ಇದೆಲ್ಲಾ 'ಕಿಡ್ನಿ' ಸಮಸ್ಯೆಯ ಲಕ್ಷಣಗಳು-ಯಾವುದಕ್ಕೂ ನಿರ್ಲಕ್ಷಿಸದಿರಿ!

By: Arshad
Subscribe to Boldsky

ನಾವೆಲ್ಲಾ ದೈನಂದಿನ ಚಟುವಟಿಕೆಗಳಲ್ಲಿ ಎಷ್ಟು ಒಗ್ಗಿಹೋಗಿಬಿಡುತ್ತೇವೆಂದರೆ ನಮ್ಮ ದೇಹದಲ್ಲಿ ಮೂಡುತ್ತಿರುವ ಕೆಲವು ತೊಂದರೆಗಳ ಬಗ್ಗೆ ದೇಹವೇ ನೀಡುವ ಕೆಲವು ಸೂಚನೆಗಳನ್ನು ಗ್ರಹಿಸುವುದನ್ನೂ ನಿರ್ಲಕ್ಷಿಸಿಬಿಡುತ್ತೇವೆ. ಇದರ ಬಗ್ಗೆ ನಾವು ಗಮನ ಹರಿಸುವುದು ಯಾವಾಗ ಎಂದರೆ ಈ ತೊಂದರೆ ಉಲ್ಬಣಿಸಿ ಅಪಾರ ನೋವು ನೀಡಿದಾಗ ಮಾತ್ರ.

ಮೂತ್ರಪಿಂಡಗಳ ವೈಫಲ್ಯವೂ ಇದೇ ಬಗೆಯ ತೊಂದರೆಯಾಗಿದ್ದು ಹೆಚ್ಚಿನವರು ಈ ತೊಂದರೆಯ ಮುನ್ಸೂಚನೆಗಳನ್ನು ಅಲಕ್ಷಿಸುತ್ತಾರೆ. ವಿಶ್ವದಾದ್ಯಂತ ಮೂತ್ರಪಿಂಡಗಳ ವೈಫಲ್ಯದಿಂದ ಬಳಲುತ್ತಿರುವವರ ಸಂಖ್ಯೆ ಅಪಾರವಾಗಿದ್ದರೂ ಈ ಬಗ್ಗೆ ಹೆಚ್ಚಿನ ಮಾಹಿತಿ ಎಲ್ಲರಿಗೆ ತಲುಪದೇ ಇರುವುದು ಚಿಂತಾಜನಕವಾಗಿದೆ. ನೆನಪಿರಲಿ- ಇದೇ ಕಾರಣಕ್ಕೆ ಕಿಡ್ನಿ ಸಮಸ್ಯೆ ಕಾಣಿಸಿಕೊಳ್ಳುವುದು!

ಮೂತ್ರಪಿಂಡ ವೈಫಲ್ಯದತ್ತ ವಾಲುತ್ತಿದೆ ಎಂಬುದನ್ನು ಕೆಲವು ಪರೀಕ್ಷೆಗಳ ಮೂಲಕ ಖಚಿತಪಡಿಸಿಕೊಳ್ಳಬಹುದು. ಅದಕ್ಕೂ ಮೊದಲು ನಮ್ಮ ದೇಹವೇ ಕೆಲವು ಸೂಚನೆಗಳ ಮೂಲಕ ಈ ವಿಷಯವನ್ನು ಪ್ರಕಟಿಸುತ್ತದೆ. ಆದರೆ ಈ ಸೂಚನೆಗಳನ್ನು ಗ್ರಹಿಸಲು ಕೊಂಚ ಗಮನ ಹರಿಸುವುದು ಮುಖ್ಯ. ಇಂದಿನ ಲೇಖನದಲ್ಲಿ ಈ ಸೂಚನೆಗಳ ಬಗ್ಗೆ ಕೆಲವು ಅಮೂಲ್ಯವಾದ ಮಾಹಿತಿಯನ್ನು ನೀಡಲಾಗಿದ್ದು ಪ್ರತಿಯೊಬ್ಬರೂ ಈ ಬಗ್ಗೆ ಅರಿವು ಮೂಡಿಸಿಕೊಳ್ಳುವುದು ಅಗತ್ಯವಾಗಿದೆ.   ಕಿಡ್ನಿ ನೋವಿಗೆ ಉಪಶಮನವನ್ನು ನೀಡುವ ಸಂಜೀವಿನ ಔಷಧಿಗಳು

ಈ ಸೂಚನೆಗಳಲ್ಲಿ ಕನಿಷ್ಠ ಒಂದನ್ನಾದರೂ ನೀವು ಅನುಭವಿಸಿದ್ದರೆ ತಕ್ಷಣವೇ ವೈದ್ಯರಲ್ಲಿ ತಪಾಸಣೆಗೊಳಪಟ್ಟು ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಮುಂದೆ ಎದುರಾಗಬಹುದಾದ ದೊಡ್ಡ ತೊಂದರೆಯಿಂದ ರಕ್ಷಣೆ ಪಡೆಯಬಹುದು.....

ಸುಸ್ತು ಮತ್ತು ಶಕ್ತಿ ಇಲ್ಲದಿರುವುದು

ಸುಸ್ತು ಮತ್ತು ಶಕ್ತಿ ಇಲ್ಲದಿರುವುದು

ಒಂದು ವೇಳೆ ಇಡಿಯ ದಿನ ಸುಸ್ತು ಆವರಿಸಿದ್ದು ಶಕ್ತಿ ಇಲ್ಲದಿರುವಂತೆ ಅನ್ನಿಸಿದರೆ ತಡಮಾಡದೇ ತಕ್ಷಣವೇ ಪರೀಕ್ಷೆಗೆ ಒಳಪಡುವುದು ಅವಶ್ಯವಾಗಿದೆ. ಮೂತ್ರಪಿಂಡ ರಕ್ತವನ್ನು ಶೋಧಿಸಲು ವಿಫಲವಾದ ಕಾರಣ ರಕ್ತದಲ್ಲಿ ಕಲ್ಮಶಗಳು ಬೆರೆತು ದೇಹದ ಅಂಗಾಂಗಗಳಿಗೆ ಶಕ್ತಿ ಲಭಿಸದಿರುವ ಕಾರಣ ಇಡಿಯ ದಿನದ ಚಟುವಟಿಕೆಗೆ ಅಗತ್ಯವಾದ ಸಾಮರ್ಥ್ಯ ಸಾಲದೇ ನಿತ್ರಾಣತೆ ಎದುರಾಗುತ್ತದೆ. ಕೆಲವೊಮ್ಮೆ ಈ ಸ್ಥಿತಿ ರಕ್ತಹೀನತೆಗೂ ಕಾರಣವಾಗಬಹುದು.

 ಮತ್ತು ಕೆಂಪಗಾಗುವುದು

ಮತ್ತು ಕೆಂಪಗಾಗುವುದು

ರಕ್ತದಲ್ಲಿ ಕಲ್ಮಶಗಳು ಹೆಚ್ಚಾದಂತೆಯೇ ಚರ್ಮದಡಿಯಲ್ಲಿಯೂ ಕಲ್ಮಶಗಳು ಹೆಚ್ಚುತ್ತಾ ಹೋಗುತ್ತವೆ. ಇದು ಚರ್ಮದಲ್ಲಿ ತುರಿಕೆಗೆ ಕಾರಣವಾಗುತ್ತದೆ. ತುರಿಸಿದ ಭಾಗ ಕೆಂಪಗಾಗುವುದು ಮತ್ತು ಇನ್ನಷ್ಟು ಹೆಚ್ಚು ತುರಿಸಲು ಪ್ರೇರಣೆ ನೀಡುತ್ತದೆ. ಚರ್ಮ ಹೆಚ್ಚು ಹೆಚ್ಚು ಒಣಗುತ್ತಾ ಹೋಗುತ್ತದೆ. ಅಲ್ಲಲ್ಲಿ ವೃತ್ತಾಕಾರದ ಗುರುತುಗಳು ಮೂಡುತ್ತವೆ.ನವೆಯ ಸಮಸ್ಯೆಯೇ? ಇಲ್ಲಿದೆ ಮನೆಮದ್ದು !

ವಾಕರಿಕೆ ಮತ್ತು ವಾಂತಿ

ವಾಕರಿಕೆ ಮತ್ತು ವಾಂತಿ

ಯಾವಾಗ ರಕ್ತದಲ್ಲಿ ಕಲ್ಮಶಗಳು ಸಂಗ್ರಹವಾಗತೊಡಗುತ್ತದೆಯೋ ಆಗ ವಾಕರಿಕೆ ಪ್ರಾರಂಭವಾಗುತ್ತದೆ. ಕಲ್ಮಶಗಳು ಹೆಚ್ಚಾದಷ್ಟೂ ವಾಕರಿಕೆಯೂ ಹೆಚ್ಚಾಗುತ್ತಾ ಕಡೆಗೊಮ್ಮೆ ಹೊಟ್ಟೆಯಲ್ಲಿದ್ದುದೆಲ್ಲಾ ವಾಂತಿಯ ಮೂಲಕ ಹೊರದಬ್ಬಲ್ಪಡುತ್ತದೆ.

ವಾಕರಿಕೆ ಮತ್ತು ವಾಂತಿ

ವಾಕರಿಕೆ ಮತ್ತು ವಾಂತಿ

ಆದರೆ ವಾಂತಿ ಮೂತ್ರಪಿಂಡದ ವೈಫಲ್ಯದ ಕಡೆಯ ಹಂತದಲ್ಲಿ ಕಾಣಬರುವ ಕಾರಣ ಪ್ರಾರಂಭದ ವಾಕರಿಕೆಯನ್ನೇ ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಪರೀಕ್ಷೆಗೊಳಪಡಬೇಕು.

ಸತತವಾಗಿ ಮೂತ್ರಕ್ಕೆ ಅವಸರವಾಗುವುದು

ಸತತವಾಗಿ ಮೂತ್ರಕ್ಕೆ ಅವಸರವಾಗುವುದು

ಒಂದು ವೇಳೆ ಇಡಿಯ ಸತತವಾಗಿ ಮೂತ್ರಕ್ಕೆ ಅವಸರವಾದರೆ, ವಿಶೇಷವಾಗಿ ರಾತ್ರಿ ಹೊತ್ತು ಹೆಚ್ಚು ಹೆಚ್ಚು ಅವಸರವಾಗುತ್ತಿದ್ದರೆ ಮೂತ್ರಪಿಂಡ ತನ್ನ ಕ್ಷಮತೆಯನ್ನು ಕಳೆದುಕೊಳ್ಳುತ್ತಿದೆ ಎಂಬ ಸೂಚನೆಯಾಗಿದೆ.

ಮೂತ್ರದಲ್ಲಿ ರಕ್ತ ಕಂಡುಬರುವುದು

ಮೂತ್ರದಲ್ಲಿ ರಕ್ತ ಕಂಡುಬರುವುದು

ಮೂತ್ರಪಿಂಡದ ಪ್ರಮುಖ ಕಾರ್ಯವೆಂದರೆ ರಕ್ತವನ್ನು ಶೋಧಿಸಿ ಕಲ್ಮಶಗಳನ್ನು ನಿವಾರಿಸುವುದು. ಒಂದು ವೇಳೆ ಇದರ ಕ್ಷಮತೆ ಉಡುಗಿದರೆ ರಕ್ತವನ್ನು ಪೂರ್ಣವಾಗಿ ಶೋಧಿಸಲು ವಿಫಲವಾಗುತ್ತದೆ.

ಮೂತ್ರದಲ್ಲಿ ರಕ್ತ ಕಂಡುಬರುವುದು

ಮೂತ್ರದಲ್ಲಿ ರಕ್ತ ಕಂಡುಬರುವುದು

ಪರಿಣಾಮವಾಗಿ ಕಲ್ಮಶಗಳೊಂದಿಗೆ ರಕ್ತವೂ ಹೊರಹೋಗುತ್ತದೆ. ಇದು ಮೂತ್ರದೊಂದಿಗೆ ಬೆರೆತು ಮೂತ್ರದ ಬಣ್ಣವನ್ನು ಬದಲಿಸುತ್ತದೆ. ಇದು ಮೂತ್ರಪಿಂಡದ ವೈಫಲ್ಯವನ್ನು ಸೂಚಿಸುವ ಪ್ರಮುಖ ಸೂಚನೆಯಾಗಿದೆ. ಮೂತ್ರದಲ್ಲಿ ರಕ್ತದ ಕಣಗಳು ಕಾಣುತ್ತಿವೆಯೇ? ಈ ಲೇಖನ ತಪ್ಪದೇ ಓದಿ

ಹಸಿವು ಇಲ್ಲದಿರುವುದು

ಹಸಿವು ಇಲ್ಲದಿರುವುದು

ದೇಹದಲ್ಲಿರುವ ತ್ಯಾಜ್ಯಗಳನ್ನು ಕಿಡ್ನಿಯು ಫಿಲ್ಟರ್ ಮಾಡುವಲ್ಲಿ ವಿಫಲಗೊಂಡಾಗ ನಿಮಗೆ ಹಸಿವು ಕಾಣಿಸುವುದಿಲ್ಲ. ಅಂತೆಯೇ ಬಾಯಿಯಲ್ಲಿ ಕೆಟ್ಟ ವಾಸನೆ ಬರುತ್ತದೆ.

ಕೈ ಹಾಗೂ ಪಾದ ಊದಿಕೊಳ್ಳುವುದು

ಕೈ ಹಾಗೂ ಪಾದ ಊದಿಕೊಳ್ಳುವುದು

ಕಿಡ್ನಿ ಸರಿಯಾಗಿ ಕಾರ್ಯನಿರ್ವಹಿಸಲು ವಿಫಲವಾದಾಗ ದೇಹದಲ್ಲಿ ಹೆಚ್ಚಿನ ಸೋಡಿಯಂ ಉಳಿದುಕೊಳ್ಳುತ್ತದೆ. ಇದರಿಂದ ಪಾದ ಹಾಗೂ ಕೈಗಳು ಉದಿಕೊಳ್ಳಲು ಆರಂಭವಾಗುತ್ತದೆ. ಇದು ಕಿಡ್ನಿ ವೈಫಲ್ಯದ ಲಕ್ಷಣಗಳಲ್ಲಿ ಒಂದಾಗಿದೆ.

ಕಾಡುವ ನಿಶ್ಯಕ್ತಿ

ಕಾಡುವ ನಿಶ್ಯಕ್ತಿ

ನಿಮಗೆ ಯಾವಾಗಲೂ ನಿಶ್ಯಕ್ತಿ ಕಾಡುತ್ತಾ ದೇಹದಲ್ಲಿ ಶಕ್ತಿ ಕಡಿಮೆಯಾದರೆ ನಿಮ್ಮನ್ನೊಮ್ಮೆ ಪರೀಕ್ಷಿಸಿಕೊಳ್ಳಿ. ರಕ್ತದಲ್ಲಿ ವಿಷ ಹಾಗೂ ಕಲ್ಮಶಗಳು ತುಂಬಿಕೊಳ್ಳುವುದು ಕಿಡ್ನಿ ವೈಫಲ್ಯ. ಇದರಿಂದ ನಿಶ್ಯಕ್ತಿ ಮತ್ತು ಬಲಹೀನತೆ ಉಂಟಾಗುತ್ತದೆ.

ಮೂತ್ರದಲ್ಲಿ ವ್ಯತ್ಯಾಸ

ಮೂತ್ರದಲ್ಲಿ ವ್ಯತ್ಯಾಸ

ಕಿಡ್ನಿ ವೈಫಲ್ಯ ತನ್ನ ಪ್ರಭಾವ ಬೀರುವುದೇ ಮೊದಲಿಗೆ ಮೂತ್ರದಲ್ಲಿ ವ್ಯತ್ಯಾಸ ಉಂಟುಮಾಡುವ ರೀತಿಯಲ್ಲಾಗಿದೆ. ರಾತ್ರಿ ವೇಳೆಯಲ್ಲಿ ಅತಿಯಾದ ಮೂತ್ರಶಂಕೆ, ಮೂತ್ರಹೊರಹೋಗುವಿಕೆಯಲ್ಲಿ ಹೆಚ್ಚಳ ಮತ್ತು ಕಡಿಮೆಯಾಗುವಿಕೆ, ಮೂತ್ರಶಂಕೆ ಉಂಟಾಗುತ್ತಿದ್ದರೂ ವಿಸರ್ಜಿಸುವಲ್ಲಿ ಸಮಸ್ಯೆಯಾಗುವುದು, ಮೂತ್ರಶಂಕೆ ಮಾಡುವಾಗ ನೋಯುವುದು, ಮೂತ್ರದಲ್ಲಿ ಉಂಟಾಗುವ ಸೋಂಕು, ಮೂತ್ರದಲ್ಲಿ ರಕ್ತ ಕಾಣಿಸಿಕೊಳ್ಳುವುದು. ಹೀಗೆ ಇಂತಹ ಲಕ್ಷಣಗಳು ನಿಮಗೆ ಕಂಡುಬಂದಲ್ಲಿ ನಿಮ್ಮ ಕಿಡ್ನಿಗೆ ಅಪಾಯವಿದೆ ಎಂಬುದನ್ನು ಕಂಡುಕೊಳ್ಳಿ.

 

 

English summary

kidney-failure-symptoms-causes-prevention

In this article, we have listed some of the top symptoms of kidney failure that you must be aware of, as well as the causes of kidney failure and its prevention. So, continue reading to know more about the symptoms of kidney failure.
Subscribe Newsletter