For Quick Alerts
ALLOW NOTIFICATIONS  
For Daily Alerts

ಮುಟ್ಟಿನ ಹೊಟ್ಟೆ ನೋವನ್ನು ನಿಯಂತ್ರಿಸಲು 'ನೈಸರ್ಗಿಕ ಜ್ಯೂಸ್'

ತಿಂಗಳಿಗೊಮ್ಮೆ ಮುಟ್ಟಿನ ಸಮಯದಲ್ಲಿ ಕಾಣಿಸಿ ಕೊಳ್ಳುವ ಈ ನೋವಿಗೆ ಪರಿಹಾರ ಹುಡುಕುವುದು ಎಷ್ಟೋ ಮಹಿಳೆಯರಿಗೆ ಸಾಧ್ಯವಾಗಿರುವುದಿಲ್ಲ. ಆದರೆ ಕೆಲವೊಂದು ವಿಧಾನ ಅನುಸರಿಸಿದರೆ ತಿಂಗಳ ಮುಟ್ಟಿನ ನೋವನ್ನು ಸುಲಭವಾಗಿ ನಿಯಂತ್ರಿಸಬಹುದು....

By Manu
|

ರಜೋನಿವೃತ್ತಿ ಪಡೆಯುವವರೆಗೂ ಪ್ರತಿತಿಂಗಳೂ ಮಹಿಳೆಯರು ಮಾಸಿಕ ದಿನಗಳ ನೋವನ್ನು ತಾಳಿಕೊಳ್ಳುವುದು ಅನಿವಾರ್ಯ. ಕೆಲವೊಮ್ಮೆ ಈ ನೋವು (ಋತುಚಕ್ರ ಅಥವಾ ಮುಟ್ಟಿನ ಹೊಟ್ಟೆ ನೋವು) ಹೆಚ್ಚು ಕಾಲ ಕಾಡುತ್ತದೆ. ಈ ನೋವು ಹೆಚ್ಚು ಕಾಲ ಇದ್ದರೆ ಇದರ ಪರಿಹಾರಕ್ಕಾಗಿ ಸಮರ್ಥವಾದ ಪೇಯವೊಂದಿದೆ. ನೋವು ಬರುವುದು ಅನಿವಾರ್ಯವಾದರೂ ಇದರ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಲು ಹಾಗೂ ಅವಧಿಯನ್ನು ಸಹಾ ಕಡಿಮೆ ಮಾಡಿಕೊಳ್ಳಬಹುದು.

Period Cramps

ಹೆಚ್ಚಿನ ಮಹಿಳೆಯರು ಈ ಅವಧಿಯಲ್ಲಿ ದೈಹಿಕವಾಗಿಯೂ ಮಾನಸಿಕವಾಗಿಯೂ ಪ್ರಕ್ಷುಬ್ಧತೆಯನ್ನು ಅನುಭವಿಸುತ್ತಾರೆ. ಈ ನೋವು ಮತ್ತು ಮಾನಸಿಕ ತೊಳಲಾಟ ಪ್ರತಿ ಮಹಿಳೆಯಲ್ಲಿಯೂ ಬೇರೆ ಬೇರೆ ತೆರನಾಗಿರುತ್ತದೆ. ಅದರಲ್ಲೂ ಸ್ರಾವವನ್ನು ಸುಲಭಗೊಳಿಸಲು ಗರ್ಭಕೋಶದ ಸ್ನಾಯುಗಳು ಸಂಕುಚಿತಗೊಂಡಾಗ ಹೆಚ್ಚಿನ ನೋವು ಕಾಡುತ್ತದೆ. ಅಚ್ಚರಿ, ಕುತೂಹಲ ಕೆರಳಿಸುವ ಮುಟ್ಟಿನ ರಹಸ್ಯ!

ಎಷ್ಟೋ ಸಲ ಈ ನೋವನ್ನು ತಡೆಯಲಾರದೇ ಮಹಿಳೆಯರು ನೋವು ನಿವಾರಕ ಮಾತ್ರೆಗಳಿಗೆ ಶರಣಾಗುತ್ತಾರೆ. ಆದರೆ ಈ ಗುಳಿಗೆಗಳು ತಕ್ಷಣಕ್ಕೆ ಶಮನ ನೀಡಿದರೂ ದೀರ್ಘಕಾಲಿಕವಾಗಿ ಹಾನಿಯನ್ನೇ ಎಸಗುತ್ತವೆ. ಬನ್ನಿ, ಈ ತೊಂದರೆಯಿಂದ ಪಾರಾಗಲು ನಿಸರ್ಗ ನೀಡಿರುವ ಈ ಸಾಮಗ್ರಿಗಳನ್ನು ಬಳಸಿ ನೋಡಿ.... ಅನಿಯಮಿತ ಮುಟ್ಟಿನ ಸಮಸ್ಯೆಗಳನ್ನು ನಿವಾರಿಸುವುದು ಹೇಗೆ?

ಅಗತ್ಯವಿರುವ ಸಾಮಾಗ್ರಿಗಳು
*ಲಿಂಬೆರಸ: ಅರ್ಧ ಲೋಟ
*ತುಳಸಿ ಎಲೆಗಳು - ಸುಮಾರು ನಾಲ್ಕು (ಜಜ್ಜಿದ್ದು)
*ದಾಲ್ಚಿನ್ನಿ ಪುಡಿ (Cinnamon Powder) - 1 ಚಿಕ್ಕಚಮಚ

ತಯಾರಿಕಾ ವಿಧಾನ:
*ಒಂದು ಲೋಟದಲ್ಲಿ ಮೇಲಿನ ಎಲ್ಲ ಪರಿಕರಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ
*ಮಾಸಿಕ ದಿನಗಳಲ್ಲಿ ನೋವಿರುವ ಸಮಯದಲ್ಲಿ ಈ ಪೇಯವನ್ನು ಗಟಗಟನೇ ಕುಡಿದುಬಿಡಿ.
*ನೋವಿರುವ ದಿನಗಳಲ್ಲಿ ದಿನಕ್ಕೆರಡು ಬಾರಿ ಹಾಗೂ ಇತರ ದಿನಗಳಲ್ಲಿ ದಿನಕ್ಕೊಂದು ಬಾರಿ ಕುಡಿಯಿರಿ. ಸತತವಾಗಿ ಎರಡು ತಿಂಗಳು ಕುಡಿದರೆ ಮುಂದಿನ ದಿನಗಳಲ್ಲಿ ಮಾಸಿಕ ದಿನಗಳಲ್ಲಿ ಕಾಡುವ ಆ ಮುಟ್ಟಿನ ಹೊಟ್ಟೆ ನೋವು ಕಡಿಮೆಯಾಗಿರುವುದು ಗಮನಕ್ಕೆ ಬರುತ್ತದೆ.

English summary

This Drink Is A Must-Try If You Have Period Cramps

Every month, when you get your period if you experience unbearably painful period cramps, then there is a solution that can help you! Period cramps or menstrual pain proves to be a bane for most women, since the time they hit puberty up until menopause! Imagine having to go through that intense pain in your lower abdominal area, every month, for 40 plus years! It can seem quite scary, right?
Story first published: Thursday, March 2, 2017, 20:18 [IST]
X
Desktop Bottom Promotion