For Quick Alerts
ALLOW NOTIFICATIONS  
For Daily Alerts

ಆಯುರ್ವೇದ ಟಿಪ್ಸ್: ರಕ್ತ ಶುದ್ಧೀಕರಿಸುವ ನೈಸರ್ಗಿಕ ಜ್ಯೂಸ್

ದೇಹದ ಮಲಿನ ರಕ್ತವನ್ನು ಶುದ್ಧೀಕರಿಸಲು ನಿಸರ್ಗ ಕೆಲವು ಸಾಮಾಗ್ರಿಗಳನ್ನು ನೀಡಿದ್ದು ಇದರ ಸರಿಯಾದ ಸೇವನೆಯಿಂದ ಒಂದೇ ವಾರದಲ್ಲಿ ರಕ್ತ ಶುದ್ಧಿಯಾಗುತ್ತದೆ.

By Manu
|

ಆಗಾಗ ನೀವು ಸುಲಭವಾಗಿ ಕಾಯಿಲೆಗೆ ತುತ್ತಾಗುತ್ತಿದ್ದೀರಾ? ಹಾಗಾದರೆ ನಿಮ್ಮ ರಕ್ತದಲ್ಲಿ ವಿಷಕಾರಿ ಅಂಶಗಳು ಹೆಚ್ಚಾಗಿರುವ ಸಾಧ್ಯತೆ ಇದೆ. ಅಂದರೆ ರಕ್ತ ಆಮ್ಲಜನಕವನ್ನು ಕೊಂಡೊಯ್ಯುವ ಸಾಮರ್ಥ್ಯವನ್ನು ಕಡಿಮೆ ಮಾಡಿಕೊಂಡಿದೆ ಎಂದು ಅರ್ಥೈಸಿಕೊಳ್ಳಬಹುದು.

ಮಲಿನ ರಕ್ತ ದೇಹವೆಲ್ಲಾ ಹರಿಯುತ್ತಾ ಹತ್ತು ಹಲವು ಸೋಂಕುಗಳನ್ನು ಹರಡುವ ಸಾಧ್ಯತೆಯ ಮೂಲಕ ಹಲವು ಪ್ರಮುಖ ಅಂಗಾಂಗಗಳಿಗೆ ಹಾನಿಯುಂಟುಮಾಡಬಹುದು. ಮಲಿನ ರಕ್ತವನ್ನು ಶುದ್ಧೀಕರಿಸಲು ನಿಸರ್ಗ ಕೆಲವು ಸಾಮಾಗ್ರಿಗಳನ್ನು ನೀಡಿದ್ದು ಇದರ ಸರಿಯಾದ ಸೇವನೆಯಿಂದ ಒಂದೇ ವಾರದಲ್ಲಿ ರಕ್ತ ಶುದ್ಧಿಯಾಗುತ್ತದೆ. ಸರಳ ಮನೆಮದ್ದು: 'ರಕ್ತ ಶುದ್ಧೀಕರಿಸುವ' ಅದ್ಭುತ ಜ್ಯೂಸ್

ಈ ಸಾಮಾಗ್ರಿಗಳನ್ನು ಬಳಸಿ ತಯಾರಿಸಿದ ಪೇಯವನ್ನು ಕುಡಿಯುವ ಮೂಲಕ ರಕ್ತದಲ್ಲಿನ ಮಲಿನ ಮತ್ತು ವಿಷಕಾರಿ ವಸ್ತುಗಳು ಪ್ರತ್ಯೇಕಿಸಲ್ಪಟ್ಟು ವಿಸರ್ಜಿಸಲು ಸಾಧ್ಯ. ಮಲಿನ ಪದಾರ್ಥಗಳು ನಾವು ಸೇವಿಸುವ ಆಹಾರ, ಗಾಳಿ ಮತ್ತು ನೀರಿನ ಮೂಲಕ ದೇಹಕ್ಕೆ ಆಗಮಿಸಿರುತ್ತವೆ. ಬನ್ನಿ, ಈ ಅದ್ಭುತ ಪೇಯವನ್ನು ತಯಾರಿಸುವುದು ಹೇಗೆ ಎಂಬುದನ್ನು ಕಲಿಯೋಣ...


ಅಗತ್ಯವಿರುವ ಸಾಮಾಗ್ರಿಗಳು:

ಅಗತ್ಯವಿರುವ ಸಾಮಾಗ್ರಿಗಳು:

*ಹಸಿಶುಂಠಿಯ ರಸ: ಮೂರು ದೊಡ್ಡ ಚಮಚ

*ಈಗ ತಾನೇ ಹಿಂಡಿ ತೆಗೆದ ಕಿತ್ತಳೆಯ ರಸ - 4 ದೊಡ್ಡ ಚಮಚ

*ಅರಿಶಿನ ಪುಡಿ- 1 ಚಿಕ್ಕ ಚಮಚ

ಮಾಡುವ ವಿಧಾನ....

ಮಾಡುವ ವಿಧಾನ....

ಶುಂಠಿ, ಕಿತ್ತಳೆ ಮತ್ತು ಅರಿಸಿನ ಮೂರರಲ್ಲೂ ವಿವಿಧ ಆಂಟಿ ಆಕ್ಸಿಡೆಂಟುಗಳಿವೆ ಹಾಗೂ ವಿವಿಧ ರೋಗಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾಗಳ ಧಾಳಿಯನ್ನು ಎದುರಿಸಲು ಸಮರ್ಥವೂ ಆಗಿವೆ. ಈ ಬ್ಯಾಕ್ಟೀರಿಯಾ ನಿರೋಧಕ ಗುಣವೇ ರಕ್ತ ಶುದ್ಧೀಕರಿಸಲೂ ಬಳಕೆಯಾಗುತ್ತದೆ. ಈ ಮೂರೂ ಸಾಮಾಗ್ರಿಗಳನ್ನು ಒಂದು ಕಪ್‌ನಲ್ಲಿ ಚೆನ್ನಾಗಿ ಬೆರೆಸಿ ದಿನದ ಪ್ರಥಮ ಆಹಾರವಾಗಿ ಸೇವಿಸಿ ಕೊಂಚ ಹೊತ್ತಿನ ಬಳಿಕ ಉಪಾಹಾರ ಸೇವಿಸಬೇಕು. ಬನ್ನಿ, ಶುಂಠಿಯ ಸೇವನೆಯಿಂದ ಬೇರಾವ ಪ್ರಯೋಜನಗಳಿವೆ ಎಂಬುದನ್ನು ನೋಡೋಣ:

ಮಲಬದ್ಧತೆ, ಅಜೀರ್ಣಕ್ಕೆ

ಮಲಬದ್ಧತೆ, ಅಜೀರ್ಣಕ್ಕೆ

ಮಲಬದ್ಧತೆ, ಅಜೀರ್ಣ, ಆಮ್ಲೀಯತೆ ಮೊದಲಾದ ತೊಂದರೆಗಳ ನಿವಾರಣೆಗೆ ಶುಂಠಿಯ ರಸ ಅತ್ಯುತ್ತಮವಾಗಿದೆ.

ನೈಸರ್ಗಿಕ ಉರಿಯೂತ ನಿವಾರಕ

ನೈಸರ್ಗಿಕ ಉರಿಯೂತ ನಿವಾರಕ

ಶುಂಠಿ ನೈಸರ್ಗಿಕ ಉರಿಯೂತ ನಿವಾರಕವಾಗಿದ್ದು ಈ ಗುಣ ಹತ್ತು ಹಲವು ಬಗೆಯ ನೋವುಗಳನ್ನು, ಬಾವುಗಳನ್ನು ಕಡಿಮೆಗೊಳಿಸಲು ನೆರವಾಗುತ್ತದೆ.

ರೋಗ ನಿರೋಧಕ ಶಕ್ತಿ ಹೆಚ್ಚಳ

ರೋಗ ನಿರೋಧಕ ಶಕ್ತಿ ಹೆಚ್ಚಳ

ಶುಂಠಿಯಲ್ಲಿ ಹಲವು ಬಗೆಯ ಪೋಷಕಾಂಶಗಳಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಹಲವು ಬಗೆಯ ರೋಗಗಳನ್ನು ಬರದಂತೆ ತಡೆಯುತ್ತದೆ.

ಮೈಗ್ರೇನ್ ತಲೆನೋವಿಗೆ

ಮೈಗ್ರೇನ್ ತಲೆನೋವಿಗೆ

ತಲೆನೋವಿನ ಅತ್ಯುಗ್ರ ರೂಪವಾದ ಮೈಗ್ರೇನ್ ತಲೆನೋವನ್ನು ಕಡಿಮೆ ಮಾಡಲೂ ಶುಂಠಿ ಉತ್ತಮವಾಗಿದೆ. ಮೈಗ್ರೇನ್ ನೋವಿಗೆ ಅಂತ್ಯ ಹಾಡುವ ಹತ್ತು ಗಿಡಮೂಲಿಕೆಗಳು

ಮುಂಜಾನೆಯ ವಾಕರಿಕೆ

ಮುಂಜಾನೆಯ ವಾಕರಿಕೆ

ಗರ್ಭಿಣಿಯರಿಗೆ ಕಾಡುವ ಮುಂಜಾನೆಯ ವಾಕರಿಕೆಯನ್ನು ಕಡಿಮೆ ಮಾಡಲೂ ಶುಂಠಿಯ ಸೇವನೆ ಉತ್ತಮವಾಗಿದೆ. ಗರ್ಭಾವಸ್ಥೆಯಲ್ಲಿ ವಾಕರಿಕೆ ಸಮಸ್ಯೆ-ಇಲ್ಲಿದೆ ಸಿಂಪಲ್ ಟಿಪ್ಸ್

ಸಂಧಿವಾತವನ್ನು ಕಡಿಮೆ ಮಾಡಲು

ಸಂಧಿವಾತವನ್ನು ಕಡಿಮೆ ಮಾಡಲು

ಸಂಧಿವಾತವನ್ನು ಕಡಿಮೆ ಮಾಡಲೂ ಶುಂಠಿ ಸಮರ್ಥವಾಗಿದೆ. ಬಾವು ಮತ್ತು ಸೆಡೆತಗೊಂಡ ಸ್ನಾಯುಗಳನ್ನು ಸಡಿಲಿಸುವ ಮೂಲಕ ಸಂಧಿವಾತವನ್ನು ಕಡಿಮೆಗೊಳಿಸಲು ಸಾಧ್ಯವಾಗುತ್ತದೆ. ಸಂಧಿವಾತ ಸಮಸ್ಯೆಗೆ ಸರಳ ಜ್ಯೂಸ್ ರೆಸಿಪಿ-ಶೀಘ್ರ ಪರಿಹಾರ...

ಮಧುಮೇಹ ನಿಯಂತ್ರಣ...

ಮಧುಮೇಹ ನಿಯಂತ್ರಣ...

ರಕ್ತದಲ್ಲಿನ ಹೆಚ್ಚಿನ ಪ್ರಮಾಣದ ಸಕ್ಕರೆಯ ಪ್ರಮಾಣವನ್ನು ಕಡಿಮೆಗೊಳಿಸುವ ಮೂಲಕ ಮಧುಮೇಹದ ಕೆಲವು ಪರಿಣಾಮಗಳನ್ನೂ ಕಡಿಮೆ ಮಾಡಬಹುದು....

ಹೃದಯ ಸಂಬಂಧಿ ಕಾಯಿಲೆ ನಿಯಂತ್ರಣ

ಹೃದಯ ಸಂಬಂಧಿ ಕಾಯಿಲೆ ನಿಯಂತ್ರಣ

ನಿಯಮಿತವಾಗಿ ಸೇವಿಸುತ್ತಾ ಬಂದರೆ ಹೃದಯ ಸಂಬಂಧಿ ಕಾಯಿಲೆಗಳಿಂದ ಹಾಗೂ ನರಸಂಬಂಧಿ ತೊಂದರೆಗಳಿಂದ ರಕ್ಷಣೆ ನೀಡುತ್ತದೆ.

ಮಾಸಿಕ ದಿನ

ಮಾಸಿಕ ದಿನ

ಮಹಿಳೆಯರಿಗೆ ಕಾಡುವ ಮಾಸಿಕ ದಿನಗಳ ಕೆಳಹೊಟ್ಟೆನೋವನ್ನೂ ಕಡಿಮೆ ಮಾಡಲು ಶುಂಠಿ ನೆರವಾಗುತ್ತದೆ.

English summary

This Natural Juice Can Cleanse Your Blood In A Week!

This homemade juice is potent enough to separate the toxins and waste products that enter your blood stream through food, water and air, flushing them out through the excretory system.Let us see how to prepare and use this blood purifying juice, here.
X
Desktop Bottom Promotion