Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸ್ತನದಲ್ಲಿ ನೋವು ಕಾಣಿಸಿದರೆ ಅಪಾಯವಿದೆಯೇ?
ಹೆಣ್ಣು ಮಕ್ಕಳು ಹದಿಹರೆಯದ ಪ್ರಾಯಕ್ಕೆ ಬರುತ್ತಿರುವಾಗ ಸ್ತನದಲ್ಲಿ ನೋವು ಕಂಡು ಬರುತ್ತದೆ, ಹದಿಹರೆಯದ ಪ್ರಾಯ ಕಳೆದ ಮೇಲೂ ಕೆಲವೊಮ್ಮೆ ಸ್ತನ ತುಂಬಾ ನೋವಾಗುತ್ತದೆ. ಈ ರೀತಿ ನೋವು ಉಂಟಾದಾಗ ಅದು ಸ್ವಲ್ಪ ಹೊತ್ತಿನಲ್ಲಿ ಕಡಿಮೆಯಾಗುವುದರಿಂದ ಯಾರೂ ಅದರ ಬಗ್ಗೆ ಹೆಚ್ಚಿನ ಗಮನ ಹರಿಸುವುದಿಲ್ಲ.
ಆದರೆ ಸ್ತನದಲ್ಲಿ ನೋವು ಕಾಣಿಸಿಕೊಂಡಾಗ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಏಕೆಂದರೆ ಸ್ತನಕ್ಕೆ ಸಂಬಂಧಿಸಿದಂತೆ ಸ್ತನ ಕ್ಯಾನ್ಸರ್ ಎಂಬ ಮಾರಕ ಕಾಯಿಲೆ ಮಹಿಳೆಯರಲ್ಲಿ ಕಂಡು ಬರುವುದರಿಂದ ನೋವು ಕಾಣಿಸಿಕೊಂಡರೆ ಎಚ್ಚರವಹಿಸುವುದು ಒಳ್ಳೆಯದು. ಆದ್ದರಿಂದ ಸ್ತನದಲ್ಲಿ ಯಾವುದೆಲ್ಲಾ ಕಾರಣದಿಂದ ಉಂಟಾಗುತ್ತದೆ ಎಂದು ತಿಳಿದುಕೊಳ್ಳುವುದು ಒಳ್ಳೆಯದು, ಈ ಕೆಳಗ್ಗೆ ಅದರ ಬಗ್ಗೆ ಮಹಿತಿಯನ್ನು ನೀಡಲಾಗಿದೆ ನೋಡಿ:

ಮುಟ್ಟಿನ ಸಮಯದಲ್ಲಿ: ಕೆಲವರಿಗೆ ಮುಟ್ಟಿನ ಸಮಯ ಸಮೀಪವಾಗುತ್ತಿದ್ದಂತೆ ಸ್ತನದಲ್ಲಿ ನೋವು ಕಂಡು ಬರುತ್ತದೆ. ಈ ರೀತಿ ನೋವು ಕಾಣಿಸುತ್ತಿದ್ದರೆ ವೈದ್ಯರನ್ನು ಕಂಡು ಪರೀಕ್ಷಿಸಿಕೊಳ್ಳಿ.
ಓವ್ಯೂಲೇಶನ್: ಓವ್ಯೂಲೇಶನ್ ಸಮಯದಲ್ಲಿ ಹಾರ್ಮೋನ್ ಗಳಲ್ಲಿ ವ್ಯತ್ಯಾಸವಾಗುವುದರಿಂದ ಸ್ತನದಲ್ಲಿ ನೋವು ಕಂಡು ಬರುತ್ತದೆ.
ಸ್ನಾಯುಗಳ ಸೆಳೆತದಿಂದ: ಮಲಗಿದ್ದ ರೀತಿ ಸರಿಯಿಲ್ಲದಿದ್ದರೆ ಸ್ನಾಯುಗಳ ಸೆಳೆತ ಉಂಟಾಗಿ ಸ್ತನದಲ್ಲಿ ನೋವು ಕಂಡು ಬರುತ್ತದೆ.
ಸ್ತನದಲ್ಲಿ ಗಂಟುಗಳಿದ್ದರೆ: ಸ್ತನದಲ್ಲಿ ಗಂಟು ಇದ್ದರೆ ವೈದ್ಯರನ್ನು ಕಂಡು ಪರೀಕ್ಷಿಸಬೇಕು. ಏಕೆಂದರೆ ಸ್ತನ ಕ್ಯಾನ್ಸರ್ ಇದ್ದರೆ ಗಂಟುಗಳು ಕಂಡು ಬರುತ್ತದೆ. ಸ್ತನವನ್ನು ಆಗಾಗ ಸ್ವ ಪರೀಕ್ಷೆ ಮಾಡಿಕೊಳ್ಳಿ. ಗಂಟು ಕಂಡು ಬಂದರೆ ವೈದ್ಯರನ್ನು ಕಂಡು ಪರೀಕ್ಷಿಸಿಕೊಳ್ಳಿ.
ಎಡ ಸ್ತನದಲ್ಲಿ ನೋವು: ಎಡ ಸ್ತನದಲ್ಲಿ ನೋವು ಕಾಣಿಸಿದರೆ ಯಾವುದಾದರೂ ಹೃದಯದ ಸಮಸ್ಯೆಯಿಂದ ಆಗಿರಬಹುದು. ಆದ್ದರಿಂದ ಸ್ತನದಲ್ಲಿ ನೋವು ಕಾಣಿಸಿದರೆ ನಿರ್ಲಕ್ಷ್ಯ ಮಾಡಬೇಡಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
