For Quick Alerts
ALLOW NOTIFICATIONS  
For Daily Alerts

ಸದಾ ಆರೋಗ್ಯದಿಂದ ಇರಬೇಕು ಎಂದಾದರೆ ಆದಷ್ಟು ಸಸ್ಯಾಹಾರವನ್ನು ಸೇವಿಸಿ

By Divya
|

ನಾವು ಸೇವಿಸುವ ಆಹಾರದ ಆಧಾರದ ಮೇಲೆಯೇ ನಮ್ಮ ಆರೋಗ್ಯವೂ ನಿಂತಿರುತ್ತದೆ. ಎಣ್ಣೆಯುಕ್ತ ಆಹಾರ, ಮಾಂಸಹಾರ, ಅತಿಯಾದ ಮಸಾಲಯುಕ್ತ ಪದಾರ್ಥಗಳು ವಿವಿಧ ಆರೋಗ್ಯ ಸಮಸ್ಯೆಯನ್ನು ಹುಟ್ಟಿಸುತ್ತವೆ. ಹಾಗಾಗಿಯೇ ಇಂದು ಅನೇಕರು ತಮ್ಮ ಆಹಾರ ಕ್ರಮದಲ್ಲಿ ಹೆಚ್ಚು ತರಕಾರಿಗಳ ಸೇವನೆಗೆ ಆದ್ಯತೆ ನೀಡುತ್ತಿದ್ದಾರೆ.

ಲವಲವಿಕೆಯ ಆರೋಗ್ಯಕ್ಕೆ 'ತರಕಾರಿ ಜ್ಯೂಸ್' ಸಹಕಾರಿ

ಬೊಜ್ಜು, ಹೃದಯ ಕಾಯಿಲೆ, ಮಧುಮೇಹ ಮತ್ತು ಕ್ಯಾನ್ಸರ್ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ತಗ್ಗಿಸಲು ಸಸ್ಯಹಾರ ಸಹಾಯ ಮಾಡುತ್ತದೆ. ಕೆಲವರಿಗೆ ಸಸ್ಯಹಾರವನ್ನು ಊಟ ಮಾಡಿದರೆ ತಾವೇನೋ ಉಪವಾಸ ಮಾಡುತ್ತಿದ್ದೇವೆಯೇ ಎನ್ನುವ ಗೊಂದಲಕ್ಕೆ ಒಳಗಾಗುತ್ತಾರೆ. ಮಾಂಸಹಾರದಿಂದ ಉಂಟಾಗುವ ಸಮಸ್ಯೆಗಳನ್ನು ಸಸ್ಯಹಾರ ಪರಿಹರಿಸುತ್ತದೆ. ದೈನಂದಿನ ಚಟುವಟಿಕೆಯಲ್ಲೂ ಹೆಚ್ಚು ಉತ್ಸಾಹವನ್ನು ನೀಡುತ್ತದೆ. ಬನ್ನಿ ನೀವು ಸಹ ಸಸ್ಯಹಾರಿಗಳಾಗಿ ಪರಿವರ್ತನೆಗೊಂಡರೆ ಯಾವೆಲ್ಲಾ ಆರೋಗ್ಯ ಸುಧಾರಣೆ ಆಗುತ್ತದೆ ಎನ್ನುವುದನ್ನು ತಿಳಿಯಿರಿ...

ತೂಕ ನಷ್ಟ

ತೂಕ ನಷ್ಟ

ಸಸ್ಯಹಾರಿಯಾಗಿ ಬದಲಾದರೆ ಅಲ್ಪಾವಧಿಯಲ್ಲಿಯೇ ತೂಕ ನಷ್ಟ ಆಗುವುದನ್ನು ಗಮನಿಸಬಹುದು. ಸಸ್ಯಗಳು ಕಡಿಮೆ ಪ್ರಮಾಣದ ಕ್ಯಾಲೋರಿಯನ್ನು ನೀಡುತ್ತದೆ. ಇವುಗಳ ಸೇವನೆಯಿಂದ ದೇಹದಲ್ಲಿ ಕೊಬ್ಬಿನಾಂಶವನ್ನು ಕರಗಿಸಿ ಆರೋಗ್ಯವಾಗಿರುವಂತೆ ಮಾಡುತ್ತದೆ.

ಶಕ್ತಿಯನ್ನು ಹೆಚ್ಚಿಸುವುದು

ಶಕ್ತಿಯನ್ನು ಹೆಚ್ಚಿಸುವುದು

ಸಸ್ಯಹಾರದಲ್ಲಿ ಕೃತಕ ಸಕ್ಕರೆ ಅಂಶ ಕಡಿಮೆ ಇರುತ್ತದೆ. ಆರೋಗ್ಯಕರ ನೈಸರ್ಗಿಕ ಸಕ್ಕರೆ ಅಂಶ ದೇಹಕ್ಕೆ ಸೇರುವಂತೆ ಮಾಡುತ್ತದೆ. ಇದನ್ನು ಸೇವಿಸುವುದರಿಂದ ದೇಹವು ಹೆಚ್ಚು ಕ್ರಿಯಾಶೀಲ ಮತ್ತು ಶಕ್ತಿಯಿಂದ ಕೂಡಿರುವಂತೆ ಮಾಡುತ್ತದೆ.

ಜಂಕ್ ಫುಡ್‍ಗಳ ಬಯಕೆ ಕುಗ್ಗುವುದು

ಜಂಕ್ ಫುಡ್‍ಗಳ ಬಯಕೆ ಕುಗ್ಗುವುದು

ಒಮ್ಮೆ ಸಸ್ಯಾಹಾರಿಗಳಾಗಿ ತಿರುಗಿದರೆ ನಿಮಗೆ ಜಂಕ್ ಫುಡ್‍ಗಳ ಬಯಕೆ ಕಡಿಮೆಯಾಗುವುದು. ಸಂಸ್ಕರಿತ ಆಹಾರಗಳು ದೇಹದ ಮೇಲೆ ಗಣನೀಯವಾಗಿ ದುಷ್ಪರಿಣಾಮ ಬೀರುತ್ತವೆ. ಅದೇ ಹಸಿ ತರಕಾರಿಗಳು ದಿನದಿಂದ ದಿನಕ್ಕೆ ಆರೋಗ್ಯ ವೃದ್ಧಿಯಾಗುತ್ತದೆ.

ಉತ್ತಮ ಜೀರ್ಣಕ್ರಿಯೆ

ಉತ್ತಮ ಜೀರ್ಣಕ್ರಿಯೆ

ಸಸ್ಯ ಆಧಾರಿತ ಆಹಾರಗಳು ಸಮೃದ್ಧವಾದ ನಾರಿನಂಶವನ್ನು ಹೊಂದಿರುತ್ತದೆ. ಇವು ಜೀರ್ಣಕ್ರಿಯೆಯನ್ನು ಶುಚಿಗೊಳಿಸಿ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ದೇಹವು ಹೆಚ್ಚು ಸಮೃದ್ಧವಾದ ಆರೋಗ್ಯವನ್ನು ಹೊಂದುತ್ತದೆ.

ವಿಷಕಾರಿ ಅಂಶ ಹೊರ ಹೋಗುವುದು

ವಿಷಕಾರಿ ಅಂಶ ಹೊರ ಹೋಗುವುದು

ಸಸ್ಯಹಾರ ಹಾಗೂ ಹಣ್ಣುಗಳ ಸೇವನೆಯಿಂದ ದೇಹದಲ್ಲಿ ಸೇರಿಕೊಂಡ ವಿಷಕಾರಿ ಅಂಶವು ದೇಹದಿಂದ ಹೊರಹೋಗುತ್ತವೆ. ಆಗಾಗ ಕಾಡುವ ತಲೆ ನೋವು, ವಾಕರಿಕೆ ಸೇರಿದಂತೆ ಇನ್ನಿತರ ಚಿಕ್ಕ-ಪುಟ್ಟ ಆರೋಗ್ಯ ಸಮಸ್ಯೆಯು ದೂರವಾಗುವುದು.

ಸೈನಸ್ ತೊಂದರೆಯಿಂದ ಮುಕ್ತಿ

ಸೈನಸ್ ತೊಂದರೆಯಿಂದ ಮುಕ್ತಿ

ಸಸ್ಯಾಹಾರ ಸೇವನೆಯಿಂದ ದೇಹದಲ್ಲಿ ಲ್ಯಾಕ್ಟೋಸ್ ಪ್ರಮಾಣ ಹೆಚ್ಚುವುದು. ಇದು ಸೈನಸ್‍ಗೆ ತೊಂದರೆ ಕಾರಣವಾಗುವ ಸಮಸ್ಯೆಗಳನ್ನು ಪರಿಹರಿಸುತ್ತದೆ. ಜೊತೆಗೆ ಉತ್ತಮ ಜೀರ್ಣ ಕ್ರಿಯೆಗೆ ಪ್ರೋತ್ಸಾಹ ನೀಡುತ್ತದೆ.

ಉತ್ತಮ ನಿದ್ರೆ

ಉತ್ತಮ ನಿದ್ರೆ

ಸಸ್ಯಾಹಾರದಲ್ಲಿ ಬಾಳೆಹಣ್ಣು, ಸಿಹಿ ಆಲೂಗಡ್ಡೆ, ಬಾದಾಮಿಗಳಂತಹ ಪೋಷಕಾಂಶಯುಕ್ತ ಆಹಾರವನ್ನು ಒಳಗೊಂಡಿರುವುದರಿಂದ ದೇಹವು ಆರೋಗ್ಯವಾಗಿರುತ್ತದೆ. ಜೊತೆಗೆ ರಾತ್ರಿ ಸೊಂಪಾದ ನಿದ್ರೆ ಬರುವಂತೆ ಪ್ರೋತ್ಸಾಹಿಸುತ್ತದೆ.

ದೊಡ್ಡ ಕರುಳಿನ ಕ್ಯಾನ್ಸರ್

ದೊಡ್ಡ ಕರುಳಿನ ಕ್ಯಾನ್ಸರ್

ತಾಜಾ ಹಣ್ಣುಗಳು, ತರಕಾರಿ ಮತ್ತು ಇಡೀ ಧಾನ್ಯಗಳನ್ನು ಒಳಗೊಂಡಿರುವ ಸಸ್ಯಹಾರವನ್ನು ಸೇವಿಸುವುದರಿಂದ ದೊಡ್ಡ ಕರುಳಿನ ಕ್ಯಾನ್ಸರ್ ಬರದಂತೆ ತಡೆಯಬಹುದು. ಸಸ್ಯಾಹಾರದಿಂದ ಉಂಟಾಗುವ ಉತ್ತಮ ಆರೋಗ್ಯದ ಪ್ರಯೋಜನಗಳಲ್ಲಿ ಇದು ಒಂದು.

English summary

See What Happens When You Go Vegan For A Week

There are several scientifically proven health benefits if you turn into a vegan that you can gain from. Some of the proven health benefits are increased energy, younger-looking skin and eternal youth, which are some of the view points that are as throw by the plant eaters. Plant-based living is the most sustainable way of feeding the human family. Here, we have listed all about going vegan and also the effects of what could happen due to it. So, read further to know more on what happens if you go vegan for a week.
X
Desktop Bottom Promotion