Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವೈದ್ಯಲೋಕಕ್ಕೇ ಸವಾಲು: ಕ್ಯಾನ್ಸರ್ ರೋಗದಿಂದ ರಕ್ಷಿಸುವ ಮನೆಮದ್ದು
ಕೊಂಚ ಬಿಸಿನೀರಿಗೆ ಅರಿಶಿನವನ್ನು ಬೆರೆಸಿ ಕುಡಿಯುವ ಮೂಲಕ ಹಲವಾರು ತೊಂದರೆಗಳಿಗೆ ಔಷಧಿಯಂತೆ ಕೆಲಸ ಮಾಡುತ್ತದೆ ಎಂದು ನಿಮಗೆಲ್ಲಾ ಗೊತ್ತೇ ಇದೆ. ಅರಿಶಿನದಲ್ಲಿರುವ ಕುರ್ಕುಮಿನ್ ಎಂಬ ಪೋಷಕಾಂಶ ಪ್ರಬಲ ಉರಿಯೂತ ನಿವಾರಕವಾಗಿದೆ ಹಾಗೂ ವಿಶೇಷವಾಗಿ ಕ್ಯಾನ್ಸರ್ ಉಂಟುಮಾಡುವ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಮೂಲಕ ರಕ್ಷಣೆಯನ್ನೂ ಒದಗಿಸುತ್ತದೆ. ಇನ್ನು ಈ ನೀರಿಗೆ ಕೊಂಚವೇ ಜೇನನ್ನು ಬೆರೆಸಿ ಕುಡಿದರೆ ಹಲವಾರು ವ್ಯಾಧಿಗಳಿಗೆ ಸಿದ್ಧೌಷಧಿಯೊಂದು ತಯಾರಾಗುತ್ತದೆ.

ವಿಶೇಷವಾಗಿ ಇದರಲ್ಲಿರುವ ಪ್ರಬಲ ಉರಿಯೂತ ನಿರೋಧಕ ಗುಣದಿಂದಾಗಿ ಕೆಲವು ವ್ಯಾಧಿಗಳಿಗೆ ಮಾರುಕಟ್ಟೆಯಲ್ಲಿ ಸಿಗುವ ಪ್ರಬಲ ಔಷಧಿಗೂ ಮಿಗಿಲಾದ ನೈಸರ್ಗಿಕ ಔಷಧಿ ದೊರಕುತ್ತದೆ. ಬನ್ನಿ, ಈ ಔಷಧಿಯನ್ನು ಹೇಗೆ ತಯಾರಿಸಿ ಬಳಸಬಹುದು ಎಂಬುದನ್ನು ನೋಡೋಣ..
ಅಗತ್ಯವಿರುವ ಸಾಮಾಗ್ರಿಗಳು
ಅರ್ಧ ಲಿಂಬೆ ಹಣ್ಣಿನ ರಸ
ಅರ್ಧ ಚಿಕ್ಕ ಚಮಚ ಅರಿಶಿನ
ಇನ್ನೂರೈವತ್ತು ಮಿಲಿ ಉಗುರುಬೆಚ್ಚನೆಯ ನೀರು
ಕೊಂಚವೇ ಜೇನು
ವಿಧಾನ
ಉಗುರುಬೆಚ್ಚನೆಯ ನೀರಿನಲ್ಲಿ ಲಿಂಬೆಹಣ್ಣನ್ನು ಹಿಂಡಿ ಇದಕ್ಕೆ ಅರಿಶಿನ ಬೆರೆಸಿ ಚೆನ್ನಾಗಿ ಕಲಕಿ. ಈ ನೀರಿಗೆ ಕೊಂಚವೇ, ಅಂದರೆ ಸುಮಾರು ಅರ್ಧ ಚಿಕ್ಕ ಚಮಚ ಜೇನು ಬೆರೆಸಿ. ಜೇನಿನ ಪ್ರಮಾಣ ಹೆಚ್ಚಿರಬಾರದು.
ಈ ಪೇಯದಲ್ಲಿ ಕೆಲವಾರು ಕಾಯಿಲೆಗಳನ್ನು ಬಾರದಂತೆ ತಡೆಯುವ ಶಕ್ತಿ ಇದೆ.
ವಿಶೇಷವಾಗಿ ಟೈಪ್-2 ಮಧುಮೇಹ, ಉರಿಯೂತ, ಸಂಧಿವಾತ, ಹೃದಯದ ತೊಂದರೆ ಹಾಗೂ ಕ್ಯಾನ್ಸರ್‌ನಂತಹ ಕಾಯಿಲೆಗಳ ವಿರುದ್ಧ ರಕ್ಷಣೆ ಪಡೆಯಬಹುದು. ಇದೇ ಕಾರಣಕ್ಕೆ ಈ ಪೇಯವನ್ನು ನಿತ್ಯವೂ ಸೇವಿಸುವುದು ಉತ್ತಮ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications



