For Quick Alerts
ALLOW NOTIFICATIONS  
For Daily Alerts

ಹೊಟ್ಟೆಯಲ್ಲಿ ಉರಿ, ಗ್ಯಾಸ್ಟ್ರಿಕ್, ಹುಳಿತೇಗು ಸಮಸ್ಯೆಗೆಲ್ಲಾ-ಪವರ್ ಫುಲ್ ಜ್ಯೂಸ್

By Arshad
|

ಔತಣವೆಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಅದರಲ್ಲೂ ನಿಮ್ಮ ನೆಚ್ಚಿನ ತಿಂಡಿ ತಿನಿಸು ಖಾದ್ಯಗಳು ಪುಷ್ಕಳವಾಗಿ ದೊರಕುವಂತಿದ್ದರೆ? ಎಲ್ಲಾ ಎಚ್ಚರಿಕೆಗಳನ್ನು ಬದಿಗೊತ್ತು ಹೊಟ್ಟೆ ತುಂಬಿಸಿದ್ದೊಂದೇ ಗೊತ್ತು. ಆದರೆ ಇದರ ಪರಿಣಾಮ ಮರುದಿನ ಬೆಳಿಗ್ಗೆ ಹೊಟ್ಟೆನೋವು ಹಾಗೂ ಉಬ್ಬಿಕೊಂಡ ಉದರದ ಮೂಲಕ ಕಂಡುಬಂದು, ಛೇ ನಿನ್ನೆ ಅಷ್ಟೊಂದು ತಿನ್ನಬಾರದಿತ್ತು ಎನಿಸದಿರಲಾರದು.

ಆದರೆ ಈಗ ಪಶ್ಚಾತ್ತಾಪ ಪಡುವ ಬದಲು ಈ ನೋವನ್ನು ಕಡಿಮೆ ಮಾಡುವ ಬಗ್ಗೆ ಚಿಂತಿಸಿದರೆ ಉತ್ತಮ. ಅದರಲ್ಲೂ ನಿನ್ನೆಯ ಊಟದಲ್ಲಿ ಅನಾರೋಗ್ಯಕರ ಸಿದ್ಧ ಆಹಾರಗಳಿದ್ದರೆ ಈ ಪರಿಣಾಮ ಇನ್ನೂ ಹೆಚ್ಚಾಗಬಹುದು. ಸಿದ್ಧ ಆಹಾರಗಳನ್ನು ತಿನ್ನಲಾರೆ ಎಂದು ಪ್ರತಿಜ್ಞೆ ಮಾಡಿದ್ದರೂ ಈ ಬಗ್ಗೆ ಅರಿವಿರದ ನಿಮ್ಮ ಅತಿಥೇಯರು ತರಿಸಿದ ಸಿದ್ಧ ತಿನಿಸುಗಳನ್ನು ಇಲ್ಲ ಎನ್ನಲಾರದೇ ತಿಂದು ಸಹಾ ಈ ತೊಂದರೆಗೆ ಸಿಲುಕಿರಬಹುದು. ಇಂತಹದ್ದೇ ಕೆಲವಾರು ಕಾರಣಗಳಿಂದಾಗಿ ಹೊಟ್ಟೆನೋವು ಆಗಾಗ ಆವರಿಸುತ್ತಲೇ ಇರಬಹುದು.


ಹೊಟ್ಟೆಯಲ್ಲಿ ಕಾಡುವ ಗ್ಯಾಸ್ ಅಬ್ಬರ-ಇಲ್ಲಿದೆ ನೋಡಿ ಪರಿಹಾರ

ಹೊಟ್ಟೆನೋವಿಗೆ ಕೇವಲ ಅನಾರೋಗ್ಯಕರ ಆಹಾರಸೇವನೆಯೊಂದೇ ಕಾರಣವಲ್ಲ, ಬದಲಿಗೆ ವ್ಯಾಯಾಮವಿಲ್ಲದೇ ಇರುವುದು, ಕೆಲ ಹೊತ್ತಿನ ಊಟವನ್ನು ಮಾಡದೇ ಹೋಗುವುದು, ಹೊತ್ತಲ್ಲದ ಹೊತ್ತಿನಲ್ಲಿ ತಿನ್ನುವುದು, ಆಮ್ಲೀಯ ಆಹಾರ ಸೇವನೆ, ಬುರುಗು ಬರುವ ಲಘುಪಾನೀಯಗಳನ್ನು ಕುಡಿಯುವುದು ಮೊದಲಾದ ಕೆಲವಾರು ಕಾರಣಗಳೂ ಇವೆ. ಪರಿಣಾಮವಾಗಿ ಹೊಟ್ಟೆಯಲ್ಲಿ ಉರಿ, ಆಮ್ಲೀಯತೆ, ಹುಳಿತೇಗು, ಹೊಟ್ಟೆನೋವು ಇತ್ಯಾದಿಗಳು ಎದುರಾಗಬಹುದು. ಇದರೊಂದಿಗೆ ಸತತ ಅಪಾನವಾಯು, ತೇಗು, ಗಂಟಲ ಉರಿ, ವಾಕರಿಕೆ, ಹೊಟ್ಟೆಯುಬ್ಬರಿಕೆ, ವಾಂತಿ ಮೊದಲಾದವೂ ಕಾಣಿಸಿಕೊಳ್ಳಬಹುದು.

ಸಾಮಾನ್ಯವಾಗಿ ಹೊಟ್ಟೆನೋವು, ಹೊಟ್ಟೆಯುರಿ ಪ್ರತಿಯೊಬ್ಬರೂ ಆಗಾಗ ಅನುಭವಿಸುತ್ತಲೇ ಇರುತ್ತಾರೆ. ಆದರೆ ಒಂದು ವೇಳೆ ಇದು ಸತತವಾಗಿದ್ದರೆ ಇದಕ್ಕೆ ಬೇರೆ ಕಾರಣಗಳೂ ಇರಬಹುದು. ತಕ್ಷಣವೇ ಸೂಕ್ತ ಚಿಕಿತ್ಸೆ ಪಡೆಯದೇ ಇದ್ದರೆ ಇದು ಉಲ್ಬಣಗೊಂಡು, ಕರುಳಿನ ಕ್ಯಾನ್ಸರ್ ನಂತಹ ವಿಪರೀತ ವಿಷಮಾವಸ್ಥೆಯನ್ನೂ ತಲುಪಬಹುದು. ಈ ಸ್ಥಿತಿ ತಲುಪಿದರೆ ಈ ನೋವನ್ನು ತಡೆಯಲು ಸಾಮಾನ್ಯದವರಿಗೆ ನೋವು ನಿವಾರಕವಿಲ್ಲದೇ ಸಾಧ್ಯವೇ ಇಲ್ಲ.

ಆದ್ದರಿಂದ ಈ ಪರಿಸ್ಥಿತಿಗೆ ಒಳಗಾಗದಿರಲು ಸುಲಭ ಚಿಕಿತ್ಸೆಗಳನ್ನು ಕಾಲಕಾಲಕ್ಕೆ ಪಡೆದು ನಿರೋಗಿಗಳಾಗಿರುವುದೇ ಅತ್ಯುತ್ತಮವಾದ ಪರಿಹಾರವಾಗಿದೆ. ಬನ್ನಿ, ಇಂತಹ ಸಮರ್ಥ ವಿಧಾನವೊಂದನ್ನು ಈಗ ನೋಡೋಣ....

ಹೊಟ್ಟೆ ನೋವು: ಸ್ವಯಂ ವೈದ್ಯರಾಗಲು ಹೋಗಬೇಡಿ!

ಅಗತ್ಯವಿರುವ ಸಾಮಾಗ್ರಿಗಳು
*ತಾಜಾ ಸಿಹಿಗುಂಬಳ ರಸ: ಅರ್ಧ ಲೋಟ
*ಸೇಬಿನ ಶಿರ್ಕಾ (Apple Cider Vinegar)- ಮೂರು ದೊಡ್ಡಚಮಚ

ನಿಯಮಿತವಾಗಿ ಸೇವಿಸುತ್ತಾ ಬಂದರೆ ಈ ನೈಸಗಿಕ ಪೇಯ ಹೊಟ್ಟೆಯುರಿಯ ಎಲ್ಲಾ ಸಂಬಂಧಿತ ತೊಂದರೆಗಳನ್ನು ಪೂರ್ಣವಾಗಿ ಗುಣಪಡಿಸುತ್ತದೆ. ಆದರೆ ಬರೆಯ ಜ್ಯೂಸ್ ಕುಡಿದರೆ ಸಾಲದು, ಬದಲಿಗೆ ಆರೋಗ್ಯಕರ ಜೀವನಶೈಲಿ ಹಾಗೂ ಆಹಾರಕ್ರಮವನ್ನೂ ಅಳವಡಿಸಿಕೊಳ್ಳುವುದು ಅಗತ್ಯ. ಇದರೊಂದಿಗೆ ನಿತ್ಯವೂ ಕನಿಷ್ಠ ವ್ಯಾಯಾಮ, ಕೊಂಚ ನಡಿಗೆ ಸಹಾ ಅಗತ್ಯವಾಗಿದ್ದು ಈ ವಿಧಾನ ಪರಿಪೂರ್ಣವಾಗಲು ನೆರವಾಗುತ್ತದೆ. ಇನ್ನೊಂದು ಗಮನಿಸಬೇಕಾದ ವಿಷಯವೆಂದರೆ ಹೊಟ್ಟೆನೋವಿಗೂ ಹೊಟ್ಟೆಯುರಿಗೂ ಬೇರೆ ಬೇರೆ ಕಾರಣಗಳಿರುವುದರಿಂದ ಈ ವಿಧಾನ ಹೊಟ್ಟೆನೋವು ಕಡಿಮೆ ಮಾಡಲು ಸಮರ್ಥವಲ್ಲ.

ಆದ್ದರಿಂದ ಹೊಟ್ಟೆನೋವು ಇದ್ದರೆ ಸೂಕ್ತ ಪರೀಕ್ಷೆಗಳನ್ನು ನಡೆಸಿ ವೈದ್ಯರ ಸಲಹೆ ಮೇರೆಗೆ ಔಷಧಿಗಳನ್ನು ಪಡೆದುಕೊಳ್ಳಬೇಕು. ಈ ವಿಧಾನದಲ್ಲಿ ಕುಂಬಳರಸವನ್ನೇಕೆ ಆಯ್ದುಕೊಳ್ಳಲಾಗಿದೆ ಎಂದರೆ ಈ ರಸ ಅಪ್ಪಟ ಕ್ಷಾರೀಯವಾಗಿದ್ದು ಜೀರ್ಣರಸ ಆಮ್ಲೀಯವಾಗಿರುವುದರಿಂದ ಆಮ್ಲೀಯತೆಯ ಪ್ರಖರತೆಯನ್ನು ಕಡಿಮೆ ಮಾಡಲು ನೆರವಾಗುತ್ತದೆ. ಆಮ್ಲೀಯತೆ ಕಡಿಮೆಯಾದ ಬಳಿಕ ಇದರ ಪರಿಣಾಮಗಳೂ ತನ್ನಿಂತಾನೇ ಕಡಿಮೆಯಾಗುತ್ತಾ ಹೋಗುತ್ತದೆ. ಇದರೊಂದಿಗೆ ಸೇಬಿನ ಶಿರ್ಕಾ ಸಹಾ ಹೊಟ್ಟೆಯಲ್ಲಿ ಉಂಟಾಗಿರುವ ಉರಿಯೂತವನ್ನು ಕಡಿಮೆಗೊಳಿಸಲು ನೆರವಾಗುತ್ತದೆ.

ತಯಾರಿಕಾ ವಿಧಾನ
*ಮೇಲೆ ತಿಳಿಸಿದ ಎರಡೂ ಸಾಮಾಗ್ರಿಗಳನ್ನು ಒಂದು ಲೋಟದಲ್ಲಿ ಚೆನ್ನಾಗಿ ಕಲಕಿ ಮಿಶ್ರಣ ಮಾಡಿ.
*ಹೊಟ್ಟೆಯುಬ್ಬರಿಕೆ, ಹೊಟ್ಟೆಯುರಿ ಯಾವಾಗ ಪ್ರಾರಂಭವಾಯಿತು ಎಂದು ಅನ್ನಿಸುತ್ತದೆಯೋ, ತಕ್ಷಣ ಒಂದು ಲೋಟದಷ್ಟು ಪ್ರಮಾಣವನ್ನು ಕುಡಿಯಿರಿ.

English summary

Magical Mixture That Can Reduce Gas And Stomach Ache Within Hours!

If a person does not make an effort to treat or prevent gastritis, it can eventually lead to serious conditions like intestinal rupture and even colon cancer! So, it is extremely important to avoid any activities that can induce gastritis and also you must make sure that you treat gastritis immediately. Many a times, we resort to taking antacids to help us find relief from gastritis and stomach pain and in severe cases, even pain killers may be required.
X
Desktop Bottom Promotion