For Quick Alerts
ALLOW NOTIFICATIONS  
For Daily Alerts

ಕ್ಯಾನ್ಸರ್‌ನ್ನು ಮಟ್ಟ ಹಾಕುವ ತಾಕತ್ತು-'ಹಲಸಿನ ಹಣ್ಣಿನಲ್ಲಿದೆ'!

ನೋಡಲು ಮುಳ್ಳುಗಳಿರುವ ವಿಕಾರ ಹೊರಭಾಗದ ಈ ಹಲಸಿನ ಹಣ್ಣಿನ ತೊಳೆಗಳು ಮಾತ್ರ ಆರೋಗ್ಯಕರವಾಗಿದ್ದು ಕ್ಯಾನ್ಸರ್ ಕಣಗಳನ್ನು ಕೊಲ್ಲಲು ಶಕ್ತವಿರುವ ಔಷಧಿಯೂ ಆಗಿದೆ...ಮುಂದೆ ಓದಿ

By Arshad
|

ಕ್ಯಾನ್ಸರ್ ಎಂದರೆ ಸಾವಿನ ಬಾಗಿಲು ಎಂದೇ ಹೆಚ್ಚಿನವರು ತಿಳಿದುಕೊಂಡಿದ್ದಾರೆ. ಆದರೆ ಎಲ್ಲಾ ಕ್ಯಾನ್ಸರ್‍‌ಗಳು ಮಾರಣಾಂತಿಕವಲ್ಲ. ಪ್ರಾರಂಭಿಕ ಹಂತದಲ್ಲಿದ್ದರೆ ಖಂಡಿತಾ ಗುಣಪಡಿಸಬಹುದು. ಅಲ್ಲದೇ ರಕ್ತ, ಕರುಳು, ಗರ್ಭಾಶಯ ಮೊದಲಾದ ಕ್ಯಾನ್ಸರ್‍‌ಗಳು ಮಾತ್ರ ಉಲ್ಬಣಾವಸ್ಥೆ ತಲುಪಿದರೆ ಚಿಕಿತ್ಸೆ ಫಲಕಾರಿಯಾಗುವ ಸಾಧ್ಯತೆ ಕಡಿಮೆ.

ಅದರಲ್ಲೂ ಕರುಳಿನ ಕ್ಯಾನ್ಸರ್ ಬೇಗನೇ ವೃದ್ಧಿಗೊಳ್ಳುವ ಮತ್ತು ಚಿಕಿತ್ಸೆ ಕಷ್ಟವಿರುವ ಕಾಯಿಲೆಯಾಗಿದ್ದು ಇದರ ದುಷ್ಪರಿಣಾಮಗಳಿಂದ ದೇಹದ ಇತರ ಅಂಗಗಳೂ ಬಾಧೆಗೊಳಗಾಗುತ್ತವೆ. ಆದರೆ ಈ ಕ್ಯಾನ್ಸರ್ ಅನ್ನು ತಡೆಗಟ್ಟಲು ನಮಗೆಲ್ಲಾ ಚಿರಪರಿಚಿತವಾಗಿರುವ ಹಣ್ಣಿನ ಸೇವನೆಯೇ ಸಾಕು. ಅದು ಯಾವ ಹಣ್ಣು ಗೊತ್ತೇ? ಹಲಸಿನ ಹಣ್ಣು! ಸಂಪದ್ಭರಿತವಾದ ಹಲಸಿನ-ಹಣ್ಣಿನಲ್ಲಿದೆ ಆರೋಗ್ಯದ ಕಮಾಲು

ನೋಡಲು ಮುಳ್ಳುಗಳಿರುವ ವಿಕಾರ ಹೊರಭಾಗದ ಈ ಹಣ್ಣಿನ ತೊಳೆಗಳು ಮಾತ್ರ ಆರೋಗ್ಯಕರವಾಗಿದ್ದು ಕ್ಯಾನ್ಸರ್ ಕಣಗಳನ್ನು ಕೊಲ್ಲಲು ಶಕ್ತವಿರುವ ಔಷಧಿಯೂ ಆಗಿದೆ. ಹಲಸಿನಿಂದ ಹಲವಾರು ಖಾದ್ಯ, ಹಪ್ಪಳ, ಸಿಹಿತಿನಿಸುಗಳನ್ನು ತಯಾರಿಸಲಾಗುತ್ತದೆ. ಸೌಂದರ್ಯ ಹೆಚ್ಚಿಸುವ ಹಲಸಿನ ಉಪಯೋಗ ಹಲವಾರು..

ಆದರೆ ಇದುವರೆಗೆ ಈ ಹಣ್ಣಿನ ಸೇವನೆಯಿಂದ ಕರುಳಿನ ಕ್ಯಾನ್ಸರ್ ಬರದಂತೆ ತಡೆಗಟ್ಟಬಹುದು ಹಾಗೂ ಪ್ರಾರಂಭಿಕ ಹಂತದಲ್ಲಿದ್ದರೆ ಗುಣಪಡಿಸಲೂಬಹುದು ಎಂದು ನಮಗೆಲ್ಲಾ ಗೊತ್ತೇ ಇರಲಿಲ್ಲ. ಹಲಸಿನ ಹಣ್ಣಿನ ಬೀಜ ಎಸೆಯುವ ಮುನ್ನ ಎರಡು ಬಾರಿ ಆಲೋಚಿಸಿ!

ಬನ್ನಿ, ಕರುಳಿನ ಕ್ಯಾನ್ಸರ್ ಅನ್ನು ಹಲಸಿನ ಹಣ್ಣು ಹೇಗೆ ಗುಣಪಸುತ್ತದೆ ಎಂಬ ಕುತೂಹಲವನ್ನು ಕೆಳಗಿನ ಮಾಹಿತಿಗಳ ಮೂಲಕ ಓದಿ ತಣಿಸೋಣ...

ಹಲಸಿನಲ್ಲಿದೆ ಫೈಟೋನ್ಯೂಟ್ರಿಯೆಂಟುಗಳು

ಹಲಸಿನಲ್ಲಿದೆ ಫೈಟೋನ್ಯೂಟ್ರಿಯೆಂಟುಗಳು

ಫೈಟೋ ಅಂದರೆ ಕಾದಾಡುವ ನ್ಯೂಟ್ರಿಯಂಟು ಅಂದರೆ ಪೋಷಕಾಂಶಗಳು ಎಂಬ ಅರ್ಥ ಬರುತ್ತದೆ. ಅಂದರೆ ಹಲಸಿನಲ್ಲಿರುವ ಕೆಲವು ಪೋಷಕಾಂಶಗಳು ಕ್ಯಾನ್ಸರ್ ಗೆ ಕಾರಣವಾಗುವ ಫ್ರೀ ರ್‍ಯಾಡಿಕಲ್ ಎಂಬ ಕಣಗಳ ವಿರುದ್ದ ಹೋರಾಡಿ ಪ್ರಾರಂಭಿಕ ಹಂತದಲ್ಲಿರುವ ಕ್ಯಾನ್ಸರ್ ಪೀಡಿತ ಜೀವಕೋಶಗಳನ್ನು ದೇಹದ ರೋಗ ನಿರೋಧಕ ವ್ಯವಸ್ಥೆಯೇ ಹೊರದೂಡುವಂತೆ ಮಾಡುತ್ತದೆ. ಅಲ್ಲದೇ ಕರುಳಿನ ಒಳಗಣ ಹುಣ್ಣು ಮತ್ತು ಹೊಟ್ಟೆಯ ಹುಣ್ಣುಗಳನ್ನು ನಿವಾರಿಸಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ತನ್ಮೂಲಕ ಒಟ್ಟಾರೆ ಆರೋಗ್ಯವನ್ನು ವೃದ್ಧಿಸುತ್ತದೆ.

ಹಲಸಿನಲ್ಲಿದೆ ಸ್ಯಾಪೋನಿನ್‌ಗಳು

ಹಲಸಿನಲ್ಲಿದೆ ಸ್ಯಾಪೋನಿನ್‌ಗಳು

ಈ ಪೋಷಕಾಂಶಗಳು ಕ್ಯಾನ್ಸರ್ ಕಣಗಳನ್ನು ಕೊಲ್ಲುವಷ್ಟು ಪ್ರಬಲವಾಗಿವೆ. ಇವು ಹೇಗೆ ಕೆಲಸ ಮಾಡುತ್ತವೆ ಎಂದರೆ ಈಗಾಗಲೇ ಬೆಳೆಯುತ್ತಿರುವ ಕ್ಯಾನ್ಸರ್ ಗಡ್ಡೆಯ ಹೊರಕವಚದ ಮೇಲೆ ಅಂಟಿಕೊಂಡು ಆ ಗಡ್ಡೆ ಇನ್ನಷ್ಟು ಬೆಳೆಯದಂತೆ ನೋಡಿಕೊಳ್ಳುತ್ತವೆ. ಇದೇ ಕಾರಣಕ್ಕೆ ಹಲಸಿನ ಹಣ್ಣನ್ನು ಕ್ಯಾನ್ಸರ್ ತಡೆಗಟ್ಟುವ ಅತ್ಯುತ್ತಮ ಸೇನಾನಿ ಎಂದು ಕರೆಯಬಹುದು.

ಇದರಲ್ಲಿವೆ ಉತ್ತಮ ಪ್ರಮಾಣದ ಲಿಗ್ನಾನ್ ಮತ್ತು ಐಸೋಫ್ಲೇವೋನ್‌ಗಳು

ಇದರಲ್ಲಿವೆ ಉತ್ತಮ ಪ್ರಮಾಣದ ಲಿಗ್ನಾನ್ ಮತ್ತು ಐಸೋಫ್ಲೇವೋನ್‌ಗಳು

ಈ ಎರಡು ಪೋಷಕಾಂಶಗಳನ್ನು ಫೈಟೋ ಈಸ್ಟ್ರೋಜೆನ್ ಅಥವಾ ಕಾದಾಡುವ ಶಕ್ತಿಯುಳ್ಳ ಈಸ್ಟ್ರೋಜೆನ್ ಎಂದು ಕರೆಯಬಹುದು. ಇವುಗಳ ಇರುವಿಕೆಯಿಂದ ವಿಶೇಷವಾಗಿ ಮಹಿಳೆಯರ ದೇಹದಲ್ಲಿ ಗರ್ಭಾಶಯದ, ಗರ್ಭಕಂಠ ಹಾಗೂ ಅಂಡಾಶಯದ ಕ್ಯಾನ್ಸರ್ ಆವರಿಸುವ ಸಾಧ್ಯತೆ ಅಪಾರವಾಗಿ ಕಡಿಮೆಯಾಗುತ್ತದೆ. ಆದ್ದರಿಂದ ಹಲಸಿನ ಹಣ್ಣನ್ನು ಹೆಚ್ಚು ಹೆಚ್ಚಾಗಿ ಸೇವಿಸಿರುವವರ ದೇಹದಲ್ಲಿ ಈ ಕ್ಯಾನ್ಸರ್ ಗಳು ಆವರಿಸುವ ಸಾಧ್ಯತೆ ಕಡಿಮೆ.

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಹಲಸಿನ ಹಣ್ಣಿನಲ್ಲಿ ವಿಟಮಿನ್ ಸಿ ಉತ್ತಮ ಪ್ರಮಾಣದಲ್ಲಿದೆ. ಅಲ್ಲದೇ ಇದರಲ್ಲಿರುವ ಸಕ್ಕರೆಯೂ ಸರಳವಾಗಿದ್ದು ಸುಲಭವಾಗಿ ಜೀರ್ಣವಾಗುತ್ತದೆ. ಪರಿಣಾಮವಾಗಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಅಲ್ಲದೇ ಇದರಲ್ಲಿರುವ ಪಾಲಿಸ್ಯಾಖರೈಡ್ಸ್ ಗಳು phagocytic ಅಥವಾ ಭಕ್ಷಿಸಿ ನಾಶಮಾಡುವ ಜೀವಕೋಶಗಳ ಕ್ಷಮತೆಯನ್ನು ಉಡುಗಿಸಿ ರೋಗ ನಿರೋಧಕ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸುತ್ತವೆ.

ಹಲಸಿನ ಹಣ್ಣು ಇನ್ನೂ ಯಾವ ರೀತಿಯಾಗಿ ಆರೋಗ್ಯಕರ?

ಹಲಸಿನ ಹಣ್ಣು ಇನ್ನೂ ಯಾವ ರೀತಿಯಾಗಿ ಆರೋಗ್ಯಕರ?

ಜೀರ್ಣಶಕ್ತಿ ಹೆಚ್ಚಿಸಲು: ಜೀರ್ಣಶಕ್ತಿಯನ್ನು ಹೆಚ್ಚಿಸುವ ವಿಷಯ ಬಂದಾಗ ಜೀರ್ಣಕ್ರಿಯೆಯನ್ನು ಚುರುಕುಗೊಳಿಸಲು ಹಲಸಿನ ಹಣ್ಣು ಅತ್ಯುತ್ತಮವಾಗಿದೆ. ತನ್ಮೂಲಕ ಇದು ಕರುಳಿನ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.

ಹಲಸಿನ ಹಣ್ಣು ಇನ್ನೂ ಯಾವ ರೀತಿಯಾಗಿ ಆರೋಗ್ಯಕರ?

ಹಲಸಿನ ಹಣ್ಣು ಇನ್ನೂ ಯಾವ ರೀತಿಯಾಗಿ ಆರೋಗ್ಯಕರ?

ತೂಕ ಇಳಿಸಲು ನೆರವಾಗುತ್ತದೆ ಒಂದುಕಪ್ ಹಲಸಿನ ತೊಳೆಯಲ್ಲಿ ಕೇವಲ 155 ಕ್ಯಾಲೋರಿಗಳಿದ್ದು ಇದು ಹೊಟ್ಟೆಯನ್ನು ತುಂಬಿಸುವ ಜೊತೆಗೇ ತೂಕ ಹೆಚ್ಚದಿರುವಂತೆ ನೋಡಿಕೊಳ್ಳುತ್ತದೆ.

ಕರಗದ ನಾರು

ಕರಗದ ನಾರು

ಒಂದು ಕಪ್ ನಷ್ಟು ಹಲಸಿನ ತೊಳೆಗಳಲ್ಲಿ 11% ಕ್ಕೂ ಹೆಚ್ಚು ಪ್ರಮಾಣದ ನಿತ್ಯದ ಅಗತ್ಯದ ಕರಗದ ನಾರನ್ನು ಪಡೆಯಬಹುದು.

ಖನಿಜಗಳು

ಖನಿಜಗಳು

ಇದರಲ್ಲಿ ಪೊಟ್ಯಾಶಿಯಂ, ಸತು, ಮೆಗ್ನೀಶಿಯಂ, ಕಬ್ಬಿಣ, ಕ್ಯಾಲ್ಸಿಯಂ, ಮ್ಯಾಂಗನೀಸ್, ತಾಮ್ರ, ಸೆಲೆನಿಯಂ ಹಾಗೂ ಗಂಧಕಗಳು ಉತ್ತಮ ಪ್ರಮಾಣದಲ್ಲಿವೆ.

ವಿಟಮಿನ್ನುಗಳು

ವಿಟಮಿನ್ನುಗಳು

ಹಲಸಿನ ಹಣ್ಣಿನಲ್ಲಿ ವಿಟಮಿನ್ ಎ, ಸಿ, ಫೋಲೇಟ್, ನಿಯಾಸಿನ್, ಥಿಯಾಮೈನ್ ಮತ್ತು ರೈಬೋಫ್ಲೇವಿನ್ ನಂತಹ ಪೋಷಕಾಂಶಗಳಿದ್ದು ಹಲವು ರೀತಿಯಲ್ಲಿ ಆರೋಗ್ಯವನ್ನು ವೃದ್ಧಿಸುತ್ತವೆ. ಹಲಸಿನ ಹಣ್ಣಿನ ಸಿರಾ ಅಥವಾ ಕೇಸರಿ ಭಾತ್

English summary

This Fruit Is A Strong Cancer Killer! Read To Know More

There is a natural way to fight this cancer and that is by the consumption of Jackfruit! Jackfruit is a delicacy that comes with a host of several health benefits, mainly to kill the cancer cells. It is widely used in many recipes, but people are hardly aware of its main health benefit and that is to kill cancer cells. Continue reading to know the benefits of this natural remedy for cancer.
X
Desktop Bottom Promotion