Latest Updates
-
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ
ಲವಲವಿಕೆಯ ಆರೋಗ್ಯಕ್ಕೆ 'ತರಕಾರಿ ಜ್ಯೂಸ್' ಸಹಕಾರಿ
ಜ್ಯೂಸ್ ಎಂದಾಕ್ಷಣ ಹಣ್ಣುಗಳ ರಸ ಎಂದೇ ನಾವೆಲ್ಲಾ ತಿಳಿದುಕೊಂಡಿದ್ದೇವೆ. ಆದರೆ ಕೆಲವು ತರಕಾರಿಗಳಿಂದಲೂ ಜ್ಯೂಸ್ ತಯಾರಿಸಬಹುದು. ಅತಿ ಸುಲಭವಾದ ಜ್ಯೂಸ್ ಎಂದರೆ ಸೌತೆಕಾಯಿಯ ಜ್ಯೂಸ್. ಹಣ್ಣುಗಳ ರಸಕ್ಕಿಂತಲೂ ತರಕಾರಿಗಳ ಜ್ಯೂಸ್ ಆರೋಗ್ಯಕ್ಕೆ ಉತ್ತಮವಾಗಿವೆ. ಏಕೆಂದರೆ ಇದರಲ್ಲಿ ಸಕ್ಕರೆ ಅತಿ ಕಡಿಮೆಯಾಗಿದ್ದು ತರಕಾರಿಯ ಎಲ್ಲಾ ಪೋಷಕಾಂಶಗಳು ದೇಹಕ್ಕೆ ಲಭ್ಯವಾಗುತ್ತವೆ.
ಕೆಲವು ತರಕಾರಿಗಳನ್ನು ಹಸಿಯಾಗಿ ಸೇವಿಸುವುದು ಉತ್ತಮ. ಆದರೆ ಇವುಗಳ ಜ್ಯೂಸ್ ರೂಪದಲ್ಲಿ ಕುಡಿದರೆ ತರಕಾರಿಯ ಪರಿಪೂರ್ಣ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ. ಅದರಲ್ಲೂ ಹಸಿರು ತರಕಾರಿಯ ಜ್ಯೂಸ್ ಆರೋಗ್ಯ ವೃದ್ಧಿಗೆ ಸಹಕಾರಿಯಾಗಿದೆ. ಉದಾಹರಣೆಗೆ ಕೇಲ್ ಎಲೆಗಳು ಅಥವಾ ಪಾಲಕ್ ಸೊಪ್ಪಿನ ಜ್ಯೂಸ್. ಕೊಂಚ ಬದಲಾವಣೆಗಾಗಿ ಕ್ಯಾರೆಟ್, ಆಲುಗಡ್ಡೆ, ಬೀಟ್ ರೂಟ್‌ಗಳ ಜ್ಯೂಸ್ ಸಹಾ ತಮ್ಮದೇ ಪ್ರತ್ಯೇಕ ಪೋಷಕಾಂಶಗಳನ್ನು ನೀಡುವ ಮೂಲಕ ಆರೋಗ್ಯವನ್ನು ವೃದ್ಧಿಸುತ್ತವೆ.
ಇದಕ್ಕೆ ಕೊಂಚ ಸಕ್ಕರೆ ಅಥವಾ ಉಪ್ಪನ್ನು ಸೇರಿಸುವ ಮೂಲಕ ಇದರ ಪೋಷಕಾಂಶಗಳನ್ನು ಹೆಚ್ಚಿನ ಸಮಯದವರೆಗೆ ಕಾಪಾಡಬಹುದು. ಸಾಮಾನ್ಯವಾಗಿ ಕಾಯಿಲೆ ಬಿದ್ದಾಗ ಅಥವಾ ವೈದ್ಯರು ಸೂಚಿಸಿದಾಗ ಮಾತ್ರ ಈ ಜ್ಯೂಸುಗಳನ್ನು ಕುಡಿಯುವುದನ್ನು ನಾವು ಅಭ್ಯಾಸ ಮಾಡಿಕೊಂಡಿದ್ದೇವೆ. ಆದರೆ ನಿತ್ಯವೂ ವಿವಿಧ ತರಕಾರಿಗಳ ಜ್ಯೂಸ್ ಮಾಡಿಕೊಂಡು ಕುಡಿಯುವ ಮೂಲಕ ದೇಹಕ್ಕೆ ಹಲವು ವಿಧವಾದ ಪ್ರಯೋಜನಗಳಿವೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ...

ಇದನ್ನು ಹೆಚ್ಚು ಪ್ರಮಾಣದಲ್ಲಿಯೂ ಸೇವಿಸಬಹುದು
ಸಾಮಾನ್ಯವಾಗಿ ಹಣ್ಣಿನ ರಸವನ್ನು ಒಂದು ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಸೇವಿಸಲು ಸಾಧ್ಯವಿಲ್ಲ. ಆದರೆ ತರಕಾರಿಯ ಜ್ಯೂಸ್ ಹೆಚ್ಚು ಸಾಂದ್ರೀಕೃತವಾಗಿದೆ. ಉದಾಹರಣೆಗೆ ಎರಡು ಕೋಸುಗಳನ್ನು ಹಿಂಡಿ ತೆಗೆದ ರಸ ಒಂದು ಲೋಟವನ್ನೂ ತುಂಬುವುದಿಲ್ಲ. ಆದರೆ ಈ ಪ್ರಮಾಣ ಸೇವಿಸಿದರೆ ಎರಡು ಕೋಸುಗಳನ್ನು ತಿಂದಷ್ಟೇ ಪೋಷಕಾಂಶಗಳು ದೊರಕುತ್ತವೆ.

ಇವು ಹೆಚ್ಚಿನ ಆರ್ದ್ರತೆ ನೀಡುತ್ತವೆ
ಕೆಲವು ತರಕಾರಿಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ಇರುತ್ತದೆ. ಉದಾಹರಣೆಗೆ ಸೌತೆಕಾಯಿ. ಇವುಗಳ ಸೇವನೆಯಿಂದ ದೇಹಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ನೀರು ಲಭ್ಯವಾಗುತ್ತದೆ. ಇದು ಆರೋಗ್ಯಕ್ಕೆ ತುಂಬಾ ಉತ್ತಮ.ರಣಬಿಸಿಲಿನ ದಾಹವನ್ನು ತಣಿಸುವ ಸೌತೆಕಾಯಿ-ಶು೦ಠಿ ಜ್ಯೂಸ್!

ಇಡಿಯ ದಿನ ಚಟುವಟಿಕೆಯಿಂದಿರುಸುತ್ತದೆ
ತರಕಾರಿಗಳಲ್ಲಿರುವ ವಿಟಮಿನ್‌ಗಳು , ಖನಿಜಗಳು ಮತ್ತು ಇತರ ಪೋಷಕಾಂಶಗಳು ಜ್ಯೂಸ್ ರೂಪದಲ್ಲಿ ಹೆಚ್ಚು ಸಾಂದ್ರೀಕೃತವಾಗಿರುವ ಕಾರಣ ದೇಹಕ್ಕೆ ಹೆಚ್ಚಿನ ಪೋಷಣೆ ನೀಡಲು ನೆರವಾಗುತ್ತವೆ. ಇದರಿಂದ ದೇಹ ಇಡಿಯ ದಿನ ಚೈತನ್ಯ ಹಾಗೂ ಚಟುವಟಿಕೆಯಿಂದಿರಲು ಸಾಧ್ಯವಾಗುತ್ತದೆ.

ಪೋಷಕಾಂಶಗಳನ್ನು ಸುಲಭವಾಗಿ ಹೀರಿಕೊಳ್ಳಲು ಸಾಧ್ಯವಾಗುತ್ತದೆ
ರಕಾರಿಯ ಪೋಷಕಾಂಶಗಳು ಜ್ಯೂಸ್ ಮೂಲಕ ದೇಹ ಸೇರಿದಾಗ ಸುಲಭವಾಗಿ ಹೀರಿಕೊಳ್ಳಲು ಸಾಧ್ಯವಾಗುತ್ತದೆ. ಏಕೆಂದರೆ ತರಕಾರಿಯನ್ನು ಸೇವಿಸಿದಾಗ ಜೀರ್ಣಾಂಗಗಳು ಇವನ್ನು ಜೀರ್ಣಿಸಿಕೊಂಡು ಇದರ ಪೋಷಕಾಂಶಗಳನ್ನು ಪಡೆಯಲು ಕೊಂಚ ಕಷ್ಟಪಡಬೇಕಾಗುತ್ತದೆ.

ಪೋಷಕಾಂಶಗಳನ್ನು ಸುಲಭವಾಗಿ ಹೀರಿಕೊಳ್ಳಲು ಸಾಧ್ಯವಾಗುತ್ತದೆ
ಅಲ್ಲದೇ ತರಕಾರಿಯ ಅನಗತ್ಯ ಭಾಗಗಳನ್ನು ನಿವಾರಿಸಲು ಸಹಾ ಶಕ್ತಿಯನ್ನು ವ್ಯಯಿಸಬೇಕಾಗುತ್ತದೆ. ಇದು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ತರಕಾರಿಯ ಪೂರ್ಣ ಪ್ರಯೋಜನ ಪಡೆಯಲು ಇದರ ಜ್ಯೂಸ್ ಕುಡಿಯುವುದೇ ಉತ್ತಮ.

ವೈವಿಧ್ಯತೆ ಸುಲಭವಾಗುತ್ತದೆ
ಕೆಲವು ತರಕಾರಿಗಳು ಆರೋಗ್ಯಕರವಾಗಿದ್ದರೂ ಇದರ ರುಚಿಯ ಕಾರಣ ಇವನ್ನು ಸೇವಿಸಲು ಹೆಚ್ಚಿನವರು ಹಿಂದೇಟು ಹಾಕುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಹಾಗಲಕಾಯಿ. ಇದರ ಕಹಿ ರುಚಿಯನ್ನು ಬಯಸದವರು ಹಾಗಲಕಾಯಿಯನ್ನೇ ದೂರಮಾಡುತ್ತಾರೆ.

ವೈವಿಧ್ಯತೆ ಸುಲಭವಾಗುತ್ತದೆ
ಆದರೆ ಬದಲಿಗೆ ಹಾಗಲಕಾಯಿಯ ಜೊತೆಗೆ ಬೇರಾವುದಾದರೂ ಸಿಹಿಯಾದ ತರಕಾರಿಯನ್ನು ಸೇರಿಸಿ ರಸ ಹಿಂಡಿ ಸೇವಿಸಿದರೆ ಹಾಗಲಕಾಯಿಯ ಕಹಿ ಅಷ್ಟೊಂದು ಹೆಚ್ಚಾಗಿ ಕಾಣುವುದಿಲ್ಲ. ಅಲ್ಲದೇ ಎರಡೂ ತರಕಾರಿಗಳ ಉತ್ತಮ ಗುಣಗಳು ಮೇಳೈಸಿಕೊಂಡು ಆರೋಗ್ಯವೃದ್ದಿಸುತ್ತವೆ. ವಿವಿಧ ತರಕಾರಿಗಳ ಪ್ರಯೋಗ ಪ್ರತಿಬಾರಿಯೂ ಭಿನ್ನ ಅನುಭವವನ್ನು ನೀಡುತ್ತದೆ.

ದೇಹದ ವಿಷಕಾರಿ ವಸ್ತುಗಳನ್ನು ನಿವಾರಿಸಲು ನೆರವಾಗುತ್ತದೆ
ತರಕಾರಿಯ ಜ್ಯೂಸ್ ದೇಹದ ವಿಷಕಾರಿ ವಸ್ತುಗಳನ್ನು ನಿವಾರಿಸಲು ನೆರವಾಗುತ್ತದೆ. ಇದರಿಂದ ದೇಹ ಹಗುರಾಗಿ ಮತ್ತು ಚಟುವಟಿಕೆಯಿಂದಿರಲು ನೆರವಾಗುತ್ತದೆ. ವಾಸ್ತವವಾಗಿ ಅತ್ಯುತ್ತಮ ದೇಹದಾರ್ಢ್ಯಕ್ಕೆ ತರಕಾರಿಗಳ ಜ್ಯೂಸ್ ಗಳನ್ನು ಪ್ರತಿದಿನ ಕುಡಿಯುವುದು ಅಗತ್ಯವಾಗಿದೆ.

ಸಕ್ಕರೆ ಇಲ್ಲದ ಈ ಜ್ಯೂಸ್ ಮಧುಮೇಹಿಗಳಿಗೂ ಉತ್ತಮ
ಹೆಚ್ಚಿನ ತರಕಾರಿಗಳಲ್ಲಿ ಸಕ್ಕರೆ ಅತಿ ಕಡಿಮೆ ಪ್ರಮಾಣದಲ್ಲಿರುತ್ತದೆ. ಗೆಣಸು ಮೊದಲಾದ ತರಕಾರಿಯಲ್ಲಿ ಮಾತ್ರ ಕೊಂಚವೇ ಹೆಚ್ಚಾಗಿದ್ದರೂ ಹಣ್ಣುಗಳ ರಸಕ್ಕೆ ಹೋಲಿಸಿದರೆ ಈ ಸಕ್ಕರೆ ಅತ್ಯಲ್ಪವಾಗಿದೆ. ಅಲ್ಲದೇ ಇವುಗಳಲ್ಲಿ ಕ್ಯಾಲೋರಿಗಳೂ ಕಡಿಮೆ ಇರುವ ಕಾರಣ ತೂಕ ಇಳಿಸುವವರಿಗೂ ಮಧುಮೇಹಿಗಳಿಗೂ ಸೂಕ್ತವಾಗಿದೆ.



Click it and Unblock the Notifications











