ ಎನ್ನಲಾಗುವುದು. ಆದರೆ ಈ ಕನ್ನಡಕದ ಮಸೂರದ ಮೇಲೆ ಗೀಚಿದಂತಾಗಿರುವುದು, ಮುದುಡಿಕೊಂಡಿರುವಂತಾಗುವುದು ಮತ್ತು ತುಂಬಾ ಹಳೆಯದ್ದಾಗಿರಬಾರದು. ಕನ್ನಡಕ 3 ವರ್ಷಕ್ಕಿಂತ ಹೆಚ್ಚು ಹಳೆಯದ್ದಾಗಿರಬಾರದು.

ಕಾಳಜಿ ಬೇಕು

ಕಾಳಜಿ ಬೇಕು

ಸೂರ್ಯನ ಕಿರಣಕ್ಕೆ ಹಾಗೂ ಗ್ರಹಣವನ್ನು ಕ್ಷಣ ಹೊತ್ತು ಸಹ ಬರಿಗಣ್ಣಿನಲ್ಲಿ ನೋಡಬಾರದು. ಕನ್ನಡಕವನ್ನು ಧರಿಸುವಾಗ ಮತ್ತು ಕಳಚುವಾಗ ಬಹು ಎಚ್ಚರಿಕೆಯನ್ನು ವಹಿಸಬೇಕು. ಸೂರ್ಯನ ಕಿರಣದಲ್ಲಿಯೇ ತೆಗೆದು-ಹಾಕಿ ಮಾಡಬಾರದು.

ದೃಷ್ಟಿ ಸಹಾಯಕ ವಸ್ತುಗಳಿಂದ ದೂರವಿರಿ

ದೃಷ್ಟಿ ಸಹಾಯಕ ವಸ್ತುಗಳಿಂದ ದೂರವಿರಿ

ಕ್ಯಾಮೆರಾ, ಟೆಲಿಸ್ಕೋಪ್ ಅಥವಾ ಯಾವುದೇ ಆಪ್ಟಿಕಲ್ ಸಾಧನಗಳ ಮೂಲಕ ಗ್ರಹಣವನ್ನು ವೀಕ್ಷಿಸದಿರಿ. ಫಿಲ್ಟರ್‌ಗಳನ್ನು ಸಾಧನದ ಮುಂಭಾಗದಲ್ಲಿ ಸರಿಯಾಗಿ ಅಳವಡಿಸಬೇಕಾಗುತ್ತದೆ. ಇಲ್ಲವಾದರೆ ಕಿರಣಗಳ ತೀವ್ರತೆಯಿಂದ ಫಿಲ್ಟರ್ ಹಾನಿಗೊಳಗಾಗುವುದು. ಜೊತೆಗೆ ನಿಮ್ಮ ಕಣ್ಣುಗಳಿಗೆ ತಲುಪಿ ಶಾಶ್ವತವಾಗಿ ದೃಷ್ಟಿಕಳೆದುಕೊಳ್ಳಬೇಕಾಗುವುದು.

ಕನ್ನಡಕ ಧರಿಸುವವರು

ಕನ್ನಡಕ ಧರಿಸುವವರು

ನೀವು ನಿತ್ಯವೂ ಕನ್ನಡಕವನ್ನು ಧರಿಸುವವರಾಗಿದ್ದರೂ ಸಹ ಅದರ ಮೇಲೆ ಗ್ರಹಣ ವಿಕ್ಷಣೆಗೆ ಇರುವ ವಿಶೇಷ ಕನ್ನಡಕವನ್ನು ಧರಿಸಿಯೇ ನೋಡಬೇಕು.

 ತಜ್ಞರ ಸಲಹೆ

ತಜ್ಞರ ಸಲಹೆ

ಯಾವುದೇ ಆಪ್ಟಿಕಲ್ ಸಾಧನದ ಮೂಲಕ ಗ್ರಹಣವನ್ನು ವೀಕ್ಷಿಸುವ ಉದ್ದೇಶ ಹೊಂದಿದ್ದರೆ ಮೊದಲು ತಜ್ಞರ ಸಲಹೆಯನ್ನು ಪಡೆದುಕೊಳ್ಳಿ. ಗ್ರಹಣವು ಭೂಮಿಯ ಕೆಲವು ಭಾಗದಲ್ಲಿ ಮಾತ್ರ ವೀಕ್ಷಿಸಬಹುದಾದ್ದರಿಂದ, ವೀಕ್ಷಣೆಯ ಬಗ್ಗೆ ಸೂಕ್ತ ಮಾಹಿತಿಯನ್ನು ತಜ್ಞರಿಂದ ಪಡೆದುಕೊಳ್ಳಬೇಕು.

ಗ್ರಹಣವು ಕೆಲವೇ ನಿಮಿಷಗಳ ಕಾಲ ಗೋಚರಿಸುತ್ತವೆಯಾದ್ದರಿಂದ, ವೀಕ್ಷಣೆಯ ಸಂದರ್ಭದಲ್ಲಿ ವಿಶೇಷ ಕನ್ನಡಕವನ್ನು ಎಂದಿಗೂ ತೆಗೆಯಬಾರದು. ಈ ಮೇಲೆ ಹೇಳಿರುವ ವಿಶೇಷ ಕಾಳಜಿಯನ್ನು ಅನುಸರಿಸುವುದರ ಮೂಲಕ ಆರೋಗ್ಯದ ಮೇಲೆ ಉಂಟಾಗುವ ಅಪಾಯವನ್ನು ತಡೆಗಟ್ಟಿ...

English summary

ways-to-protect-your-eyes-during-a-solar-eclipse

Though solar eclipse may be a spectacular sight to view, it is highly harmful to your eyes. On seeing the eclipse with the naked eyes, chances are that one might go blind. Let us learn how? The solar radiations emerging from the eclipse are extremely powerful and can easily cause a damage to the photo-receptors, which are cells present in the retina. This may cause permanent damage to one's eyesight.
Subscribe Newsletter