Latest Updates
-
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ?
ಗ್ಯಾಸ್ಟ್ರಿಕ್-ಭೇದಿ ಸಮಸ್ಯೆಗೆ ಒಂದು ಮುಷ್ಟಿ ಕರಿಬೇವಿನ ಎಲೆಗಳು ಸಾಕು!
ಕರಿಬೇವನ್ನು ನೇರವಾಗಿ ಸಾರು, ರಸಂಗಳಲ್ಲಿ ಬೆರೆಸಬಹುದು ಅಥವಾ ಒಗ್ಗರಣೆಯ ಅವಧಿಯಲ್ಲಿ ಎಣ್ಣೆಯಲ್ಲಿ ಹುರಿದೂ ಸೇರಿಸಬಹುದು. ಇವು ತಾಜಾ ಇದ್ದರೆ ಅತಿ ಹೆಚ್ಚು ಪ್ರಯೋಜನಕಾರಿಯಾಗಿದೆ. ತಾಜಾ ಎಲೆಗಳು ಲಭ್ಯವಿಲ್ಲದಿದ್ದ ಪಕ್ಷದಲ್ಲಿ ಇವುಗಳನ್ನು ಒಣಗಿಸಿ ಕುಟ್ಟಿ ಮಾಡಿದ ಪುಡಿಯನ್ನೂ ಉಪಯೋಗಿಸಬಹುದು. ಭಾರತ ಮತ್ತು ಶ್ರೀಲಂಕಾದ ಅಡುಗೆಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ.
ಔಷಧೀಯ ರೂಪದಲ್ಲಿ ಬಳಸುವಾಗ ಇದು ಸದಾ ಲಭ್ಯವಿರುವ ಒಂದು ಸಿದ್ಧ ಔಷಧಿಯಾಗಿದ್ದು ಹಲವಾರು ಕಾಯಿಲೆಗಳನ್ನು ತಕ್ಷಣವೇ ಗುಣಪಡಿಸುವ ಶಕ್ತಿ ಹೊಂದಿದೆ. ವಿಶೇಷವಾಗಿ ಚಿಕ್ಕವಯಸ್ಸಿನಲ್ಲಿಯೇ ತಲೆಗೂದಲು ನೆರೆಯುವುದು, ಕೂದಲು ಉದುರುವುದು, ಕಣ್ಣುಗಳ ದೃಷ್ಟಿ ಕಡಿಮೆಯಾಗುವುದು ಮೊದಲಾದವು.
ಇನ್ನೊಂದು ಪ್ರಮುಖ ಉಪಯೋಗವೆಂದರೆ ಗ್ಯಾಸ್ಟ್ರಿಕ್ ಸಮಸ್ಯೆ ಹಾಗೂ ಅತಿಸಾರ ಸಮಸ್ಯೆಯನ್ನು ಶಮನಗೊಳಿಸುವುದಾಗಿದೆ. ವಾಯುಪ್ರಕೋಪ (ಗ್ಯಾಸ್ಟ್ರಿಕ್) ಮತ್ತು ಅತಿಸಾರ. ಅಥವಾ ಭೇದಿ ಕಡಿಮೆಯಾಗಲು ಈ ಎಲೆಗಳು ಹೇಗೆ ನೆರವಾಗುತ್ತವೆ? ಮುಂದೆ ಓದಿ...

ಕರಿಬೇವಿನ ಎಲೆಯ ಗುಣಗಳು...
ಈ ಎಲೆಗಳಲ್ಲಿ carbazole alkaloid ಎಂದ ಪೋಷಕಾಂಶವಿದೆ. ಇವುಗಳಲ್ಲಿ ಬ್ಯಾಕ್ಟೀರಿಯಾ ನಿವಾರಕ ಹಾಗೂ ಉರಿಯೂತ ನಿವಾರಕ ಗುಣಗಳಿವೆ. ಈ ಗುಣಗಳು ಹೊಟ್ಟೆಯಲ್ಲಿ ಅಜೀರ್ಣ ಅಥವಾ ಆಮ್ಲಜನಕದ ಅಗತ್ಯವಿಲ್ಲದೇ ಆಹಾರವನ್ನು ಕೊಳೆಸುವ ಅಮೀಬಾ ಮೂಲಕ ಎದುರಾಗುವ ಸೋಂಕನ್ನು ತಡೆಯುವಲ್ಲಿ ನೆರವಾಗುತ್ತವೆ. ಅಲ್ಲದೇ ಆಯುರ್ವೇದದ ಪ್ರಕಾರ ಹೊಟ್ಟೆಯಲ್ಲಿ ಪಿತ್ತವಿಕಾರವಾದಂತೆ ನೋಡಿಕೊಳ್ಳುತ್ತದೆ. ಇದರ ರೋಗಶಮನಕಾರಿ ಗುಣ ಹೊಟ್ಟೆಯಲ್ಲಿ ಎದುರಾಗುವ ಚಿಕ್ಕ ಪುಟ್ಟ ಸೆಡೆತಗಳನ್ನು ಕಡಿಮೆ ಮಾಡುವ ಗುಣವನ್ನೂ ಹೊಂದಿದೆ. ಬನ್ನಿ, ಈ ಎಲೆಗಳಿಂದ ಔಷಧಿಯನ್ನು ಹೇಗೆ ತಯಾರಿಸಬಹುದೆಂದು ನೋಡೋಣ...

#1
ಒಂದು ಲೋಟ ನೀರನ್ನು ಕುದಿಸಿ ಇದಕ್ಕೆ ಸುಮಾರು 35-40 ಕರಿಬೇವಿನ ಎಲೆಗಳನ್ನು ಸೇರಿಸಿ. ಬಳಿಕ ಚಿಕ್ಕ ಉರಿಯಲ್ಲಿ ಸುಮಾರು ಎರಡು ಘಂಟೆಗಳವರೆಗೆ ನೀರು ಕುದಿಸಿ. ನಂತರ ಉರಿ ಆರಿಸಿ ಎಲೆಗಳನ್ನು ಸೋಸಿ ನೀರು ಸಂಗ್ರಹಿಸಿ. ಈ ನೀರಿಗೆ ಕೊಂಚ ಲಿಂಬೆರಸ ಹಾಗೂ ಜೇನನ್ನು ಬೆರೆಸಿ. ಈ ದ್ರವವನ್ನು ಖಾಲಿಹೊಟ್ಟೆಯಲ್ಲಿ ಕುಡಿಯಿರಿ.

#2
ಕೆಲವು ಕರಿಬೇವಿನ ಎಲೆಗಳನ್ನು ಚೆನ್ನಾಗಿ ಜಜ್ಜಿ ಚಿಕ್ಕ ಗೋಲಿಯಂತಾಗಿಸಿ. ಈ ಗೋಲಿಯನ್ನು ಒಂದು ಲೋಟ ಮಜ್ಜಿಗೆಯೊಡನೆ ಬೆರೆಸಿ ಕಲಕಿ ದಿನಕ್ಕೆರಡು ಬಾರಿ ಸೇವಿಸಿ.

#3
ಒಂದು ಲೋಟ ನೀರನ್ನು ಕುದಿಸಿ ಇದಕ್ಕೆ ಕೆಲವು ಎಸಳುಗಳನ್ನು ಹಾಕಿ ಕುದಿಸಿ. ಈ ನೀರನ್ನು ಸೋಸಿ ದಿನವಿಡೀ ಕೊಂಚಕೊಂಚವಾಗಿ ಕುಡಿಯುತ್ತಿರಿ.

#4
ಸುಮಾರು ನಲವತ್ತು ಗ್ರಾಂ ಕರಿಬೇಬಿನ ಒಣಪುಡಿ ಹಾಗೂ ಹತ್ತು ಗ್ರಾಂ ಜೀರಿಗೆಯೊಡನೆ ಬೆರೆಸಿ ಒಣದಾಗಿ ಪುಡಿಮಾಡಿ. ಈ ಪುಡಿಯನ್ನು ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಬೆರೆಸಿ ಕುಡಿಯಿರಿ. ಹತ್ತು ನಿಮಿಷದ ಬಳಿಕ ಒಂದು ಚಿಕ್ಕಚಮಚ ಜೇನು ಸೇವಿಸಿ. ಈ ವಿಧಾನವನ್ನು ದಿನಕ್ಕೆ ಮೂರರಿಂದ ನಾಲ್ಕು ಬಾರಿ ಪುನರಾವರ್ತಿಸಿ.

#5
ಕೊಂಚ ಎಲೆಗಳನ್ನು ಉಪ್ಪು ಮತ್ತು ನೀರಿನೊಂದಿಗೆ ಮಿಕ್ಸಿಯಲ್ಲಿ ಕಡೆಯಿರಿ. ಬಳಿಕ ಈ ನೀರನ್ನು ಸೋಸಿ ಕೊಂಚ ಜೇನು ಮತ್ತು ಲಿಂಬೆರಸ ಸೇರಿಸಿ ಒಂದು ಬಾಟಲಿಯಲ್ಲಿ ಸಂಗ್ರಹಿಸಿಡಿ. ಯಾವಾಗ ಅತಿಸಾರ ಅಥವಾ ವಾಯುಪ್ರಕೋಪದ ತೊಂದರೆ ಕಂಡುಬಂದಿತೋ ತಕ್ಷಣ ಒಂದು ಚಿಕ್ಕಚಮಚದಷ್ಟು ಪ್ರಮಾಣವನ್ನು ತಕ್ಷಣವೇ ಸೇವಿಸಿ.



Click it and Unblock the Notifications