ನಿಮ್ಮ ಮನೆಯಲ್ಲಿ ಸೊಳ್ಳೆ ಕಾಟವೇ? ಹಾಗಿದ್ದರೆ ಈ ಟ್ರಿಕ್ಸ್ ಪ್ರಯತ್ನಿಸಿ ನೋಡಿ

By: manu
Subscribe to Boldsky

ಮಳೆಗಾಲ ಎಂದಾಕ್ಷಣ ಕ್ರಿಮಿ ಕೀಟಗಳು ಹಾಗೂ ಸೊಳ್ಳೆಗಳು ಅಧಿಕ ಪ್ರಮಾಣದಲ್ಲಿ ಹುಟ್ಟಿಕೊಳ್ಳುತ್ತವೆ. ಅದರಲ್ಲೂ ಮನೆಯ ಬಳಿಯೇ ತೋಟ ಅಥವಾ ಹೂ ಗಿಡಗಳಿದ್ದರೆ ಇವುಗಳ ಹಾವಳಿ ಹೆಚ್ಚೆಂದೇ ಹೇಳಬಹುದು. ಇಂತಹ ಪರಿಸ್ಥಿತಿ ಇರುವಾಗ ಕೀಟಗಳ ಕಾಟ ತಪ್ಪಿಸಿಕೊಳ್ಳಲು ವಿವಿಧ ಕ್ರಿಮಿನಾಶಕ ಮತ್ತು ಸ್ಪ್ರೇಗಳನ್ನು ಬಳಸುವುದು ಸಹಜ. ಅದು ಸುಲಭವಾಗಿ ದೊರೆಯುವ ಉತ್ಪನ್ನವೂ ಹೌದು. ಅಲ್ಲದೆ ಬಳಕೆಯೂ ಸುಲಭ. ಆದರೆ ಅವುಗಳಿಂದ ಅನೇಕ ಅಡ್ಡ ಪರಿಣಾಮಗಳು ಬೀರುತ್ತವೆ.

ಪರಿಸರ ಸ್ನೇಹಿ ಅಲ್ಲದ ಕೀಟ ನಾಶಕಗಳು ಗಾಳಿಯನ್ನು ಮಾಲಿನ್ಯ ಮಾಡುವುದಲ್ಲದೆ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ನಗರ ಪ್ರದೇಶದಲ್ಲಿ ಜನರನ್ನು ಕಾಡುವ ಪ್ರಮುಖ ಕೀಟಗಳೆಂದರೆ ಸೊಳ್ಳೆ, ನೊಣ ಹಾಗೂ ಜಿರಲೆ. ಮನೆಯಲ್ಲಿ ಹೆಚ್ಚಿಕೊಳ್ಳುವ ಈ ಕೀಟಗಳಿಂದ ಮುಕ್ತಿ ಹೊಂದಲು ಸ್ಪ್ರೇ ಮತ್ತು ಭತ್ತಿಯನ್ನು ಬಳಸುತ್ತಾರೆ. ಇವು ನಮ್ಮ ತ್ವಚೆ ಹಾಗೂ ಆರೋಗ್ಯದ ಮೇಲೂ ಪರಿಣಾಮ ಬೀರುವುದಲ್ಲವು. ನಾವು ಬಳಸುವ ಕೆಲವು ಆಹಾರ ವಸ್ತುಗಳನ್ನು ಸಹ ರಾಸಾಯನಿಕ ವಸ್ತುಗಳನ್ನಾಗಿ ಬದಲಿಸುತ್ತವೆ.

ಮಳೆಗಾಲ ಬಂದರೆ ಸಾಕು ಬೆಂಬಿಡದ ಸೊಳ್ಳೆ ಕಾಟ

ಇವುಗಳ ಮುಕ್ತಿಗೆ ಏಕೈಕ ದಾರಿಯೆಂದರೆ ನೈಸರ್ಗಿಕ ಕ್ರಿಮಿನಾಶಕಗಳ ಬಳಸಿಕೊಂಡು, ಕಾಳಜಿಯಿಂದ ಇರುವುದು. ಹೌದಾ? ಹಾಗಾದರೆ ಅದ್ಯಾವ ಬಗೆಯ ಉತ್ಪನ್ನ ಎಂದು ಆಶ್ಚರ್ಯ ಚಕಿತರಾಗುತ್ತಿದ್ದೀರಾ? ಇಲ್ಲಿದೆ ನೋಡಿ ಮನೆಯಲ್ಲಿ ನೀವೇ ತಯಾರಿಸಬಹುದಾದ ಕ್ರಿಮಿನಾಶಕ. ಇದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗದು. ಬದಲಿಗೆ ಕಡಿಮೆ ಖರ್ಚಿನಲ್ಲಿ ತಯಾರಿಸಬಹುದು....

ಬೇಕಾಗುವ ಸಾಮಾಗ್ರಿ

ಬೇಕಾಗುವ ಸಾಮಾಗ್ರಿ

1. 1/2 ಕಪ್ ತರಕಾರಿ ತೈಲ

2. 1/2 ಕಪ್ ಪುದೀನದ ಎಣ್ಣೆ

3. 1/2 ಕಪ್ ವಿನೆಗರ್ ಕನಿಷ್ಠ 9%

ವಿಧಾನ

ವಿಧಾನ

ಈ ಮೂರು ಉತ್ಪನ್ನವನ್ನು ಸ್ಪ್ರೇ ಬಾಟಲ್‍ನಲ್ಲಿ ಒಮ್ಮೆಲೆ ಹಾಕಿ, ಚೆನ್ನಾಗಿ ಕಲುಕಬೇಕು. ನಂತರ ಒಳಾಂಗಣದ ಸ್ಥಳದಲ್ಲಿ, ಮನೆಯ ಮೂಲೆಗಳಲ್ಲಿ, ಕೋಣೆಯಲ್ಲಿ, ಅಡುಗೆ ಮನೆ, ಮನೆಯ ಸುತ್ತ ಮತ್ತು ನಮ್ಮ ಚರ್ಮದ ಮೇಲೂ ಸಹ ಇದನ್ನು ಸಿಂಪಡಿಸಬಹುದು. ಯಾವುದೇ ಹಾನಿ ಉಂಟಾಗದು. ಬದಲಿಗೆ ಕ್ರಿಮಿ- ಕೀಟಗಳು ಮನೆಯಿಂದ ದೂರ ಹೋಗುವವು.

ಇದನ್ನೂ ಪ್ರಯತ್ನಿಸಿ ನೋಡಿ....

ಇದನ್ನೂ ಪ್ರಯತ್ನಿಸಿ ನೋಡಿ....

ಇಷ್ಟೇ ಅಲ್ಲದೆ ಅಡುಗೆ ಮನೆಯಲ್ಲಿಯೇ ಇರುವ ಈ ಉತ್ಪನ್ನಗಳಿಂದ ಸೊಳ್ಳೆಗಳನ್ನು ನಿಯಂತ್ರಿಸಬಹುದು, ಮುಂದೆ ಓದಿ

ಬೇವಿನ ಎಣ್ಣೆ ಮತ್ತು ಕೊಬ್ಬರಿ ಎಣ್ಣೆ

ಬೇವಿನ ಎಣ್ಣೆ ಮತ್ತು ಕೊಬ್ಬರಿ ಎಣ್ಣೆ

ಸಮಪ್ರಮಾಣದಲ್ಲಿ ಕೊಂಚ ಬೇವಿನ ಎಣ್ಣೆ ಮತ್ತು ಕೊಬ್ಬರಿ ಎಣ್ಣೆಯನ್ನು ಮಿಶ್ರಣ ಮಾಡಿ ತೆಳುವಾಗಿ ತೆರೆದ ಭಾಗದ ಚರ್ಮದ ಮೇಲೆ, ಅಂದರೆ ಮೊಣಕೈ, ಪಾದ, ಮೊಣಕಾಲು ಇತ್ಯಾದಿ. ಈ ವಾಸನೆಗೆ ಸೊಳ್ಳೆಗಳು ಸುಮಾರು ಎಂಟು ಗಂಟೆಗಳವರೆಗೆ ಬರುವುದಿಲ್ಲವಾದುದರಿಂದ ಸುಖನಿದ್ದೆಗೂ ಅನುಕೂಲಕರವಾಗಿದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿ ಕೊಂಚ ನೀರಿನಲ್ಲಿ ಬೆಳ್ಳುಳ್ಳಿಯ ಕೆಲವು ಎಸಳುಗಳನ್ನು ಜಜ್ಜಿ ಹಾಕಿ ಕುದಿಸಿ. ಬಳಿಕ ಈ ನೀರನ್ನು ಇಡಿಯ ಕೋಣೆಯಲ್ಲಿ ಸಿಂಪಡಿಸಿ. ಕೊಂಚ ಘಾಟನ್ನು ಸ್ವಲ್ಪಹೊತ್ತು ತಡೆದುಕೊಂಡರೆ ಮುಂದಿನ ಕೆಲವು ಗಂಟೆಗಳ ಕಾಲ ಇಲ್ಲಿ ಸೊಳ್ಳೆಗಳು ಸುಳಿಯುವುದಿಲ್ಲ.

ಕರ್ಪೂರ

ಕರ್ಪೂರ

ಒಂದು ಕೋಣೆಯಲ್ಲಿ ಕರ್ಪೂರದ ತುಂಡೊಂದನ್ನು ಉರಿಸಿ ತಕ್ಷಣ ಕಿಟಕಿ ಬಾಗಿಲುಗಳನ್ನು ಗಟ್ಟಿಯಾಗಿ ಮುಚ್ಚಿ ಇಪ್ಪತ್ತು ನಿಮಿಷ ಹಾಗೇ ಬಿಡುವ ಮೂಲಕ ಒಳಗಿದ್ದ ಅಷ್ಟೂ ಸೊಳ್ಳೆಗಳು ಪರಾರಿಯಾಗಿರುತ್ತವೆ. ಬಳಿಕ ಇಲ್ಲಿ ಸೂಕ್ತ ಸೊಳ್ಳೆಪರದೆಯಿಂದ ಕಿಟಕಿ ಬಾಗಿಲುಗಳನ್ನು ಮುಚ್ಚಿ ಸೊಳ್ಳೆ ಕಾಟದಿಂದ ಮುಕ್ತರಾಗಬಹುದು.

ತುಳಸಿ

ತುಳಸಿ

ಮನೆಯ ಕಿಟಕಿಗಳ ಹತ್ತಿರ ತುಳಸಿ ಗಿಡವನ್ನು ನೆಟ್ಟರೆ ಆ ಸ್ಥಳದಲ್ಲಿ ಸೊಳ್ಳೆಗಳು ಮರಿಯಾಗುವುದಿಲ್ಲ, ಮತ್ತು ಈ ದಾರಿಯಿಂದ ಸೊಳ್ಳೆಗಳು ಒಳಬರುವುದೂ ಇಲ್ಲ.

ಇಂತಹ ಎಣ್ಣೆಗಳೂ ಸಹಾಯಕ್ಕೆ ಬರುವವು...

ಇಂತಹ ಎಣ್ಣೆಗಳೂ ಸಹಾಯಕ್ಕೆ ಬರುವವು...

ಕೆಲವು ಉಪಯುಕ್ತವಾದ ಎಣ್ಣೆಗಳ ಸಹಾಯದಿಂದ ಮನೆಗಳಲ್ಲಿ ನೊಣವನ್ನು ದೂರವಿಡಲು ಸಾಧ್ಯವಾಗಿದೆ. ಅವು ಯಾವುದೆಂದರೆ ಲ್ಯಾವೆಂಡರ್, ನೀಲಗಿರಿ, ಪುದೀನಾ ಮತ್ತು ನಿಂಬೆ ಹುಲ್ಲು. ಇವುಗಳ ಸೌಮ್ಯ ಹಿತಕಾರಿ ಪರಿಮಳದಿಂದ ಮನೆಯ ನೊಣಗಳನ್ನು ಪರಿಣಾಮಕಾರಿಯಾಗಿ ದೂರವಿರಿಸಬಹುದು. ಈ ದ್ರವ್ಯವನ್ನು ನಿಮ್ಮ ಡ್ರಾಯಿಂಗ್ ರೂಮ್, ಮಲಗುವ ಕೋಣೆ ಹಾಗೂ ಅಡಿಗೆಮನೆಯಲ್ಲೂ ಸಹ ಸಿಂಪಡಿಸಿ ಆ ಪ್ರದೇಶಗಳೆಲ್ಲವನ್ನು ನೊಣಗಳಿಂದ ದೂರವಿರಿಸಬಹುದು.

English summary

Natural Spray After 2 Hours No More Bugs, Mosquitoes

There exist numerous insecticides in the market and all eliminate bugs quick and simple, but they have products that are threats for us and health too. Also they are not eco friendly and pollute air.
Subscribe Newsletter