ಅತಿಯಾಗಿ ಮೆಸೇಜ್ ಟೈಪ್ ಮಾಡುತ್ತಿದ್ದರೆ, ಹೆಬ್ಬೆರಳಿಗೆ ತೊಂದರೆ!

By: Deepu
Subscribe to Boldsky

ಇಂದಿನ ದಿನಗಳಲ್ಲಿ ಯಾರನ್ನು ನೋಡಿದರೂ ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಅದರಲ್ಲಿ ಮೆಸೇಜ್ ಟೈಪ್ ಮಾಡುತ್ತಿರುವುದನ್ನು ನಾವು ನೋಡುತ್ತಾ ಇರುತ್ತೇವೆ. ಆದರೆ ಅತಿಯಾಗಿ ಮೆಸೇಜ್ ಟೈಪ್ ಮಾಡುತ್ತಾ ಇದ್ದರೆ ಅದರಿಂದ ಸ್ಮಾರ್ಟ್ ಫೋನ್ ಹೆಬ್ಬೆರಳು ಎನ್ನುವ ನೋವಿನ ಸಮಸ್ಯೆ ಕಾಡುತ್ತದೆ. ಇದರಿಂದ ಹೆಬ್ಬೆರಳಿನ ನರಗಳಿಗೆ ತುಂಬಾ ಹಾನಿಯಾಗಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ.

ಟೆಂಡ್ನಿಟಿಸ್ ಎಂದು ಕರೆಯಲ್ಪಡುತ್ತಿದ್ದ ಇದು ಮೊದಲು ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದವರಲ್ಲಿ ಮಾತ್ರ ಕಾಣಸಿಗುತ್ತಾ ಇತ್ತು. ಹೆಬ್ಬೆರಳನ್ನು ಬಗ್ಗಿಸುವ ಮತ್ತು ಆರಾಮವಾಗಿ ತಿರುಗಿಸುವಲ್ಲಿ ಉರಿಯೂತವನ್ನು ಉಂಟು ಮಾಡುತ್ತದೆ. ದೈನಂದಿನ ಚಟುವಟಿಕೆಗಳಿಗೆ ಸ್ಮಾರ್ಟ್ ಫೋನ್ ಅನ್ನು ನಾವು ಅತಿಯಾಗಿ ಬಳಕೆ ಮಾಡುವುದರಿಂದ ಇಂತಹ ನೋವುಗಳು ಕಳೆದ ಹಲವಾರು ವರ್ಷಗಳಿಂದ ಅಮೆರಿಕಾದಲ್ಲಿ ಸಾಮಾನ್ಯವಾಗಿದೆ ಎಂದು ಸಿಬಿಎಸ್ ನ್ಯೂಸ್ ಡಾಟ್ ಕಾಮ್ ವರದಿ ಮಾಡಿದೆ. 

Smartphone Thumb

ಇದರ ಒಂದು ಕಲ್ಪನೆಯೆಂದರೆ ಗಂಟುಗಳು ತುಂಬಾ ಸಡಿಲವಾಗುತ್ತದೆ ಮತ್ತು ಇದರಿಂದಾಗಿ ಮೂಳೆಗಳು ಸಾಮಾನ್ಯ ಪರಿಸ್ಥಿತಿಗಿಂತ ತುಂಬಾ ಭಿನ್ನವಾಗಿ ವರ್ತಿಸಲು ಆರಂಭಿಸುತ್ತದೆ. ಎಂದು ರೊಚೆಸ್ಟರ್‌ನಲ್ಲಿ ಮಯೊ ಕ್ಲಿನಿಕ್ ನಲ್ಲಿ ಬಯೋಮೆಡಿಕಲ್ ಇಂಜಿನಿಯರ್ ಆಗಿರುವ ಕ್ರಿಸ್ಟಿನ್ ಝಯೊ ತಿಳಿಸಿದ್ದಾರೆ.

ಫೋನ್‌ಗಳನ್ನು ತುಂಬಾ ವಿಚಿತ್ರವಾಗಿ ಹಿಡಿದುಕೊಳ್ಳಲು ನಮಗೆ ಹೆಬ್ಬೆರಳಿನ ಚಲನೆ ಬೇಕಾಗುತ್ತದೆ. ಇದರಿಂದಾಗಿ ನಾವು ಹೆಬ್ಬೆರಳಿಗೆ ಅತಿಯಾದ ಒತ್ತಡವನ್ನು ಹಾಕುತ್ತೇವೆ. ಇದು ಯಾವುದೇ ಒತ್ತಡವಿಲ್ಲದೆ ಮಾಡುವಂತಹ ಕೆಲಸವಲ್ಲ ಎಂದು ಆಕೆ ವಿವರಿಸಿದ್ದಾಳೆ. ಹೆಬ್ಬೆರಳಿನಲ್ಲಿ ಮೂಳೆಗಳ ಅಸಾಮಾನ್ಯವಾದ ಚಲನೆಯು ನೋವನ್ನು ಉಂಟು ಮಾಡುತ್ತದೆ. 

Smartphone Thumb

ಇದರಿಂದ ಹೆಬ್ಬೆರಳಿಗೆ ಸ್ವಲ್ಪ ವಿಶ್ರಾಂತಿಯನ್ನು ನೀಡಿ ತೋರುಬೆರಳನ್ನು ಇದಕ್ಕಾಗಿ ಬಳಸಿಕೊಳ್ಳಬೇಕು. ಹೆಬ್ಬೆರಳಿನ ಮೂಳೆಯನ್ನು ಸರಿಯಾಗಿಟ್ಟುಕೊಳ್ಳಲು ಕೆಲವೊಂದು ವ್ಯಾಯಾಮಗಳನ್ನು ಮಾಡುತ್ತಿರಬೇಕು ಎಂದು ಅವರು ಹೇಳಿದ್ದಾರೆ.

English summary

Too Much Texting May May Lead To 'Smartphone Thumb'

People who spend too much time texting may be at increased risk of having "smartphone thumb", a painful condition caused by repetitive movements of typing that may lead to arthritis in the thumb, doctors have warned.
Subscribe Newsletter