Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ನೆನಪಿಡಿ, ಊಟವಾದ ಕೂಡಲೇ ಅಪ್ಪಿತಪ್ಪಿಯೂ ನೀರು ಕುಡಿಯಬೇಡಿ!!
ಸ್ವಾದಿಷ್ಟ ಊಟದ ಕೊನೆಯಲ್ಲಿ ನಾವೆಲ್ಲಾ ಒಂದು ದೊಡ್ಡ ಲೋಟ ನೀರನ್ನು ಕುಡಿದು ತೃಪ್ತಿಕರ ಭಾವನೆಯನ್ನು ಪಡೆಯುತ್ತೇವೆ. ವಾಸ್ತವವಾಗಿ ಈ ಅಭ್ಯಾಸದಿಂದ ಕೆಲವಾರು ಜೀರ್ಣಕ್ರಿಯೆಯ ತೊಂದರೆಗಳು ಹಾಗೂ ರಕ್ತದಲ್ಲಿ ಥಟ್ಟನೇ ಸಕ್ಕರೆಯ ಮಟ್ಟ ಏರಲು ಕಾರಣವಾಗುತ್ತದೆ ಎಂದು ನಿಮಗೆ ತಿಳಿದಿತ್ತೇ? ಹೌದು, ನೀವು ಸರಿಯಾಗಿಯೇ ಗ್ರಹಿಸಿದಿರಿ. ಊಟದ ಬಳಿಕ ನೀರು ಕುಡಿಯುವುದು ಆರೋಗ್ಯಕ್ಕೆ ಅನಾನುಕೂಲವಾದ ಅಭ್ಯಾಸವಾಗಿದೆ.
ನಮ್ಮ ಜೀರ್ಣಾಂಗಗಳ ಕಾರ್ಯವ್ಯವಸ್ಥೆ ಕೊಂಚ ಭಿನ್ನವಾಗಿದ್ದು ಸಮಯಾಧಾರಿತವಾಗಿದೆ. ಅಂದರೆ ಯಾವ ಸಮಯದಲ್ಲಿ ಊಟಮಾಡಬೇಕು, ಯಾವ ಸಮಯದಲ್ಲಿ ಜೀರ್ಣರಸಗಳನ್ನು ಒಸರಬೇಕು ಎಂಬುದೆಲ್ಲಾ ಮೆದುಳಿನಿಂದ ಲಭಿಸುವ ಸೂಚನೆಗಳನ್ನು ಅನುಸರಿಸಿದೆ. (ವಾಸ್ತವವಾಗಿ ಮೆದುಳುಬಳ್ಳಿ). ಊಟದ ಬಳಿಕ ನೀರನ್ನು ಕುಡಿಯುವುದರಿಂದ ಜೀರ್ಣರಸಗಳು ಇನ್ನಷ್ಟು ತಿಳಿಯಾಗುತ್ತವೆ ಹಾಗೂ ತಮ್ಮ ಪ್ರಬಲತೆಯನ್ನು ಕಳೆದುಕೊಳ್ಳುತ್ತವೆ. ಈ ರಸ ಈಗ ಆಹಾರದ ಕಠಿಣ ಭಾಗವನ್ನು ಅರಗಿಸಿಕೊಳ್ಳಲು ಅಸಮರ್ಥವಾಗುತ್ತದೆ.
ಆಯುರ್ವೇದದ ಪ್ರಕಾರ ನಮ್ಮ ಹೊಟ್ಟೆಯಲ್ಲಿ ಆಹಾರವನ್ನು ಜೀರ್ಣಿಸಲು ಅಗ್ನಿ ಕಾರಣವಾಗಿದೆ. ಹೊಟ್ಟೆಯಲ್ಲಿ ಹಸಿವನ್ನು ಮೂಡಿಸಿ ಆಹಾರವನ್ನು ಒದಗಿಸುವಂತೆ ಸೂಚಿಸುವುದೂ ಅಗ್ನಿಯೆ ಆಗಿದ್ದು ಜೀರ್ಣಕ್ರಿಯೆಯ ಮೂಲಕ ದೇಹಕ್ಕೆ ಬೇಕಾದ ಶಕ್ತಿಯನ್ನು ಒದಗಿಸುವುದೂ ಅಗ್ನಿಯೇ ಆಗಿದೆ. ಊಟದ ಸಮಯದಲ್ಲಿ ನೀರನ್ನು ಕುಡಿಯುವ ಮೂಲಕ ಅಗ್ನಿಯನ್ನು ನಂದಿಸಿದಂತಾಗುತ್ತದೆ ಹಾಗೂ ಇದರ ಪ್ರಾಬಲ್ಯವನ್ನು ಕಡಿಮೆ ಮಾಡಿದಂತಾಗುತ್ತದೆ. ಬನ್ನಿ, ಈ ಅಭ್ಯಾಸದ ದುಷ್ಟರಿಣಾಮಗಳ ಬಗ್ಗೆ ಇನ್ನಷ್ಟು ಹೆಚ್ಚು ಮಾಹಿತಿಯನ್ನು ಪಡೆಯೋಣ....

ಹೊಟ್ಟೆಯುಬ್ಬರಿಕೆಗೆ ಕಾರಣವಾಗುತ್ತದೆ
ಊಟದ ತಕ್ಷಣ ನೀರು ಕುಡಿಯುವ ಮೂಲಕ ಅಗ್ನಿಯ ಪ್ರಾಬಲ್ಯವನ್ನು ಕಡಿಮೆಗೊಳಿಸುವುದರಿಂದ ಅಗ್ನಿಗೆ ಆಹಾರವನ್ನು ಪೂರ್ಣವಾಗಿ ಜೀರ್ಣಿಸಲು ಸಾಧ್ಯವಾಗುವುದಿಲ್ಲ. ಹೀಗೆ ಅರ್ಧ ಜೀರ್ಣವಾದ ಆಹಾರದಿಂದ ವಾಯು ಹೆಚ್ಚು ಬೇಗನೇ ಉತ್ಪತ್ತಿಯಾಗುತ್ತದೆ. ಇದು ಹೊಟ್ಟೆಯುಬ್ಬರಿಕೆಗೆ ಕಾರಣವಾಗುತ್ತದೆ.

ಅಜೀರ್ಣತೆಗೆ ಕಾರಣವಾಗುತ್ತದೆ
ಹೊಟ್ಟೆಯಿಂದ ಕರುಳಿಗೆ ಆಹಾರ ಧಾವಿಸಬೇಕಾದರೆ ಸಾಕಷ್ಟು ಜೀರ್ಣಗೊಂಡಿರಬೇಕು. ಆದರೆ ಅಗತ್ಯವಿದ್ದಷ್ಟು ಜೀರ್ಣವಾಗದೇ ಇರುವ ಅಹಾರ ಕರುಳುಗಳಲ್ಲಿ ಚಲಿಸಲು ಬಹಳವೇ ಕಷ್ಟಪಡಬೇಕಾಗುತ್ತದೆ. ಇದು ಮಲಬದ್ಧತೆಗೆ ಕಾರಣವಾಗುತ್ತದೆ. ಅಲ್ಲದೇ ಗಟ್ಟಿಯಾಗಿರುವ ಆಹಾರವನ್ನು ಒಳಭಾಗದವರೆಗೂ ಜೀರ್ಣಿಸಿಕೊಳ್ಳಲು ಕರುಳುಗಳೂ ವಿಫಲವಾಗುತ್ತವೆ. ಪರಿಣಾಮವಾಗಿ ಕೇಂದ್ರಭಾಗದ ಆಹಾರ ಜೀರ್ಣವಾಗದೇ ವಾಯುಪ್ರಕೋಪ, ಆಮ್ಲೀಯತೆ ಮೊದಲಾದವುಗಳಿಗೆ ಕಾರಣವಾಗುತ್ತದೆ. ಕಾಲಕ್ರಮೇಣ ಈ ಅಭ್ಯಾಸ ಸತತವಾಗಿ ಇನ್ನೂ ದೊಡ್ಡ ಪರೋಕ್ಷ ಪರಿಣಾಮಗಗಳಿಗೆ ಮೂಲವಾಗಬಹುದು.

ಆಮ್ಲೀಯತೆ ಎದುರಾಗಬಹುದು
ಊಟದ ಬಳಿಕ ನೀರು ಕುಡಿದರೆ ಜಠರರಸ ತಿಳಿಯಾಗುತ್ತದೆ. ಪರಿಣಾಮವಾಗಿ ಆಹಾರ ಜೀರ್ಣಗೊಳ್ಳಲು ಹೆಚ್ಚು ಹೊತ್ತು ಹೊಟ್ಟೆಯಲ್ಲಿಯೇ ಇರಬೇಕಾಗುತ್ತದೆ. ಅಂದರೆ ಅಗತ್ಯವಿರುವಷ್ಟು ಜೀರ್ಣಕ್ರಿಯೆ ಮುಗಿಸಲೇಬೇಕಾದರೆ ಇನ್ನಷ್ಟು ಹೆಚ್ಚಿನ ಜಠರರಸವನ್ನು ಸ್ರವಿಸುವುದು ಈಗ ಅನಿವಾರ್ಯವಾಗುತ್ತದೆ. ಪರಿಣಾಮವಾಗಿ ಆಮ್ಲೀಯತೆ ಹೆಚ್ಚುತ್ತದೆ.

ಥಟ್ಟನೇ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಏರುತ್ತದೆ
ಈ ಅಭ್ಯಾಸದಿಂದ ಎದುರಾಗುವ ಇನ್ನೊಂದು ದೊಡ್ಡ ತೊಂದರೆ ಎಂದರೆ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಥಟ್ಟನೇ ಏರುವುದು. ಹೊಟ್ಟೆಯಲ್ಲಿ ಜೀರ್ಣಗೊಳ್ಳದೇ ಇರುವ ಅಹಾರದ ಪ್ರಮಾಣ ಹೆಚ್ಚಿದಷ್ಟೂ ರಕ್ತದಲ್ಲಿ ಸಕ್ಕರೆ ಥಟ್ಟನೇ ಏರುವ ಸಂಭವವೂ ಹೆಚ್ಚು.

ನೀರು ಕುಡಿಯಲು ಅತಿ ಸೂಕ್ತವಾದ ಸಮಯ ಯಾವುದು?
ಊಟದ ಬಳಿಕ ನೀರು ಕುಡಿಯದೇ ಇರಲು ಈ ಕಾರಣಗಳೇ ಸಾಕು, ಹಾಗಾದರೆ ನೀರು ಕುಡಿಯಲು ಅತಿ ಸೂಕ್ತವಾದ ಸಮಯ ಯಾವುದು? ಆಯುರ್ವೇದದ ಪ್ರಕಾರ ಊಟ ಮಾಡುವುದಕ್ಕಿಂತಲೂ ಅರ್ಧ ಗಂಟೆಗೂ ಮುಂಚಿತವಾಗಿ ಒಂದು ಲೋಟ ನೀರು ಕುಡಿಯುವುದು ಅತ್ಯಂತ ಸೂಕ್ತ.

ನೀರು ಕುಡಿಯಲು ಅತಿ ಸೂಕ್ತವಾದ ಸಮಯ ಯಾವುದು?
ಈ ಮೂಲಕ ಜೀರ್ಣಾಂಗಗಳು ತಮ್ಮ ಪೂರ್ಣ ಕ್ಷಮತೆಯಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ. ಊಟದ ನಡು ನಡುವೆ ಕೊಂಚವೇ ನೀರನ್ನು ಗುಟುಕರಿಸುವುದೂ ಆರೋಗ್ಯಕರ. ಇದರಿಂದ ಜೀರ್ಣಾಂಗಗಳಿಗೆ ಅಗತ್ಯವಾದ ಜಾರುಕತೆಯನ್ನು ನೀಡಲು ಸಾಧ್ಯವಾಗುತ್ತದೆ. ಅಂದರೆ ಆಹಾರ ಸುಲಭವಾಗಿ ಜೀರ್ಣಾಂಗಗಳ ಒಳಗೆ ಚಲಿಸಲು ನೆರವಾಗುತ್ತದೆ. ಹಾಗೂ ಮಲಬದ್ಧತೆಯಾಗದೇ ಇರಲೂ ನೆರವಾಗುತ್ತದೆ. ಆದ್ದರಿಂದ, ಒಂದು ವೇಳೆ ಅರಿವಿಲ್ಲದೇ ಈ ಅಭ್ಯಾಸ ನಿಮ್ಮದಾಗಿದ್ದರೆ ತಕ್ಷಣವೇ ಇದನ್ನು ನಿಲ್ಲಿಸಿ ಉತ್ತಮ ಆರೋಗ್ಯ ಪಡೆಯುವತ್ತ ಬದಲಿಸಿಕೊಳ್ಳುವುದೇ ಜಾಣರ ಲಕ್ಷಣ. ಜಾಣರಾಗುವಿರಲ್ಲ?



Click it and Unblock the Notifications