Latest Updates
-
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್
ಮಲಗುವ ಭಂಗಿ ಬದಲಿಸಿಕೊಂಡರೆ ಎಲ್ಲಾ ಬಗೆಯ ನೋವು ಶಮನವಾಗುವುದು!
ಆಯಾಸವಾದಾಗ ಒಮ್ಮೆ ಮಲಗಿಕೊಂಡರೆ ಸಾಕು ಎನ್ನುವ ಭಾವನೆ ಎಲ್ಲರನ್ನೂ ಕಾಡುತ್ತದೆ. ಆ ಸಂದರ್ಭದಲ್ಲಿ ಹತ್ತು ನಿಮಿಷ ಮಲಗಿಕೊಂಡರೂ ಒಂದು ಬಗೆಯ ಆರಾಮ ಹಾಗೂ ಉಲ್ಲಾಸ ಉಂಟಾಗುವುದು. ದಿನದ ಆಯಾಸವನ್ನು ಸಂಪೂರ್ಣವಾಗಿ ಕಳೆದು, ಹೊಸ ಚೈತನ್ಯವನ್ನು ನೀಡುವ ಶಕ್ತಿ ಇರುವುದು ರಾತ್ರಿ ನಿದ್ರೆಯಲ್ಲಿ.
ಈ ವೇಳೆ ನಾವು ಮಲಗುವ ಭಂಗಿಯು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಕೆಲವೊಮ್ಮೆ ಅನೇಕ ಆರೋಗ್ಯ ಸಮಸ್ಯೆಯನ್ನು ಹುಟ್ಟು ಹಾಕುವ ಸಾಧ್ಯತೆ ಇರುತ್ತದೆ. ನಿಜ, ರಾತ್ರಿ ದೀರ್ಘಾವಧಿಯ ವರೆಗೆ ಒಂದೇ ಭಂಗಿಯಲ್ಲಿ ಮಲಗುವುದರಿಂದ ರಕ್ತ ಸಂಚಾರದಲ್ಲಿ ವ್ಯತ್ಯಾಸ ಹಾಗೂ ಕೆಲವು ದೇಹದ ಅಂಗಾಂಗಳ ಮೇಲೆ ಒತ್ತಡ ಬೀಳುವ ಸಾಧ್ಯತೆ ಇರುತ್ತದೆ. ಆಯಾಸ ನಿವಾರಣೆ ಹಾಗೂ ಹೊಸ ಚೈತನ್ಯಕ್ಕೆ ಮಲಗುವ ಅಭ್ಯಾಸದಲ್ಲಿ ಸೂಕ್ತ ಪ್ರಕಾರವಿಲ್ಲದಿದ್ದರೆ ಯಾವೆಲ್ಲಾ ತೊಂದರೆ ಉಂಟಾಗುವುದು ಎನ್ನುವ ಸಂಕ್ಷಿಪ್ತ ವಿವರಣೆ ಇಲ್ಲಿದೆ ನೋಡಿ....

ಎದೆಯುರಿ
ಎದೆಯುರಿಯು ಮಲಗುವಾಗ ಹೆಚ್ಚು ಕಿರಿಕಿರಿಯನ್ನುಂಟುಮಾಡುತ್ತದೆ. ಇಂತಹ ಸಮಸ್ಯೆ ಇರುವವರು ಆದಷ್ಟು ಎಡ ಮಗ್ಗುಲಲ್ಲಿ ಮಲಗಬೇಕು. ರಕ್ತ ಸಂಚಾರವು ಸುಗಮವಾಗಿ ಆಗುವುದು. ಎದೆಯುರಿಯ ಪ್ರಮಾಣ ತಗ್ಗುವುದು.

ಜೀರ್ಣಕ್ರಿಯೆಗೆ ತೊಂದರೆ
ನಿಮಗೆ ಇಷ್ಟ ಬಂದ ಹಾಗೆ ಮಲಗಿಕೊಂಡರೆ ಜೀರ್ಣ ಕ್ರಿಯೆಯಲ್ಲಿ ತೊಂದರೆ ಉಂಟಾಗುವುದು. ಉತ್ತಮ ಜೀರ್ಣಕ್ರಿಯೆಗೆ ಆದಷ್ಟು ಎಡ ಭಾಗದಲ್ಲಿ ಮಲಗಬೇಕು.

ಜೀರ್ಣಕ್ರಿಯೆಗೆ ತೊಂದರೆ
ದೊಡ್ಡ ಗಾತ್ರದ ತಲೆದಿಂಬು, ಅಡ್ಡ ದಿಡ್ಡಿಯಾದ ಹಾಸಿಗೆ ಹಾಗೂ ಅನುಚಿತವಲ್ಲದ ರೀತಿಯ ಭಂಗಿಯಲ್ಲಿ ಮಲಗುವುದರಿಂದ ಕುತ್ತಿಗೆ ನೋವು ಉಂಟಾಗುವುದು. ಮಲಗುವಾಗ ಕುತ್ತಿಗೆಯ ಕೆಳ ಭಾಗದಲ್ಲಿ ಒಂದು ಟವೆಲ್‍ನ ಸುರಳಿಯನ್ನು ಇಟ್ಟುಕೊಂಡು ಮಲಗಿ. ಇದು ಕುತ್ತಿಗೆಗೆ ಆಧಾರವಾಗಿ ಸಹಾಯ ಮಾಡುತ್ತದೆ.

ಪಿಎಮ್‍ಎಸ್ ನೋವು
ನಿಮ್ಮ ಅಭ್ಯಾಸದ ರೀತಿಯಲ್ಲಿ ಮಲಗಿದರೆ ಪಿಎಮ್‍ಎಸ್ ನೋವು ಕಾಣಿಸಿಕೊಳ್ಳುತ್ತದೆ ಎಂದಾದರೆ ಮೊಣಕಾಲಿನ ಕೆಳಗೆ ಒಂದು ಮೆತ್ತನೆಯ ದಿಂಬನ್ನು ಇರಿಸಿ ಮಲಗಿ. ಇದು ಮೊಣಕಾಲು ನೋವನ್ನು ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಪಿಎಮ್‍ಎಸ್ ನೋವಿಗೆ ಸೂಕ್ತ ಪರಿಹಾರ ನೀಡಿ ಉತ್ತಮ ನಿದ್ರೆ ಬರುವಂತೆ ಮಾಡುತ್ತದೆ.

ಅಧಿಕ ರಕ್ತದೊತ್ತಡ
ಮುಖದ ಮೇಲೆ ಮಲಗುವ ಭಂಗಿಯಲ್ಲಿ ಮಲಗಿದರೆ ಅಧಿಕ ರಕ್ತದೊತ್ತಡದ ಸಮಸ್ಯೆ ಬಗೆ ಹರಿಯುವುದು. ಜೊತೆಗೆ ಒಳ್ಳೆಯ ನಿದ್ರೆ ನಿಮ್ಮದಾಗುವುದು

ಸೈನಸ್ ಸೋಂಕು
ಸೈನಸ್ ತೊಂದರೆ ಇರುವವರು ನಿದ್ರಿಸುವಾಗ ಹೆಚ್ಚು ಸಮಸ್ಯೆ ಉಂಟಾಗುವುದು. ಇವರು ಎತ್ತರದ ತಲೆದಿಂಬನ್ನು ಬಳಸುವುದರಿಂದ ಸಮಸ್ಯೆಯಿಂದ ಕೊಂಚ ನಿರಾಳತೆ ಪಡೆಯಬಹುದು. ಉತ್ತಮ ನಿದ್ರೆಯನ್ನು ಮಾಡಬಹುದು.

ತಲೆ ನೋವು
ಮಲಗುವ ರೀತಿಯಿಂದ ತಲೆ ನೋವನ್ನು ನಿವಾರಿಸಿಕೊಳ್ಳಬಹುದು. ಕುತ್ತಿಗೆಯನ್ನು ಹೆಚ್ಚು ತಿರುಚಿದಂತೆ ಮಾಡಿಕೊಂಡು ಮಲಗಿದರೆ ತಲೆ ನೋವು ಉಂಟಾಗುವುದು. ತಲೆಯನ್ನು ದಿಂಬುಗಳಿಂದ ಸುತ್ತುವರಿಯುವಂತೆ ಮಾಡಿಕೊಂಡು ಮಲಗಿದರೆ. ತಲೆಯನ್ನು ಹೆಚ್ಚು ತಿರುಗಿಸಲು ಸಾಧ್ಯವಿಲ್ಲ. ತಲೆ ನೋವು ಕಡಿಮೆಯಾಗುವುದು.

ಬೆನ್ನು ನೋವು
ಬೆನ್ನಿನ ಕೆಳಗೊಂದು ಮೆತ್ತನೆಯ ದಿಂಬು, ಮೊಣಕಾಲಿನ ಕೆಳಗೊಂದು ದಿಂಬು ಹಾಗೂ ಸೊಂಟಕ್ಕೆ ಒಂದು ಟವೆಲ್ ಸುತ್ತಿಕೊಂಡು ಮಲಗುವುದರಿಂದ ಬೆನ್ನು ನೋವು ನಿವಾರಣೆಯಾಗುವುದು. ಸುಂದರ ನಿದ್ರೆಯು ಬರುವುದು.

ಭುಜದ ನೋವು
ಭುಜದ ನೋವು ಇರುವವರು ಕಾಲನ್ನು ಸ್ವಲ್ಪ ಭಾಗಿಸಿಕೊಂಡು, ಕಾಲಿನ ಸಂಧಿಯಲ್ಲೊಂದು ದಿಂಬು ಹಾಗೂ ಎದೆ ಭಾಗದಲ್ಲೊಂದು ದಿಂಬನ್ನು ಇಟ್ಟುಕೊಂಡು ಮಲಗಬೇಕು. ನೋವಿರುವ ಭುಜದ ಬದಿಯಲ್ಲಿ ಮಲಗಬಾರದು.



Click it and Unblock the Notifications