ತಿಂದ ಆಹಾರ ಕರಗುವುದಿಲ್ಲ, ತೊಂದರೆ ಉಂಟುಮಾಡುತ್ತದೆ ಎಂದರೆ ಹೀಗೆ ಮಾಡಿ...

By: Divya
Subscribe to Boldsky

ನಾವು ತಿಂದ ಆಹಾರ ಜೀರ್ಣವಾದರೆ ಯಾವ ಸಮಸ್ಯೆಯೂ ಬಾರದು. ಅದೇ ಅಜೀರ್ಣವಾದರೆ ಭೇದಿ, ಹೊಟ್ಟೆ ನೋವು, ಹೊಟ್ಟೆ ಉಬ್ಬರ, ಗ್ಯಾಸ್ ಸೇರಿದಂತೆ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ನಿಮ್ಮಲ್ಲಿ ಯಾರಿಗಾದರೂ ಪದೇ ಪದೇ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದರೆ, ಇದರರ್ಥ ಕೇವಲ ಆಹಾರದ ತೊಂದರೆಯಲ್ಲ. ಬದಲಿಗೆ ಜೀರ್ಣಾಂಗ ವ್ಯವಸ್ಥೆಯದ್ದೂ ಆಗಿರಬಹುದು. ಈ ಸಮಸ್ಯೆಗೆ ಆಯುರ್ವೇದವು ಉತ್ತಮ ಪರಿಹಾರವನ್ನು ಒದಗಿಸುತ್ತದೆ.

ಈ ಸಮಸ್ಯೆಗೆ ಕೇವಲ ಆಹಾರದ ದೋಷವಾಗಿರದು, ಬದಲಿಗೆ ಆಹಾರವನ್ನು ನಾವು ಹೇಗೆ ಸೇವಿಸುತ್ತೇವೆ ಎನ್ನುವುದು ಸಹ ಗಮನಾರ್ಹ ವಿಚಾರವೇ. ಹೌದು, ಆಯುರ್ವೇದದ ಪ್ರಕಾರ ನಾವು ಸೇವಿಸುವ ಆಹಾರ ಕೇವಲ ಗುಣಮಟ್ಟದ್ದಾಗಿದ್ದರೆ ಸಾಲದು. ಅದನ್ನು ಹೇಗೆ ಸೇವಿಸುತ್ತೇವೆ ಎನ್ನುವ ಪ್ರಕ್ರಿಯೆಯೂ ಮುಖ್ಯ. ಊಟ-ತಿಂಡಿ ಮಾಡುವಾಗ ಮೊಬೈಲ್, ಟಿವಿ, ಲ್ಯಾಪ್‍ಟಾಪ್‍ಗಳನ್ನು ನೋಡುತ್ತಲೇ ಸೇವಿಸಬಾರದು. ಅವುಗಳನ್ನು ಒಂದೆಡೆ ಇಟ್ಟು ಆಹಾರ ಸವಿಯಬೇಕು. 

ಅಜೀರ್ಣ ಸಮಸ್ಯೆ: ಕ್ಷಣಾರ್ಧದಲ್ಲಿ ನಿವಾರಿಸುವ ಆಯುರ್ವೇದ ಚಿಕಿತ್ಸೆ!

ವಿಶ್ರಾಂತಿ ಸ್ಥಿತಿಯಲ್ಲಿ ಕುಳಿತು, ಬೆಚ್ಚಗಿನ ಆಹಾರವನ್ನು ತಿನ್ನಬೇಕು. ಇಷ್ಟವಾದ ಆಹಾರ ಪದಾರ್ಥಗಳು ಎಂದು ಅತಿಯಾಗಿಯೂ ತಿನ್ನಬಾರದು. ಹೊಟ್ಟೆ ತುಂಬಿದ ಮೇಲೆಯೂ ಒತ್ತಾಯದ ಊಟವನ್ನು ಮಾಡಬಾರದು. ಜೊತೆಗೆ ನಮ್ಮ ಅಡುಗೆ ಪದಾರ್ಥದಲ್ಲಿ ಶುಂಠಿ, ನಿಂಬೆಯಂತಹ ಜೀರ್ಣಕಾರಿ ಉತ್ಪನ್ನಗಳನ್ನು ಬಳಸಬೇಕು. ಜೀರ್ಣಕ್ರಿಯೆಯ ಸಮಸ್ಯೆ ಸದಾ ನಿಮ್ಮನ್ನು ಕಾಡುತ್ತದೆ ಎನ್ನುವುದಾದರೆ ತಪ್ಪದೇ ಈ ಕೆಳಗಿನ ಮಾಹಿತಿ ಓದಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.... 

ಶುಂಠಿ ಮತ್ತು ನಿಂಬೆ

ಶುಂಠಿ ಮತ್ತು ನಿಂಬೆ

ಶುಂಠಿಯು ಲವಣ, ಪಿತ್ತರಸ ಮತ್ತು ಗ್ಯಾಸ್ಟ್ರಿಕ್ ರಸವನ್ನು ಉತ್ತೇಜಿಸುವುದರಿಂದ ಜೀರ್ಣಕ್ರಿಯೆಗೆ ಅನುಕೂಲವಾಗುತ್ತದೆ. ಜೊತೆಗೆ ಸಣ್ಣ ಕರುಳಿಗೆ ಆಹಾರವು ಬೇಗ ಸಾಗುವಂತೆ ಮಾಡುತ್ತದೆ. ನಿಂಬೆಯಲ್ಲಿರುವ ಸಿಟ್ರಿಕ್ ಆಸಿಡ್ ಸಹ ಜೀರ್ಣಕ್ರಿಯೆಗೆ ಸಹಾಯ ಮಾಡುವುದು.

ಮಜ್ಜಿಗೆ

ಮಜ್ಜಿಗೆ

ಮಜ್ಜಿಗೆಯಲ್ಲಿ ಮೊಸರು ಮುಖ್ಯವಾಗಿರುವ ಕಾರಣ ಮೊಸರಿನ ಗುಣಗಳೆಲ್ಲವೂ ಇದೆ. ಇದರಲ್ಲಿರುವ ಪ್ರೋಬಯೋಟಿಕ್ಸ್ ಅಥವಾ ಜೀರ್ಣಕ್ರಿಯೆಗೆ ಸಹಕರಿಸುವ ಪೋಷಕಾಂಶಗಳು ಜೀರ್ಣಾಂಗಗಳ ಹೊರೆಯನ್ನು ಕಡಿಮೆ ಮಾಡುತ್ತವೆ. ಅಲ್ಲದೇ ಮಜ್ಜಿಗೆಯಲ್ಲಿ ಸೇರಿಸಿರುವ ಜೀರಿಗೆ ಪುಡಿ ಮೊದಲಾದ ಮಸಾಲೆ ಪದಾರ್ಥಗಳು ಜೀರ್ಣಕ್ರಿಯೆಗೆ ಇನ್ನಷ್ಟು ಸಹಕರಿಸಿ ಜೀರ್ಣಕ್ರಿಯೆಯನ್ನು ಸುಲಭ ಮತ್ತು ಪರಿಪೂರ್ಣಗೊಳಿಸುತ್ತವೆ. ಅಲ್ಲದೇ ಬೆಳ್ಳುಳ್ಳಿ ಮೊದಲಾದವು ಕರುಳಿನ ತೊಂದರೆಗಳನ್ನು ನಿವಾರಿಸುತ್ತದೆ. ಒಟ್ಟಾರೆ ಜೀರ್ಣವ್ಯವಸ್ಥೆಯನ್ನು ಸುಲಭಗೊಳಿಸುತ್ತದೆ.

ಮಜ್ಜಿಗೆ ಮತ್ತು ಲಸ್ಸಿ: ಇವೆರಡರಲ್ಲಿ ಆರೋಗ್ಯಕ್ಕೆ ಯಾರು ಹಿತವರು?

ಹಸಿದಾಗ ತಿನ್ನಿ

ಹಸಿದಾಗ ತಿನ್ನಿ

ಮನಸ್ಸಿಗೆ ಕಂಡಂತೆ ಸದಾ ಏನಾದರೂ ತಿನ್ನುತ್ತಲೇ ಇರಬಾರದು. ಒಮ್ಮೆ ತಿಂದ ಆಹಾರ ಜೀರ್ಣವಾಗಿದೆ ಅಥವಾ ಹಸಿವಾಗುತ್ತಿದ್ದೆ ಎಂದಾಗ ಮಾತ್ರ ಸೇವಿಸಬೇಕು. ಸ್ವಲ್ಪ ಸಮಯದ ಅಂತರವಿದ್ದರೆ ಜೀರ್ಣಕಾರಿ ಕಿಣ್ವಗಳಿಂದ ಉತ್ತಮ ಜೀರ್ಣಕ್ರಿಯೆ ನಡೆಯುತ್ತದೆ.

ಬೇಯಿಸಿದ ತಾಜಾ ಆಹಾರ

ಬೇಯಿಸಿದ ತಾಜಾ ಆಹಾರ

ಫ್ರಿಜ್‍ನಲ್ಲಿ ಇರಿಸಿದ ಅಥವಾ ಎರಡು ಮೂರು ದಿನಗಳ ಹಿಂದೆ ತಯಾರಿಸಿದ ಆಹಾರ ಪದಾರ್ಥಗಳನ್ನು ಸೇವಿಸಬಾರದು. ಇವುಗಳಲ್ಲಿ ಪೌಷ್ಠಿಕಾಂಶವೂ ಇರುವುದಿಲ್ಲ. ಯಾವಾಗಲೂ ಆಹಾರ ಸೇವಿಸುವಾಗ ಅದು ಬೆಚ್ಚಗೆ ಮತ್ತು ತಾಜಾ ಆಹಾರವಾಗಿರಬೇಕು. ಆಗಲೇ ಜೀರ್ಣ ಕ್ರಿಯೆಯೂ ಸುಲಭವಾಗುತ್ತದೆ.

ಊಟದ ನಂತರ ಬಿಸಿ ನೀರ ಸೇವನೆ

ಊಟದ ನಂತರ ಬಿಸಿ ನೀರ ಸೇವನೆ

ಊಟದ ನಂತರ ಬೆಚ್ಚಗಿನ ನೀರನ್ನು ಕುಡಿಯುವ ಹವ್ಯಾಸ ಬೆಳೆಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ತಿಂದ ಆಹಾರವನ್ನು ತ್ವರಿತವಾಗಿ ಹೀರಿಕೊಂಡು ಜೀರ್ಣ ಕ್ರಿಯೆಗೆ ಸಹಾಯ ಮಾಡುವುದು.

ಆರಾಮವಾಗಿ ಕುಳಿತು ಸೇವಿಸಿ

ಆರಾಮವಾಗಿ ಕುಳಿತು ಸೇವಿಸಿ

ಊಟ-ತಿಂಡಿಯ ಸಮಯದಲ್ಲಿ ವಿಶ್ರಾಂತಿ ಭಂಗಿಯಲ್ಲಿ ಕುಳಿತು ಸೇವಿಸಬೇಕು. ಜೊತೆಗೆ ಆಹಾರದ ರುಚಿ, ಪರಿಮಳ ಮತ್ತು ವಿನ್ಯಾಸದ ಕುರಿತು ಅರಿವಿರಬೇಕು. ನಿಧಾನವಾಗಿ ಸೇವಿಸುವ ಆಹಾರ ಸೂಕ್ತವಾಗಿದ್ದರೆ ಕರುಳಿನಲ್ಲಿ ಜೀರ್ಣ ಕ್ರಿಯೆಯೂ ಸುಲಭವಾಗುವುದು.

ಡೈನಿಂಗ್ ಟೇಬಲ್ ಬಿಟ್ಟುಬಿಡಿ-ನೆಲದ ಮೇಲೆ ಕುಳಿತು ಊಟ ಮಾಡಿ!

ಭೋಜನದ ನಂತರ ವಿಶ್ರಾಂತಿ

ಭೋಜನದ ನಂತರ ವಿಶ್ರಾಂತಿ

ಊಟವಾದ ನಂತರ ಒಂದೇ ಸಮನೆ ಕೆಲಸದಲ್ಲಿ ನಿರತರಾಗಬಾರದು. ಇದರಿಂದ ರಕ್ತ ಪರಿಚಲನೆಯಲ್ಲಿ ವ್ಯತ್ಯಾಸ ಉಂಟಾಗುವುದು. ಊಟದ ನಂತರ ಸ್ವಲ್ಪ ವಿಶ್ರಾಂತಿ ಪಡೆದರೆ ಆಹಾರ ಜೀರ್ಣವಾಗುವುದು. ಜೀರ್ಣಾಂಗ ವ್ಯವಸ್ಥೆಯಲ್ಲೂ ಸುಗಮವಾಗಿ ಕೆಲಸ ನಡೆಯುವುದು.

English summary

These Ayurvedic Remedies Help Better Digestion

Turmeric milk has lots of significance in ayurveda. It helps you fall asleep when consumed before going to bed. It can help you feel warm. In this recipe, we'll use coconut milk. Also, ginger is added as an additional ingredient as it contains anti-inflammatory properties. Now, let us discuss about the recipe.
Story first published: Tuesday, June 6, 2017, 7:01 [IST]
Subscribe Newsletter