ಅಜೀರ್ಣ ಸಮಸ್ಯೆಯೇ? ತಿಂದ ಆಹಾರ ಕರಗುವುದಿಲ್ಲವೇ? ಹೀಗೆ ಮಾಡಿ...

By: Deepu
Subscribe to Boldsky

ಆಧುನಿಕ ಸೌಲಭ್ಯಗಳು ನಮ್ಮ ಜೀವನವನ್ನು ಸುಲಭಗೊಳಿಸಿತ್ತಿದ್ದಂತೆಯೇ ಇನ್ನೊಂದೆಡೆ ನಮ್ಮ ಶರೀರಗಳನ್ನು ಶಿಥಿಲವಾಗಿಸುತ್ತಿದೆ. ಹಿಂದೆ ಸೌಲಭ್ಯಗಳು ಕಡಿಮೆಯಿದ್ದಾಗ ದಿನನಿತ್ಯದ ಚಟುವಟಿಕೆಗಳ ಕಾರಣ ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗಿ ಆರೋಗ್ಯ ವೃದ್ಧಿಸುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ವ್ಯಾಯಾಮಕ್ಕೆಂದೇ ಹಣ ಕೊಟ್ಟು ಕೃತಕವಾಗಿ ದೇಹ ದಂಡಿಸುವಂತಾಗಿದೆ. ನೈಸರ್ಗಿಕ ಆಹಾರಗಳ ಬದಲಾಗಿ ಸಿದ್ಧ ಆಹಾರಗಳು ಮನೆ ತಲುಪುತ್ತಿವೆ. ಪರಿಣಾಮವಾಗಿ ಇತ್ತೀಚೆಗೆ ಹಲವಾರು ಜಡತ್ವದ ಕಾರಣದ ತೊಂದರೆಗಳು ಸಮಾಜವನ್ನು ಕಾಡುತ್ತಿದೆ.

ಸ್ಥೂಲಕಾಯ, ಹೆಚ್ಚಿನ ಹೃದಯದೊತ್ತಡ, ಶರೀರದಲ್ಲಿ ಕಸುವು ಇಲ್ಲದೇ ಇರುವುದು (ಅಂದರೆ ಕೊಂಚ ದೂರ ನಡೆದರೂ ಅತೀವ ಸುಸ್ತಾಗುವುದು), ಅಜೀರ್ಣ, ಚಿಕ್ಕ ವಯಸ್ಸಿನಲ್ಲಿಯೇ ವೃದ್ಧಾಪ್ಯದ ಕುರುಹುಗಳು ಮೊದಲಾದವು. ಇದರಲ್ಲಿ ಆಹಾರ ಸೇವನೆಯಲ್ಲಿ ಆಗುವ ಏರುಪೇರಿನ ಮೂಲಕ ಕಾಡುವ ಅಜೀರ್ಣ (dyspepsia) ಹೊಟ್ಟೆಯುಬ್ಬರ, ಹುಳಿತೇಗು, ಹೊಟ್ಟೆಯಲ್ಲಿ ಉರಿ, ಮಲಬದ್ಧತೆ, ವಾಯುಪ್ರಕೋಪ, ಕರುಳಿನಲ್ಲಿ ಹುಣ್ಣು (ಅಲ್ಸರ್) ಮೊದಲಾದವುಗಳಿಗೆ ಆಹ್ವಾನ ನೀಡುತ್ತದೆ.

ಇದಕ್ಕೆ ಪ್ರಧಾನವಾದ ಕಾರಣ ಸರಿಯಾಗಿ ನಾವು ನೀರು ಕುಡಿಯದೇ ಇರುವುದು. ಜಠರದಲ್ಲಿರುವ ಆಹಾರವನ್ನು ಜೀರ್ಣಿಸಲು ಅತಿ ಪ್ರಬಲವಾದ (ಆಮ್ಲೀಯ) ಜಠರರಸಕ್ಕೆ ನೀರು ಅಗತ್ಯವಿದೆ. ಒಂದು ವೇಳೆ ದಿನದ ವಿವಿಧ ಸಮಯದಲ್ಲಿ ಸುಮಾರು ಎಂಟು ಲೋಟ ನೀರು ಕುಡಿಯದೇ ಹೋದರೆ ಜಠರರಸ ಆಹಾರವನ್ನು ಪೂರ್ಣವಾಗಿ ಜೀರ್ಣಿಸಲು ಸಾಧ್ಯವಾಗದೇ ಅಜೀರ್ಣತೆ ಎದುರಾಗುತ್ತದೆ. ಒಳ್ಳೆಯ ಸುದ್ದಿಯೆಂದರೆ ಈ ತೊಂದರೆಗೆ ಆಯುರ್ವೇದದಲ್ಲಿ ಸೂಕ್ತ ಪರಿಹಾರವಿದೆ. ಅದರಲ್ಲೂ ಸರಿಸುಮಾರು ತೊಂಭತ್ತುಭಾಗದ ಪರಿಹಾರ ನಿಮ್ಮ ಅಡುಗೆ ಮನೆಯಲ್ಲಿರುವ ಸುಲಭ ಆಹಾರವಸ್ತುಗಳಿಂದಲೇ ಸಾಧ್ಯವಿದೆ.

ಅಜೀರ್ಣ ಸಮಸ್ಯೆಯೇ? ಇಲ್ಲಿದೆ ಸರಳ ಆಯುರ್ವೇದ ಔಷಧಿ

ಮೆಂತೆ, ಜೀರಿಗೆ, ಕೊತ್ತೊಂಬರಿ, ಕಾಳುಮೆಣಸು, ಇಂಗು ಮೊದಲಾದವು ಅಜೀರ್ಣತೆಯನ್ನು ಕಡಿಮೆಗೊಳಿಸುವುದು. ತರಕಾರಿಗಳಾದ ಹಸಿಮೆಣಸು, ಹಸಿಶುಂಠಿ, ಲಿಂಬೆ, ಪುದೀನಾ ಸೊಪ್ಪುಗಳನ್ನು ಗೊಟಾಯಿಸಿ ತಯಾರಿಸಿದ ಜ್ಯೂಸ್ ಸಹಾ ಉತ್ತಮ. ಶುಂಠಿಯ ಚಿಕ್ಕ ತುಂಡಿಗೆ ಕಪ್ಪು ಉಪ್ಪು ಮತ್ತು ಲಿಂಬೆರಸದ ಕೆಲವು ಹನಿಗಳನ್ನು ಚಿಮುಕಿಸಿ ಸೇವಿಸಿದರೆ ಹೊಟ್ಟೆಯುಬ್ಬರ ತಕ್ಷಣ ಕಡಿಮೆಯಾಗುತ್ತದೆ. ಮಜ್ಜಿಗೆ ನೀರಿಗೆ ಹುರಿದು ಪುಡಿಮಾಡಿದ ಜೀರಿಗೆ ಮತ್ತು ಕೊತ್ತಂಬರಿ ಪುಡಿಗಳನ್ನು ಸೇರಿಸಿ ಕುಡಿದರೂ ಹೊಟ್ಟೆಯುರಿ ಕಡಿಮೆಯಾಗುತ್ತದೆ. ಇಂತಹ ಇನ್ನೂ ಹಲವಾರು ಸುಲಭ ಪರಿಹಾರಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಮುಂದೆ ಓದಿ...   

ಮಜ್ಜಿಗೆ

ಮಜ್ಜಿಗೆ

ಮಜ್ಜಿಗೆಯಲ್ಲಿ ಮೊಸರು ಮುಖ್ಯವಾಗಿರುವ ಕಾರಣ ಮೊಸರಿನ ಗುಣಗಳೆಲ್ಲವೂ ಇದೆ. ಇದರಲ್ಲಿರುವ ಪ್ರೋಬಯೋಟಿಕ್ಸ್ ಅಥವಾ ಜೀರ್ಣಕ್ರಿಯೆಗೆ ಸಹಕರಿಸುವ ಪೋಷಕಾಂಶಗಳು ಜೀರ್ಣಾಂಗಗಳ ಹೊರೆಯನ್ನು ಕಡಿಮೆ ಮಾಡುತ್ತವೆ. ಅಲ್ಲದೇ ಮಜ್ಜಿಗೆಯಲ್ಲಿ ಸೇರಿಸಿರುವ ಜೀರಿಗೆ ಪುಡಿ ಮೊದಲಾದ ಮಸಾಲೆ ಪದಾರ್ಥಗಳು ಜೀರ್ಣಕ್ರಿಯೆಗೆ ಇನ್ನಷ್ಟು ಸಹಕರಿಸಿ ಜೀರ್ಣಕ್ರಿಯೆಯನ್ನು ಸುಲಭ ಮತ್ತು ಪರಿಪೂರ್ಣಗೊಳಿಸುತ್ತವೆ. ಅಲ್ಲದೇ ಬೆಳ್ಳುಳ್ಳಿ ಮೊದಲಾದವು ಕರುಳಿನ ತೊಂದರೆಗಳನ್ನು

ನಿವಾರಿಸುತ್ತದೆ. ಒಟ್ಟಾರೆ ಜೀರ್ಣವ್ಯವಸ್ಥೆಯನ್ನು ಸುಲಭಗೊಳಿಸುತ್ತದೆ.

ಕೊತ್ತಂಬರಿ ಕಾಳುಗಳು

ಕೊತ್ತಂಬರಿ ಕಾಳುಗಳು

ಒಂದು ಹಿಡಿಯಷ್ಟು ಧನಿಯ (ಕೊತ್ತಂಬರಿ) ಕಾಳುಗಳನ್ನು ದಪ್ಪತಳದ ಬಾಣಲೆಯಲ್ಲಿ ಚಿಕ್ಕ ಉರಿಯಲ್ಲಿ ಹುರಿಯಿರಿ. ಸ್ವಲ್ಪ ಕೆಂಪಗಾಗುತ್ತಲೇ ಬಾಣಲೆಯಿಂದ ಒಂದು ತಟ್ಟೆಯಲ್ಲಿ ಹರಡಿ. ಇದನ್ನು ಕೊಂಚ ಜಜ್ಜಿ (ಎರಡು ಬಟ್ಟೆಗಳ ನಡುವೆ ಇರಿಸಿ ಲಟ್ಟಣಿಗೆಯಿಂದ ಲಟ್ಟಿಸಿ) ಒಂದು ಗಾಳಿಯಾಡದ ಬಾಟಲಿಯಲ್ಲಿ ಸಂಗ್ರಹಿಸಿ. ಊಟವಾದ ಬಳಿಕ ಮಜ್ಜಿಗೆಯಲ್ಲಿ ಈ ಪುಡಿಯನ್ನು ಸೇರಿಸಿ (ಒಂದು ಲೋಟಕ್ಕೆ ಒಂದು ಚಿಕ್ಕ ಚಮಚ) ಕುಡಿದರೆ ಹೊಟ್ಟೆಯುರಿ, ಉಬ್ಬರ ಕಡಿಮೆಯಾಗುತ್ತದೆ. ಹೊಟ್ಟೆಯುಬ್ಬರ ಮತ್ತು ಉರಿ ಜಾಸ್ತಿ ಇದ್ದರೆ ಕೆಲವು ಏಲಕ್ಕಿ, ಲವಂಗ ಮತ್ತು ಹಸಿಶುಂಠಿಯ ಚಿಕ್ಕ ತುಂಡುಗಳನ್ನು ಸೇರಿಸಿ ನಯವಾಗಿ ಅರೆದು ಮಜ್ಜಿಗೆಗೆ ಸೇರಿಸಿ ಕುಡಿಯಿರಿ.(ಇದು ಮಧ್ಯಾಹ್ನ ಮತ್ತು ರಾತ್ರಿ ಊಟದ ಬಳಿಕ ಮಾತ್ರ, ಬೆಳಗ್ಗಿನ ಹೊತ್ತಿಗೆ ಉತ್ತಮವಲ್ಲ)

ಊಟದ ನಂತರ ಬಿಸಿ ನೀರು ಸೇವಿಸಿ

ಊಟದ ನಂತರ ಬಿಸಿ ನೀರು ಸೇವಿಸಿ

ಊಟದ ನಂತರ ಬೆಚ್ಚಗಿನ ನೀರನ್ನು ಕುಡಿಯುವ ಹವ್ಯಾಸ ಬೆಳೆಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ತಿಂದ ಆಹಾರವನ್ನು ತ್ವರಿತವಾಗಿ ಹೀರಿಕೊಂಡು ಜೀರ್ಣ ಕ್ರಿಯೆಗೆ ಸಹಾಯ ಮಾಡುವುದು.

ಜೇನು ಮತ್ತು ಲಿಂಬೆರಸ

ಜೇನು ಮತ್ತು ಲಿಂಬೆರಸ

ಒಂದು ಲೋಟ ಕುದಿದು ಅರ್ಧ ತಣಿದಿರುವ ನೀರಿನಲ್ಲಿ ಅರ್ಧ ಟೀ ಚಮಚ ಜೇನು ಮತ್ತೊ ದೊಡ್ಡ ಲಿಂಬೆಯಾದರೆ ಅರ್ಧ ಭಾಗ (ಪುಟಾಣಿ ಲಿಂಬೆಯಾದರೆ ಇಡೀ ಒಂದು) ರಸ ಹಿಂಡಿ ಕಲಕಿ. ಈ ನೀರನ್ನು ಖಾಲಿಹೊಟ್ಟೆಯಲ್ಲಿ ಸೇವಿಸಬೇಕು. ಅಂದರೆ ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೂ ಅರ್ಧಗಂಟೆ ಮೊದಲು ಸೇವಿಸಿದರೆ ಬಳಿಕ ಸೇವಿಸುವ ಆಹಾರದಿಂದ ಅಜೀರ್ಣವಾಗುವ ಸಂಭವ ತಪ್ಪುತ್ತದೆ.

ಫಾಸ್ಟ್ ಫುಡ್ ನಿಂದ ದೂರವಿರಿ

ಫಾಸ್ಟ್ ಫುಡ್ ನಿಂದ ದೂರವಿರಿ

ಸಾಮಾನ್ಯವಾಗಿ ಫಾಸ್ಟ್ ಫುಡ್‌ನಲ್ಲಿ ಬೊಜ್ಜಿನಂಶವಿರುವ ಆಹಾರದಿಂದ ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಳ್ಳುತ್ತದೆ. ಹೊಟ್ಟೆಯಲ್ಲಿ ಸೇರಿಕೊಳ್ಳುವ ಎಣ್ಣೆ ಗ್ಯಾಸ್ ಉತ್ಪತ್ತಿ ಮಾಡಿ ತೇಗು ಉಂಟಾಗಿ ಅಜೀರ್ಣತೆಯಿಂದ ಬಳಲುವಂತಾಗುತ್ತದೆ. ಆದ್ದರಿಂದ ಫಾಸ್ಟ್ ಫುಡ್ ಗಳಾದ ಬರ್ಗರ್, ಫ್ರೆಂಚ್ ಫ್ರೈ, ಆಲೂ ಚಿಪ್ಸ್, ಪಕೋಡಾ, ಬೆಣ್ಣೆ, ಹುರಿದ ಮಾಂಸ ಇವುಗಳಿಂದ ದೂರವಿರುವುದು ಒಳಿತು.

ಕೊತ್ತಂಬರಿ ಬೀಜ ಮತ್ತು ಒಣಶುಂಠಿ

ಕೊತ್ತಂಬರಿ ಬೀಜ ಮತ್ತು ಒಣಶುಂಠಿ

ಒಂದು ದೊಡ್ಡ ಚಮಚದಷ್ಟು ಕೊತ್ತಂಬರಿ ಬೀಜ ಮತ್ತು ಅವರೆಕಾಳಿನಷ್ಟು ಗಾತ್ರದ ಒಣಶುಂಠಿ ಸ್ವಲ್ಪ ಜಜ್ಜಿ ಎರಡು ಬಟ್ಟಲು ನೀರಿಗೆ ಹಾಕಿ ಚೆನ್ನಾಗಿ ಕುದಿಸಿ, ಕಷಾಯ ಶೋಧಿಸಿ, ಜೇನುತುಪ್ಪ ಸೇರಿಸಿ ಸೇವಿಸಿ. ಮೇಲಿನ ಕಷಾಯಕ್ಕೆ ಜೇನುತುಪ್ಪ ಬದಲು ಕಲ್ಲು ಸಕ್ಕರೆ ಬಳಸಬಹುದು, ಸಕ್ಕರೆ ಬಳಕೆ ಬೇಡ. ಕೊತ್ತಂಬರಿ ಬೀಜ ಪುಡಿಮಾಡಿಟ್ಟುಕೊಂಡರೆ ತಕ್ಷಣಕ್ಕೆ ಕಷಾಯ ತಯಾರಿಸಲು ಅನುಕೂಲವಾಗುತ್ತದೆ.

ಯಾವಾಗಲೂ ಕುಳಿತು ಆಹಾರ ತಿನ್ನಿ

ಯಾವಾಗಲೂ ಕುಳಿತು ಆಹಾರ ತಿನ್ನಿ

ನೀವು ಹೇಗೆ ತಿನ್ನುತ್ತೀರಿ ಎಂಬುದು ಕೂಡ ಜೀರ್ಣ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ ಆದ್ದರಿಂದ ಸದಾ ಕುಳಿತು ಆರಾಮವಾಗಿ ನಿಮ್ಮ ಊಟವನ್ನು ಆನಂದಿಸಿ.ನಾವು ಕುಳಿತು ತಿಂದಾಗ ನಮ್ಮ ಹೊಟ್ಟೆ ಆರಾಮದಾಯಕ ಭಂಗಿಯಲ್ಲಿರುತ್ತದೆ ಮತ್ತು ಇದರಿಂದ ಜೀರ್ಣಕ್ರಿಯೆ ಹೆಚ್ಚುತ್ತದೆ.

 ಅಗೆದು ತಿನ್ನುವುದು ನಿಮ್ಮ ಮಂತ್ರವಾಗಿರಲಿ

ಅಗೆದು ತಿನ್ನುವುದು ನಿಮ್ಮ ಮಂತ್ರವಾಗಿರಲಿ

ಸಣ್ಣ ತುತ್ತು ತೆಗೆದುಕೊಂಡು ಚೆನ್ನಾಗಿ ಅಗೆದು ತಿನ್ನುವುದು ನಿಮ್ಮ ಮಂತ್ರವಾಗಿರಬೇಕು.ಈ ತಂತ್ರವನ್ನು ಅಳವಡಿಸಿಕೊಂಡಲ್ಲಿ ನಿಮ್ಮ ಬಾಯಿಯಲ್ಲಿ ಕಾರ್ಬೋಹೈಡ್ರೇಟ್ಸ್ ರಚಿಸಲು ಸಹಾಯ ಮತ್ತು ಎಮಿಲೇಸ್ ಉತ್ಪಾದನೆಗೆ ಅನುವು ಮಾಡುತ್ತದೆ - ಸರಿಯಾದ ರೀತಿಯಲ್ಲಿ ಜೀರ್ಣಕ್ರಿಯೆ ಹೆಚ್ಚಿಸುತ್ತದೆ.

 ಸಾಕಷ್ಟು ನೀರು ಕುಡಿಯಿರಿ

ಸಾಕಷ್ಟು ನೀರು ಕುಡಿಯಿರಿ

ಅಜೀರ್ಣ ಸಮಸ್ಯೆಗೆ ಇದು ಉತ್ತಮ ಪರಿಹಾರ.ಪ್ರತಿದಿನ 8-10 ಲೋಟ ನೀರು ಕುಡಿಯಿರಿ ಇದು ನಿಮ್ಮ ದೇಹವನ್ನು ಕ್ಲೀನ್ ಮಾಡುತ್ತದೆ ಮತ್ತು ಅಜೀರ್ಣವಾಗದಂತೆ ನೋಡಿಕೊಳ್ಳುತ್ತದೆ.

ಲೆಮನ್ ಜ್ಯೂಸ್ ಕುಡಿಯಿರಿ

ಲೆಮನ್ ಜ್ಯೂಸ್ ಕುಡಿಯಿರಿ

ಮುಂಜಾನೆ ಬಿಸಿ ನೀರನ್ನು ಕುಡಿಯಲು ಇಷ್ಟವಾಗದಿದ್ದಲ್ಲಿ ಅದಕ್ಕೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿ ಕುಡಿಯಿರಿ.ಪ್ರತಿ ದಿನ ಇದನ್ನು ಮಾಡಿದರೆ ಇದು ನಿಮ್ಮ ದೇಹವನ್ನು ಕ್ಲೀನ್ ಮಾಡುವುದರ ಜೊತೆಗೆ ದೇಹದಲ್ಲಿರುವ ಹೆಚ್ಚಿನ ಆಮ್ಲವನ್ನು ತೆಗೆಯುತ್ತದೆ.

ನಾರಿನಂಶ ಇರುವ ಆಹಾರ ಹೆಚ್ಚು ಬಳಸಿ

ನಾರಿನಂಶ ಇರುವ ಆಹಾರ ಹೆಚ್ಚು ಬಳಸಿ

ನಾರಿನಂಶ ಹೆಚ್ಚಿರುವ ಚೆರ್ರಿ,ದ್ರಾಕ್ಷಿ,ದೊಣ್ಣೆ ಮೆಣಸು,ಧಾನ್ಯಗಳು ಮತ್ತು ನಟ್ಸ್ ಗಳನ್ನು ಹೆಚ್ಚು ತಿನ್ನಿ.ಈ ಆಹಾರಗಳು ಜೀರ್ಣಕ್ರಿಯೆ ಸುಲಭವಾಗಿಸಲು ಸಹಾಯಮಾಡುತ್ತವೆ.

ಕೊಬ್ಬಿನಂಶ ಹೆಚ್ಚಿರುವ ಆಹಾರದಿಂದ ದೂರವಿರಿ

ಕೊಬ್ಬಿನಂಶ ಹೆಚ್ಚಿರುವ ಆಹಾರದಿಂದ ದೂರವಿರಿ

ಕೊಬ್ಬಿನಂಶ ಹೆಚ್ಚಿರುವ ಆಹಾರಗಳು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಆದ್ದರಿಂದ ಆ ರೀತಿಯ ಆಹಾರ ತೆಗೆದುಕೊಂಡರೆ ಅಜೀರ್ಣ ತೊಂದರೆ ಪ್ರಾರಂಭವಾಗುತ್ತದೆ.ಕೊಬ್ಬಿನ ಆಹಾರಗಳು ದೇಹಕ್ಕೆ ಅಗತ್ಯ ಕೂಡ ಆದ್ದರಿಂದ ಸಂಪೂರ್ಣವಾಗಿ ಬಿಟ್ಟು ಬಿಡಬೇಡಿ.ಬೇರೆ ಆರೋಗ್ಯಯುತ ಆಹಾರದೊಂದಿಗೆ ಇದನ್ನು ಸೇರಿಸಿ ಸೇವಿಸಿದಲ್ಲ್ಲಿ ಯಾವುದೇ ತೊಂದರೆ ಇಲ್ಲ.

ಭೋಜನದ ನಂತರ ವಿಶ್ರಾಂತಿ

ಭೋಜನದ ನಂತರ ವಿಶ್ರಾಂತಿ

ಊಟವಾದ ನಂತರ ಒಂದೇ ಸಮನೆ ಕೆಲಸದಲ್ಲಿ ನಿರತರಾಗಬಾರದು. ಇದರಿಂದ ರಕ್ತ ಪರಿಚಲನೆಯಲ್ಲಿ ವ್ಯತ್ಯಾಸ ಉಂಟಾಗುವುದು. ಊಟದ ನಂತರ ಸ್ವಲ್ಪ ವಿಶ್ರಾಂತಿ ಪಡೆದರೆ ಆಹಾರ ಜೀರ್ಣವಾಗುವುದು. ಜೀರ್ಣಾಂಗ ವ್ಯವಸ್ಥೆಯಲ್ಲೂ ಸುಗಮವಾಗಿ ಕೆಲಸ ನಡೆಯುವುದು.

English summary

Proven Home Remedies to Get Rid of Indigestion Naturally

There are various over the counter medicines which can hep your relieve indigestion and pain but it is not beneficial for long-run. You can easily get relief from indigestion with simple and effective home remedies. You must keep an eye on what kind of food you are eating. After remedies, take a look at what food to eat and what not to eat.
Story first published: Thursday, November 9, 2017, 23:45 [IST]
Subscribe Newsletter