Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮಹಿಳೆಯರೇ, ನಿತ್ಯ ಮಾಡುವ ಈ ತಪ್ಪುಗಳು ನಿಮ್ಮ ಆರೋಗ್ಯ ಕೆಡಿಸುವುದು!
ಹೆಚ್ಚಿನ ಮಹಿಳೆಯರು ತಮ್ಮ ಯೋನಿಯ ಆರೋಗ್ಯದ ಬಗ್ಗೆ ನಿರ್ಲಕ್ಷ ತೋರಿಸುತ್ತಾರೆ. ಯೋನಿಯ ಆರೋಗ್ಯ ದೈನಂದಿನ ಜೀವನದಲ್ಲಿ ಪ್ರಮುಖವಾದದ್ದು ಎನ್ನುವುದನ್ನು ಮರೆತು ಬಿಡುತ್ತಾರೆ. ಆರೋಗ್ಯ ಪೂರ್ಣ ಯೋನಿಯು ಹೆಚ್ಚು ಆಮ್ಲೀಯ ಹಾಗೂ ಲಾಭದಾಯಕ ಬ್ಯಾಕ್ಟೀರಿಯಾಗಳಿಂದ ಕೂಡಿರುತ್ತದೆ. ಇವು ಯೋನಿಗೆ ತಗಲುವ ಸೋಂಕು ಮತ್ತು ಅಸ್ವಸ್ಥತೆಯನ್ನು ತಡೆಗಟ್ಟಲು ಸಹಾಯಮಾಡುತ್ತವೆ. ಮಹಿಳೆಯರು ಮಾಡುವ ಕೆಲವು ತಪ್ಪುಗಳು ಯೋನಿಯ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ ಎಂದು ತಿಳಿದಿರುವುದಿಲ್ಲ.
ಪ್ರತಿಯೊಬ್ಬ ಮಹಿಳೆಯು ಜೀವಿತಾವಧಿಯಲ್ಲಿ ಒಮ್ಮೆಯಾದರೂ ಯೋನಿಯ ಸೋಂಕಿಗೆ ಒಳಗಾಗುತ್ತಾಳೆ. ಇದಕ್ಕೆ ಕಾರಣ ಆಕೆಯ ಆಧುನಿಕ ಜೀವನ ಶೈಲಿ ಎಂದು ಹೇಳಬಹುದು. ಯೋನಿಯ ಆರೋಗ್ಯವನ್ನು ನಿರಂತರವಾಗಿ ನಿರ್ಲಕ್ಷಿಸುತ್ತಾ ಬಂದರೆ ಗಂಭೀರ ತೊಂದರೆಗಳನ್ನು ಆಹ್ವಾನಿಸಿದಂತೆ. ಕಳಪೆ ಮಟ್ಟದ ಶುಚಿತ್ವ ಹಾಗೂ ನಿಶ್ಯಕ್ತಿ ಯೋನಿಯ ಫಲವತ್ತತೆಗೆ ಮಾರಕವಾಗುತ್ತದೆ. ಮಹಿಳೆಯರು ಮಾಡುವ ಸಾಮಾನ್ಯ ತಪ್ಪುಗಳು ಹಾಗೂ ಅದರ ಪರಿಣಾಮದ ಬಗ್ಗೆ ತಿಳಿಯೋಣ...

ಸ್ಪ್ರೇ ಬಳಕೆ
ನೀರು ಮತ್ತು ವೆನಿಗರ್‍ಗಳಿಂದ ಮಿಶ್ರಿತಗೊಂಡ ಸುಗಂಧಗಳನ್ನು ಯೋನಿಗೆ ಸ್ಪ್ರೇ ಮಾಡಿಕೊಳ್ಳುವುದು ಒಂದು ತಪ್ಪು ಹವ್ಯಾಸ. ಹಾನಿಕಾರಕ ಸುಗಂಧ ದ್ರವ್ಯ ಯೋನಿಯ ಆರೋಗ್ಯವನ್ನು ಹಾಳುಮಾಡುತ್ತದೆ ಅಲ್ಲದೆ ಸೋಂಕಿಗೆ ಕಾರಣವಾಗುವುದು. ಸ್ಪ್ರೇ ಮಾಡುವುದು ಅಥವಾ ಬಿರುಸಾದ ನೀರಿನಲ್ಲಿ ಸ್ವಚ್ಛಗೊಳಿಸುವ ಕ್ರಿಯೆ ಯೋನಿಯ ಪಿಎಚ್ ಮಟ್ಟಕ್ಕೆ ತೊಂದರೆಯನ್ನುಂಟುಮಾಡುವುದು. ಮಹಿಳೆಯರು ಆದಷ್ಟು ಸ್ವಚ್ಛ ನೀರುಗಳಿಂದ ನಿಧಾನವಾಗಿ ಶುದ್ಧಗೊಳಿಸುವುದು ಮತ್ತು ಸ್ಪ್ರೇ ಹವ್ಯಾಸದಿಂದ ದೂರ ಉಳಿಯುವುದು ಸೂಕ್ತ.

ಸ್ಟೀಮ್/ಶಾಖ ತೆಗೆದುಕೊಳ್ಳುವುದು
ಉರಿಯೂತ, ನವೆ ಹಾಗೂ ಇನ್ನಿತರ ಚಿಕ್ಕ-ಪುಟ್ಟ ಸಮಸ್ಯೆಗಳುಂಟಾದಾಗ ಶಾಖವನ್ನು ತೆಗೆದುಕೊಂಡರೆ ಬಹುಬೇಗ ಸಮಸ್ಯೆ ನಿವಾರಣೆ ಹೊಂದುತ್ತದೆ. ಆದರೆ ಈ ಪ್ರಕ್ರಿಯೆಯಿಂದ ಗಾಳಿ ಗುಳ್ಳೆ, ಗುದನಾಳದ ಸಮಸ್ಯೆ ಹಾಗೂ ಯೋನಿಯ ನೈಸರ್ಗಿಕ ಬ್ಯಾಕ್ಟೀರಿಯಗಳ ನಾಶಕ್ಕೆ ಕಾರಣವಾಗುವುದು.

ಚುಚ್ಚುವಿಕೆ
ಕೆಲವರು ಯೋನಿಯನ್ನು ಚುಚ್ಚಿಸಿಕೊಳ್ಳುವ ಕೆಟ್ಟ ಹವ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ಇದು ತೀವ್ರವಾದ ನೋವು, ಚರ್ಮದ ಕೆರಳಿಕೆ ಮತ್ತು ಸೋಂಕಿಗೆ ಕಾರಣವಾಗುತ್ತದೆ. ಈ ಕ್ರಿಯೆಯಿಂದ ಎಸ್‍ಟಿಡಿ, ಏಡ್ಸ್, ಹೆಪಟೈಟಿಸ್ ಬಿ ಮತ್ತು ಸಿಗಳ ಅಪಾಯವನ್ನು ಹೆಚ್ಚಿಸುವುದು. ಹಾಗಾಗಿ ಇದನ್ನು ಯೋನಿಗಳಿಗೆ ಅಪಾಯವನ್ನುಂಟುಮಾಡುವ ಪ್ರಕ್ರಿಯೆಯಲ್ಲಿ ಒಂದು ಎಂದು ಪರಿಗಣಿಸಲಾಗಿದೆ.

ಬಿಗಿಯಾದ ಒಳುಡುಪು
ನಿತ್ಯವು ಅತಿಯಾದ ಬಿಗಿತವಾದ ಒಳ ಉಡುಪನ್ನು ಧರಿಸಬಾರದು. ಈ ರೀತಿಯ ಒಳ ಉಡುಪುಗಳಿಂದ ಸೆಳೆತ, ನೋವು ಹಾಗೂ ಯೀಸ್ಟ್ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಇವು ಯೋನಿ ಪ್ರದೇಶದಲ್ಲಿ ಉಷ್ಣ ಮತ್ತು ತೇವಾಂಶವನ್ನು ಅನುಮತಿಸುತ್ತವೆ. ಯೋನಿಗೆ ಅಪಾಯವನ್ನುಂಟುಮಾಡುವ ದೈನಂದಿನ ಪದ್ಧತಿಯಲ್ಲಿ ಇದೂ ಒಂದು ಎಂದು ಹೇಳಬಹುದು.

ಪುಬಿಕ್ ಹೇರ್
ಪುಬಿಕ್ ಕೂದಲು/ಬೇಡದ ಕೂದಲನ್ನು ತೆಗೆಯುವಾಗ ಹೆಚ್ಚು ಜಾಗರೂಕತೆಯಲ್ಲಿ ಇರಬೇಕು. ಸೂಕ್ಷ್ಮ ಪ್ರದೇಶವಾದ್ದರಿಂದ ಅಹಿತಕರ ಮತ್ತು ಕಿರಿಕಿರಿಯ ಅನುಭವ ಉಂಟಾಗುವುದು. ಪುಬಿಕ್ ಕೂದಲು ಯೋನಿಯಿಂದ ತೇವಾಂಶವನ್ನು ಹೀರಿಕೊಂಡು ಸೋಂಕನ್ನು ತಡೆಗಟ್ಟುತ್ತವೆ. ಇವುಗಳನ್ನು ಸಂಪೂರ್ಣವಾಗಿ ತೆಗೆಯುವ ಬದಲು ಸ್ವಲ್ಪ ಹಾಗೆಯೇ ಇರುವಂತೆ ಕತ್ತರಿಸಬೇಕು.

ಸುವಾಸಿತ ಸೋಪ್‍ಗಳ ಬಳಕೆ
ಸಾಮಾನ್ಯವಾಗಿ ಮಹಿಳೆಯರು ಹೆಚ್ಚು ಸುವಾಸನೆಯಿಂದ ಕೂಡಿರುವ ಸೋಪ್‍ಗಳನ್ನು ಬಳಸುತ್ತಾರೆ. ಈ ಸೋಪ್‍ಗಳು ಖಾಸಗಿ ಪ್ರದೇಶವನ್ನು ಸ್ವಚ್ಛಗೊಳಿಸಲು ಅಷ್ಟು ಸೂಕ್ತವಲ್ಲ ಎನ್ನುವುದನ್ನು ತಿಳಿಯಬೇಕು. ಯೋನಿ ಪ್ರದೇಶದಲ್ಲಿ ಡಿಯೋಡ್ರೆಂಟ್ ಮತ್ತು ಸುಗಂಧ ಭರಿತ ಸೋಪ್‍ಗಳ ಬಳಕೆ ಮಾಡಿದರೆ ಅವು ಯೋನಿಗೆ ಹಾನಿಯನ್ನುಂಟುಮಾಡುತ್ತವೆ.

ಮುಟ್ಟಿನ ಸಮಯ
ತಿಂಗಳ ಮುಟ್ಟಿನ ಸಮಯದಲ್ಲಿ ಹೆಚ್ಚು ಕಾಳಜಿ ಹಾಗೂ ಸ್ವಚ್ಛತೆಯ ಅಗತ್ಯವಿರುತ್ತದೆ. ಪ್ಯಾಡ್‍ಗಳನ್ನು ಅಧಿಕ ಸಮಯದವರೆಗೆ ಇರಿಸಿಕೊಳ್ಳುವುದು ಅಥವಾ ಬದಲಾಯಿಸದೇ ಇರುವುದರಿಂದ, ಅಪಾಯಕಾರಿ ಸೋಂಕು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಇದು ಯೋನಿಯ ಮೇಲೆ ಕೆಟ್ಟ ಪರಿಣಾಮವನ್ನುಂಟುಮಾಡುವುದು.



Click it and Unblock the Notifications
