For Quick Alerts
ALLOW NOTIFICATIONS  
For Daily Alerts

ನಾಲಗೆಯ ಬಣ್ಣದಲ್ಲಿ ಹೀಗೆಲ್ಲಾ ಕಂಡು ಬಂದರೆ,ಕೂಡಲೇ ವೈದ್ಯರನ್ನು ಕಾಣಿರಿ!

By Manu
|

ವೈದ್ಯರಲ್ಲಿಗೆ ಯಾವುದೇ ಅನಾರೋಗ್ಯದ ಕಾರಣಕ್ಕೆ ಹೋದರೂ ಅವರು ನಿಮ್ಮ ಬಾಯಿ ಹಾಗೂ ನಾಲಗೆಯನ್ನು ಪರೀಕ್ಷೆ ಮಾಡುತ್ತಾರೆ. ನಿಮ್ಮ ದೇಹದ ಸಂಪೂರ್ಣ ಆರೋಗ್ಯವನ್ನು ನಾಲಗೆ ಮೂಲಕ ಹೇಳಬಹುದಾಗಿದೆ. ಇದರಿಂದಾಗಿಯೇ ವೈದ್ಯರು ನಾಲಗೆ ಹೊರಹಾಕಿ ತೋರಿಸಲು ಹೇಳುವುದು. ನಾಲಗೆಯ ಬಣ್ಣ, ಗಾತ್ರ ಮತ್ತು ವಿನ್ಯಾಸದಿಂದ ಆರೋಗ್ಯವನ್ನು ಹೇಳಬಹುದಾಗಿದೆ. ಬೆಳಿಗ್ಗೆ ಎದ್ದ ಬಳಿಕ ಬ್ರಷ್ ಮಾಡುವ ಮೊದಲು ನಾಲಗೆಯನ್ನು ಪರೀಕ್ಷಿಸಿಕೊಳ್ಳಬೇಕು.

ನಾಲಗೆಯಲ್ಲಿ ಬಿಳಿ ಪದರ ಆಗಿದ್ರೆ ಚಿಂತಿಸದಿರಿ, ಇಲ್ಲಿದೆ ಪರಿಹಾರ

ನಾಲಗೆಗೆ ಹೆಚ್ಚಿನ ಒತ್ತಡ ಹಾಕಿದರೆ ಅದರಿಂದ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ತಿನ್ನುವ ಆಹಾರ, ಕುಡಿಯುವ ಪಾನೀಯ, ಔಷಧಿ ಇತ್ಯಾದಿಗಳಿಂದ ನಾಲಗೆಯ ಬಣ್ಣವು ಬದಲಾಗುತ್ತದೆ. ನಿಮ್ಮ ದೇಹದಲ್ಲಿ ಆಗುವಂತಹ ಬದಲಾವಣೆ ಬಗ್ಗೆ ನಾಲಗೆಯು ಹೇಳಲಿದೆ. ದಿನಪೂರ್ತಿ ನಿಮ್ಮ ನಾಲಗೆಯನ್ನು ಆಗಾಗ ಪರೀಕ್ಷೆ ಮಾಡುತ್ತಾ ಇದ್ದರೆ ಅದರ ಬಣ್ಣವನ್ನು ನೋಡಿ ಆರೋಗ್ಯವನ್ನು ತಿಳಿಯಬಹುದು. ನಾಲಗೆಯ ಬಣ್ಣ ನಿಮ್ಮ ಆರೋಗ್ಯದ ಬಗ್ಗೆ ಏನು ಹೇಳುತ್ತದೆ ಎಂದು ಈ ಲೇಖನದ ಮೂಲಕ ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ....

ಲಘು ಗುಲಾಬಿ ಬಣ್ಣ

ಲಘು ಗುಲಾಬಿ ಬಣ್ಣ

ಲಘು ಗುಲಾಬಿ ಬಣ್ಣವು ನಾಲಗೆಯ ಸಾಮಾನ್ಯ ಬಣ್ಣವಾಗಿದೆ. ಲಘು ಗುಲಾಬಿ ಬಣ್ಣದ ನಾಲಗೆಯು ದೇಹವು ಆರೋಗ್ಯವಾಗಿದೆ ಎಂದು ಸೂಚಿಸುತ್ತದೆ. ಇದು ಆರೋಗ್ಯಕರ ದೇಹದ ನಾಲಗೆಯಾಗಿದೆ.

ಕೆಂಪು

ಕೆಂಪು

ನಾಲಗೆಯು ಕೆಂಪು ಬಣ್ಣಕ್ಕೆ ತಿರುಗಿದ್ದರೆ ನೀವು ಯಾವುದಾದರೂ ಸೋಂಕಿನ ಸಮಸ್ಯೆಗೆ ಸಿಲುಕಿದ್ದೀರಿ ಎಂದು ಹೇಳಬಹುದು. ನಿಮ್ಮ ದೇಹ ಅಥವಾ ರಕ್ತದಲ್ಲಿ ಉರಿಯೂತವು ನಡೆಯುತ್ತಿದೆ ಎನ್ನುವುದನ್ನು ಇದು ತೋರಿಸುತ್ತದೆ.

ಕಡು ಕೆಂಪು

ಕಡು ಕೆಂಪು

ನಾಲಗೆಯು ಕಡುಕೆಂಪು ಬಣ್ಣವನ್ನು ಹೊಂದಿದ್ದರೆ ಹೃದಯದ ಸಮಸ್ಯೆ ಇದೆ ಎಂದು ತೋರಿಸುತ್ತದೆ. ಕೆಲವೊಂದು ಸಲ ರಕ್ತದಲ್ಲಿನ ಕಾಯಿಲೆಯೂ ಇದಕ್ಕೆ ಕಾರಣವಾಗಿರಬಹುದು.

ಹಳದಿ

ಹಳದಿ

ನಾಲಗೆಯು ಹಳದಿ ಬಣ್ಣಕ್ಕೆ ತಿರುಗಿದ್ದರೆ ಹೊಟ್ಟೆ ಅಥವಾ ಯಕೃತ್‌ನ ಸಮಸ್ಯೆಯಿದೆ ಎಂದು ಹೇಳಬಹುದು. ಆರೋಗ್ಯದ ಬಗ್ಗೆ ನಾಲಗೆಯು ಏನು ಹೇಳುತ್ತಿದೆ ಎಂದು ಇದು ತೋರಿಸುತ್ತದೆ.

ನೇರಳೆ

ನೇರಳೆ

ನಾಲಗೆಯು ನೇರಳೆ ಬಣ್ಣಕ್ಕೆ ತಿರುಗಿದ್ದರೆ ನಿಮಗೆ ಶ್ವಾಸಕೋಶ ಮತ್ತು ಹೃದಯದ ಕಾಯಿಲೆ ಇದೆ ಎಂದು ತೋರಿಸುತ್ತದೆ.

ನೀಲಿ

ನೀಲಿ

ನೀಲಿ ಬಣ್ಣದ ನಾಲಗೆಯು ಕಿಡ್ನಿಯು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವುದರ ಸೂಚನೆಯಾಗಿದೆ.

ಪೇಲವ

ಪೇಲವ

ಪೇಲವ ನಾಲಗೆಯು ನಿಮ್ಮ ದೇಹದಲ್ಲಿ ವಿಟಮಿನ್ ಹಾಗೂ ಖನಿಜಾಂಶಗಳ ಕೊರತೆಯಿದೆ ಎಂದು ತೋರಿಸುತ್ತದೆ.

ಬಿಳಿ

ಬಿಳಿ

ಬಿಳಿ ಬಣ್ಣದ ನಾಲಗೆಯು ನೀವು ನಿರ್ಜಲೀಕರಣದಿಂದ ಬಳಲುತ್ತಿದ್ದೀರಿ ಎಂದು ತೋರಿಸುತ್ತದೆ. ಫಂಗಲ್ ಸೋಂಕು ಮತ್ತು ಜ್ವರವು ಇದಕ್ಕೆ ಕಾರಣವಾಗಿರಬಹುದು.

English summary

Things the colour of your tongue is trying to tell you about your Health

Did you know that your tongue can tell a lot about your health? Based on the size, texture and colour of your tongue, there is a whole lot that your tongue can indicate about your health. It is recommended to examine your tongue in the morning in a natural light before brushing your teeth. It is also advised not to strain the tongue, as it can affect your health. The colour of the coating can vary based on the influence of food, beverages, medicines, etc., that you take or smoking. In order to get the right result, you need to examine your tongue an hour more after any kind of an exposure.
X
Desktop Bottom Promotion