ದಿನನಿತ್ಯ ಒಂದು ಗ್ಲಾಸ್ 'ತರಕಾರಿಗಳ ಜ್ಯೂಸ್‌' ಕುಡಿಯಲೇ ಬೇಕು!

By: manu
Subscribe to Boldsky

ಹಣ್ಣುಗಳ ಜ್ಯೂಸ್ ಅನ್ನು ಪ್ರತಿಯೊಬ್ಬರೂ ಇಷ್ಟಪಟ್ಟು ಕುಡಿಯುತ್ತಾರೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪ್ರತಿಯೊಬ್ಬರಿಗೂ ತಿಳಿದಿದೆ. ಇದರಲ್ಲಿರುವ ಪೋಷಕಾಂಶಗಳು ಹಾಗೂ ವಿಟಮಿನ್‌ಗಳು ಆರೋಗ್ಯವನ್ನು ಕಾಪಾಡಿಕೊಳ್ಳುತ್ತದೆ. ತರಕಾರಿಗಳಲ್ಲಿ ಕ್ಯಾರೆಟ್ ಜ್ಯೂಸ್ ಅನ್ನು ಹೆಚ್ಚಿನವರು ಇಷ್ಟಪಡುತ್ತಾರೆ. ಇನ್ನು ಮಧುಮೇಹ ಇರುವಂತಹ ವ್ಯಕ್ತಿಗಳು ಹಾಗಲಕಾಯಿ ಜ್ಯೂಸ್ ಅನ್ನು ಕುಡಿಯುತ್ತಾರೆ. ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ ಮತ್ತು ಮಧುಮೇಹಿಗಳಿಗೆ ಒಳ್ಳೆಯದು ಎಂದು ಭಾವಿಸಲಾಗಿದೆ.

ನಾಲಗೆಗೆ ಸ್ವಲ್ಪ ರುಚಿ ಹಿಡಿಸದಿದ್ದರೂ ತರಕಾರಿ ಜ್ಯೂಸ್‌ನಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಲಭ್ಯವಿದೆ. ಅದರಲ್ಲು ಹಲವಾರು ಬಗೆಯ ತರಕಾರಿಗಳನ್ನು ಮಿಶ್ರಣ ಮಾಡಿಕೊಂಡು ಜ್ಯೂಸ್ ಮಾಡಿದರೆ ಅದರಿಂದ ಸಿಗುವಂತಹ ಲಾಭ ಅಪಾರ. ತರಕಾರಿ ಜ್ಯೂಸ್‌ಗಳು ಹಲವಾರು ರೀತಿಯ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ.   ಲವಲವಿಕೆಯ ಆರೋಗ್ಯಕ್ಕೆ 'ತರಕಾರಿ ಜ್ಯೂಸ್' ಸಹಕಾರಿ

ಕೊಲೆಸ್ಟ್ರಾಲ್ ಮಟ್ಟ, ಯೂರಿಕ್ ಆಮ್ಲದ ಮಟ್ಟ, ಒತ್ತಡ, ಕೂದಲು ಉದುರುವಿಕೆ, ಒತ್ತಡ ಇತ್ಯಾದಿಯನ್ನು ಕಡಿಮೆ ಮಾಡುವುದು. ತರಕಾರಿ ಜ್ಯೂಸ್ ತಯಾರಿಸಿದ 15 ನಿಮಿಷದಲ್ಲಿ ಅದನ್ನು ಕುಡಿಯಬೇಕು. ತರಕಾರಿ ಜ್ಯೂಸ್ ಅನ್ನು ಅರ್ಧ ಗಂಟೆ ಫ್ರಿಡ್ಜ್‌ನಲ್ಲಿ ಇಟ್ಟರೆ ಅದರಿಂದ ಜ್ಯೂಸ್‌ನ ಪೋಷಕಾಂಶ ತತ್ವಗಳು ಕಡಿಮೆಯಾಗುವ ಸಾಧ್ಯತೆಯಿದೆ. ತರಕಾರಿ ಜ್ಯೂಸ್ ಗಳು ಯಾವ ರೀತಿಯಲ್ಲಿ ಆರೋಗ್ಯಕ್ಕೆ ನೆರವಾಗಲಿದೆ ಎಂದು ತಿಳಿದುಕೊಳ್ಳಿ.....  

ಕೊಲೆಸ್ಟ್ರಾಲ್ ಚಿಕಿತ್ಸೆಗೆ ಕ್ಯಾರೆಟ್ ಜ್ಯೂಸ್

ಕೊಲೆಸ್ಟ್ರಾಲ್ ಚಿಕಿತ್ಸೆಗೆ ಕ್ಯಾರೆಟ್ ಜ್ಯೂಸ್

ಕ್ಯಾರೆಟ್ ಜ್ಯೂಸ್‌ನಲ್ಲಿ ಇರುವಂತಹ ಪೊಟಾಶಿಯಂ ಮತ್ತು ಮೆಗ್ನಿಶಿಯಂ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಅಧಿಕ ರಕ್ತದೊತ್ತಡವನ್ನು ಸಾಮಾನ್ಯಗೊಳಿಸಿ ರಕ್ತದ ಸಕ್ಕರೆ ಮಟ್ಟವನ್ನು ಕೂಡ ನಿಯಂತ್ರಣದಲ್ಲಿಡುತ್ತದೆ. ಅಧಿಕ ರಕ್ತದೊತ್ತಡ ಮತ್ತು ಮಧುಮೇಹದಿಂದ ಬಳಲುತ್ತಿರುವ ವ್ಯಕ್ತಿಗಳು ಕ್ಯಾರೆಟ್ ಜ್ಯೂಸ್ ನ್ನು ಕುಡಿಯಲೇಬೇಕು. ಸಮೃದ್ಧ ಪೋಷಕಾಂಶಗಳ ಆಗರ- ಕ್ಯಾರೆಟ್ ಜ್ಯೂಸ್

ಯೂರಿಕ್ ಆಮ್ಲಕ್ಕೆ ಬೀಟ್ ರೂಟ್ ಜ್ಯೂಸ್

ಯೂರಿಕ್ ಆಮ್ಲಕ್ಕೆ ಬೀಟ್ ರೂಟ್ ಜ್ಯೂಸ್

ಬೀಟ್ ರೂಟ್, ಕ್ಯಾರೆಟ್ ಮತ್ತು ಮುಳ್ಳುಸೌತೆಯಿಂದ ಒಳ್ಳೆಯ ಆರೋಗ್ಯಕಾರಿ ತರಕಾರಿ ಜ್ಯೂಸ್ ನ್ನು ತಯಾರಿಸಿಕೊಳ್ಳಬಹುದು. ಯೂರಿಕ್ ಆಮ್ಲದಿಂದ ಗಂಟುಗಳಲ್ಲಿ ಉಂಟಾಗುವಂತಹ ನೋವು ಹಾಗೂ ಉರಿಯೂತವನ್ನು ಇದು ಕಡಿಮೆ ಮಾಡುತ್ತದೆ. ರಕ್ತದಲ್ಲಿನ ಯೂರಿಕ್ ಆಮ್ಲದ ಮಟ್ಟವು ಹೆಚ್ಚಿದಾಗ ಇದು ಗಂಟಿನಲ್ಲಿ ಜಮೆಯಾಗಿ ನೋವು, ಉರಿಯೂತ ಮತ್ತು ತುರಿಕೆಯನ್ನುಉಂಟು ಮಾಡುತ್ತದೆ. ಲವಲವಿಕೆಯ ಆರೋಗ್ಯಕ್ಕೆ- ಬೀಟ್‌ರೂಟ್+ಲಿಂಬೆಯ ಜ್ಯೂಸ್

ಕೊಬ್ಬು ಕರಗಿಸುವ ಜ್ಯೂಸ್

ಕೊಬ್ಬು ಕರಗಿಸುವ ಜ್ಯೂಸ್

10 ಗ್ರಾಂನಷ್ಟು ಹಾಗಲಕಾಯಿ, 5 ಗ್ರಾಂನಷ್ಟು ಬಸಳೆ, 5 ಗ್ರಾಂನಷ್ಟು ಸೌತೆಕಾಯಿ ಮತ್ತು 5 ಗ್ರಾಂನಷ್ಟು ಹೂಕೋಸು ನ್ನು ಸೇರಿಸಿಕೊಂಡು ಜ್ಯೂಸ್ ಮಾಡಿ. ತರಕಾರಿ ಜ್ಯೂಸ್ ಗೆ ಸ್ವಲ್ಪ ನೀರು ಹಾಕಿಕೊಂಡು ಸೇವಿಸಿ. ಈ ಜ್ಯೂಸ್ ಸೊಂಟ ಹಾಗೂ ಹೊಟ್ಟೆಯಲ್ಲಿರುವ ಕೊಬ್ಬನ್ನು ಕರಗಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಕುಡಿದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಧನಾತ್ಮಕ ಫಲಿತಾಂಶ ಪಡೆಯಲು ಒಂದು ತಿಂಗಳ ಕಾಲ ಈ ಚಿಕಿತ್ಸೆಯನ್ನು ಪಾಲಿಸಿಕೊಂಡು ಹೋಗಿ.

ಎಲೆಕೋಸು ಮತ್ತು ಕೆಂಪು ಕರಿಮೆಣಸಿನ ಜ್ಯೂಸ್

ಎಲೆಕೋಸು ಮತ್ತು ಕೆಂಪು ಕರಿಮೆಣಸಿನ ಜ್ಯೂಸ್

ನೆರಿಗೆ, ಕಪ್ಪು ಕಲೆಗಳು ವಯಸ್ಸಾಗುತ್ತಿರುವುದರ ಕೆಲವೊಂದು ಲಕ್ಷಣಗಳಾಗಿದೆ. ವಯಸ್ಸಾಗುವುದನ್ನು ನಿಧಾನಗೊಳಿಸಬೇಕಾದರೆ ಐದು ಗ್ರಾಂ ಎಲೆಕೋಸು, 4 ಗ್ರಾಂ ಕ್ಯಾರೆಟ್ ಮತ್ತು 3 ಗ್ರಾಂ ಕೆಂಪು ಕರಿಮೆಣಸನ್ನು ಹಾಕಿಕೊಂಡು ಜ್ಯೂಸ್ ಮಾಡಿಕೊಳ್ಳಿ. ಮೂರು ವಾರಗಳ ಕಾಲ ಇದನ್ನು ಸೇವನೆ ಮಾಡಿದರೆ ವಯಸ್ಸಾಗುವ ಲಕ್ಷಣಗಳನ್ನು ನಿಧಾನಗೊಳಿಸಬಹುದು.

ಕೂದಲು ಉದುರುವಿಕೆಗೆ ಜ್ಯೂಸ್

ಕೂದಲು ಉದುರುವಿಕೆಗೆ ಜ್ಯೂಸ್

500 ಗ್ರಾಂ ಜಲಸಸ್ಯದ ಜ್ಯೂಸ್ ಮಾಡಿಕೊಂಡು ಅದನ್ನು ಕೂದಲು ಹಾಗೂ ತಲೆಬುರುಡೆಗೆ ಸರಿಯಾಗಿ ಹಚ್ಚಿಕೊಳ್ಳಿ. ಜ್ಯೂಸ್ ಕೂದಲಿನಲ್ಲಿ ಸರಿಯಾಗಿ ನೆನೆಯಲಿ. ಬಳಿಕ ಬಿಸಿ ನೀರಿನಿಂದ ಕೂದಲು ತೊಳೆಯಿರಿ.

ಮೂಳೆಗಳಿಗೆ ಹಾಗಲಕಾಯಿ, ಹಸಿರು ದ್ರಾಕ್ಷಿಯ ಜ್ಯೂಸ್

ಮೂಳೆಗಳಿಗೆ ಹಾಗಲಕಾಯಿ, ಹಸಿರು ದ್ರಾಕ್ಷಿಯ ಜ್ಯೂಸ್

ಈ ಆರೋಗ್ಯಕಾರಿ ಹಸಿರು ಜ್ಯೂಸ್ ನಲ್ಲಿ ಕಬ್ಬಿನಾಂಶ ಮತ್ತು ವಿಟಮಿನ್ ಕೆ. ಸಮೃದ್ಧವಾಗಿದೆ. ತಿಂಗಳ ಮುಟ್ಟು ಮತ್ತು ಗರ್ಭಿಣಿಯರಿಗೆ ಕಬ್ಬಿನಾಂಶ ಅಗತ್ಯವಾಗಿ ಬೇಕೇಬೇಕು. ಇದು ರಕ್ತಸಂಚಾರವನ್ನು ಉತ್ತಮಪಡಿಸುತ್ತದೆ ಮತ್ತು ಮೂಳೆಗಳ ಆರೋಗ್ಯಕ್ಕೆ ಇದು ಅತ್ಯುತ್ತಮ ಜ್ಯೂಸ್ ಆಗಿದೆ.

English summary

Vegetable Juices For 6 Diseases

Juicing of vegetables enhances the taste as they are separated from fibres and in a concentrated form. This concentrated juice is rich in phytochemicals, colour, flavour and nutrient value. Vegetable and fruit juices are known for their health benefits. They are easily absorbed and digested since it is in a liquid form. Vegetable juices help to alleviate most of the diseases such as high cholesterol level, uric acid level, anxiety, hair loss, stress etc.
Subscribe Newsletter