ಕೇಳಿ ಇಲ್ಲಿ, ಆ ಸಮಯದಲ್ಲಿ, ಮೇಕಪ್ ಮಾಡುವಾಗ ಜಾಗ್ರತೆ ವಹಿಸಿ!

Posted By: Lekhaka
Subscribe to Boldsky

ಋತುಚಕ್ರದ ವೇಳೆ ಸಾಮಾನ್ಯವಾಗಿ ಮಹಿಳೆಯರ ದೇಹದಲ್ಲಿ ಹಲವಾರು ರೀತಿಯ ಬದಲಾವಣೆಗಳು ಆಗುವುದು ಸಹಜ. ಯಾಕೆಂದರೆ ಈ ಸಮಯದಲ್ಲಿ ದೇಹದಲ್ಲಿ ಕೆಲವೊಂದು ಹಾರ್ಮೋನುಗಳು ಬಿಡುಗಡೆಯಾಗುವ ಕಾರಣ ಕೆಲವರಿಗೆ ಸಮಸ್ಯೆಗಳು ಕಾಣಿಸಿಕೊಳ್ಳುವುದು. ಕೆಲವರಲ್ಲಿ ಮೊಡವೆಗಳು ಕಾಣಿಸಿಕೊಳ್ಳುವುದು. ಆದರೆ ಈ ಸಮಸ್ಯೆ ನಿಮಗೆ ಮಾತ್ರ ಇರುವುದಲ್ಲ. ಹೆಚ್ಚಿನವರಿಗೆ ಇಂತಹ ಸಮಸ್ಯೆ ಇರುವುದು. ಚರ್ಮ ಒಣಗುವುದು, ನಿಸ್ತೇಜವಾಗುವುದು ಮತ್ತು ಮೊಡವೆಗಳು ಬರುವುದು ಮುಟ್ಟಿನ ಸಮಯದಲ್ಲಿ ಸಾಮಾನ್ಯ ಸಮಸ್ಯೆಯಾಗಿರುವುದು.

ಆದರೆ ಈ ಸಮಯದಲ್ಲಿ ನೀವು ತ್ವಚೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದರೆ ತುಂಬಾ ಒಳ್ಳೆಯದು. ಇದನ್ನು ಹೇಗೆ ಮಾಡಬೇಕು ಎಂದು ನಿಮಗೆ ಗೊಂದಲವಿದ್ದರೆ ಬೋಲ್ಡ್ ಸ್ಕೈ ಈ ಬಗ್ಗೆ ನಿಮಗೆ ತಿಳಿಸಿಕೊಡಲಿದೆ. ಋತುಚಕ್ರದ ವೇಳೆ ಆಗುವಂತಹ ಹಲವಾರು ರೀತಿಯ ಚರ್ಮದ ಸಮಸ್ಯೆಯನ್ನು ಇದು ಹೋಗಲಾಡಿಸುವುದು. ಹಲವಾರು ಮಂದಿ ಮಹಿಳೆಯರು ಇದನ್ನು ಪ್ರಯತ್ನಿಸಿ ಇದರಿಂದ ಒಳ್ಳೆಯ ಫಲಿತಾಂಶ ಪಡೆದುಕೊಂಡಿದ್ದಾರೆ. ಮುಂದಿನ ಸಲ ನಿಮಗೆ ಋತುಚಕ್ರದ ವೇಳೆ ಯಾವುದೇ ರೀತಿಯ ಸಮಸ್ಯೆಯಾದರೆ ಈ ಸಲಹೆಗಳನ್ನು ಪಾಲಿಸಿಕೊಂಡು ಹೋಗಿ.... 

ಚರ್ಮಕ್ಕೆ ಮಸಾಜ್ ಮಾಡಿ

ಚರ್ಮಕ್ಕೆ ಮಸಾಜ್ ಮಾಡಿ

ತ್ವಚೆಯಲ್ಲಿ ರಕ್ತ ಸಂಚಲನ ಹೆಚ್ಚಿಸಿಕೊಳ್ಳಲು ಮಸಾಜ್ ಮಾಡಿಕೊಳ್ಳುವುದು ತುಂಬಾ ಹಿಂದಿನಿಂದಲೂ ನೆಚ್ಚಿಕೊಂಡಿರುವ ಒಂದು ತಂತ್ರ. ಋತುಚಕ್ರದ ಸಮಯದಲ್ಲಿ ನೀವು ಇದನ್ನು ಅಳವಡಿಸಿಕೊಳ್ಳಿ. ಇದರಿಂದ ಮುಟ್ಟಿನ ವೇಳೆ ಬರುವಂತಹ ಎರಡು ಸಾಮಾನ್ಯ ಸಮಸ್ಯೆಗಳಾದ ಚರ್ಮ ಒಣಗುವುದು ಮತ್ತು ನಿಸ್ತೇಜವಾಗುವುದು ಕಡಿಮೆಯಾಗುವುದು. ಆಲಿವ್ ತೈಲದಿಂದ ಮಸಾಜ್ ಮಾಡಿಕೊಂಡರೆ ನಿಮ್ಮ ತ್ವಚೆಗೆ ಒಳ್ಳೆಯ ಕಾಂತಿ ಬರುವುದು.

ಸತ್ತ ಚರ್ಮ ತೆಗೆಯಿರಿ

ಸತ್ತ ಚರ್ಮ ತೆಗೆಯಿರಿ

ಮುಟ್ಟಿನ ಸಮಯದಲ್ಲಿ ಚರ್ಮದಲ್ಲಿ ಮುಚ್ಚಿರುವಂತಹ ರಂಧ್ರಗಳು ಮೊಡವೆಗಳಿಗೆ ಕಾರಣವಾಗಬಹುದು. ಇದಕ್ಕಾಗಿ ಮುಟ್ಟಿಗೆ ಮೊದಲು ಮತ್ತು ಬಳಿಕ ಮುಖದಲ್ಲಿರುವ ಸತ್ತ ಚರ್ಮವನ್ನು ತೆಗೆದುಹಾಕಿ. ಇದರಿಂದ ರಂಧ್ರಗಳು ಸ್ವಚ್ಛವಾಗಿರುವುದು ಮತ್ತು ಯಾವುದೇ ಕಲ್ಮಶಗಳು ಇರುವುದಿಲ್ಲ. ಇದಕ್ಕೆ ನೀವು ಯಾವುದಾದರೂ ಸ್ಕ್ರಬ್ ಬಳಸಬಹುದು ಅಥವಾ ಓಟ್ ಮೀಲ್, ಲಿಂಬೆರಸ, ಬ್ರೌನ್ ಶುಗರ್ ಹಾಕಿಕೊಂಡು ಸ್ಕ್ರಬ್ ಮಾಡಬಹುದು.

ಚರ್ಮವು ತೇವಾಂಶದಿಂದ ಇರಲಿ

ಚರ್ಮವು ತೇವಾಂಶದಿಂದ ಇರಲಿ

ಮುಟ್ಟಿನ ಸಮಯದಲ್ಲಿ ನಿರ್ಜಲೀಕರಣ ಮತ್ತು ಚರ್ಮವು ನಿಸ್ತೇಜವಾಗುವ ಸಮಸ್ಯೆ ಕಾಣಿಸಿಕೊಳ್ಳುವುದು. ಈ ಸಮಯದಲ್ಲಿ ಹೆಚ್ಚೆಚ್ಚು ನೀರು ಕುಡಿದು ಚರ್ಮದಲ್ಲಿ ತೇವಾಂಶವಿರುವಂತೆ ನೋಡಿಕೊಳ್ಳಿ ಮತ್ತು ಚರ್ಮದ ಟೋನರ್ ಬಳಸಿಕೊಳ್ಳಬಹುದು.

 ಹೆಚ್ಚು ಕಾಳಜಿ ಅಗತ್ಯ

ಹೆಚ್ಚು ಕಾಳಜಿ ಅಗತ್ಯ

ಋತುಚಕ್ರದ ಸಮಯದಲ್ಲಿ ಚರ್ಮವು ತುಂಬಾ ಸೂಕ್ಷ್ಮವಾಗಿರುವುದು. ಈ ಸಮಯದಲ್ಲಿ ಚರ್ಮದಲ್ಲಿ ಗಾಯಗಳು ಮತ್ತು ಸೋಂಕು ಬೇಗನೆ ಕಾಣಿಸಿಕೊಳ್ಳುವುದು. ಇದರಿಂದ ಚರ್ಮದ ಆರೈಕೆ ಮಾಡಿಕೊಳ್ಳುವಾಗ ಹೆಚ್ಚಿನ ಜಾಗೃತೆ ವಹಿಸಿಕೊಂಡು ಈ ಸಮಸ್ಯೆ ನಿವಾರಿಸಿ.

ಸ್ಥಿರತೆಯಿರಲಿ

ಸ್ಥಿರತೆಯಿರಲಿ

ಎಲ್ಲಾ ರೀತಿಯ ಸೌಂದರ್ಯವರ್ಧಕಗಳನ್ನು ಮುಟ್ಟಿನ ವೇಳೆ ಚರ್ಮಕ್ಕೆ ಹಚ್ಚಿಕೊಂಡರ ಅದರಿಂದ ಯಾವುದೇ ಪ್ರಯೋಜನವಾಗದು. ಇದರಿಂ ಮತ್ತಷ್ಟು ಹಾನಿಯಾಗಬಹುದು. ಇದರಿಂದ ನಿಯಮಿತ ಹಾಗೂ ಸ್ಥಿರತೆಯಿಂದ ಸೌಂದರ್ಯವರ್ಧಕಗಳನ್ನು ಬಳಸಿ ಮತ್ತು ಚರ್ಮದ ಮೇಲೆ ನಾಕಾರಾತ್ಮಕ ಪರಿಣಾಮ ಬೀರುವಂತೆ ಯಾವುದನ್ನೂ ಅತಿಯಾಗಿ ಮಾಡಬೇಡಿ.

ಫೇಶಿಯಲ್ ಮಾಸ್ಕ್

ಫೇಶಿಯಲ್ ಮಾಸ್ಕ್

ಫೇಶಿಯಲ್ ಮಾಸ್ಕ್ ತ್ವಚೆಗೆ ಮೃಧುತ್ವ ನೀಡುವುದು. ನೀವು ಮಾರುಕಟ್ಟೆಗೆ ಹೋಗಿ ಫೇಶಿಯಲ್ ಕ್ರೀಮ್ ತರಬಹುದು ಅಥವಾ ಮನೆಯಲ್ಲೇ ಸೌತೆಕಾಯಿ, ಅಲೋವೆರಾ ಲೋಳೆ ಇತ್ಯಾದಿ ಹಾಕಿಕೊಂಡು ಫೇಶಿಯಲ್ ಮಾಸ್ಕ್ ತಯಾರಿಸಬಹುದು. ಇಂತಹ ಫೇಶಿಯಲ್ ಮಾಸ್ಕ್ ಧರಿಸುವುದರಿಂದ ಚರ್ಮವು ಕಾಂತಿಯುತವಾಗಿರುವುದು.

 ರಾತ್ರಿ ಚಿಕಿತ್ಸೆ

ರಾತ್ರಿ ಚಿಕಿತ್ಸೆ

ನೀವು ನಿದ್ರಿಸುತ್ತಾ ಇರುವ ವೇಳೆ ಚರ್ಮದ ಕೋಶಗಳು ಪುನರುಜ್ಜೀವನಗೊಳ್ಳುವುದು. ಇದರಿಂದ ರಾತ್ರಿ ವೇಳೆ ಮಾಡುವಂತಹ ಚರ್ಮದ ಚಿಕಿತ್ಸೆಯು ತುಂಬಾ ಪರಿಣಾಮಕಾರಿಯಾಗಿರುವುದು. ರಾತ್ರಿ ವೇಳೆ ಚರ್ಮಕ್ಕೆ ಕ್ರೀಮ್ ಹಚ್ಚಿಕೊಂಡು ಮಲಗಿ ಅಥವಾ ರೋಸ್ ವಾಟರ್ ಹಚ್ಚಿಕೊಂಡು ಮಲಗಿ. ಈ ರೀತಿ ಮಾಡಿದರೆ ಬೆಳಗ್ಗೆ ನೀವು ಕಾಂತಿಯುತ ಚರ್ಮವನ್ನು ಕಾಣಬಹುದು.

ಹಗುರ ಮೇಕಪ್ ಹಾಕಿ

ಹಗುರ ಮೇಕಪ್ ಹಾಕಿ

ಮುಟ್ಟಿನ ಸಮಯದಲ್ಲಿ ಚರ್ಮವು ತುಂಬಾ ಸೂಕ್ಷ್ಮವಾಗಿರುವುದು ಮತ್ತು ಕೆಲವೊಂದು ಕಾಸ್ಮೆಟಿಕ್ ಉತ್ಪನ್ನಗಳಿಗೆ ವಿರುದ್ಧವಾಗಿ ವರ್ತಿಸಬಹುದು. ಇದರಿಂದ ಮೊಡವೆಗಳು ಕಾಣಿಸಿಕೊಳ್ಳುವುದು. ಇದರಿಂದ ಇಂತಹ ಸಮಯದಲ್ಲಿ ನೀವು ಹಗುರವಾದ ಮೇಕಪ್ ಹಾಕಿಕೊಂಡರೆ ಒಳ್ಳೆಯದು.

English summary

Tips To Take Care Of Your Skin During Period

As today at Boldsky, we've zeroed in on the most useful tips that can prove to be hugely rewarding at the time of your periods.Inclusion of these tips in your beauty routine can keep various menstrual-related skin problems at bay. Countless women have tried these tips and vouch for their effectiveness. So, just follow the below-stated tips to help your skin stay in tip-top shape when that time of the month rolls around.Take a look at them here:
Please Wait while comments are loading...
Subscribe Newsletter