ಸರಳ ಮನೆ ಮದ್ದುಗಳು-ಕ್ಷಣ ಮಾತ್ರದಲ್ಲಿ ಹೊಟ್ಟೆ ನೋವು ಮಂಗಮಾಯ!

By: manu
Subscribe to Boldsky

ಹೊಟ್ಟೆಯಲ್ಲಿ ನೋವು ಬರಲು ಪ್ರಮುಖ ಕಾರಣಗಳೆಂದರೆ ಅಜೀರ್ಣತೆ, ಆಮ್ಲೀಯತೆ, ಮಲಬದ್ಧತೆ, ಕೆಲವು ಆಹಾರಗಳಿಗೆ ಅಲರ್ಜಿ ಹೊಂದಿರುವುದು, ಹೊಟ್ಟೆಯಲ್ಲಿ ವಾಯು ತುಂಬಿಕೊಳ್ಳುವುದು, ವಿಷಾಹಾರ ಸೇವನೆ, ಆಮಶಂಕೆ, ಹೊಟ್ಟೆ ಅಥವಾ ಕರುಳುಗಳ ಒಳಭಾಗದಲ್ಲಿ ಹುಣ್ಣುಗಳಾಗುವುದು, ಅಪೆಂಡಿಸೈಟಿಸ್, ಪಿತ್ತಕೋಶದಲ್ಲಿ ಕಲ್ಲುಗಳು, ಮೂತ್ರಪಿಂಡದ ಕಲ್ಲುಗಳು ಇತ್ಯಾದಿಗಳಾಗಿವೆ.

ಒಟ್ಟಾರೆ ಹೇಳಬೇಕೆಂದರೆ ಹೊಟ್ಟೆನೋವಿಗೆ ಹೊಟ್ಟೆಯ ಯಾವುದೇ ಅಂಗ ಕಾರಣವಾಗಬಹುದು. ಒಳ್ಳೆಯ ಸುದ್ದಿ ಎಂದರೆ ಕಾರಣವೇನೇ ಇದ್ದರೂ ಹೊಟ್ಟೆನೋವನ್ನು ಶೀಘ್ರವಾಗಿ ಕಡಿಮೆಗೊಳಿಸಲು ಸಮರ್ಥವಾದ ಮನೆಮದ್ದುಗಳಿವೆ. ಇಂತಹ ಕೆಲವು ಮದ್ದುಗಳ ಬಗ್ಗೆ ವಿವರಗಳನ್ನು ಇಂದು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇವೆ.

ಹೊಟ್ಟೆ ನೋವು: ಸ್ವಯಂ ವೈದ್ಯರಾಗಲು ಹೋಗಬೇಡಿ!

ಕೆಲವೊಮ್ಮೆ ಹೊಟ್ಟೆನೋವಿನೊಂದಿಗೆ ಜ್ವರ, ವಾಂತಿ, ಹೊಟ್ಟೆಯ ಭಾಗ ಕೆಂಪಗಾಗುವುದು, ಊದಿಕೊಳ್ಳುವುದು, ತುರಿಕೆಯುಂಟಾಗುವುದು ಮೊದಲಾದವೂ ಕಾಣಿಸಿಕೊಳ್ಳುತ್ತವೆ. ಈ ಲಕ್ಷಣಗಳು ಹೊಟ್ಟೆಯ ಯಾವುದಾದರೊಂದು ಅಂಗ ಸೋಂಕಿಗೊಳಗಾಗಿರುವುದನ್ನು ಸೂಚಿಸುತ್ತದೆ. ಬನ್ನಿ, ಹೊಟ್ಟೆನೋವನ್ನು ಕಡಿಮೆಗೊಳಿಸುವ ಕೆಲವು ಮನೆಮದ್ದುಗಳ ಬಗ್ಗೆ ಅರಿಯೋಣ;

ಶುಂಠಿ

ಶುಂಠಿ

ಇದರ ಉರಿಯೂತ ನಿವಾರಕ ಗುಣ ಮತ್ತು ಆಂಟಿ ಆಕ್ಸಿಡೆಂಟು ಗುಣ ಹೊಟ್ಟೆನೋವನ್ನು ಕಡಿಮೆಗೊಳಿಸಲು ನೆರವಾಗುತ್ತದೆ. ಹೊಟ್ಟೆ ನೋವಿದ್ದಾಗ ಹಸಿಶುಂಠಿಯನ್ನು ಕುದಿಸಿ ಮಾಡಿದ ಟೀ ಯನ್ನು ಸೇವಿಸುವುದರಿಂದ ಶೀಘ್ರ ಉಪಶಮನ ದೊರಕುತ್ತದೆ. ವಿಶೇಷವಾಗಿ ಹೊಟ್ಟೆನೋವಿನೊಂದಿಗೆ ವಾಂತಿ ಹಾಗೂ ವಾಕರಿಕೆ ಇದ್ದರೆ ಈ ವಿಧಾನ ಸೂಕ್ತವಾಗಿದೆ. ಇದು ಕೊಂಚ ಖಾರವಾಗಿರುವುದರಿಂದ ಇದನ್ನು ಸೇವಿಸಲು ಸುಲಭವಾಗಿಸಲು ಕೊಂಚ ಜೇನನ್ನು ಸಹಾ ಸೇರಿಸಬಹುದು.

ಶುಂಠಿ ಚಹಾ- ಸ್ವಾದದ ಜೊತೆಗೆ ಆರೋಗ್ಯದ ಭಾಗ್ಯ!

ಉಗುರುಬೆಚ್ಚನೆಯ ಉಪ್ಪುನೀರು

ಉಗುರುಬೆಚ್ಚನೆಯ ಉಪ್ಪುನೀರು

ಒಂದು ವೇಳೆ ಹೊಟ್ಟೆಯಲ್ಲಿ ಗುಡುಗುಡು ಎನ್ನುತ್ತಿದ್ದರೆ ಒಂದು ಅಥವಾ ಎರಡು ಚಿಕ್ಕಚಮಚದಷ್ಟು ಕಲ್ಲುಪ್ಪನ್ನು ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಕರಗಿಸಿ ಗಟಗಟನೇ ಕುಡಿದುಬಿಡಬೇಕು. ಹೊಟ್ಟೆಯ ಗುಡುಗುಡು ತಕ್ಷಣವೇ ಪರಿಹಾರವಾಗುತ್ತದೆ.

ಉಪ್ಪು ಬೆರೆಸಿದ ಉಗುರು ಬೆಚ್ಚಗಿನ ನೀರು, ಆಯಸ್ಸು ನೂರು!

ತಾಜಾ ಪುದೀನ ಎಲೆಗಳ ರಸ

ತಾಜಾ ಪುದೀನ ಎಲೆಗಳ ರಸ

ಒಂದು ವೇಳೆ ಅಜೀರ್ಣತೆಯ ಕಾರಣ ವಾಕರಿಕೆ ಹಾಗೂ ವಾಂತಿ ಎದುರಾದರೆ ಈ ವಿಧಾನ ಸೂಕ್ತವಾಗಿದೆ. ಅಲ್ಲದೇ ಹೊಟ್ಟೆ ಕಿವುಚಿದಂತೆ ನೋವಾಗುತ್ತಿದ್ದರೂ ಈ ವಿಧಾನ ಉತ್ತಮ. ಹೊಟ್ಟೆ ನೋವು ಕಂಡುಬಂದ ತಕ್ಷಣ ಕೆಲವು ಹಸಿ ಪುದೀನಾ ಎಲೆಗಳನ್ನು ಚೆನ್ನಾಗಿ ಜಗಿದು ನುಂಗುವುದು ಅತ್ಯುತ್ತಮ. ಇದು ಸಾಧ್ಯವಾಗದೇ ಹೋದರೆ ಕೆಲವು ಎಲೆಗಳನ್ನು ಮಿಕ್ಸಿಯಲ್ಲಿ ಕಡೆದು ನೀರಿನೊಂದಿಗೆ ಮಿಶ್ರಣ ಮಾಡಿ ಕುಡಿಯಬಹುದು. ಕೆಲವೊಮ್ಮೆ ಊಟದ ತಕ್ಷಣ ಹೊಟ್ಟೆನೋವು ಕಂಡುಬರುತ್ತದೆ. ಆಗಲೂ ಈ ವಿಧಾನ ಹೆಚ್ಚು ಸೂಕ್ತವಾಗಿದೆ.

ಲಿಂಬೆರಸ

ಲಿಂಬೆರಸ

ವಾಂತಿ ವಾಕರಿಕೆ ಸಹಿತ ಹೊಟ್ಟೆನೋವಿದ್ದರೆ ಈ ವಿಧಾನವೂ ಉತ್ತಮವಾಗಿದೆ, ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಮೂರು ಚಿಕ್ಕಚಮಚ ಲಿಂಬೆರಸ ಬೆರೆಸಿ ದಿನಕ್ಕೆ ಮೂರು ಬಾರಿ ಕುಡಿಯುವುದರಿಂದ ಹೊಟ್ಟೆನೋವು, ವಾಕರಿಕೆ, ವಾಂತಿ ಇಲ್ಲವಾಗುತ್ತದೆ.

ಲಿಂಬೆ ಹಣ್ಣು- ಹುಳಿಯಾದರೂ, ಆರೋಗ್ಯಕ್ಕೆ ಸಿಹಿ!

ಏಲಕ್ಕಿ

ಏಲಕ್ಕಿ

ಒಂದು ವೇಳೆ ಅಜೀರ್ಣದ ಕಾರಣ ಹೊಟ್ಟೆನೋವು ಕಾಣಿಸಿಕೊಂಡು ಇದರೊಂದಿಗೆ ವಾಕರಿಕೆ, ವಾಂತಿಯೂ ಆವರಿಸಿದ್ದರೆ ಈ ವಿಧಾನ ಸೂಕ್ತವಾಗಿದೆ. ಇದಕ್ಕಾಗಿ ಒಂದು ಲೋಟ ನೀರಿನಲ್ಲಿ ಕೆಲವು ಏಲಕ್ಕಿ ಕಾಳುಗಳನ್ನು ಚೆನ್ನಾಗಿ ಕುದಿಸಿ ಇದರೊಂದಿಗೆ ಕೊಂಚ ಜೀರಿಗೆಯನ್ನೂ ಸೇರಿಸಿ ನೀರು ಅರ್ಧದಷ್ಟಾದ ಬಳಿಕ ತಣಿಸಿ ದಿನಕ್ಕೆ ಮೂರು ಬಾರಿ ಕುಡಿಯುವುದರಿಂದ ಹೊಟ್ಟೆನೋವು ಕಡಿಮೆಯಾಗುತ್ತದೆ.

ಕುಟುಂಬದ ಆರೋಗ್ಯಕ್ಕಾಗಿ ಮನೆಯಲ್ಲಿರಲಿ ಏಲಕ್ಕಿ ಮಾಲೆ

ಲೋಳೆಸರ ಜ್ಯೂಸ್

ಲೋಳೆಸರ ಜ್ಯೂಸ್

ಈ ರಸ ಹಲವು ತೊಂದರೆಗಳಿಗೆ ಸಿದ್ದೌಷಧವಾಗಿದ್ದು ಹಲವು ಸೋಂಕು ಉಂಟುಮಾಡುವ ಕ್ರಿಮಿಗಳನ್ನು ಕೊಲ್ಲುವ ಶಕ್ತಿ ಹೊಂದಿದೆ. ಅಲ್ಲದೇ ಆಂತರಿಕ ಸ್ರಾವ ನಿಲ್ಲಿಸಲು, ಹೊಟ್ಟೆಯೊಳಗಿನ ಉರಿಯನ್ನು ಶಮನಗೊಳಿಸಲು, ಜೀರ್ಣಶಕ್ತಿಯನ್ನು ಹೆಚ್ಚಿಸಲು, ಮಲಬದ್ದತೆಯ ತೊಂದರೆ ನಿವಾರಿಸಲು ಹಾಗೂ ಹೊಟ್ಟೆನೋವು ಮತ್ತು ಹೊಟ್ಟೆಯೊಳಗೆ ಉಂಟಾಗಿರುವ ಸೆಡೆತವನ್ನು ನಿವಾರಿಸಲು ಸಮರ್ಥವಾಗಿದೆ. ಹೊಟ್ಟೆ ನೋವಿದ್ದರೆ ಬೆಳಿಗ್ಗೆ ಎದ್ದಾಕ್ಷಣ ಒಂದು ಲೋಟ ತಣ್ಣೀರಿಗೆ ಕೊಂಚ ಲೋಳೆಸರದ ರಸವನ್ನು ಮಿಶ್ರಣ ಮಾಡಿ ಪ್ರತಿದಿನ ಕುಡಿಯಿರಿ.

ಲೋಳೆ ಸರ ಜ್ಯೂಸ್- ಇನ್ನು ತೂಕ ಇಳಿಸಲು ರೆಡಿಯಾಗಿ..!

ದೊಡ್ಡ ಜೀರಿಗೆ

ದೊಡ್ಡ ಜೀರಿಗೆ

ಜೀರ್ಣಶಕ್ತಿ ಹೆಚ್ಚಲೆಂದೇ ಹೋಟೆಲುಗಳಲ್ಲಿ ಊಟದ ಬಳಿಕ ದೊಡ್ಡಜೀರಿಗೆಯನ್ನು ತಿನ್ನಲು ನೀಡುತ್ತಾರೆ. ಇದರ ರಸದ ಸೇವನೆಯಿಂದ ಹೊಟ್ಟೆನೋವು, ಅಜೀರ್ಣತೆ, ವಾಯುಪ್ರಕೋಪ ಮತ್ತು ಹೊಟ್ಟೆಯುಬ್ಬರಿಕೆ ಮೊದಲಾದ ತೊಂದರೆಗಳು ನಿವಾರಣೆಯಾಗುತ್ತವೆ. ಇದಕ್ಕಾಗಿ ಒಂದು ಲೋಟ ನೀರನ್ನು ಕುದಿಸಿ ಇದರಲ್ಲಿ ಒಂದು ಚಿಕ್ಕಚಮಚ ದೊಡ್ಡಜೀರಿಗೆಯನ್ನು ಹಾಕಿ ಮೂರು ನಾಲ್ಕು ನಿಮಿಷ ಕುದಿಸಿ. ಬಳಿಕ ಉರಿ ಆರಿಸಿ ತಣಿಸಿ ಕೊಂಚ ಲಿಂಬೆರಸವನ್ನು ಮಿಶ್ರಣ ಮಾಡಿ. ಊಟಕ್ಕೂ ಮುನ್ನ ಈ ನೀರನ್ನು ಕುಡಿಯುವ ಮೂಲಕ ಹೊಟ್ಟೆನೋವಾಗುವುದನ್ನು ತಪ್ಪಿಸಬಹುದು.

ಜೀರಿಗೆ ನೀರು: ಸಣ್ಣ-ಪುಟ್ಟ ಕಾಯಿಲೆಗೆ ದಿವ್ಯೌಷಧ

English summary

Simple Home Remedies to Fix Stomach Ache

Here, in this article, we are sharing some of the worst controversies that the Indian gurujis have got involved in. These are the cases that have been reported in the media and some of the gurujis (godmen) have faced punishments as well. Check out the list of these Indian gurujis who are famous for their controversies.
Story first published: Sunday, May 21, 2017, 10:02 [IST]
Subscribe Newsletter