ಲೈಂಗಿಕ ಸಾಮರ್ಥ್ಯ ಹೆಚ್ಚಿಸುವ ಶಕ್ತಿ, ಇಂತಹ ಆಹಾರಗಳಲ್ಲಿದೆ...

By: Arshad
Subscribe to Boldsky

ತೃಪ್ತಿಕರ ಸಮಾಗಮ ಸುಖಕರ ದಾಂಪತ್ಯಜೀವನದ ಅಡಿಪಾಯವಾಗಿದೆ. ಲೈಂಗಿಕ ಕ್ರಿಯೆ ಉತ್ತಮಗೊಳ್ಳಲು ಸೂಕ್ತವಾದ ಆಹಾರಗಳನ್ನು ಸೇವಿಸುವುದೂ ಅಗತ್ಯ. ಸುಖಕರ ದಾಂಪತ್ಯ ಜೀವನದ ಮೂಲಕ ಉತ್ತಮ ಆರೋಗ್ಯ, ರೋಗ ನಿರೋಧಕ ಶಕ್ತಿಯಲ್ಲಿ ಹೆಚ್ಚಳ, ಒತ್ತಡದ ನಿವಾರಣೆ, ಹೃದಯದ ಆರೋಗ್ಯ ಉತ್ತಮಗೊಳ್ಳುವುದು, ಆರೋಗ್ಯಕರ ಸಂತಾನಫಲ ಮತ್ತು ನೆಮ್ಮದಿ ಲಭ್ಯವಾಗುತ್ತದೆ.

ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ಕೆಲವು ಆಹಾರಗಳನ್ನು ಸೇವಿಸವುದು ಮಾತ್ರವಲ್ಲ, ಕೆಲವು ಆಹಾರ ಅಭ್ಯಾಸಗಳನ್ನು ಬದಲಿಸಿಕೊಳ್ಳುವುದೂ ಅಗತ್ಯವಾಗಿದೆ. ವಾಸ್ತವವಾಗಿ ಲೈಂಗಿಕ ಶಕ್ತಿಯನ್ನು ಪೂರ್ಣ ಪ್ರಮಾಣದಲ್ಲಿ ಹೆಚ್ಚಿಸಲು ಯಾವುದೇ ಆಹಾರಗಳು ಈ ಜಗತ್ತಿನಲ್ಲಿಲ್ಲ. ಆದರೆ ಇರುವ ಶಕ್ತಿಯನ್ನು ಪೂರ್ಣವಾಗಿ ಮತ್ತು ಸಮರ್ಥವಾಗಿ ಬಳಸಿಕೊಳ್ಳಲು ಈ ಆಹಾರಗಳು ನೆರವಾಗುತ್ತವೆ.  ಪುರುಷರ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಎಂಟು ಆಹಾರ ಪದಾರ್ಥಗಳು

ಇತ್ತೀಚಿನ ದಿನಗಳಲ್ಲಿ ಲೈಂಗಿಕತೆಯ ಬಗ್ಗೆ ಮಡಿವಂತಿಕೆ ಕೊಂಚ ಕಡಿಮೆಯಾಗಿದ್ದು ಈ ನಿಟ್ಟಿನಲ್ಲಿ ಅಮೂಲ್ಯ ಮಾಹಿತಿಗಳು ಲಭ್ಯವಾಗುತ್ತಿವೆ. ಈ ಆಹಾರಗಳನ್ನು 'ಸೆಕ್ಸ್-ಡಯೆಟ್' ಎಂಬ ಹೆಸರಿನಿಂದ ಹೆಚ್ಚು ಪ್ರಚಾರಗೊಳಿಸಲಾಗುತ್ತಿದ್ದು ಖ್ಯಾತ ಹಾಲಿವುಡ್ ನಟಿಯರಾದ ಕಿಮ್ ಕಾರ್ದಶಿಯಾನ್ ಹಾಗೂ ಕ್ಯಾಮರೂನ್ ಡಿಯಾಝ್ ರವರು ಈ ಪ್ರಚಾರದಲ್ಲಿ ತೊಡಗಿದ್ದಾರೆ. ಅಷ್ಟೇ ಅಲ್ಲ, 2012ರಲ್ಲಿ ಒಂದು ಪುಸ್ತಕವನ್ನೂ ಬಿಡುಗಡೆ ಮಾಡಲಾಗಿದೆ.  ಲೈಂಗಿಕ ಸಮಸ್ಯೆಗೆ, ಮಾತ್ರೆಗಳು ಬೇಕಾಗಿಲ್ಲ! ಈ ಟಿಪ್ಸ್ ಅನುಸರಿಸಿ

ಬರೆಯ ಆಹಾರಗಳನ್ನು ಕಾಮೋತ್ತೇಜಕವಾಗಿ ಸೇವಿಸುವುದು ಮಾತ್ರ ಸಾಕಾಗುವುದಿಲ್ಲ, ಆರೋಗ್ಯಕರ ಜೀವನಶೈಲಿ, ಸೂಕ್ತ ವ್ಯಾಯಾಮ ಹಾಗೂ ಯೋಗಾಸನಗಳನ್ನು ಅನುಸರಿಸುವುದರಿಂದಲೂ ಲೈಂಗಿಕ ಕ್ರಿಯೆಯನ್ನು ಉತ್ತಮಗೊಳಿಸಲು ಸಾಧ್ಯ. ಬನ್ನಿ, ಈ ಅಹಾರಗಳು ಯಾವುವು ಎಂಬುದನ್ನು ನೋಡೋಣ..... 

ಸ್ಟ್ರಾಬೆರಿ

ಸ್ಟ್ರಾಬೆರಿ

ಈ ಹಣ್ಣುಗಳು ಕೇವಲ ಹೃದಯಕ್ಕೆ ಮಾತ್ರ ಒಳ್ಳೆಯದಲ್ಲ, ಬದಲಿಗೆ ಉತ್ತಮ ಲೈಂಗಿಕ ಕ್ರಿಯೆಗೂ ಪೂರಕವಾಗಿದೆ. ನಿಮ್ಮ ನಿತ್ಯದ ಆಹಾರದಲ್ಲಿ ಕೊಂಚ ಸ್ಟ್ರಾಬೆರಿ ಜ್ಯೂಸ್ ಅನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಆಹಾರ ಉತ್ತಮ ಕಾಮೋತ್ತೇಜಕವಾಗಿಸಬಹುದು.

ಓಟ್ ಮೀಲ್

ಓಟ್ ಮೀಲ್

ಓಟ್ಸ್ ರವೆಯಿಂದ ತಯಾರಾದ ಆಹಾರಗಳು ಸಹಾ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಲು ನೆರವಾಗುತ್ತದೆ. ಈ ಆಹಾರದಲ್ಲಿ ಪುರುಷರ ದೇಹದ ಟೆಸ್ಟೋಸ್ಟೆರಾನ್ ಎಂಬ ರಸದೂತವನ್ನು ಹೆಚ್ಚಿಸುವ ಗುಣವಿದೆ. ಇದು ಪುರುಷರಲ್ಲಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ.

ಕಪ್ಪು ಚಾಕಲೇಟು

ಕಪ್ಪು ಚಾಕಲೇಟು

ಒಂದು ವೇಳೆ ಚಾಕಲೇಟು ತಿನ್ನುವುದು ನಿಮಗೆ ಇಷ್ಟವಿದ್ದರೆ ಜಿಹ್ವಾಚಪಲ್ಯವನ್ನು ತಣಿಸುವ ಜೊತೆಗೇ ಲೈಂಗಿಕ ಶಕ್ತಿಯನ್ನು ಹೆಚ್ಚಿಸಲೂ ಕಪ್ಪು ಚಾಕಲೇಟಿನಿಂದ ಸಾಧ್ಯ. ಇದಲ್ಲಿರುವ ಫಿನೈಲ್ ಇಥೈಲಿಮೈನ್ ಎಂಬ ಪೋಷಕಾಂಶಗಳು ಪುರುಷರ ದೇಹದಲ್ಲಿ ಎಂಡಾರ್ಫಿನ್ ಗಳನ್ನು ಹೆಚ್ಚಿಸಿ ಲೈಂಗಿಕ ಶಕ್ತಿಯನ್ನು ವೃದ್ದಿಸಲು ನೆರವಾಗುತ್ತದೆ.

ಕೆಂಪು ವೈನ್

ಕೆಂಪು ವೈನ್

ಕೆಂಪು ವೈನ್ ಮತ್ತು ಚೀಸ್ ನೊಂದಿಗೆ ಆಹಾರ ಸೇವಿಸಿದ ಬಳಿಕ ಲೈಂಗಿಕ ಕ್ರಿಯೆಯಲ್ಲಿ ಸಾಮರ್ಥ್ಯ ಹೆಚ್ಚಿರುವುದನ್ನು ಗಮನಿಸಬಹುದು. ಇವೆರಡೂ ಉತ್ತಮ ಕಾಮೋತ್ತೇಜಕವಾಗಿದ್ದು ಲೈಂಗಿಕ ಜೀವನವನ್ನು ಇನ್ನಷ್ಟು ಸುಖಮಯವಾಗಿಸುತ್ತವೆ.

ಬಾಳೆಹಣ್ಣು

ಬಾಳೆಹಣ್ಣು

ಬಾಳೆಹಣ್ಣಿನಲ್ಲಿ ಬ್ರೊಮೆಲೈನ್ ಎಂಬ ಕಿಣ್ವಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇವುಗಳು ಸಹ ಸ್ವಾಭಾವಿಕವಾಗಿ ಲೈಂಗಿಕ ಬಯಕೆಯನ್ನು ಹೆಚ್ಚಿಸುತ್ತವೆ. ಬಾಳೆಹಣ್ಣುಗಳಲ್ಲಿ ಪೋಷಾಕಾಂಶಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇವುಗಳಲ್ಲಿ ಪೊಟಾಶಿಯಂ ಮತ್ತು ಮ್ಯೆಗ್ನಿಶಿಯಂ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಇವುಗಳು ಲೈಂಗಿಕ ತುಡಿತದ ಜೊತೆಗೆ ಹಲವಾರು ಪ್ರಯೋಜನಗಳನ್ನು ನಿಮಗೆ ನೀಡುತ್ತದೆ.

ಮೊಟ್ಟೆಗಳು

ಮೊಟ್ಟೆಗಳು

ಮೊಟ್ಟೆಗಳು ಸಹ ಜನನಾಂಗದ ನಿಮಿರುವಿಕೆಗೆ ಸಹಾಯ ಮಾಡುವ ಒಂದು ಅದ್ಭುತವಾದ ಆಹಾರವಾಗಿದೆ. ವಿಟಮಿನ್ ಡಿ, ಬಿ5 ಮತ್ತು ಬಿ6 ಈ ಎಲ್ಲಾ ಅಂಶಗಳು ಲೈಂಗಿಕ ತುಡಿತವನ್ನು ಉದ್ಧೀಪನ ಮಾಡುವ ಮತ್ತು ದೇಹದಲ್ಲಿನ ರಕ್ತ ನಾಳಗಳಿಗೆ ವಿಶ್ರಾಂತಿಯನ್ನು ನೀಡುವ ಅಂಶಗಳಾಗಿವೆ. ಇವುಗಳು ನಿಮ್ಮ ಸಂಗಾತಿಯೊಂದಿಗೆ ನಿಮಗೆ ಒಂದು ಮಧುರವಾದ ರತಿಕ್ರೀಡೆಗೆ ಅನುವು ಮಾಡಿಕೊಡುತ್ತದೆ.

 ಪಾಲಕ್ ಸೊಪ್ಪು

ಪಾಲಕ್ ಸೊಪ್ಪು

ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಈ ಸೊಪ್ಪು ಸಮರ್ಥವಾಗಿದೆ. ಇದರಲ್ಲಿರುವ ಉತ್ತಮ ಪ್ರಮಾಣದ ವಿಟಮಿನ್, ಪ್ರೋಟೀನು, ಖನಿಜಗಳು ಮತ್ತು ಮುಖ್ಯವಾಗಿ ಕಬ್ಬಿಣದ ಅಂಶ ರಕ್ತಪರಿಚಲನೆಯನ್ನು ಹೆಚ್ಚಿಸಿ ದೃಢತೆಯನ್ನು ಹೆಚ್ಚಿಸುತ್ತದೆ.

ಯೋಗಾಸನ (ಪಶ್ಚಿಮೋತ್ತಾಸನ) ಮಾಡಿ

ಯೋಗಾಸನ (ಪಶ್ಚಿಮೋತ್ತಾಸನ) ಮಾಡಿ

ಉತ್ತಮ ಲೈಂಗಿಕ ಶಕ್ತಿಗಾಗಿ ಈ ಆಸನ ಅತ್ಯುತ್ತಮವಾಗಿದ್ದು ನಿಯಮಿತವಾಗಿ ಅನುಸರಿಸುತ್ತ ಬರುವ ಮೂಲಕ ಸುಖಕರ ದಾಂಪತ್ಯ ಜೀವನವನ್ನು ನಡೆಸಬಹುದು. ಈ ಆಸನದ ಮೂಲಕ ಜನನಾಂಗಗಳಿಗೆ ಹೆಚ್ಚಿನ ರಕ್ತಪರಿಚಲನೆ ದೊರೆತು ಇವುಗಳ ಕಾರ್ಯಕ್ಷಮತೆ ಹೆಚ್ಚುತ್ತದೆ.

ಪ್ರಣಯ ಆಸನಗಳು

ಪ್ರಣಯ ಆಸನಗಳು

ಕೆಲವು ಸುಲಭ ಆಸನಗಳನ್ನು ಅನುಸರಿಸುವ ಮೂಲಕ ಪೂರ್ಣಪ್ರವೇಶ ಹಾಗೂ ಪರಿಪೂರ್ಣ ತೃಪ್ತಿಯನ್ನು ಪಡೆಯಲು ಸಾಧ್ಯ. ಅಲ್ಲದೇ ಲೈಂಗಿಕ ಕ್ರಿಯೆಯನ್ನು ನಿಯಮಿತವಾಗಿ ಅನುಸರಿಸುತ್ತಾ ಬರುವ ಮೂಲಕ ಲೈಂಗಿಕ ಸಾಮರ್ಥ್ಯವನ್ನೂ ಹೆಚ್ಚಿಸಬಹುದು ಎಂದು ತಜ್ಞರು ತಿಳಿಸುತ್ತಾರೆ.

English summary

Sex Diet For Better Performance

While sex is a practice or rather an exercise that keeps you fit, boosts immunity, releases stress, promotes cardiac health and helps have a healthy & good functioning reproductive system. A sex diet basically consists of foods and healthy habits that keeps you active and sexually fit. There is no such sex diet that you need to follow strictly.
Subscribe Newsletter