For Quick Alerts
ALLOW NOTIFICATIONS  
For Daily Alerts

ಉತ್ತಮ ಆರೋಗ್ಯಕ್ಕಾಗಿ ಆಹಾರದಲ್ಲಿರುವ ತಾಮ್ರದ ಮಹತ್ವ

By Arshad
|

ಉತ್ತಮ ಆರೋಗ್ಯಕ್ಕೆ ನಮ್ಮ ದೇಹಕ್ಕೆ ಹಲವು ಪೋಷಕಾಂಶಗಳು, ಲವಣಗಳು, ಖನಿಜಗಳು ಇತ್ಯಾದಿಗಳ ಅವಶ್ಯಕತೆಯಿದೆ. ಖನಿಜಗಳಲ್ಲಿ ಸೋಡಿಯಂ, ಪೊಟ್ಯಾಶಿಯಂ, ಕಬ್ಬಿಣ, ಸತು, ಸೆಲೆನಿಯಂ, ಮೆಗ್ನೇಶಿಯಂ, ತಾಮ್ರ ಇತ್ಯಾದಿ. ಆರೋಗ್ಯ ಸಂಸ್ಥೆಗಳು ನೀಡಿರುವ ಮಾಹಿತಿಯ ಪ್ರಕಾರ ವಯಸ್ಕರಿಗೆ ಪ್ರತಿದಿನ ಒಂಭೈನೂರು ಮೈಕ್ರೋಗ್ರಾಂ ತಾಮ್ರದ ಅವಶ್ಯಕತೆ ಇದೆ.

ನಮ್ಮ ಆರೋಗ್ಯದಲ್ಲಿ ತಾಮ್ರದ ಪಾತ್ರವೆಂದರೆ ಬ್ಯಾಕ್ಟ್ರೀರಿಯಾಗಳ ವಿರುದ್ದ ರೋಗ ನಿರೋಧಕ ವ್ಯವಸ್ಥೆಯನ್ನು ಸದಾ ಸುಸ್ಥಿತಿಯಲ್ಲಿಡುವುದು. ಅಲ್ಲದೇ ತೂಕ ಕಳೆದುಕೊಳ್ಳಲೂ ನೆರವಾಗುತ್ತದೆ. ಈ ತಾಮ್ರವನ್ನು ಪಡೆಯಲು ತಾಮ್ರದ ಪ್ರಮಾಣ ಹೆಚ್ಚಿರುವ ಆಹಾರ ಸೇವಿಸುವುದಕ್ಕಿಂತಲೂ ಉತ್ತಮ ಕ್ರಮವೆಂದರೆ ತಾಮ್ರದ ಪಾತ್ರೆಯಲ್ಲಿ ಶೇಖರಿಸಿದ ನೀರನ್ನು ದಿನಕ್ಕೆ ಎರಡು ಮೂರು ಲೋಟ ಕುಡಿಯುವುದು. ಉತಮ ಆರೋಗ್ಯಕ್ಕಾಗಿ ತಾಮ್ರದ ಮಹತ್ವವೇನು ಎಂಬುದನ್ನು ನೋಡೋಣ....

ತೂಕ ಕಳೆದುಕೊಳ್ಳಲು ಸಹಕರಿಸುತ್ತದೆ

ತೂಕ ಕಳೆದುಕೊಳ್ಳಲು ಸಹಕರಿಸುತ್ತದೆ

ಒಂದು ಸಂಶೋಧನೆಯಲ್ಲಿ ಕಂಡುಕೊಂಡ ಪ್ರಕಾರ ದೇಹದಲ್ಲಿರುವ ಕೊಬ್ಬನ್ನು ಬಳಸಿಕೊಳ್ಳಲು ತಾಮ್ರ ಮಹತ್ತರ ಪಾತ್ರ ವಹಿಸುತ್ತದೆ. ತನ್ಮೂಲಕ ತೂಕ ಕಳೆದುಕೊಳ್ಳಲು ಸಹಕರಿಸುತ್ತದೆ. ಅಲ್ಲದೇ ವಿಶೇಷವಾಗಿ phosphodiesterase 3 (PDE3) ಎಂಬ ಕಿಣ್ವದ ಪ್ರಭಾವವನ್ನು ಕಡಿಮೆ ಮಾಡುತ್ತದೆ. ಏಕೆಂದರೆ ಈ ಕಿಣ್ವ ಕೊಬ್ಬನ್ನು ಕರಗಿಸಲು ತಡೆ ಒಡ್ಡುತ್ತದೆ. ಕೊಬ್ಬು ಕರಗುವ ಮೂಲಕ ಜೀವರಾಸಾಯನಿಕ ಕ್ರಿಯೆಯೂ ಉತ್ತಮಗೊಳ್ಳುತ್ತದೆ ಹಾಗೂ ಅರೋಗ್ಯವೂ ವೃದ್ಧಿಸುತ್ತದೆ.

ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ

ಮೆದುಳಿನ ಕ್ಷಮತೆಯನ್ನು ಹೆಚ್ಚಿಸುತ್ತದೆ

ಗರ್ಭಾವಸ್ಥೆಯಲ್ಲಿ ಗರ್ಭಿಣಿಯ ದೇಹದಲ್ಲಿ ತಾಮ್ರದ ಕೊರತೆಯಾದರೆ ಶಿಶುವಿನ ಮೆದುಳಿನ ಬೆಳವಣಿಗೆ ಬಾಧೆಗೊಳ್ಳುತ್ತದೆ. ಪರಿಣಾಮವಾಗಿ ಹಲವು ನರಸಂಬಂಧಿ ತೊಂದರೆಗಳೂ, ರೋಗ ನಿರೋಧಕ ವ್ಯವಸ್ಥೆ ಕುಂಠಿತವಾಗುವುದು ಮೊದಲಾದ ತೊಂದರೆಗಳು ಹುಟ್ಟುವ ಮಗುವನ್ನು ಕಾಡುತ್ತವೆ. ಏಕೆಂದರೆ ಮಗುವಿನ ಮೆದುಳಿನ ಹೊರಕವಚ ಅಥವಾ ಮೈಯೆಲಿನ್ ಪದರ (myelin sheath)ದ ಬೆಳವಣಿಗೆಗೆ ಫಾಸ್ಪೋಲಿಪಿಡ್ಸ್ (phospholipids) ಅಥವಾ ಮೇದಸ್ಸಿನ ಸಂಘಟನೆ ತುಂಬಾ ಅಗತ್ಯವಾಗಿದ್ದು ಈ ಕಾರ್ಯದಲ್ಲಿ ತಾಮ್ರ ಮಹತ್ತರ ಪಾತ್ರ ವಹಿಸುತ್ತದೆ. ತಾಮ್ರದ ಕೊರತೆಯಿಂದ ಮೆದುಳು ಪೂರ್ಣ ಪ್ರಮಾಣದಲ್ಲಿ ಬೆಳೆಯದೇ ಹಲವು ತೊಂದರೆಗಳು ಎದುರಾಗುತ್ತವೆ.

ಮೆದುಳಿನ ಕ್ಷಮತೆಯನ್ನು ಹೆಚ್ಚಿಸಲು ಕೆಲವೊಂದು ನೈಸರ್ಗಿಕ ಟಿಪ್ಸ್

ಮೆದುಳಿನ ಕ್ಷಮತೆಯನ್ನು ಹೆಚ್ಚಿಸಲು ಕೆಲವೊಂದು ನೈಸರ್ಗಿಕ ಟಿಪ್ಸ್

ಬೆಣ್ಣೆ ಹಣ್ಣು (Avocado)

ಈ ಹಣ್ಣಿನ ತಿರುಳಿನಲ್ಲಿ ಅಸಂತುಲಿತ ಕೊಬ್ಬು ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಈ ಹಣ್ಣಿನ ಸೇವನೆಯಿಂದ ಮೆದುಳಿನ ಸವೆತನ್ನು ತಡೆಯಬಹುದು. ತಜ್ಞರ ಪ್ರಕಾರ ಒಂದು ವಾರದಲ್ಲಿ ಎರಡು ಅಥವಾ ಮೂರು ಲೋಟ ಬೆಣ್ಣೆಹಣ್ಣಿನ ತಿರುಳಿನ ಜ್ಯೂಸ್ ಕುಡಿಯುವ ಮೂಲಕ ಮೆದುಳಿನ ಕ್ಷಮತೆಯನ್ನು ಹೆಚ್ಚಿಸಬಹುದು.

ಕುಂಬಳ ಕಾಯಿಯ ಬೀಜಗಳು

ಕುಂಬಳ ಕಾಯಿಯ ಬೀಜಗಳು

ಕುಂಬಳ ಕಾಯಿಯ ಬೀಜಗಳನ್ನು ಒಣಗಿಸಿ ಸಿಪ್ಪೆ ಸುಲಿದ ತಿರುಳನ್ನು ಪರೀಕ್ಷಾ ಸಮಯದಲ್ಲಿ ಓದಿನ ನಡುವೆ ಪಡೆಯುವ ಪುಟ್ಟ ವಿರಾಮದಲ್ಲಿ ತಿನ್ನಲು ನೀಡುವ ಮೂಲಕ ಮೆದುಳಿನ ಕ್ಷಮತೆ ಹೆಚ್ಚಿಸಬಹುದು. ಇದರಲ್ಲಿರುವ ಸತು ಮೆದುಳಿನ ಕ್ಷಮತೆಯನ್ನು ಹೆಚ್ಚಿಸಲು ವಿಶೇಷ ಪಾತ್ರ ವಹಿಸುತ್ತದೆ. ಅಲ್ಲದೇ ಮೆದುಳಿನ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸಲೂ ನೆರವಾಗುತ್ತದೆ.

ಬ್ಯಾಕ್ಟೀರಿಯಾ, ಶಿಲೀಂಧ್ರ, ವೈರಸ್ಸುಗಳ ವಿರುದ್ಧ ಹೋರಾಡುತ್ತದೆ

ಬ್ಯಾಕ್ಟೀರಿಯಾ, ಶಿಲೀಂಧ್ರ, ವೈರಸ್ಸುಗಳ ವಿರುದ್ಧ ಹೋರಾಡುತ್ತದೆ

ತಾಮ್ರದಲ್ಲಿ biocidal property ಅಥವಾ ಕ್ರಿಮಿಗಳನ್ನು ಕರಗಿಸಿಕೊಂಡು ನಿಷ್ಟೇಷ್ಟಿತಗೊಳಿಸುವ ಶಕ್ತಿಯಿದೆ. ಅಂದರೆ ಬ್ಯಾಕ್ಟೀರಿಯಾ, ವೈರಸ್ಸು, ಶಿಲೀಂದ್ರ್ಹ ಮೊದಲಾದವು ದೇಹವನ್ನು ಬಾಧಿಸಿದಾಗ ತಾಮ್ರದ ಕಣಗಳು ಈ ಕ್ರಿಮಿಗಳ ಯಾವುದೋ ಒಂದು ಭಾಗಕ್ಕೆ ಅಂಟಿಕೊಂಡು ಅಥವಾ ಮಿಳಿತಗೊಂಡು ಅವುಗಳು ನಿಶ್ಚಲವಾಗುವಂತೆ ಮಾಡುತ್ತವೆ. ಶಕ್ತಿಗುಂದಿದ ಈ ಕ್ರಿಮಿಗಳನ್ನು ನಮ್ಮ ರಕ್ತದ ಬಿಳಿಕಣಗಳು ಆವರಿಸಿ ಕೊಲ್ಲುತ್ತವೆ. ತನ್ಮೂಲಕ ರೋಗ ನಿರೋಧಕ ವ್ಯವಸ್ಥೆಯನ್ನು ಹೆಚ್ಚು ಸಬಲಗೊಳಿಸುತ್ತದೆ. ವಿಶೇಷವಾಗಿ ಆಸ್ಪತ್ರೆಯಿಂದ ಹೊರಬಂದಾಗ, ವಿಷಕಾರಿ ಆಹಾರವನ್ನು ಸೇವಿಸಿದ ಬಳಿಕ, ತೇವಗೊಂಡಿದ್ದ ನೆಲದಲ್ಲಿ ಓಡಾಡಿದ ಬಳಿಕ ಕಾಲುಬೆರಳುಗಳಲ್ಲಿ ಉಂಟಾದ ಸೋಂಕು ಗಾಯಗಳನ್ನು ಶೀಘ್ರವಾಗಿ ಗುಣಪಡಿಸಲು ತಾಮ್ರ ಅವಶ್ಯವಾಗಿದೆ.

ರಕ್ತಹೀನತೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ

ರಕ್ತಹೀನತೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ

ನಮ್ಮ ದೇಹದಲ್ಲಿರುವ ಕಬ್ಬಿಣವನ್ನು ಹೀರಿಕೊಳ್ಳಬೇಕಾದರೆ ತಾಮ್ರ ಬೇಕೇ ಬೇಕು. ತಾಮ್ರ ಇಲ್ಲದಿದ್ದರೆ ಕಬ್ಬಿಣ ಹೀರಲ್ಪಡದೇ ವಿಸರ್ಜನೆಗೊಳ್ಳುತ್ತದೆ. ಇದರಿಂದ ರಕ್ತಹೀನತೆ ಎದುರಾಗುತ್ತದೆ. ಅಲ್ಲದೇ ತಾಮ್ರ ಹೊಸ ರಕ್ತಕಣಗಳ ಉತ್ಪತ್ತಿಗೆ ನೆರವಾಗುತ್ತದೆ ಹಾಗೂ ರಕ್ತದಲ್ಲಿ ಕಬ್ಬಿಣದ ಪ್ರಮಾಣ ಸಮತೋಲನದಲ್ಲಿರುವಂತೆ ನೋಡಿಕೊಳ್ಳುತ್ತದೆ. ರಕ್ತಹೀನತೆಯ ಸಮಸ್ಯೆ ಇರುವವರು ಸೇವಿಸಬೇಕಾದ ಆಹಾರಗಳು

ಹಸಿರು ಸೊಪ್ಪು, ಬಸಲೆ ಸೊಪ್ಪು, ಬೀನ್ಸ್ ಸೇವಿಸಿ

ಹಸಿರು ಸೊಪ್ಪು, ಬಸಲೆ ಸೊಪ್ಪು, ಬೀನ್ಸ್ ಸೇವಿಸಿ

ರಕ್ತಹೀನತೆಗೆ ಹಸಿರು ಸೊಪ್ಪುಗಳು ಹೇಳಿ ಮಾಡಿಸಿದ ಆಹಾರವಾಗಿದೆ. ಅದರಲ್ಲೂ ಬಸಲೆ ಸೊಪ್ಪು ಅತ್ಯಂತ ಸೂಕ್ತವಾದ ಆಹಾರ. ಇನ್ನುಳಿದಂತೆ ಪಾಲಕ್, ಹರಿವೆ ಸೊಪ್ಪು, ಬೀನ್ಸ್, ಒಣದ್ರಾಕ್ಷಿ, ಒಣ ಪೀಚ್ ಹಣ್ಣು, ಮೊಟ್ಟೆಯ ಹಳದಿ ಭಾಗ ಇತ್ಯಾದಿಗಳು ರಕ್ತಹೀನತೆಯನ್ನು ಸಾಕಷ್ಟು ಕಡಿಮೆಗೊಳಿಸುತ್ತವೆ.

ವಿಟಮಿನ್ ಬಿ12 ಹೆಚ್ಚಿರುವ ಆಹಾರ ಸೇವಿಸಿ

ವಿಟಮಿನ್ ಬಿ12 ಹೆಚ್ಚಿರುವ ಆಹಾರ ಸೇವಿಸಿ

ರಕ್ತಕಣಗಳ ಉತ್ಪಾದನೆಗೆ ಅಗತ್ಯವಿರುವ ಇನ್ನೊಂದು ಪೋಷಕಾಂಶವೆಂದರೆ ವಿಟಮಿನ್ ಬಿ12. ಮೀನು, ಮೊಟ್ಟೆಗಳು, ಡೈರಿ ಉತ್ಪನ್ನಗಳು ಮತ್ತು ಗೋವಿನ ಯಕೃತ್ ಗಳಲ್ಲಿ ಈ ಪೋಷಕಾಶಗಳು ಉತ್ತಮ ಪ್ರಮಾಣದಲ್ಲಿರುತ್ತವೆ.

ದಪ್ಪ ಎಲೆಗಳ ತರಕಾರಿಗಳನ್ನು ಸೇವಿಸಿ

ದಪ್ಪ ಎಲೆಗಳ ತರಕಾರಿಗಳನ್ನು ಸೇವಿಸಿ

ದಪ್ಪ ಎಲೆಗಳ ತರಕಾರಿಗಳನ್ನು ಸೇವಿಸುವುದರ ಅನುಕೂಲತೆಯೆಂದರೆ ಇವು ಹೊಟ್ಟೆಯನ್ನು ಸಾಕಷ್ಟು ತುಂಬಿಸುವ ಜೊತೆಗೇ ತೂಕ ಹೆಚ್ಚಳವಾಗದಂತೆ ನೋಡಿಕೊಳ್ಳುತ್ತದೆ ಹಾಗೂ ರಕ್ತದ ಕಣಗಳ ಉತ್ಪತ್ತಿಗೆ ಪೂರಕವಾದ ಕಬ್ಬಿಣ, ಪ್ರೋಟೀನುಗಳು, ವಿಟಮಿನ್ ಬಿ ಮತ್ತು ವಿಟಮಿನ್ ಸಿ ಸಹಾ ದೊರಕುತ್ತವೆ. ಇದರಿಂದ ಒಟ್ಟಾರೆ ಆರೋಗ್ಯವೂ ಉತ್ತಮಗೊಳ್ಳುತ್ತದೆ.

ಹೃದಯ ಸಂಬಂಧಿ ತೊಂದರೆಗಳಿಂದ ರಕ್ಷಿಸುತ್ತದೆ

ಹೃದಯ ಸಂಬಂಧಿ ತೊಂದರೆಗಳಿಂದ ರಕ್ಷಿಸುತ್ತದೆ

ದೇಹದಲ್ಲಿ ತಾಮ್ರದ ಕೊರತೆ ಇರುವವರಲ್ಲಿ ಸಾಮಾನ್ಯವಾಗಿ ಅಧಿಕ ರಕ್ತದೊತ್ತಡ ಕಂಡುಬರುತ್ತದೆ. ಇದರ ಪರಿಣಾಮವಾಗಿ ಹೃದಯಸಂಬಂಧಿ ತೊಂದರೆಗಳ ಸಾಧ್ಯತೆಯೂ ಹೆಚ್ಚುತ್ತದೆ. ವಿಶೇಷವಾಗಿ impaired oxidative defence ಅಥವಾ ರಕ್ತದಲ್ಲಿ ಬರುವ ವಿಷಕಾರಿ ವಸ್ತುಗಳನ್ನು ಅಥವಾ ಕಣಗಳನ್ನು ನಿಷ್ಪಲಗೊಳಿಸುವ ಕ್ಷಮತೆ ಕುಂಠಿತವಾಗುವ ಶಕ್ತಿ ಕಡಿಮೆಯಾಗುತ್ತದೆ.

ತಾಮ್ರ ಒಂದು ಉತ್ತಮ ಆಂಟಿ ಆಕ್ಸಿಡೆಂಟು ಆಗಿದ್ದು ಇದು ರಕ್ತದಲ್ಲಿ prostaglandins ಎಂಬ ಪೋಷಕಾಂಶದ ಉತ್ಪತ್ತಿಗೆ ನೆರವಾಗುತ್ತದೆ. ಈ ಪೋಷಕಾಂಶ ವಿಶೇಷವಾಗಿ ನರಗಳಿಗೆ ಒಂದು ವೇಳೆ ಘಾಸಿಯಾಗಿದ್ದರೆ, ಉರಿಯೂತ ಎದುರಾಗಿದ್ದರೆ ಅದನ್ನು ಸರಿಪಡಿಸಲು ನೆರವಾಗುತ್ತದೆ. ಪರಿಣಾಮವಾಗಿ ಹೃಯದ ಸಂಬಂಧಿ ತೊಂದರೆಗಳ ಸಾಧ್ಯತೆ ಕಡಿಮೆಯಾಗುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಯ ಉತ್ತಮ ಗುಣವೆಂದರೆ ದೇಹದ ವಿಷಕಾರಿ ವಸ್ತುಗಳನ್ನು ದೇಹದಿಂದ ಹೊರಹಾಕುವ ಸಾಮರ್ಥ್ಯ. ಇದರಿಂದ ರಕ್ತಕ್ಕೆ ಈ ಕೆಲಸಕ್ಕಾಗಿ ಹೆಚ್ಚಿನ ಒತ್ತಡದಿಂದ ರಕ್ತವನ್ನು ಕಳುಹಿಸುವ ಅಗತ್ಯ ತಲೆದೋರದೇ ಅಷ್ಟರ ಮಟ್ಟಿಗೆ ಒತ್ತಡದಿಂದ ದೂರವಾಗುತ್ತದೆ.ಅಲ್ಲದೇ ಒಂದು ವೇಳೆ ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಿದ್ದರೆ ಪ್ರತಿದಿನ ಬಿಟ್ಟು ದಿನ ರಾತ್ರಿ ಊಟದ ಬಳಿಕ ಕೆಲವು ಬೆಳ್ಳುಳ್ಳಿಯ ಎಸಳುಗಳನ್ನು ಹಸಿಯಾಗಿ ತಿನ್ನುವುದರಿಂದ ಕೊಲೆಸ್ಟ್ರಾಲ್ ಮಟ್ಟ ಆರೋಗ್ಯಕರ ಮಟ್ಟಕ್ಕೆ ಬರುತ್ತದೆ.

ಏಲಕ್ಕಿ

ಏಲಕ್ಕಿ

ಏಲಕ್ಕಿಯನ್ನು ಸಾಂಬಾರ ಪದಾರ್ಥಗಳ ರಾಣಿ ಎಂದು ಕರೆಯಲು ಕೇವಲ ಇದರ ಸುವಾಸನೆ ಮಾತ್ರ ಕಾರಣವಲ್ಲ, ಇದರ ಆರೋಗ್ಯಕರ ಗುಣಗಳೂ ಇದಕ್ಕೆ ಕಾರಣವಾಗಿವೆ. ಆಯುರ್ವೇದದಲ್ಲಿ ಹೃದಯಸಂಬಂಧಿ ತೊಂದರೆಗಳಿಗೆ ಏಲಕ್ಕಿಯನ್ನು ಬಳಸುವಂತೆ ಸಲಹೆ ಮಾಡಲಾಗಿದೆ.

ಕುಟುಂಬದ ಆರೋಗ್ಯಕ್ಕಾಗಿ ಮನೆಯಲ್ಲಿರಲಿ ಏಲಕ್ಕಿ ಮಾಲೆ
English summary

Reasons copper is important for your health

Like other minerals, namely iron, calcium and selenium, copper also has numerous health benefits. Here are five reasons you need copper for healthy living. Read on to know more.
Story first published: Thursday, October 12, 2017, 21:30 [IST]
X
Desktop Bottom Promotion