ಮಹಿಳೆಯರಿಗೆ ಕಾಡುವ ಅಂತಹ ಸಮಸ್ಯೆಗಳಿಗೆ ಸೂಕ್ತ ಪರಿಹಾರ...

By: Hemanth
Subscribe to Boldsky

ಮಹಿಳೆಯರಿಗೆ ಸೌಂದರ್ಯ ಕೊಟ್ಟಿರುವ ದೇವರು ಅದಕ್ಕೆ ಬೇಕಾದಂತೆ ಆಕೆಗೆ ದೇಹವನ್ನು ನೀಡಿದ್ದಾನೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರ ದೇಹವು ತುಂಬಾ ಸೂಕ್ಷ್ಮ. ಇದರಿಂದಾಗಿಯೇ ಹಲವಾರು ಸಮಸ್ಯೆಗಳು ಮಹಿಳೆಯರನ್ನು ಕಾಡುತ್ತಾ ಇರುತ್ತದೆ. ಹಾರ್ಮೋನು ಬದಲಾವಣೆ ಥೆರಪಿ, ಪಿತ್ತಕೋಶ, ಸೋಂಕು, ಗರ್ಭಧಾರಣೆ, ದೊಡ್ಡದಾದ ಸ್ತನಗಳು, ಸ್ತನದ ಕ್ಯಾನ್ಸರ್ ಮತ್ತು ಖಿನ್ನತೆಗಾಗಿ ತೆಗೆದುಕೊಳ್ಳುವ ಔಷಧಿಯಿಂದ ಸ್ತನದ ಮೃದುತ್ವ ಉಂಟಾಗಬಹುದು. 

Breast Tenderness
 

ತಿಂಗಳ ಮುಟ್ಟಿನ ಸಂದರ್ಭದಲ್ಲೂ ಈ ರೀತಿಯಾಗಬಹುದು. ಕೆಲವೊಂದು ಸಲ ಮಹಿಳೆಯರಿಗೆ ದೈನಂದಿನ ಚಟುವಟಿಕೆಗಳನ್ನು ಮಾಡದಷ್ಟು ನೋವು ಕಾಣಿಸಿಕೊಳ್ಳುತ್ತದೆ. ಆದರೆ ಇದನ್ನು ನಿವಾರಿಸಲು ಹಲವಾರು ರೀತಿಯ ಮಾರ್ಗಗಳಿವೆ. ನೈಸರ್ಗಿಕವಾಗಿ ಇದನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ. ಸ್ತನದ ಮೃದುತ್ವನ್ನು ನಿವಾರಿಸುವ ನೈಸರ್ಗಿಕ ವಿಧಾನಗಳ ಬಗ್ಗೆ ಈ ಲೇಖನದಲ್ಲಿ ತಿಳಿಯಿರಿ. 

Breast Tenderness
 

ಈಸ್ಟ್ರೋಜನ್ ಗೆ ಒಗ್ಗಿಕೊಳ್ಳುವುದರಿಂದ ಆದಷ್ಟು ದೂರವಿರಿ. ಇದಕ್ಕಾಗಿ ಸಾವಯವ ಆಹಾರವನ್ನು ಬಳಸಿ. ಗರ್ಭಧಾರಣೆ ತಡೆಯುವ ಮಾತ್ರೆ ತೆಗೆದುಕೊಳ್ಳಬೇಡಿ, ಬೇಕರಿ ತಿನಿಸು, ಸೋಯ ಆಹಾರ ಕಡೆಗಣಿಸಿ. ಕೀಟನಾಶಕ ಮತ್ತು ಸಸ್ಯನಾಶಕಕ್ಕೆ ಒಡ್ಡಿಕೊಳ್ಳುವುದರಿಂದ ದೂರವಿಡಿ. ಅಗಸೆ ಬೀಜಗಳನ್ನು ಸೇವಿಸಿ.   ಮಾನಸಿಕ ಸಮಸ್ಯೆ ಮಹಿಳೆಯರ ಸಂಖ್ಯೆಯೇ ಜಾಸ್ತಿ! ಯಾಕಿರಬಹುದು?

ಈಸ್ಟ್ರೋಜನ್ ಅನ್ನು ಹೊರಹಾಕಬೇಕೆಂದರೆ ಆವಾಗ ಆವಾಗ ಯಕೃತ್ ಅನ್ನು ನಿರ್ವಿಷಗೊಳಿಸಬೇಕಾಗುತ್ತದೆ. ಕೆಲವೊಂದು ಗಿಡಮೂಲಿಕೆಗಳು ಮತ್ತು ತರಕಾರಿಗಳ ಸೇವನೆಯಿಂದ ಇದು ಸಾಧ್ಯ. ಅರಿಶಿನ, ದಂಡೇಲಿಯನ್ ಮೂಲ, ಪಲ್ಲೆಹೂವು, ಬ್ರಸಲ್ಸ್ ಮೊಗ್ಗುಗಳು, ಕೇಲ್, ಕೋಸುಗಡ್ಡೆ ಇತ್ಯಾದಿಗಳ ಸೇವನೆಯಿಂದ ನೆರವಾಗುವುದು. ಇದು ಯಕೃತ್ ಅನ್ನು ನಿರ್ವಿಷಗೊಳಿಸಿ ದೇಹದಿಂದ ಈಸ್ಟ್ರೋಜನ್ ನ್ನು ಹೊರಹಾಕುವುದು. 

Breast Tenderness
 

ಜೀರ್ಣಕ್ರಿಯೆ ಯಾವಾಗಲೂ ಸರಿಯಾಗಿರುವಂತೆ ಮತ್ತು ಕರುಳುಗಳು ಎಲ್ಲಾ ಸಮಯದಲ್ಲಿ ಸ್ವಚ್ಛವಾಗಿರುಂತೆ ನೋಡಿಕೊಳ್ಳಿ. ಇದಕ್ಕಾಗಿ ನೀವು ಆಹಾರ ಕ್ರಮದಲ್ಲಿ ಜೈವಿಕ ಆಹಾರ, ಮೆಗ್ನಿಶಿಯಂ ನೈಟ್ರೇಟ್ ಮತ್ತು ನಾರಿನಾಂಶವನ್ನು ಸೇರಿಸಿಕೊಳ್ಳಿ. ಅತಿಯಾಗಿರುವ ಈಸ್ಟ್ರೋಜನ್ ವಿಸರ್ಜನಾ ವ್ಯವಸ್ಥೆ ಮೂಲಕ ಹೊರಹೋಗುತ್ತದೆ. ಇದಕ್ಕಾಗಿ ದಿನಾಲೂ ಮಲ ವಿಸರ್ಜನೆ ಮಾಡಿ. ಮಹಿಳೆಯರ ಜನನಾಂಗ ಸಮಸ್ಯೆಗೆ ಸೂಕ್ತ ಸಲಹೆಗಳು

ಸ್ತನದಲ್ಲಿ ನೋವು ಮತ್ತು ಊತ ಕಾಣಿಸಿಕೊಳ್ಳಲು ಪ್ರಮುಖ ಕಾರಣವೆಂದರೆ ಉರಿಯೂತ. ಸ್ತನದಲ್ಲಿ ಉರಿಯೂತ ಉಂಟುಮಾಡುವಂತಹ ಹಾರ್ಮೋನುಗಳನ್ನು ಮೊದಲು ತೆಗೆಯಿರಿ. ಇದಕ್ಕಾಗಿ ಪ್ರಾಣಿಗಳ ಕೊಬ್ಬು ಸೇವನೆ ಕಡಿಮೆ ಮಾಡಿಕೊಳ್ಳಿ. ಆಹಾರ ಕ್ರಮದಲ್ಲಿ ಕಡಿಮೆ ಸಕ್ಕರೆ, ಗುಣಮಟ್ಟದ ಕೊಬ್ಬು ಮತ್ತು ವಿಟಮಿನ್ ಇ ಯನ್ನು ಬಳಸಿ.  ಸ್ತನದಲ್ಲಿ ನೋವು ಕಾಣಿಸಿದರೆ ಅಪಾಯವಿದೆಯೇ?

Drinking tea
 

ಸ್ತನದಲ್ಲಿ ಉಂಟಾಗುವ ಮೃದುತ್ವಕ್ಕೆ ದೇಹದಲ್ಲಿ ಐಯೋಡಿನ್ ಕಡಿಮೆಯಾಗುವುದು ಕಾರಣವಾಗುತ್ತದೆ. ಇದರಿಂದ ಐಯೋಡಿನ್ ನಿಮ್ಮ ದೇಹದಲ್ಲಿ ಸರಿಯಾಗಿರುವಂತೆ ನೋಡಿಕೊಳ್ಳಿ. ಪಾಚಿಗಳು ಮತ್ತು ಸಪ್ಲಿಮೆಂಟ್ ಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ. ಚಾ, ಕಾಫಿ ಮತ್ತು ಆಲ್ಕೋಹಾಲ್ ಸ್ತನದ ಮೃದುತ್ವಕ್ಕೆ ಕಾರಣವಾಗುತ್ತದೆ. ಈ ಪಾನೀಯಗಳ ಬದಲಿಗೆ ನೀರು ಕುಡಿಯಿರಿ. ಗ್ರೀನ್ ಟೀ ಕೂಡ ಒಳ್ಳೆಯದು. ಇದು ಈಸ್ಟ್ರೋಜನ್ ಮಟ್ಟಕ್ಕೆ ಮಧ್ಯಪ್ರವೇಶ ಮಾಡಲ್ಲ ಮತ್ತು ಇದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳಿವೆ.

English summary

Ways To Reduce Breast Tenderness

Breast tenderness can be a result of many factors. It can be caused by hormone replacement therapy, cysts, mastitis or localinfection, pregnancy, large breasts, breast cancer and medications including antidepressants. Sometimes it is a sign of your periods approaching.
Story first published: Friday, March 10, 2017, 23:31 [IST]
Subscribe Newsletter