For Quick Alerts
ALLOW NOTIFICATIONS  
For Daily Alerts

  ಕಿಡ್ನಿಯ ಆರೋಗ್ಯದ ದೃಷ್ಟಿಯಿಂದ, ಈ ಐದು ಬಗೆಯ ಆಹಾರಗಳಿಂದ ದೂರವಿರಿ...

  By Hemanth
  |

  ದೇಹದಲ್ಲಿನ ಪ್ರಮುಖ ಅಂಗವಾದ ಕಿಡ್ನಿಯು ರಕ್ತ ಶುದ್ಧೀಕರಿಸಿ ಕಲ್ಮಶಗಳನ್ನು ಹೊರಹಾಕಲು ಕೆಲಸ ಮಾಡುವುದು ಎಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ದೇಹದ ಬಾಹ್ಯ ಅಂಗಗಳನ್ನು ನಾವು ತುಂಬಾ ಚೆನ್ನಾಗಿ ಆರೈಕೆ ಮಾಡುತ್ತೇವೆ. ಅದು ನಮ್ಮ ಹಾಗೂ ಇತರರ ಕಣ್ಣಿಗೆ ಕಾಣಿಸುತ್ತದೆ ಎನ್ನುವ ಕಾರಣದಿಂದ ದೇಹದ ಬಾಹ್ಯ ಅಂಗಗಳ ಬಗ್ಗೆ ಕಾಳಜಿ ಹೆಚ್ಚು. ಆದರೆ ದೇಹದ ಒಳಗಡೆ ಇರುವ ಅಂಗಾಂಗಗಳ ಕಡೆ ನಾವು ಗಮನಹರಿಸುವುದೇ ಇಲ್ಲ. ಯಾವುದಾದರೂ ರೋಗ ನಮ್ಮನ್ನು ಕಾಡಿದಾಗ ಮಾತ್ರ ದೇಹದ ಒಳಗಿನ ಅಂಗಾಂಗಗಳ ಪ್ರಾಮುಖ್ಯತೆ ಬಗ್ಗೆ ತಿಳಿಯುವುದು.

  ಕಿಡ್ನಿ ಕಲ್ಲುಗಳ ನಿವಾರಣೆಗೆ ಇಲ್ಲಿದೆ ಸೂಕ್ತ ಪರಿಹಾರ

  ಜೀವನಶೈಲಿ ಅಥವಾ ಅಭ್ಯಾಸಗಳಿಂದ ದೇಹದೊಳಗಿನ ಅಂಗಾಂಗಗಳ ಮೇಲೆ ಪರಿಣಾಮ ಉಂಟಾಗುವುದು. ಈ ಲೇಖನದಲ್ಲಿ ಕಿಡ್ನಿಯ ಆರೋಗ್ಯ ಕಾಪಾಡಿಕೊಂಡು ಹೋಗಲು ಕಡೆಗಣಿಸಬೇಕಾಗಿರುವ ಆಹಾರದ ಬಗ್ಗೆ ಬೋಲ್ಡ್ ಸ್ಕೈ ಹೇಳಿಕೊಡಲಿದೆ. ಕಿಡ್ನಿಯ ಸಮಸ್ಯೆ ಇರುವವರು ಇಂತಹ ಆಹಾರಗಳನ್ನು ಕಡ್ಡಾಯವಾಗಿ ಕಡೆಗಣಿಸಲೇಬೇಕು. ಕಿಡ್ನಿಗಾಗಿ ತಿನ್ನಬಾರದ ಐದು ಬಗೆಯ ಆಹಾರಗಳ ಬಗ್ಗೆ ತಿಳಿಯಲು ಮುಂದಕ್ಕೆ ಓದಿಕೊಳ್ಳಿ...

  ಪ್ರಾಣಿಗಳ ಪ್ರೋಟೀನ್

  ಪ್ರಾಣಿಗಳ ಪ್ರೋಟೀನ್

  ಯಾವುದೇ ವ್ಯಕ್ತಿಯಲ್ಲಿ ಕಿಡ್ನಿ ಸಮಸ್ಯೆ ಕಾಣಿಸಿಕೊಂಡಾಗ ಹೇಳುವಂತಹ ಮೊದಲ ಮಾತೆಂದರೆ ಪ್ರಾಣಿಗಳ ಪ್ರೋಟೀನ್ ಸೇವನೆ ನಿಲ್ಲಿಸಬೇಕೆಂದು. ಮಾಂಸ ಮತ್ತು ಕೆಲವೊಂದು ಮೀನುಗಳಲ್ಲಿ ಕೂಡ ಫೋಸ್ಪರಸ್ ಮತ್ತು ಪ್ಯೂರಿನ್ ಇದೆ. ಫೋಸ್ಪರಸ್ ಕಿಡ್ನಿಗೆ ತುಂಬಾ ಕೆಟ್ಟದು. ಅದರಲ್ಲೂ ಈಗಾಗಲೇ ಹಾನಿಗೊಂಡಿರುವ ಕಿಡ್ನಿಗೆ ತುಂಬಾ ಮಾರಕ. ಪ್ಯೂರಿನ್ ರಕ್ತದಲ್ಲಿನ ಯೂರಿಕ್ ಆಮ್ಲದ ಮಟ್ಟ ಹೆಚ್ಚಿಸುವುದು. ಇದರಿಂದ ಗಂಟು ನೋವು ಕಾಣಿಸಬಹುದು ಮತ್ತು ಮೂತ್ರಪಿಂಡವು ವಿಫಲವಾಗಬಹುದು. ಮಾಂಸದ ಬದಲಿಗೆ ತರಕಾರಿಗಳಲ್ಲಿ ಸಿಗುವ ಪ್ರೋಟೀನ್ ಸೇವಿಸಿ.

  ಒಕ್ಸಾಲಿಕ್ ಆಮ್ಲ ಅಧಿಕವಾಗಿರುವ ಆಹಾರ

  ಒಕ್ಸಾಲಿಕ್ ಆಮ್ಲ ಅಧಿಕವಾಗಿರುವ ಆಹಾರ

  ಆ್ಯಂಟಿಆಕ್ಸಿಡೆಂಟ್ ಗಳು ಕಿಡ್ನಿಗೆ ತುಂಬಾ ಒಳ್ಳೆಯದು. ಆದರೆ ಒಕ್ಸಾಲಿಕ್ ಆಮ್ಲ ಅಥವಾ ಒಕ್ಸಾಲೇಟ್ ಒಳ್ಳೆಯದಲ್ಲ. ಚಹಾ, ಕಾಫಿ, ದ್ರಾಕ್ಷಿ, ಕಿತ್ತಳೆ, ಹಸಿರೆಲೆ ತರಕಾರಿಗಳನ್ನು ಕಿಡ್ನಿ ಸಮಸ್ಯೆ ಇರುವವರು ಕಡೆಗಣಿಸಬೇಕು. ಈ ಆಹಾರಗಳು ಕಿಡ್ನಿಯಲ್ಲಿ ಕಲ್ಲನ್ನು ನಿರ್ಮಿಸುತ್ತದೆ. ಇದರಿಂದ ಪರಿಸ್ಥಿತಿ ಕೆಡಬಹುದು.

  ಹೆಚ್ಚು ಉಪ್ಪಿರುವ ಆಹಾರ

  ಹೆಚ್ಚು ಉಪ್ಪಿರುವ ಆಹಾರ

  ಕಿಡ್ನಿ ಸಮಸ್ಯೆ ಇರುವವರು ಹೆಚ್ಚು ಉಪ್ಪು ಸೇವಿಸಬಾರದು ಎನ್ನುವುದು ಸಾಮಾನ್ಯ ವಿಚಾರ. ಅಧಿಕ ರಕ್ತದೊತ್ತಡ ಮತ್ತು ಕಿಡ್ನಿಯ ಅಸಮರ್ಪಕ ನಿರ್ವಹಣೆಗೆ ಪರಸ್ಪರ ಸಂಬಂಧವಿದೆ. ಒಂದರಿಂದ ಇನ್ನೊಂದಕ್ಕೆ ಅಡ್ಡಪರಿಣಾಮಗಳು ಇವೆ. ಆಹಾರದಲ್ಲಿ ಕಡಿಮೆ ಉಪ್ಪು ಬಳಸಿ. ಡಬ್ಬದಲ್ಲಿ ಬರುವ ಮತ್ತು ಸಂಸ್ಕರಿತ ಆಹಾರದಲ್ಲಿ ಉಪ್ಪು ಹೆಚ್ಚಿರುವ ಕಾರಣ ಇದನ್ನು ಕಡೆಗಣಿಸಿ. ಗಣೀಕೃತ ತರಕಾರಿ ಅಥವಾ ಉಪ್ಪಿನಕಾಯಿ ಸೇವಿಸಬೇಡಿ. ಇವುಗಳನ್ನು ಸಂಸ್ಕರಿಸಲು ಹೆಚ್ಚಿನ ಉಪ್ಪನ್ನು ಬಳಸಿರುತ್ತಾರೆ.

  ಅಧಿಕ ಪೊಟಾಶಿಯಂ ಆಹಾರ

  ಅಧಿಕ ಪೊಟಾಶಿಯಂ ಆಹಾರ

  ಕಿಡ್ನಿಯು ತೀವ್ರ ರೀತಿಯಲ್ಲಿ ಹಾನಿಗೀಡಾದ ಬಳಿಕ ಪೊಟಾಶಿಯಂ ಸೇವನೆಯು ನಿಮಗೆ ಸಮಸ್ಯೆ ಉಂಟುಮಾಡಲಿದೆ. ನೀವು ಈ ಬಗ್ಗೆ ಹೆಚ್ಚಿನ ಗಮನಹರಿಸಬೇಕಾದ ಅಗತ್ಯವಿದೆ. ಯಾಕೆಂದರೆ ತಾಜಾ ಹಣ್ಣುಗಳು ಮತ್ತು ತರಕಾರಿಗಳಲ್ಲಿ ಪೊಟಾಶಿಯಂ ಸಮೃದ್ಧವಾಗಿದೆ. ಅತಿಯಾಗಿ ಇವುಗಳ ಸೇವನೆ ಮಾಡುವುದು ಕಿಡ್ನಿಗೆ ಒಳ್ಳೆಯದಲ್ಲ. ಇದರಿಂದ ದೇಹದಲ್ಲಿ ನೀರು ಶೇಖರಣೆಯಾಗಬಹುದು.

  ಈ 'ಹಣ್ಣುಗಳು' ಕಿಡ್ನಿ ಕಲ್ಲಿನ ಸಮಸ್ಯೆಗೆ ರಾಮಬಾಣ-ತಪ್ಪದೇ ಸೇವಿಸಿ

  ಹೆಚ್ಚು ಫೋಸ್ಪರಸ್ ಇರುವ ಆಹಾರ

  ಹೆಚ್ಚು ಫೋಸ್ಪರಸ್ ಇರುವ ಆಹಾರ

  ನೀವು ಚಾಕಲೇಟ್ ಪ್ರೇಮಿಯಾಗಿದ್ದರೆ ಇದು ನಿಮಗೆ ತುಂಬಾ ಕೆಟ್ಟ ಸುದ್ದಿ. ಚಾಕಲೇಟ್, ಹಾಲು ಹಾಗೂ ಹಾಲಿನ ಉತ್ಪನ್ನಗಳು, ಬೀಜಗಳು ಮತ್ತು ಒಣಹಣ್ಣುಗಳು ನಿಮಗೆ ವರ್ಜ್ಯ. ಕಿಡ್ನಿಯಲ್ಲಿ ಫೋಸ್ಪರಸ್ ಹೆಚ್ಚು ಸಂಗ್ರಹವಾಗುವ ಕಾರಣ ಅದಕ್ಕೆ ಕ್ಯಾಲ್ಸಿಯಂ ಹೀರಿಕೊಳ್ಳಲು ಸಾಧ್ಯವಾಗದು. ಈ ಆಹಾರಗಳ ಕಡೆ ಗಮನಹರಿಸಿದರೆ ನಿಮ್ಮ ದೇಹಕ್ಕೆ ಬೇಕಾಗಿರುವ ಕ್ಯಾಲ್ಸಿಯಂ ಲಭ್ಯವಾಗುವುದು. ಈ ಮೇಲಿನ ಆಹಾರಗಳನ್ನು ತ್ಯಜಿಸುವ ಮೂಲಕ ನಿಮ್ಮ ಕಿಡ್ನಿಯು ಸರಾಗವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಿ.

  ಕಿಡ್ನಿ ಸ್ಟೋನ್ ಸಮಸ್ಯೆ ಇದ್ದರೆ, ದಿನಕ್ಕೆ ಒಂದು ಲೋಟ ಲಿಂಬೆ ಜ್ಯೂಸ್ ಕುಡಿಯಿರಿ

  English summary

  Top Foods To Avoid For Healthy Kidneys

  Prevention is always better than cure and thus it is better to keep your kidneys in a healthy functioning condition instead of treating it latter. However, if you or your lifestyle has caused damage to your kidneys then you need to wake up and take stock of the situation one way of doing this is avoiding foods bad for the kidneys. There are some foods that should not be a part of kidney disease diet for various reasons. Here is a list of 'must avoid' foods if you have a kidney disease.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more