ಅಧ್ಯಯನ ವರದಿ: ಅಪ್ಪಿತಪ್ಪಿಯೂ ಭುಜ ನೋವು ನಿರ್ಲಕ್ಷಿಸದಿರಿ!

By Manu
Subscribe to Boldsky

ಯಾವುದೇ ಸ್ಪಷ್ಟ ಕಾರಣವಿಲ್ಲದೇ ಭುಜದಲ್ಲಿ ನೋವಿದ್ದರೆ ಇದು ಹೃದಯದಲ್ಲಿ ಇರುವ ಯಾವುದೋ ತೊಂದರೆಯ ಸೂಚನೆಯಾಗಿರಬಹುದು ಎಂದು ಇತ್ತೀಚಿನ ಸಂಶೋಧನೆಯೊಂದು ಎಚ್ಚರಿಸಿದೆ. ಅದರಲ್ಲಿಯೂ ಕೈಗಳನ್ನು ಮೇಲಕ್ಕೆತ್ತುವಾಗ rotator cuff ಎಂಬ ಭಾಗದಲ್ಲಿ (ಭುಜದ ಮೂಳೆಯ ಅಡಿ ಇರುವ ಸ್ನಾಯು) ನೋವು ಕಾಣಿಸಿಕೊಂಡರೆ ಇದನ್ನು ಹೆಚ್ಚಿನವರು ಭಾರ ಎತ್ತುವಾಗ ಏನಾದರೂ ಎಡವಟ್ಟಾಗಿದ್ದು ನೋವು ಉಂಟಾಗಿದೆ ಎಂದು ತಿಳಿದುಕೊಳ್ಳುತ್ತಾರೆ.

ಆದರೆ ಈ ನೋವು ಸತತವಾಗಿದ್ದರೆ ಮಾತ್ರ ಇದು ಹೃದಯದ ತೊಂದರೆಯನ್ನು ಸ್ಪಷ್ಟವಾಗಿ ಪ್ರಕಟಿಸುವ ಸೂಚನೆಯಾಗಿದೆ ಎಂದು ಅಮೇರಿಕಾದ University of Utah School of Medicine ನಲ್ಲಿ ಪ್ರಮುಖ ಪ್ರಾಧ್ಯಾಪಕರಾಗಿರುವ ಪ್ರೊ. ಕರ್ಟ್ ಹೆಗ್ಮನ್ ರವರು ತಿಳಿಸಿದ್ದಾರೆ. ಹೃದಯ ತೊಂದರೆಯ ಸಾಮಾನ್ಯ ಮುನ್ಸೂಚನೆಗಳು   

Heart Disease
 

ಇವರು ಸುಮ್ಮನೇ ಪುಸ್ತಕದ ಬದನೇಕಾಯಿಯನ್ನು ಓದಿ ಈ ವಿಷಯವನ್ನು ಹೇಳುತ್ತಿಲ್ಲ, ಬದಲಿಗೆ ಸ್ವತಃ 1,226 ಕುಶಲಕರ್ಮಿಗಳನ್ನು ಪರೀಕ್ಷಿಸಿ ಅವರ ಅರೋಗ್ಯದ ಅಂಕಿ ಅಂಶಗಳನ್ನು ಕಲೆಹಾಕಿ ವಿಶ್ಲೇಷಿಸಿದ ಬಳಿಕವೇ ಪ್ರಮಾಣಿಸಿದ್ದಾರೆ.

ಹೃದಯಕ್ಕೆ ರಕ್ತವನ್ನು ಒತ್ತಡದಿಂದ ನೀಡುವ ಕೆಲಸಕ್ಕೆ ಒಂದು ಮಿತಿಗಳಿವೆ. ಆರೋಗ್ಯವಂತ ವ್ಯಕ್ತಿಗೆ ಈ ಮಿತಿಗಳು (120/80) ಪ್ರಮಾಣದಲ್ಲಿರಬೇಕು. ಆದರೆ ಈ ಮಿತಿಗಳು ಕೆಲವಾರು ಕಾರಣಗಳಿಂದ ಮೀರುತ್ತವೆ. ಮಧುಮೇಹ, ಸ್ಥೂಲಕಾಯ, ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣದಲ್ಲಿ ಏರಿಕೆ ಮೊದಲಾದ ಕಾರಣಗಳಿಂದ ರಕ್ತದ ಒತ್ತಡವೂ ಹೆಚ್ಚುತ್ತದೆ. ಈ ಹೆಚ್ಚಿನ ಒತ್ತಡ ಹೃದಯಕ್ಕೂ ಹೆಚ್ಚಿನ ಭಾರವನ್ನು ನೀಡುವ ಮೂಲಕ ಹೃದಯದ ಆರೋಗ್ಯದಲ್ಲಿ ದುಷ್ಪರಿಣಾಮದ ಸಾಧ್ಯತೆಯೂ ಹೆಚ್ಚುತ್ತದೆ.

ಪ್ರೊಫೆಸರ್ ಹೆಗ್ಮನ್ ರ ಪ್ರಕಾರ ಭುಜದಲ್ಲಿ ನೋವಿರುವ ವ್ಯಕ್ತಿಗಳು ಇತರ ವ್ಯಕ್ತಿಗಳಿಗಿಂತಲೂ 4.6 ಪಟ್ಟು ಹೆಚ್ಚು ಹೃದಯದ ತೊಂದರೆಗೆ ಒಳಗಾಗುವ ಸಾಧ್ಯತೆ ಹೊಂದಿರುತ್ತಾರೆ. ಅಲ್ಲದೇ ಕೈಗಳನ್ನು ತಿರುಗಿಸುವಾಗ ನೋವು ಕಂಡುಬಂದರೆ (rotator cuff tendinopathy) ಈ ವ್ಯಕ್ತಿಗಳಿಗೆ ಉಳಿದವರಿಗಿಂತ ಆರು ಪಟ್ಟು ಹೆಚ್ಚು ಸಾಧ್ಯತೆ ಹೆಚ್ಚಾಗಿರುತ್ತದೆ. 

Journal of Occupational and Environmental Medicine ಎಂಬ ವೈಜ್ಞಾನಿಕ ನಿಯತಕಾಲಿಕೆಯಲ್ಲಿ ಪ್ರಕಟಿಸಿರುವ ವರದಿಯ ಪ್ರಕಾರ ಹೃದಯದ ತೊಂದರೆಯ ಸಾಧ್ಯತೆ ಅತಿ ಹೆಚ್ಚೂ ಅಲ್ಲ, ಅತಿ ಕಡಿಮೆಯೂ ಅಲ್ಲ ಎಂದಿರುವವರ ವ್ಯಕ್ತಿಗಳಲ್ಲಿ ಭುಜದ ನೋವು ಅತಿ ಕಡಿಮೆ ಇರುತ್ತದೆ ಅಥವಾ ಕೈಗಳನ್ನು ಹಿಂದೆ ತಿರುಗಿಸದ ಹೊರತು ಗೊತ್ತಾಗದಷ್ಟಿರುತ್ತದೆ. ಅಂದರೆ ಹೃದಯದ ತೊಂದರೆ ಹೆಚ್ಚು ಆವರಿಸುವ ಸಾಧ್ಯತೆ ಇರುವವರ ಭುಜದಲ್ಲಿಯೇ ಈ ನೋವು ಸ್ಪಷ್ಟವಾಗಿರುತ್ತದೆ. 

Shoulder pain
 

ಆದ್ದರಿಂದ ಭುಜದಲ್ಲಿ ನೋವು ಇದೆ ಎಂದರೆ ಈಗಾಗಲೇ ಹೃದಯದ ತೊಂದರೆ ಹಿಂದೆಂದೋ ಪ್ರಾರಂಭವಾಗಿದ್ದು ಈಗ ಉಲ್ಬಣಾವಸ್ಥೆಗೆ ತಲುಪಿದೆ ಎಂದು ಸ್ಪಷ್ಟವಾಗುತ್ತದೆ ಎಂದು ಪ್ರೊ. ಹೆಗ್ಮನ್ ವಿವರಿಸುತ್ತಾರೆ. ಆದ್ದರಿಂದ ಭುಜದ ಮೇಲೆ ಹೆಚ್ಚಿನ ಒತ್ತಡ ಹೇರುವ ಉದ್ಯೋಗದಲ್ಲಿರುವ ವ್ಯಕ್ತಿಗಳು ಸಾಮಾನ್ಯವಾಗಿ ಈ ನೋವು ತಮ್ಮ ಉದ್ಯೋಗದ ಕಾರಣದಿಂದಲೇ ಬಂದಿರುವುದು ಎಂದು ತಿಳಿದುಕೊಳ್ಳುವ ಸಾಧ್ಯತೆ ಹೆಚ್ಚಿರುವ ಕಾರಣ ಇದು ನಿಜವಾಗಿ ಹೃದಯದ ತೊಂದರೆಯಿಂದ ಬಂದಿದ್ದರೂ ಕಡೆಗಣಿಸುವ ಮೂಲಕ ಇನ್ನಷ್ಟು ಹೆಚ್ಚು ಉಲ್ಬಣಗೊಳ್ಳಲು ಕಾರಣವಾಬಹುದು ಎಂದು ಅವರು ಎಚ್ಚರಿಸುತ್ತಾರೆ.

ಆದ್ದರಿಂದ ನೋವು ಕಾಣಿಸಿಕೊಂಡಾಗ ತಡಮಾಡದೇ ವೈದ್ಯರಿಂದ ತಪಾಸಣೆಗೊಳಪಟ್ಟು ರಕ್ತದ ಒತ್ತಡವನ್ನು ಕಡಿಮೆಗೊಳಿಸುವ ಚಿಕಿತ್ಸೆ ಪಡೆಯುವ ಮೂಲಕ ಹೃದಯ ಉಲ್ಬಣಾವಸ್ಥೆಯನ್ನು ತಲುಪುವುದರಿಂದ ರಕ್ಷಣೆ ಪಡೆಯಬಹುದು ಎಂದು ಪ್ರೊ. ಹೆಗ್ಮನ್ ವಿವರಿಸುತ್ತಾರೆ.

For Quick Alerts
ALLOW NOTIFICATIONS
For Daily Alerts

    English summary

    Shoulder Pain May Indicate Heart Disease Risk - Warns Study

    If you are having shoulder problems, they may be due to some heart disease risk factors - not just physical strain, warns a new study. "If someone has rotator cuff problems, it could be a sign that there is something else going on. They may need to manage risk factors for heart disease," said the study's lead author Kurt Hegmann, Professor at University of Utah School of Medicine in the US.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more