For Quick Alerts
ALLOW NOTIFICATIONS  
For Daily Alerts

ಆರೋಗ್ಯ ಟಿಪ್ಸ್: ನುಗ್ಗೆ ಎಲೆಗಳ ಹತ್ತು ಅದ್ಭುತ ಆರೋಗ್ಯಕರ ಪ್ರಯೋಜನಗಳು,

By Arshad
|

ನುಗ್ಗೆ ಎಲೆಗಳನ್ನು (Moringa leaves) ಹಲವಾರು ಬಗೆಯ ಅಡುಗೆಗಳಲ್ಲಿ ಬಳಸಲಾಗುತ್ತದೆ. ಈ ಎಲೆಗಳಲ್ಲಿ ಅಮೂಲ್ಯ ಖನಿಜಗಳು, ವಿಟಮಿನ್ನುಗಳು ಹಾಗೂ ಪ್ರೋಟೀನುಗಳೂ ಇವೆ. ಸಾಮಾನ್ಯವಾಗಿ ಈ ಎಲೆಗಳನ್ನು ದಾಲ್, ಸಾಂಬಾರ್ ಅಥವಾ ಕೆಲವು ಸೂಪ್‌ಗಳಲ್ಲಿ ಬಳಸಲಾಗುತ್ತದೆ. ಆದರೆ ಈ ಎಲೆಗಳ ಸೇವನೆಯಿಂದ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಇದರ ಸೇವನೆಯಿಂದ ಹೆಚ್ಚಿನ ಶಕ್ತಿ ದೊರಕುವುದು ಮಾತ್ರವಲ್ಲ, ಅಮೂಲ್ಯ ಪೋಷಕಾಂಶಗಳೂ ಲಭ್ಯವಾಗುತ್ತವೆ.

ಮಧುಮೇಹವನ್ನು ನಿಯಂತ್ರಿಸುವ ಪವರ್ 'ನುಗ್ಗೆ ಸೊಪ್ಪಿನಲ್ಲಿದೆ'

ನೂರಾರು ವರ್ಷಗಳಿಂದ ನುಗ್ಗೆ ಎಲೆಗಳನ್ನು ಆಹಾರದ ಹೊರತಾಗಿ ಕೆಲವಾರು ರೋಗಗಳಿಗೆ ಔಷಧಿಯ ರೂಪದಲ್ಲಿಯೂ ಬಳಸಲ್ಪಡುತ್ತಾ ಬರಲಾಗಿದೆ. ಇರರ ಪೋಷಕಾಂಶಗಳ ಪಟ್ಟಿಯಲ್ಲಿ ಪ್ರಮುಖವಾಗಿ ವಿಟಮಿನ್ನು ಹಾಗೂ ಪ್ರೋಟೀನುಗಳಿವೆ. ವಿಟಮಿನ್ ಎ, ಸಿ, ಬಿ6, ಪೊಟ್ಯಾಶಿಯಂ, ಪೋಲೇಟ್, ಕ್ಯಾಲ್ಸಿಯಂ, ಮ್ಯಾಂಗನೀಸ್, ಗಂಧಕ ಮೊದಲಾದವು ಉತ್ತಮ ಪ್ರಮಾಣದಲ್ಲಿರುವ ಕಾರಣ ಇದೊಂದು ಪರಿಪೂರ್ಣ ಆಹಾರವೆನ್ನ ಬಹುದು. ಒಂದು ವೇಳೆ ನುಗ್ಗೆ ಎಲೆಗಳ ಬಗ್ಗೆ ಇದುವರೆಗೆ ನಿಮಗೆ ತಿಳಿದೇ ಇಲ್ಲದಿದ್ದರೆ ಮುಂದಿನ ಬಾರಿ ಮಾರುಕಟ್ಟೆಗೆ ಹೋದಾಗ ನುಗ್ಗೆ ಎಲೆಗಳನ್ನು ಮರೆಯದೇ ತನ್ನಿ. ಈ ಎಲೆಗಳ ನಿಯಮಿತ ಸೇವನೆಯಿಂದ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ನೋಡೋಣ...

ತೂಕ ಇಳಿಯಲು ನೆರವಾಗುತ್ತದೆ

ತೂಕ ಇಳಿಯಲು ನೆರವಾಗುತ್ತದೆ

ಈ ಎಲೆಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ಕರಗದ ನಾರು ಇದೆ. ಹಾಗೂ ಕ್ಲೋರೋಜೆನಿಕ್ ಆಮ್ಲ ಎಂಬ ಆಂಟಿ ಆಕ್ಸಿಡೆಂಟು ಇದ್ದು ಇದನ್ನು ಜೀರ್ಣಿಸಿಕೊಳ್ಳಲು ಹೆಚ್ಚಿನ ಕೊಬ್ಬನ್ನು ದೇಹ ಬಳಸಿಕೊಳ್ಳಬೇಕಾಗಿ ಬರುತ್ತದೆ. ಅಲ್ಲದೇ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನೂ ಕಡಿಮೆಗೊಳಿಸಿ ತೂಕ ಇಳಿಯಲು ನೆರವಾಗುತ್ತದೆ.

ಮೊಡವೆಗಳನ್ನು ಮಾಯವಾಗಿಸಲು ನೆರವಾಗುತ್ತದೆ

ಮೊಡವೆಗಳನ್ನು ಮಾಯವಾಗಿಸಲು ನೆರವಾಗುತ್ತದೆ

ಇದರಲ್ಲಿರುವ ಪೋಷಕಾಂಶಗಳು ಚರ್ಮದ ಬುಡದಿಂದ ಪೋಷಣೆ ನೀಡುವ ಕಾರಣ ಚರ್ಮದ ಅಡಿಯಲ್ಲಿ ಕೀವು ತುಂಬಿಕೊಳ್ಳುವುದರಿಂದ ರಕ್ಷಣೆ ದೊರಕಿದಂತಾಗುತ್ತದೆ. ಅಲ್ಲದೇ ಚರ್ಮದ ಸೂಕ್ಷ್ಮರಂಧ್ರಗಳ ಮೂಲಕ ಕಲ್ಮಶಗಳನ್ನು ನಿವಾರಿಸಿ ಕಾಂತಿಯುಕ್ತ ಹಾಗೂ ಆರೋಗ್ಯಕರ ತ್ವಚೆ ಪಡೆಯಲು ನೆರವಾಗುತ್ತದೆ.

ತಕ್ಷಣವೇ ಹೆಚ್ಚಿನ ಶಕ್ತಿಯನ್ನು ಒದಗಿಸುತ್ತದೆ

ತಕ್ಷಣವೇ ಹೆಚ್ಚಿನ ಶಕ್ತಿಯನ್ನು ಒದಗಿಸುತ್ತದೆ

ಈ ಎಲೆಗಳಲ್ಲಿ ಉತ್ತಮ ಪ್ರಮಾಣದ ಪೋಷಕಾಂಶಗಳಿರುವ ಕಾರಣ ಸೇವನೆಯ ಅನತಿಹೊತ್ತಿನಲ್ಲಿಯೇ ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ಒದಗಿಸುತ್ತದೆ. ಇದರಲ್ಲಿರುವ ಹೆಚ್ಚಿನ ಪ್ರಮಾಣದ ಕಬ್ಬಿಣ ಹಾಗೂ ಮೆಗ್ನೀಶಿಯಂ ಇದಕ್ಕೆ ಕಾರಣ. ಪರಿಣಾಮವಾಗಿ ಸುಸ್ತು ಮತ್ತು ಬಳಲಿಕೆಯಿಂದ ಶೀಘ್ರವೇ ಹೊರಬರಲು ಸಾಧ್ಯವಾಗುತ್ತದೆ.

ನಿದ್ರಾರಾಹಿತ್ಯದಿಂದ ರಕ್ಷಿಸುತ್ತದೆ

ನಿದ್ರಾರಾಹಿತ್ಯದಿಂದ ರಕ್ಷಿಸುತ್ತದೆ

ಈ ಎಲೆಗಳಲ್ಲಿ ಸುಮಾರು ಹದಿನೆಂಟು ಬಗೆಯ ಅಮೈನೋ ಆಮ್ಲಗಳಿದ್ದು ಇವು ದೇಹದ ಜೀವರಾಸಾಯನಿಕ ಕ್ರಿಯೆಯ ಮೂಲಾಧಾರವಾಗಿವೆ. ವಿಶೇಷವಾಗಿ ಟ್ರಿಫ್ಟೋಫ್ಯಾನ್ ಎಂಬ ಅಮೈನೋ ಆಮ್ಲ ನಮ್ಮ ನಿದ್ದೆಯ ಆವರ್ತನವನ್ನು ನಿಯಂತ್ರಿಸಲು ನೆರವಾಗುತ್ತದೆ. ಅಲ್ಲದೇ ನಮ್ಮ ಮೆದುಳಿಗೆ ಮುದನೀಡುವ ರಸದೂತಗಳನ್ನು ಹೆಚ್ಚು ಸ್ರವಿಸಲು ನೆರವಾಗುವ ಮೂಲಕ ಗಾಢನಿದ್ದೆ ಪಡೆಯಲು ನೆರವಾಗುತ್ತದೆ.

ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿವೆ

ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿವೆ

ಈ ಎಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಆಂಟಿ ಆಕ್ಸಿಡೆಂಟುಗಳು ನಮ್ಮ ದೇಹದ ಜೀವಕೋಶಗಳನ್ನು ಸುಸ್ಥಿತಿಯಲ್ಲಿರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಒಟ್ಟಾರೆಯಾಗಿ ಸುಮಾರು ಮೂವತ್ತು ಬಗೆಯ ಆಂಟಿ ಆಕ್ಸಿಡೆಂಟುಗಳಿದ್ದು ಇವುಗಳು ಕರುಳು ಕ್ಯಾನ್ಸರ್ ನ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಹಾಗೂ ಆರೋಗ್ಯಕರ ತ್ವಚೆಯ ಮೂಲಕ ವೃದ್ಧಾಪ್ಯ ಆವರಿಸುವುದೂ ತಡವಾಗುತ್ತದೆ.

ಮಧುಮೇಹದ ಸಾಧ್ಯತೆ ಕಡಿಮೆಗೊಳಿಸುತ್ತದೆ

ಮಧುಮೇಹದ ಸಾಧ್ಯತೆ ಕಡಿಮೆಗೊಳಿಸುತ್ತದೆ

ಮಧುಮೇಹದ ಸೇವನೆಯಿಂದ ಮಧುಮೇಹದ ಸಾಧ್ಯತೆ ಕಡಿಮೆಯಾಗುತ್ತದೆ. ಇದಕ್ಕೆ ಇದರಲ್ಲಿರುವ ಆಸ್ಕಾರ್ಬಿಕ್ ಆಮ್ಲ ಕಾರಣವಾಗಿದ್ದು ಇದು ದೇಹದಲ್ಲಿ ಹೆಚ್ಚು ಇನ್ಸುಲಿನ್ ಸ್ರವಿಸಲು ನೆರವಾಗುವ ಮೂಲಕ ಮಧುಮೇಹ ಆವರಿಸುವ ಸಾಧ್ಯತೆ ಕಡಿಮೆಯಾಗುತ್ತದೆ.

ಉರಿಯೂತ ನಿವಾರಕ ಗುಣಗಳು

ಉರಿಯೂತ ನಿವಾರಕ ಗುಣಗಳು

ಈ ಎಲೆಗಳಲ್ಲಿ ಉರಿಯೂತ ನಿವಾರಕ ಹಾಗೂ ಗುಣಪಡಿಸುವ ಗುಣಗಳಿದ್ದು ಚಿಕ್ಕ ಪುಟ್ಟ ಗಾಯ, ಸುಟ್ಟ ಗಾಯ, ಜಜ್ಜಿದ ಭಾಗಗಳನ್ನು ಶೀಘ್ರವಾಗಿ ಗುಣಪಡಿಸುವುದರೊಂದಿಗೇ ದೇಹದಲ್ಲಿ ಎದುರಾಗುವ ಸೋಂಕುಗಳಿಂದಲೂ ರಕ್ಷಣೆ ಒದಗಿಸುತ್ತದೆ.

ದೇಹದಿಂದ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ

ದೇಹದಿಂದ ಕಲ್ಮಶಗಳನ್ನು ಹೊರಹಾಕಲು ನೆರವಾಗುತ್ತದೆ

ನಿಮ್ಮ ನಿತ್ಯದ ಆಹಾರದಲ್ಲಿ ನುಗ್ಗೆಸೊಪ್ಪನ್ನು ಅಳವಡಿಸಿಕೊಳ್ಳುವ ಮೂಲಕ ದೇಹದಿಂದ ಕಲ್ಮಶಗಳು ಹೊರಹಾಕಲು ನೆರವಾಗುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕರಗದ ನಾರು ಕಲ್ಮಶಗಳನ್ನು ಶೀಘ್ರವಾಗಿ ಹೊರಹಾಕಲು ಹಾಗೂ ಈ ಮೂಲಕ ಎದುರಾಗಬಹುದಾಗಿದ್ದ ತೊಂದರೆಗಳಿಂದ ರಕ್ಷಿಸುತ್ತದೆ.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಈ ಎಲೆಗಳಲ್ಲಿರುವ ಕರಗದ ನಾರಿನ ಕಾರಣದಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ನಮ್ಮ ಜೀರ್ಣಾಂಗಗಳಿಗೆ ಸುಲಭವಾಗುತ್ತದೆ. ಪರಿಣಾಮವಾಗಿ ಜೀರ್ಣಕ್ರಿಯೆ ಶೀಘ್ರವಾಗಿ ಪೂರ್ಣಗೊಳ್ಳುತ್ತದೆ ಹಾಗೂ ಮಲಬದ್ಧತೆಯಾಗದಂತೆ ತಡೆಯುತ್ತದೆ. ತನ್ಮೂಲಕ ಹೊಟ್ಟೆಯ ತೊಂದರೆಗಳಿಂದ ರಕ್ಷಣೆ ನೀಡುತ್ತದೆ.

ಮೆದುಳನ್ನು ಆರೋಗ್ಯಕರವಾಗಿರಿಸುತ್ತದೆ

ಮೆದುಳನ್ನು ಆರೋಗ್ಯಕರವಾಗಿರಿಸುತ್ತದೆ

ಈ ಎಲೆಗಳಲ್ಲಿರುವ ವಿಟಮಿನ್ ಸಿ ಮತ್ತು ಇ ಆರೋಗ್ಯವನ್ನು ವೃದ್ಧಿಸುತ್ತವೆ. ವಿಟಮಿನ್ ಸಿ ದೇಹದಲ್ಲಿ ನ್ಯೂರೋಟ್ರಾನ್ಸ್ ಮಿಟರ್‌ಗಳ ಹೆಚ್ಚು ಹೆಚ್ಚು ಉತ್ಪತ್ತಿಗೆ ನೆರವಾದರೆ ವಿಟಮಿನ್ ಇ ಮೆದುಳಿನ ಜೀವಕೋಶಗಳ ಸವೆತವನ್ನು ತಡೆದು ಇದರಿಂದ ಎದುರಾಗುವ ಮರೆಗುಳಿತನ ಹಾಗೂ ಆಲ್ಜೀಮರ್ಸ್ ಕಾಯಿಲೆಯಿಂದ ರಕ್ಷಿಸುತ್ತದೆ.

ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಮಾಡುತ್ತದೆ

ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಮಾಡುತ್ತದೆ

ಈ ಎಲೆಗಳಲ್ಲಿರುವ ಕಿಣ್ವಗಳು ಹೊಟ್ಟೆಯಲ್ಲಿ ಜೀರ್ಣಗೊಳ್ಳುವ ವೇಳೆ ಹೆಚ್ಚಿನ ಪ್ರಮಾಣದ ಕೊಲೆಸ್ಟ್ರಾಲ್ ಹೀರಿಕೊಳ್ಳದಂತೆ ನೆರವಾಗುವ ಮೂಲಕ ರಕ್ತದಲ್ಲಿ ಅಧಿಕವಿರುವ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣಕ್ಕೆ ಬರಲು ನೆರವಾಗುತ್ತದೆ.

ನಿಮಿರು ದೌರ್ಬಲ್ಯವನ್ನು ಕಡಿಮೆಗೊಳಿಸುತ್ತದೆ

ನಿಮಿರು ದೌರ್ಬಲ್ಯವನ್ನು ಕಡಿಮೆಗೊಳಿಸುತ್ತದೆ

ನೂರಾರು ವರ್ಷಗಳಿಂದ ಭಾರತದಲ್ಲಿ ನುಗ್ಗೆಸೊಪ್ಪನ್ನು ಕಾಮೋತ್ತೇಜಕವಾಗಿ ಬಳಸಲಾಗುತ್ತಿದೆ. ಈ ಸೊಪ್ಪಿನ ಸೇವನೆಯ ಬಳಿಕ ರಕ್ತಸಂಚಾರದಲ್ಲಿ ಹೆಚ್ಚಳವಾಗುವ ಮೂಲಕ ನಿಮಿರು ದೌರ್ಬಲ್ಯದ ತೊಂದರೆ ಕಡಿಮೆಯಾಗುತ್ತದೆ.

ಮಾಸಿಕ ದಿನಗಳ ನೋವನ್ನು ಕಡಿಮೆಗೊಳಿಸುತ್ತದೆ

ಮಾಸಿಕ ದಿನಗಳ ನೋವನ್ನು ಕಡಿಮೆಗೊಳಿಸುತ್ತದೆ

ಈ ಎಲೆಗಳಲ್ಲಿರುವ ಆಂಟಿ ಆಕ್ಸಿಡೆಂಟುಗಳು ಹಾಗೂ ಫ್ಲೇವನಾಯ್ಡುಗಳು ಕೆಳಹೊಟ್ಟೆ ಹಾಗೂ ಮೂತ್ರ ಕೋಶದ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಮಹಿಳೆಯರಿಗೆ ಮಾಸಿಕ ದಿನಗಳಲ್ಲಿ ಕಾಡುವ ಕೆಳಹೊಟ್ಟೆಯ ನೋವನ್ನು ಕಡಿಮೆಗೊಳಿಸಲು ಸಾಧ್ಯ.

English summary

Powerful Benefits of Drumstick Leaves

Drumsticks are widely used in different types of cuisines. These are loaded with valuable minerals, vitamins and proteins. It is also an ingredient that can be had in dals, sambar or in the form of soup. But, did you know that the leaves of the drumsticks are commonly known as Moringa leaves which are blessed with a variety of health benefits too? The moringa leaves are a great energy booster and are an excellent source of nutrition. Since ancient tradition, drumstick leaves have been used for multi-purpose treatment of health-related ailments.
X
Desktop Bottom Promotion