For Quick Alerts
ALLOW NOTIFICATIONS  
For Daily Alerts

ಸರಳ ಮನೆಮದ್ದು: 'ರಕ್ತ ಶುದ್ಧೀಕರಿಸುವ' ಅದ್ಭುತ ಜ್ಯೂಸ್

By Manu
|

ರಕ್ತ ಅಶುದ್ಧವಾಗಿದ್ದರೆ ಇದರ ಪರಿಣಾಮವನ್ನು ಚರ್ಮದ ದದ್ದುಗಳು, ತುರಿಕೆ, ಬೆರಳುಗಳ ಸಂದುಗಳಲ್ಲಿ ನವೆ ಮೊದಲಾದ ಲಕ್ಷಣಗಳಿಂದ ತಿಳಿದುಕೊಳ್ಳಬಹುದು. ತಕ್ಷಣ ರಕ್ತ ಶುದ್ಧೀಕರಿಸುವ ಔಷಧಿಯನ್ನು ಅಥವಾ ಆಹಾರವನ್ನು ಸೇವಿಸುವುದೇ ಸೂಕ್ತ ಮಾರ್ಗವಾಗಿದೆ. ಈ ತೊಂದರೆಯ ನಿವಾರಣೆಗೆ ಲೋಳೆಸರ, (ಅಲೋವೆರಾ) ಬೆಳ್ಳುಳ್ಳಿ, ಶುಂಠಿ ಮೊದಲಾದವುಗಳನ್ನು ಆಹಾರ ರೂಪದಲ್ಲಿ ಶತಮಾನಗಳಿಂದ ಬಳಸಲ್ಪಡುತ್ತಾ ಬರಲಾಗಿದೆ.... ಅನಾನಸ್ ಹಣ್ಣು ನೆನೆಸಿದ ನೀರು ಕುಡಿಯಿರಿ, ಆರೋಗ್ಯ ಪಡೆಯಿರಿ

ನಮ್ಮಲ್ಲಿ ಹೆಚ್ಚಿನವರು ಲೋಳೆಸರವನ್ನು ಚರ್ಮದ ಹೊರಭಾಗಕ್ಕೆ ಲೇಪಿಸುವ ಔಷಧಿಯ ರೂಪದಲ್ಲಿ ಮಾತ್ರ ಕಂಡಿದ್ದಾರೆ. ಆದರೆ ವಾಸ್ತವವಾಗಿ ಲೋಳೆಸರದ ರಸವನ್ನು ಔಷಧಿಯ ರೂಪದಲ್ಲಿ ಸೇವಿಸಲೂಬಹುದು. ರಕ್ತಶುದ್ಧೀಕರಣಕ್ಕೆ ಲೋಳೆಸರ ಮತ್ತು ಅನಾನಸ್ ಹಣ್ಣಿನ ಮಿಶ್ರಣವನ್ನು ಕುಡಿಯಬಹುದು. ಬರೆಯ ರಕ್ತ ಶುದ್ಧೀಕರಣ ಮಾತ್ರವಲ್ಲ, ರಕ್ತಪರಿಚಲನೆಯನ್ನೂ ಉತ್ತಮಗೊಳಿಸುವ ಸಾಮರ್ಥ್ಯವಿರುವ ಈ ಅದ್ಭುತ ಪೇಯವನ್ನು ಹೇಗೆ ತಯಾರಿಸಬಹುದು ಎಂಬುದನ್ನು ಈಗ ನೋಡೋಣ.... ನೈಸರ್ಗಿಕ ರಕ್ತ ಶುದ್ಧೀಕರಿಸುವ ಆಹಾರಗಳು

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

*ಒಂದು ಲೋಟ ತಾಜಾ ಅನಾನಸ್ ಹಣ್ಣಿನ ರಸ

*ಎರಡು ದೊಡ್ಡಚಮಚ ಲೋಳೆಸರದ ತಿರುಳು

*ಒಂದು ಲಿಂಬೆ ಹಣ್ಣು

*ಕೆಲವು ಪುದೀನಾ ಎಲೆಗಳು

*ಅರ್ಧ ಕಪ್ ನೀರು

ತಯಾರಿಸುವ ವಿಧಾನ

ತಯಾರಿಸುವ ವಿಧಾನ

*ಮೊದಲು ಲೋಳೆಸರದ ತಿರುಳನ್ನು ನೀರಿನಲ್ಲಿ ಬೆರೆಸಿ ಮಿಕ್ಸಿಯ ಚಿಕ್ಕ ಜಾರ್‌ನಲ್ಲಿ ಗೊಟಾಯಿಸಿ.

*ಬಳಿಕ ಲಿಂಬೆಹಣ್ಣಿನ ರಸವನ್ನು ಬೆರೆಸಿ.

*ನಂತರ ಅನಾನಸ್ ರಸವನ್ನು ಬೆರೆಸಿ ಇನ್ನೂ ಕೊಂಚವೇ ಮಿಕ್ಸಿಯಲ್ಲಿ ಗೊಟಾಯಿಸಿ. (ಹೆಚ್ಚು ಗೊಟಾಯಿಸಬಾರದು, ಅನಾನಸ್ ಕಹಿಯಾಗುತ್ತದೆ)

*ಪೇಯ ಕುಡಿಯಲು ಸಿದ್ಧವಾಗಿದೆ.

ಈ ಪೇಯ ಹೇಗೆ ಕೆಲಸ ಮಾಡುತ್ತದೆ?

ಈ ಪೇಯ ಹೇಗೆ ಕೆಲಸ ಮಾಡುತ್ತದೆ?

ಲೋಳೆಸರ ಕ್ಷಾರೀಯವಾಗಿದ್ದು ದೇಹದಲ್ಲಿರುವ ಆಮ್ಲೀಯ ಪದಾರ್ಥಗಳನ್ನು ನಿಷ್ಕ್ರಿಯಗೊಳಿಸಿ ದೇಹ ನವಚೈತನ್ಯವನ್ನು ಪಡೆಯಲು ನೆರವಾಗುತ್ತದೆ.

ಈ ಪೇಯ ಹೇಗೆ ಕೆಲಸ ಮಾಡುತ್ತದೆ?

ಈ ಪೇಯ ಹೇಗೆ ಕೆಲಸ ಮಾಡುತ್ತದೆ?

ಅಲ್ಲದೇ ಜೀರ್ಣರಸ ಹೆಚ್ಚು ಆಮ್ಲೀಯವಾಗಿದ್ದು ಇದರ ಮೂಲಕ ಎದುರಾಗುವ ಹೊಟ್ಟೆಯುರಿ, ಹೊಟ್ಟೆಯ ಮತ್ತು ಕರುಳಿನ ಗಂಟುಗಳು, ಕರುಳಿನ ಒಳಭಾಗದ ಸೋಂಕು ಮೊದಲಾದ ತೊಂದರೆಗಳಿಂದ ರಕ್ಷಿಸುತ್ತದೆ. ರಕ್ತವನ್ನು ಶುದ್ಧೀಕರಿಸಿ ಆಮ್ಲೀಯ ಕಣಗಳ ಮೂಲಕ ಎದುರಾಗುವ ತುರಿಕೆ ನವೆ ಮೊದಲಾದವುಗಳನ್ನು ನಿವಾರಿಸುತ್ತದೆ.

ಇತರ ಪ್ರಯೋಜನಗಳು

ಇತರ ಪ್ರಯೋಜನಗಳು

ಈ ಪೇಯವನ್ನು ಕುಡಿಯುವ ಮೂಲಕ ಕೆಲವು ಬಗೆಯ ನೋವುಗಳೂ ಇಲ್ಲವಾಗುತ್ತವೆ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಹಾಗೂ ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ.

English summary

This Mixture Purifies Your Blood

We all know about the health benefits of aloe vera plant. In fact, aloe vera had been a healer since centuries. After garlic and ginger, even aloe vera has a special place in the world of healing ingredients. Most of us use aloe vera topically on the skin but in fact, it can also be consumed. It can boost your blood circulation and purify it to
X
Desktop Bottom Promotion