For Quick Alerts
ALLOW NOTIFICATIONS  
For Daily Alerts

  ಜೀರಿಗೆ ನೀರು: ಸಣ್ಣ-ಪುಟ್ಟ ಕಾಯಿಲೆಗೆ ದಿವ್ಯೌಷಧ

  By Arshad
  |

  ತಾಮ್ರದ ಪಾತ್ರೆಯಲ್ಲಿ ರಾತ್ರಿ ಇರಿಸಿದ್ದ ನೀರನ್ನು ಬೆಳಿಗ್ಗೆ ಕುಡಿಯುವುದರ ಮಹತ್ವವನ್ನು ನೀವು ಈಗಾಗಲೇ ಅರಿತಿರಬಹುದು. ಆದರೆ ಇದಕ್ಕೂ ಹೆಚ್ಚಾಗಿ ಜೀರಿಗೆ ಹಾಕಿ ಕುದಿಸಿದ ನೀರನ್ನು ಭಾರತದ ಹಲವೆಡೆ ಕುಡಿಯುತ್ತಾರೆ. ಗರ್ಭಿಣಿಯರ ಸಮಸ್ಯೆಗಳಿಗೆ ದಿವ್ಯೌಷಧ ಜೀರಿಗೆ ನೀರು 

  ಕೇರಳ, ತಮಿಳುನಾಡುಗಳಲ್ಲಂತೂ ಹೋಟೆಲುಗಳಲ್ಲಿ ಕುಡಿಯಲು ನೀಡುವುದೇ ಜೀರಿಗೆ ನೀರು. ಇದು ಜೀರಿಗೆಯ ಹಲವಾರು ಪೋಷಕಾಂಶಗಳನ್ನು ನೀರಿನ ಮೂಲಕ ಸಡಿಲಗೊಳಿಸಿ ನೀಡುವ ಮೂಲಕ ಜೀರ್ಣಕ್ರಿಯೆ ಸುಗಮಗೊಳ್ಳಲು ನೆರವಾಗುತ್ತದೆ. ತೂಕ ಇಳಿಸಲು ನೆರವಾಗುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.   ಈ ಪುಟ್ಟ ಜೀರಿಗೆಯಲ್ಲಿದೆ, ಬೆಟ್ಟದಷ್ಟು ಗುಣಗಳು...

  ಆದರೆ ಇದಕ್ಕೆ ಒಂದು ವಿಧಾನವಿದೆ. ಈ ವಿಧಾನವನ್ನು ಸರಿಯಾಗಿ ಅನುಸರಿಸಿದರೆ ಮಾತ್ರ ಜೀರಿಗೆಯ ಪೂರ್ಣ ಪ್ರಯೋಜನವನ್ನು ಪಡೆಯಬಹುದು. ಬನ್ನಿ, ಈ ಅರೋಗ್ಯಕರ ಜೀರಿಗೆ ನೀರನ್ನು ಹೇಗೆ ತಯಾರಿಸುವುದು ಎಂಬುದನ್ನು ನೋಡೋಣ....

  ಜೀರಿಗೆ ನೀರು ತಯಾರಿಸುವ ವಿಧಾನ

  ಜೀರಿಗೆ ನೀರು ತಯಾರಿಸುವ ವಿಧಾನ

  ಒಂದು ಲೀಟರ್ ನೀರಿಗೆ ಎರಡು ದೊಡ್ಡ ಚಮಚ ಜೀರಿಗೆ ಹಾಕಿ ಕುದಿಸಿ. ಕುದಿಯಲು ಪ್ರಾರಂಭಿಸ ಬಳಿಕ ಸುಮಾರು ನಾಲ್ಕೈದು ನಿಮಿಷಗಳವರೆಗೆ ನೀರನ್ನು ಗಮನಿಸಿ. ಒಂದು ಹಂತದಲ್ಲಿ ಜೀರಿಗೆಯಿಂದ ಬಣ್ಣ ಹೊರಬರಲು ಪ್ರಾರಂಭವಾಗುತ್ತದೆ. ಈಗ ಉರಿಯನ್ನು ಆರಿಸಿ ತಣಿಯಲು ಬಿಡಿ.

  ಜೀರಿಗೆ ನೀರು ತಯಾರಿಸುವ ವಿಧಾನ

  ಜೀರಿಗೆ ನೀರು ತಯಾರಿಸುವ ವಿಧಾನ

  ಸುಮಾರು ಉಗುರುಬೆಚ್ಚಗಾಗುವಷ್ಟು ತಣಿದ ಬಳಿಕ ಈ ನೀರನ್ನು ಸೋಸಿ ಒಂದು ಬಾಟಲಿಯಲ್ಲಿ ಸಂಗ್ರಹಿಸಿ. ಈ ನೀರನ್ನು ಇಡಿಯ ದಿನ ಕೊಂಚಕೊಂಚವಾಗಿ ಕುಡಿಯುತ್ತಾ ಬನ್ನಿ. ಇದು ಕೊಂಚವೇ ಬಿಸಿಯಾಗಿರಬೇಕೇ ಹೊರತು ತೀರಾ ತಣ್ಣಗೂ ಇರಬಾರದು, ತೀರಾ ಬಿಸಿಯಾಗಿಯೂ ಇರಬಾರದು.

  ಜೀರಿಗೆ ನೀರಿನ ಪ್ರಯೋಜನಗಳು: ಅಜೀರ್ಣಕ್ಕೆ ವಿದಾಯ

  ಜೀರಿಗೆ ನೀರಿನ ಪ್ರಯೋಜನಗಳು: ಅಜೀರ್ಣಕ್ಕೆ ವಿದಾಯ

  ಒಂದು ವೇಳೆ ಅಜೀರ್ಣತೆ ನಿಮ್ಮ ತೊಂದರೆಯಾಗಿದ್ದರೆ ಈ ನೀರು ಅತ್ಯುತ್ತಮ ಪರಿಹಾರ ಒದಗಿಸುತ್ತದೆ. ಏಕೆಂದರೆ ಜೀರಿಗೆಯಲ್ಲಿನ ಪೋಷಕಾಂಶಗಳು ಜೀರ್ಣಾಂಗಗಳ ಒಳಭಾಗವನ್ನು ಪ್ರಚೋದಿಸಿ ಜೀರ್ಣರಸಗಳನ್ನು ಹೆಚ್ಚಾಗಿ ಸ್ರವಿಸುವಂತೆ ಮಾಡುತ್ತದೆ. ಇದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.

  ಜೀರಿಗೆ ನೀರಿನ ಪ್ರಯೋಜನಗಳು: ಅಜೀರ್ಣಕ್ಕೆ ವಿದಾಯ

  ಜೀರಿಗೆ ನೀರಿನ ಪ್ರಯೋಜನಗಳು: ಅಜೀರ್ಣಕ್ಕೆ ವಿದಾಯ

  ಅಲ್ಲದೇ ಅಹಾರ ಜೀರ್ಣವಾದ ಬಳಿಕ ಉಳಿದ ಕಲ್ಮಶ ಮತ್ತು ವಿಷಕಾರಿ ವಸ್ತುಗಳನ್ನು ಹೊರಹಾಕಲೂ ನೆರವಾಗುತ್ತದೆ. ನಿತ್ಯವೂ ಈ ನೀರನ್ನು ಕುಡಿಯುವ ಮೂಲಕ ಅಜೀರ್ಣತೆಯಿಂದ ಎದುರಾಗುವ ಹುಳಿತೇಗು, ಎದೆಯುರಿ, ಹೊಟ್ಟೆನೋವು, ವಾಕರಿಕೆ, ಬೆಳಗ್ಗಿನ ಸುಸ್ತು ಮೊದಲಾದ ತೊಂದರೆಗಳು ಇಲ್ಲವಾಗುತ್ತವೆ.

  ರಕ್ತದ ಒತ್ತಡ ಸಮನಾಗಿರಿಸಲು ನೆರವಾಗುತ್ತದೆ

  ರಕ್ತದ ಒತ್ತಡ ಸಮನಾಗಿರಿಸಲು ನೆರವಾಗುತ್ತದೆ

  ಜೀರಿಗೆಯಲ್ಲಿರುವ ಉತ್ತಮ ಪ್ರಮಾಣದ ಪೊಟ್ಯಾಶಿಯಂ ರಕ್ತದಲ್ಲಿ ನೀರಿನ ಪ್ರಮಾಣ ಮತ್ತು ಎಲೆಕ್ಟ್ರೋಲೈಟುಗಳ ಪ್ರಮಾಣವನ್ನು ಸಮತೋಲನದಲ್ಲಿರಿಸಲು ನೆರವಾಗುತ್ತದೆ. ಇದರಿಂದ ರಕ್ತದ ಒತ್ತಡ ಏಕಪ್ರಕಾರವಾಗಿರುತ್ತದೆ.

  ರಕ್ತದ ಒತ್ತಡ ಸಮನಾಗಿರಿಸಲು ನೆರವಾಗುತ್ತದೆ

  ರಕ್ತದ ಒತ್ತಡ ಸಮನಾಗಿರಿಸಲು ನೆರವಾಗುತ್ತದೆ

  ಒಂದು ವೇಳೆ ನಿಮಗೆ ಅಧಿಕ ರಕ್ತದೊತ್ತಡದ ತೊಂದರೆ ಇದ್ದರೆ ಹಾಗೂ ಹೃದಯ ಸಂಬಂಧಿ ತೊಂದರೆಗಳಿದ್ದರೆ ಪ್ರತಿದಿನ ಖಾಲಿಹೊಟ್ಟೆಯಲ್ಲಿ ಕೊಂಚ ಜೀರಿಗೆ ಕುದಿಸಿದ ನೀರನ್ನು ಬೆಳಿಗ್ಗೆ ಕುಡಿಯುವುದು ಪ್ರಯೋಜನಕಾರಿಯಾಗಿದೆ. ಇದರಲ್ಲಿರುವ ಇತರ ಖನಿಜಗಳು ಹೃದಯದ ಬಡಿತವನ್ನೂ ಸೂಕ್ತಮಟ್ಟದಲ್ಲಿರಿಸಿ ಹೃದಯದ ಕ್ಷಮತೆ ಹೆಚ್ಚಿಸುತ್ತದೆ.

  ತೂಕವಿಳಿಸಲು ನೆರವು

  ತೂಕವಿಳಿಸಲು ನೆರವು

  ತೂಕವಿಳಿಸಲು ಈ ನೀರು ಒಂದು ಉತ್ತಮ ಮಾಧ್ಯಮವಾಗಿದೆ. ದೇಹದ ಜೀವ ರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುವ ಮೂಲಕ ಹೆಚ್ಚು ಹೆಚ್ಚು ಕ್ಯಾಲೋರಿಗಳು ಬಳಸಲ್ಪಡುತ್ತವೆ. ಅಲ್ಲದೇ ಇದರಲ್ಲಿರುವ ಕರಗದ ನಾರು ಹಸಿವನ್ನು ಕಡಿಮೆಗೊಳಿಸುತ್ತದೆ.

  ತೂಕವಿಳಿಸಲು ನೆರವು

  ತೂಕವಿಳಿಸಲು ನೆರವು

  ತನ್ಮೂಲಕ ದಿನದ ಅಪರಸಮಯದಲ್ಲಿ ಅನಾರೋಗ್ಯಕರ ಆಹಾರವನ್ನು ತಿನ್ನುವುದರಿಂದ ತಡೆಯುತ್ತದೆ. ಅಲ್ಲದೇ ದೇಹದ ಕಲ್ಮಶಗಳನ್ನು ಹೊರಹಾಕಲು ನೆರವಾಗುವ ಮೂಲಕ ದೇಹದ ತೂಕ ಇಳಿಸುವ ಚಟುವಟಿಕೆ ವ್ಯಾಯಾಮಗಳಿಗೆ ನೆರವು ನೀಡಿ ತೂಕ ಇಳಿಸುವಲ್ಲಿ ನೆರವಾಗುತ್ತದೆ.

   

  English summary

  health-benefits-of-jeera-water

  You might have heard that drinking water from a copper vessel or drinking a glass of warm water in the morning is good for the health. But have you ever wondered why drinking jeera water is so common? It provides a whole lot of nutrients and also aids in digestion, weight loss and immunity. Our But our health experts explains the health benefits of drinking jeera water and the right way to prepare and store it.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more