For Quick Alerts
ALLOW NOTIFICATIONS  
For Daily Alerts

ಲಿಂಬೆ, ಉಪ್ಪು, ಕರಿಮೆಣಸು-ಈ ತ್ರಿಮೂರ್ತಿಗಳಿಗೆ ನಮ್ಮದೊಂದು ಸಲಾಂ!

ಒಂದು ಚಿಕ್ಕಚಮಚ ಉಪ್ಪು, ಅರ್ಧ ಚಿಕ್ಕ ಚಮಚ ಕಾಳುಮೆಣಸಿನ ಪುಡಿ ಮತ್ತು ಕೆಲವು ಹನಿ ಲಿಂಬೆರಸ ಅಷ್ಟೇ. ಇದರಿಂದ ಕನಿಷ್ಠ ಒಂಬತ್ತು ಬಗೆಯ ಕಾಯಿಲೆಗಳನ್ನು ದೂರವಿರಿಸಬಹುದು....

By Deepak
|

ಬೇಸಿಗೆ ಬಂತೆಂದರೆ ಸಾಕು ಸೋಂಕುಗಳು ಹರಡುವ ಕಾಲ ಎಂದು ನಿಮಗೂ ಸಹ ತಿಳಿದಿರಬಹುದು. ಧೂಳು, ನೀರು, ಗಾಳಿ ಇತ್ಯಾದಿಗಳು ಸೋಂಕುಗಳನ್ನು ಹಬ್ಬಿಸುವ ಕೆಲಸವನ್ನು ಮಾಡುತ್ತಿರುತ್ತವೆ. ಇವುಗಳಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಲು ಸ್ವಾಭಾವಿಕವಾದ ಪರಿಹಾರಗಳನ್ನು ತಪ್ಪದೆ ಬಳಸಿ. ಒಂದು ವೇಳೆ ನೀವು ಕಾಯಿಲೆ ಬಿದ್ದು ವೈದ್ಯರ ಬಳಿಗೆ ಹೋದರೆ ಅವರು ನಿಮಗೆ ಆಂಟಿಬಯೋಟಿಕ್‌ಗಳನ್ನು ನೀಡುತ್ತಾರೆ. ಬೆಳಗಿನ ಜಾವ ಲಿಂಬೆ ರಸ ಬೆರೆಸಿದ ನೀರನ್ನು ಸೇವಿಸಲು ಮರೆಯದಿರಿ!

ಆದರೆ ಸ್ವಾಭಾವಿಕವಾಗಿ ಮನೆ ಮದ್ದುಗಳಲ್ಲಿಯೇ ಹೋಗುವ ಈ ಕಾಯಿಲೆಗಳಿಗೆ ಆಂಟಿಬಯೋಟಿಕ್‌ಗಳನ್ನು ಏಕೆ ಸೇವಿಸಬೇಕು.
ಆಂಟಿಬಯೋಟಿಕ್‌ಗಳಿಗಿಂತ ಪರಿಣಾಮಕಾರಿಯಾದ ಈ ಮನೆ ಮದ್ದು ಯಾವುದಪ್ಪಾ ಎಂದು ನೀವು ಆಲೋಚಿಸುತ್ತಿರುವಿರಾ? ಹೌದು, ಆಂಟಿಬಯೋಟಿಕ್‌ಗಳ ಅಡ್ಡ ಪರಿಣಾಮಗಳಿಂದ ನಿಮ್ಮನ್ನು ಕಾಪಾಡಲು ಇದೆ ನಮ್ಮ ನಿಮ್ಮೆಲ್ಲರ ಬಳಿ ಒಂದು ರಾಮ ಬಾಣ. ಅದೇ ನಿಂಬೆ ರಸ! 9 ಭಯಂಕರ ಕಾಯಿಲೆಗೆ ಮನೆಮದ್ದು ಈ ಕರಿಮೆಣಸು!

ಹೌದು ಮನೆಯಲ್ಲಿರುವ ಅತ್ಯುತ್ತಮವಾದ ಮತ್ತು ಶಕ್ತಿಶಾಲಿಯಾದ ಆಂಟಿಬಯೋಟಿಕ್‌, ಆಂಟಿಬ್ಯಾಕ್ಟೀರಿಯಲ್, ಆಂಟಿವೈರಲ್ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ಪ್ರಬಲವಾದ ಔಷಧಿ ಇದಾಗಿರುತ್ತದೆ. ಇದರಲ್ಲಿ ಬಯೋಫ್ಲಾವೊನಾಯ್ಡ್‌ಗಳು, ಲಿಮೊನಿನ್, ಪೆಕ್ಟಿನ್, ಲಿಮೊನಿನ್, ಸಿಟ್ರಿಕ್ ಆಮ್ಲ, ಮೆಗ್ನಿಷಿಯಂ, ಕ್ಯಾಲ್ಸಿಯಂ ಮತ್ತು ವಿಟಮಿನ್‌ಗಳು ಯಥೇಚ್ಛವಾಗಿರುತ್ತವೆ. ಉಪ್ಪು ಬೆರೆಸಿದ ಬೆಚ್ಚನೆಯ ನೀರು, ಆಯಸ್ಸು ನೂರು!

ನಿಂಬೆ ಅಥವಾ ಲಿಂಬೆರಸವನ್ನು ಕರಿಮೆಣಸು ಮತ್ತು ಉಪ್ಪಿನ ಜೊತೆಗೆ ಬೆರೆಸಿದಾಗ, ಅದು ಉತ್ತಮವಾದ ಆರೋಗ್ಯಕಾರಿ ಪ್ರಯೋಜನಗಳನ್ನು ಒದಗಿಸುತ್ತದೆ. ಇವುಗಳಲ್ಲಿ ಹಲವಾರು ಗಂಭೀರ ಕಾಯಿಲೆಗಳನ್ನು ನಿವಾರಿಸುವ ಅಂಶಗಳು ಇರುತ್ತವೆ. ಈ ಅಂಕಣದಲ್ಲಿ ನಾವು ನಿಮಗೆ ನಿಂಬೆ, ಉಪ್ಪು ಮತ್ತು ಕರಿಮೆಣಸಿನ ಮಿಶ್ರಣವು ಯಾವ ರೀತಿ ಮತ್ತು ಯಾವೆಲ್ಲ ಸಮಸ್ಯೆಗಳಿಗೆ ಸಹಾಯ ಮಾಡುತ್ತವೆ ಎಂದು ತಿಳಿಸುತ್ತೇವೆ....

ಫ್ಲೂ ಮತ್ತು ಶೀತಕ್ಕೆ ಮದ್ದು

ಫ್ಲೂ ಮತ್ತು ಶೀತಕ್ಕೆ ಮದ್ದು

ಅರ್ಧ ನಿಂಬೆ ರಸವನ್ನು ಒಂದು ಕಪ್ ಕುದಿಯುವ ನೀರಿಗೆ ಬೆರೆಸಿಕೊಳ್ಳಿ. ಇದನ್ನು ಒಂದು ನಿಮಿಷ ಹಾಗೆ ಬಿಡಿ. ಆನಂತರ ನಿಂಬೆಯನ್ನು ತೆಗೆಯಿರಿ. ಕೊನೆಗೆ ಇದಕ್ಕೆ ಉಪ್ಪು, ಮೆಣಸು ಮತ್ತು ಜೇನು ತುಪ್ಪವನ್ನು ಬೆರೆಸಿ ಸೇವಿಸಿ.ಕಿರಿಕಿರಿ ಶೀತಕ್ಕೆ ತಲೆಬಿಸಿ ಮಾಡಬೇಡಿ! ಆಹಾರ ಪಥ್ಯ ಹೀಗಿರಲಿ...

ಗಂಟಲು ನೋವು

ಗಂಟಲು ನೋವು

ಬೆಚ್ಚಗಿನ ನೀರಿಗೆ ಒಂದು ಚಮಚ ಉಪ್ಪು, ಅರ್ಧ ಚಮಚ ಮೆಣಸು ಮತ್ತು ಒಂದು ಚಮಚ ನಿಂಬೆರಸವನ್ನು ಬೆರೆಸಿ ಒಂದು ಮಿಶ್ರಣವನ್ನು ಮಾಡಿಕೊಳ್ಳಿ. ಈ ಮಿಶ್ರಣವನ್ನು ಬಾಯಿ ಮುಕ್ಕಳಿಸಲು ಬಳಸಿ. ಇದರಿಂದ ಗಂಟಲು ನೋವು ಮತ್ತು ಕೆಮ್ಮು ನಿವಾರಣೆಯಾಗುತ್ತದೆ.ಇನ್ನು ಗಂಟಲು ನೋವಿಗೆ ವೈದ್ಯರ ಬಳಿ ಓಡಬೇಡಿ...!

ಮೂಗು ಕಟ್ಟುವಿಕೆ

ಮೂಗು ಕಟ್ಟುವಿಕೆ

ಈ ಮೇಲಿನ ಮಿಶ್ರಣದ ಹಬೆಯನ್ನು ಸೇವಿಸಿದರೆ ಸೀನುವಿಕೆ ಬರುತ್ತದೆ ಮತ್ತು ಕಟ್ಟಿದ ಮೂಗು ನಿವಾರಣೆಯಾಗುತ್ತದೆ. ನಿಮಗೆ ಬೇಕಾದಲ್ಲಿ ಚಕ್ಕೆ, ಏಲಕ್ಕಿ, ಮೆಣಸು ಮತ್ತು ಜೀರಿಗೆ ಹಾಕಿ ಮತ್ತೊಂದು ಮಿಶ್ರಣವನ್ನು ಸಿದ್ಧ ಮಾಡಿಕೊಳ್ಳಬಹುದು.

ನಾಸಿಯಾ

ನಾಸಿಯಾ

ಒಂದು ಲೋಟ ಬೆಚ್ಚಗಿನ ನೀರಿಗೆ ಒಂದು ಚಮಚ ನಿಂಬೆರಸವನ್ನು ಹಾಗು ಒಂದು ಚಮಚ ಕರಿಮೆಣಸಿನ ಪುಡಿತನ್ನು ಬೆರೆಸಿ ಸೇವಿಸಿ. ನಿಂಬೆ ರಸದ ಸುಗಂಧವು ಹೊಟ್ಟೆ ತೊಳೆಸುವಿಕೆಯನ್ನು ನಿವಾರಿಸುತ್ತದೆ ಮತ್ತು ಕರಿಮೆಣಸು ಹೊಟ್ಟೆಗೆ ಉಪಶಮನವನ್ನು ನೀಡುತ್ತದೆ. ಅದಕ್ಕೆ ವಾಹನದಲ್ಲಿ ಪ್ರಯಾಣ ಮಾಡುವಾಗ, ಗರ್ಭಿಣಿಯಾಗಿದ್ದಾಗ ನಿಂಬೆ ಹಣ್ಣು ಇಟ್ಟುಕೊಳ್ಳಿ ಎಂದು ದೊಡ್ಡವರು ಹೇಳುವುದು.ಪ್ರಯಾಣದ ವೇಳೆಯಲ್ಲಿ ವಾಂತಿಯ ಸಮಸ್ಯೆಗೆ ಪರಿಹಾರವೇನು?

ತೂಕ ಕಳೆದುಕೊಳ್ಳುವಿಕೆ

ತೂಕ ಕಳೆದುಕೊಳ್ಳುವಿಕೆ

¼ ಚಮಚ ಕರಿಮೆಣಸಿನ ಪುಡಿ, ಒಂದು ಚಮಚ ಜೇನು ತುಪ್ಪ ಮತ್ತು 2 ಚಮಚ ನಿಂಬೆ ರಸವನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ, ಎಲ್ಲವನ್ನೂ ಬಿಸಿ ನೀರಿನಲ್ಲಿ ಹಾಕಿ ಮಿಶ್ರಣ ಮಾಡಿ. ನಿಂಬೆಹಣ್ಣಿನಲ್ಲಿ ಪಾಲಿಫೆನಾಲ್‍ಗಳು ಅಧಿಕವಾಗಿರುತ್ತವೆ ಮತ್ತು ಇವು ತೂಕ ಹೆಚ್ಚಾಗುವಿಕೆಯನ್ನು ತಡೆಯುತ್ತದೆ. ಜೊತೆಗೆ ಇದು ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ ಹಾಗು ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ.

ಮೂಗಿನಲ್ಲಿ ರಕ್ತ ಸ್ರಾವ

ಮೂಗಿನಲ್ಲಿ ರಕ್ತ ಸ್ರಾವ

ನಿಂಬೆ ರಸದಲ್ಲಿ ಒಂದು ಹತ್ತಿಯ ಉಂಡೆಯನ್ನು ಅದ್ದಿ, ಮೂಗಿನ ಹೊಳ್ಳೆಯಲ್ಲಿ ಇಡಿ ಹಾಗು ನಿಮ್ಮ ತಲೆಯನ್ನು ಹಿಂಬದಿಗೆ ಬಾಗಿಸಿ. ಇದರಿಂದ ಮೂಗಿನಲ್ಲಿ ರಕ್ತ ಸ್ರಾವವಾಗುವಿಕೆ ನಿಲ್ಲುತ್ತದೆ.

ಹಲ್ಲು ನೋವು

ಹಲ್ಲು ನೋವು

½ ಚಮಚ ಲವಂಗದ ಎಣ್ಣೆಯನ್ನು ತೆಗೆದಿಕೊಳ್ಳಿ ಮತ್ತು ಅದಕ್ಕೆ ಕರಿಮೆಣಸು ಹಾಗು ಉಪ್ಪಿನ ಜೊತೆಗೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿ. ಇದನ್ನು ಹಲ್ಲಿಗೆ ಲೇಪಿಸಿ, ನೋವು ನಿವಾರಣೆಯಾಗುತ್ತದೆ. ಅಯ್ಯೋ ವಿಪರೀತ ಹಲ್ಲು ನೋವು, ನಿದ್ದೆಯೇ ಬರುತ್ತಿಲ್ಲ

ಅಸ್ತಮಾ

ಅಸ್ತಮಾ

ಸ್ವಲ್ಪ ನೀರನ್ನು ಕಾಯಿಸಿಕೊಳ್ಳಿ ಹಾಗು ಅದಕ್ಕೆ 10 ಕರಿಮೆಣಸಿನ ಕಾಳು, 15 ತುಳಸಿ ಎಲೆ ಮತ್ತು 2 ಲವಂಗವನ್ನು ಬೆರೆಸಿ. ಇದನ್ನು ಸಿಮ್‌ನಲ್ಲಿಟ್ಟು 15 ನಿಮಿಷಗಳ ಕಾಲ ಕಾಯಿಸಿ ಹಾಗು ನಂತರ ಇದನ್ನು ಶೋಧಿಸಿ. ಇದಕ್ಕೆ ರುಚಿಯನ್ನು ನೀಡಲು ಸಾವಯವ ಜೇನು ತುಪ್ಪವನ್ನು, ನಿಂಬೆ ರಸ ಹಾಗು ಉಪ್ಪನ್ನು ಬೆರೆಸಿ ಪ್ರತಿನಿತ್ಯ ಸೇವಿಸಿ. ಇದನ್ನು ಗಾಳಿಯಾಡದ ಜಾಡಿಯಲ್ಲಿ ಸಂಗ್ರಹಿಸಿಡಲು ಮರೆಯಬೇಡಿ.

ಪಿತ್ತಗಲ್ಲುಗಳು (ಗಲ್ಲ್‌ಸ್ಟೋನ್‌ಗಳು)

ಪಿತ್ತಗಲ್ಲುಗಳು (ಗಲ್ಲ್‌ಸ್ಟೋನ್‌ಗಳು)

ಜೀರ್ಣಕಾರಿ ದ್ರವಗಳು ಹೊಟ್ಟೆಯಲ್ಲಿ ಸಂಗ್ರಹಗೊಂಡಾಗ ಪಿತ್ತಗಲ್ಲುಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಜೀರ್ಣಕ್ರಿಯೆ ಕುಂಠಿತವಾಗಿ ನೋವು ಕಾಣಿಸಿಕೊಳ್ಳುತ್ತದೆ. ಮೆಣಸು, ನಿಂಬೆರಸ ಮತ್ತು ಆಲೀವ್ ಎಣ್ಣೆಯನ್ನು 1:3 ಪ್ರಮಾಣದಲ್ಲಿ ಬೆರೆಸಿಕೊಳ್ಳಿ ಮತ್ತು ಪ್ರತಿದಿನ ಇದನ್ನು ಸೇವಿಸಿ.

English summary

Lemon, Salt, and Pepper will Cure these diseases

This natural remedy we are taking about is more effective than any antibiotic that is usually loaded with annoying side effects. Lemon juice is known to be a very powerful and potent agent that has antibacterial, antiviral and immune-building properties.
X
Desktop Bottom Promotion