For Quick Alerts
ALLOW NOTIFICATIONS  
For Daily Alerts

ಬಂದೇ ಬಿಟ್ಟಿದ್ದಾನೆ ಹಣ್ಣುಗಳ ರಾಜ 'ಮಾವು' ಬಾಯಿ ಚಪ್ಪರಿಸಿ ತಿನ್ನಿ!!

ಹಣ್ಣುಗಳ ರಾಜ ಮಾವಿನ ಹಣ್ಣು. ಎಲ್ಲರಿಗೂ ಎಲ್ಲಾ ಹಣ್ಣುಗಳು ಇಷ್ಟವಾಗದೇ ಇದ್ದರೂ ಮಾವಿನ ಹಣ್ಣನ್ನು ಇಷ್ಟಪಡದೇ ಇರುವ ವ್ಯಕ್ತಿಗಳು ಇಲ್ಲವೇ ಇಲ್ಲವೆನ್ನಬಹುದು.

By Arshad
|

ಹಣ್ಣುಗಳ ರಾಜ ಮಾವಿನ ಹಣ್ಣು. ಎಲ್ಲರಿಗೂ ಎಲ್ಲಾ ಹಣ್ಣುಗಳು ಇಷ್ಟವಾಗದೇ ಇದ್ದರೂ ಮಾವಿನ ಹಣ್ಣನ್ನು ಇಷ್ಟಪಡದೇ ಇರುವ ವ್ಯಕ್ತಿಗಳು ಇಲ್ಲವೇ ಇಲ್ಲವೆನ್ನಬಹುದು. ಮಾವಿನ ಹಣ್ಣುಗಳಲ್ಲಿ ಎಷ್ಟೋ ತಳಿಗಳಿವೆ. ಎಲ್ಲವೂ ಸಿಹಿಯಾಗಿಯೇ ಇರುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಕೊಂಚ ಹೆಚ್ಚೇ ಹುಳಿ ಇರಬಹುದು. ಜಗತ್ತಿನಲ್ಲಿ 63 ತಳಿ ಇವೆಯಂತೆ...! ಆದರೆ ಅಷ್ಟೂ ತಳಿಗಳು ಒಂದೇ ಕಡೆ ಬೆಳೆಯುವ ಊರೆಂದರೆ ನಮ್ಮ ಕರ್ನಾಟಕದ ಶ್ರೀನಿವಾಸಪುರ! ಸ್ವಲ್ಪ ಹುಳಿ-ಸಕತ್ ರುಚಿ, ಮಾವಿನಕಾಯಿ ಚಿತ್ರಾನ್ನ ರೆಸಿಪಿ

ಮಾವು ಕೊಂಚ ಹುಳಿ ಎಂದಾಕ್ಷಣ ಇದರಲ್ಲಿ ಪೋಷಕಾಂಶಗಳು ಇಲ್ಲವೆಂದಲ್ಲ, ಇದರಲ್ಲಿರುವ ಕೆಲವು ವಿಶಿಷ್ಟ ಪೋಷಕಾಂಶಗಳ ಕಾರಣವಾಗಿಯೇ ಇವು ಕೊಂಚ ಹುಳಿಯಾಗಿವೆ! ಸಿಹಿಯನ್ನು ಆಸ್ವಾದಿಸುವ ಹುಮ್ಮಸ್ಸಿನಲ್ಲಿ ಹೆಚ್ಚಿನವರು ಇದರ ಆರೋಗ್ಯಕರ ಗುಣಗಳನ್ನೇ ಮರೆತುಬಿಡುತ್ತಾರೆ. ಮಾವಿನ ಎಲೆಗಳಲ್ಲಿದೆ, ಲೆಕ್ಕಕ್ಕೆ ಸಿಗದಷ್ಟು ಗುಣಗಳು

ಮಾವಿನಲ್ಲಿ ಯಥೇಚ್ಛ ಪ್ರಮಾಣದಲ್ಲಿ ವಿಟಮಿನ್ನುಗಳು, ಖನಿಜಗಳು ಮತ್ತು ಆಂಟಿ ಆಕ್ಸಿಡೆಂಟುಗಳಿವೆ. ಅಲ್ಲದೇ ಇದರ ತಿರುಳಿನಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಇದ್ದು ಮಲಬದ್ಧತೆಯನ್ನು ನಿವಾರಿಸಲು ಸಮರ್ಥವಾಗಿದೆ. ಅಲ್ಲದೇ ಮೂಲವ್ಯಾಧಿ ಹಾಗೂ ಕಟ್ಟಿಕೊಳ್ಳುವ ಹೊಟ್ಟೆ (spastic colon) ಮೊದಲಾದ ತೊಂದರೆಗಳಿಂದಲೂ ರಕ್ಷಿಸುತ್ತದೆ. ಮಾವಿನಲ್ಲಿ ಉತ್ತಮ ಪ್ರಮಾಣದ ಪೊಟ್ಯಾಶಿಯಂ ಇದ್ದು ಭಾರೀ ಊಟದ ಬಳಿಕ ಸೇವಿಸಲು ಉತ್ತಮವಾದ ಆಯ್ಕೆಯಾಗಿದ್ದು ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಬನ್ನಿ, ಮಾವಿನ ಗುಣಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಅರಿಯುವ ಪ್ರಯತ್ನವನ್ನು ಮಾಡೋಣ...

ಮಾವಿನಲ್ಲಿದೆ ವಿಟಮಿನ್ ಮತ್ತು ಖನಿಜಗಳ ಆಗರ

ಮಾವಿನಲ್ಲಿದೆ ವಿಟಮಿನ್ ಮತ್ತು ಖನಿಜಗಳ ಆಗರ

ಮಾವಿನ ಹಣ್ಣನ್ನು ಸುಮ್ಮಸುಮ್ಮನೇ ಹಣ್ಣುಗಳ ರಾಜನೆಂದು ಕರೆದಿಲ್ಲ. ಇದರಲ್ಲಿ 76% ವಿಟಮಿನ್ ಸಿ ಮತ್ತು 9% ತಾಮ್ರವಿದ್ದು ದಿನವಿಡೀ ಚಟುವಟಿಕೆಯಿಂದಿರಲು ನೆರವಾಗುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಮಾವಿನಲ್ಲಿರುವ ವಿಟಮಿನ್ ಎ, ಸಿ ಮತ್ತು ಸುಮಾರು ಇಪ್ಪತ್ತೈದಕ್ಕೂ ಹೆಚ್ಚಿನ ವಿಧದ ಕ್ಯಾರೋಟಿನಾಯ್ಡುಗಳಿದ್ದು ನಮ್ಮ ಜೀರ್ಣವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ. ಇದು ಮಾವಿನ ಹಣ್ಣಿನ ಅತ್ಯುತ್ತಮ ಗುಣಗಳಲ್ಲೊಂದಾಗಿದೆ.

ಹೃದಯ ಸ್ತಂಭನದಿಂದ ರಕ್ಷಿಸುತ್ತದೆ

ಹೃದಯ ಸ್ತಂಭನದಿಂದ ರಕ್ಷಿಸುತ್ತದೆ

ಒಂದು ಮಾವಿನ ಕಾಯಿಯ ತಿರುಳನ್ನು ತುರಿದು ಇದರ ರಸವನ್ನು ಹಿಂಡಿ ಕುಡಿಯುವ ಮೂಲಕ ಹೃದಯ ಸ್ತಂಭವನ್ನು ತಡೆಯಬಹುದು. ಈ ಶಕ್ತಿ ಇರುವ ಈ ಪೇಯ ಅಪ್ಪಟ ನೈಸರ್ಗಿಕವಾಗಿದ್ದು ಹೃದಯದ ಕ್ಷಮತೆಯನ್ನು ಹೆಚ್ಚಿಸುತ್ತದೆ. ಅಲ್ಲದೇ ಇದರಲ್ಲಿರುವ ಕರಗದ ನಾರು, ವಿಟಮಿನ್ನುಗಳು ಮತ್ತು ಪೊಟ್ಯಾಶಿಯಂ ಹೃದಯಸಂಬಂಧಿ ತೊಂದರೆಗಳಿಂದ ರಕ್ಷಿಸುತ್ತದೆ.

ಕಣ್ಣುಗಳ ಆರೋಗ್ಯವನ್ನು ಉತ್ತಮಗೊಳಿಸುತ್ತದೆ

ಕಣ್ಣುಗಳ ಆರೋಗ್ಯವನ್ನು ಉತ್ತಮಗೊಳಿಸುತ್ತದೆ

ಒಂದು ಕಪ್ ನಷ್ಟು ಮಾವಿನ ಹಣ್ಣಿನ ತಿರುಳಿನ ಸೇವನೆಯಿಂದ ದಿನದ ಅಗತ್ಯದ 25%ರಷ್ಟು ವಿಟಮಿನ್ ಎ ಅನ್ನು ಪಡೆಯಬಹುದು. ಕಣ್ಣುಗಳ ಆರೋಗ್ಯಕ್ಕೆ ವಿಟಮಿನ್ ಎ ಅತ್ಯಂತ ಅಗತ್ಯವಾಗಿದೆ. ಅಲ್ಲದೇ ಕಣ್ಣುಗಳು ಒಣಗುವುದು, ರಾತ್ರಿಯ ಅಂಧತ್ವ ಮೊದಲಾದ ತೊಂದರೆಗಳಿಂದಲೂ ರಕ್ಷಿಸುತ್ತದೆ.

ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ

ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ

ಮಾವಿನ ಹಣ್ಣಿನಲ್ಲಿರುವ ವಿಟಮಿನ್ ಸಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೇ ಲೈಂಗಿಕ ಶಕ್ತಿಯನ್ನೂ ಹೆಚ್ಚಿಸುವ ಕ್ಷಮತೆ ಹೊಂದಿದೆ. ಇದರ ಕಾಮೋತ್ತೇಜಕ ಗುಣಗಳು ಪ್ರೀತಿಯನ್ನು ಹೆಚ್ಚಿಸಲು ಖಂಡಿತಾ ನೆರವಾಗುತ್ತವೆ.

ಗರ್ಭಿಣಿಯರಿಗೆ ಕಾಡುವ ವಾಕರಿಕೆ ಸಮಸ್ಯೆಗೆ

ಗರ್ಭಿಣಿಯರಿಗೆ ಕಾಡುವ ವಾಕರಿಕೆ ಸಮಸ್ಯೆಗೆ

ಗರ್ಭಿಣಿಯರಿಗೆ ಬೆಳಗ್ಗಿನ ವಾಕರಿಕೆಯನ್ನು ಕಡಿಮೆಗೊಳಿಸುತ್ತದೆ ಗರ್ಭಿಣಿಯರಿಗೆ ಹುಳಿ ತಿನ್ನುವ ಬಯಕೆ ಹೆಚ್ಚಾಗುವುದರಿಂದ ಉಪ್ಪಿನಕಾಯಿ, ಲಿಂಬೆ, ಹುಣಸೆ ಮೊದಲಾದವುಗಳನ್ನು ಹೆಚ್ಚು ಸೇವಿಸುತ್ತಾರೆ. ಪರಿಣಾಮವಾಗಿ ಬೆಳಿಗ್ಗೆ ಎದ್ದಾಗ ಹೊಟ್ಟೆಭಾರವಾಗಿದ್ದು ವಾಕರಿಕೆ ಬಂದಂತಾಗುತ್ತದೆ. morning sickness ಎಂದು ಕರೆಯಲ್ಪಡುವ ಈ ವಾಕರಿಕೆಯಿಂದ ಬಿಡುಗಡೆ ಪಡೆಯಲು ಮಾವಿನಕಾಯಿ ಉತ್ತಮ ಪರಿಹಾರವಾಗಿದೆ. ಹಣ್ಣುಗಳ ರಾಜ 'ಮಾವಿನಹಣ್ಣು' ಗರ್ಭಿಣಿಯರ ಆರೋಗ್ಯಕ್ಕೆ ಒಳ್ಳೆಯದು...

ಯಕೃತ್ತಿಗೂ ಒಳ್ಳೆಯದು

ಯಕೃತ್ತಿಗೂ ಒಳ್ಳೆಯದು

ಯಕೃತ್ತಿನ ಲಿವರ್ ತೊಂದರೆಗಳಿಗೆ ಮಾವಿನ ಕಾಯಿ ಉತ್ತಮವಾದ ಔಷದಿರೂಪದ ಆಹಾರವಾಗಿದೆ. ಹಸಿಮಾವಿನ ಕಾಯಿಯನ್ನು ಜಗಿದು ನುಂಗುವುದರಿಂದ ಪಿತ್ತಕೋಶ ಹೆಚ್ಚಿನ ಪಿತ್ತರಸವನ್ನು ಸ್ರವಿಸಲು ನೆರವಾಗುತ್ತದೆ. ಈ ರಸವು ಕರುಳಿನಲ್ಲಿ ಸೋಂಕು ಉಂಟುಮಾಡುವ ಬ್ಯಾಕ್ಟೀರಿಯಾಗಳಿಂದ ರಕ್ಷಿಸುತ್ತದೆ.

ಮಲಬದ್ಧತೆಯನ್ನು ನಿವಾರಿಸುತ್ತದೆ

ಮಲಬದ್ಧತೆಯನ್ನು ನಿವಾರಿಸುತ್ತದೆ

ನಾರು ಕಡಿಮೆ ಇರುವ ಆಹಾರಗಳನ್ನು ಸೇವಿಸುವುದರಿಂದ ಮಲಬದ್ಧತೆ ಉಂಟಾಗುತ್ತದೆ. ಒಂದು ವೇಳೆ ಮಲವಿಸರ್ಜನೆ ಸಮಯಕ್ಕೆ ಸರಿಯಾಗಿ ಆಗದೇ ಇದ್ದರೆ ಮತ್ತು ಕಷ್ಟಕರವಾಗಿದ್ದರೆ ಹಸಿಮಾವಿನ ಕೆಲವು ತುಂಡುಗಳನ್ನು ಸೇವಿಸುವುದರಿಂದ ಶೀಘ್ರ ಪರಿಹಾರ ದೊರಕುತ್ತದೆ. ಕೆಲವು ಮಾವಿನ ಕಾಯಿಯ ತುಂಡುಗಳಿಗೆ ಉಪ್ಪು ಚಿಮುಕಿಸಿ ಕೊಂಚ ಜೇನು ಸವರಿ ತಿನ್ನುವುದರಿಂದ ಉಪಶಮನ ದೊರಕುತ್ತದೆ.

ಒಸಡುಗಳನ್ನು ಗಟ್ಟಿಗೊಳಿಸುತ್ತದೆ

ಒಸಡುಗಳನ್ನು ಗಟ್ಟಿಗೊಳಿಸುತ್ತದೆ

ಹಲ್ಲು ಮತ್ತು ಒಸಡುಗಳ ನಡುವಣ ಸಂದುಗಳಲ್ಲಿ ಆಹಾರ ಸಂಗ್ರಹವಾಗಿ ಕಾಲಕಾಲಕ್ಕೆ ಹಲ್ಲುಜ್ಜದೇ ಇದ್ದರೆ ಸೋಂಕು ಉಂಟಾಗಿ ಒಸಡುಗಳು ಸಡಿಲಗೊಳ್ಳುತ್ತವೆ. ಹಸಿಮಾವಿನ ಕಾಯಿಯನ್ನು ತಿನ್ನುವುದರಿಂದ ಒಸಡುಗಳಿಗೆ ಅಗತ್ಯವಾದ ಪೋಷಕಾಂಶಗಳು ಲಭ್ಯವಾಗಿ ಸಂದುಗಳನ್ನು ಕಿರಿದುಗೊಳಿಸುತ್ತದೆ. ಪರಿಣಾಮವಾಗಿ ಆಹಾರ ಸಂಗ್ರಹವಾಗುವ ಪ್ರಮಾಣವೂ ಕಡಿಮೆಯಾಗಿ ಹಲ್ಲು ಮತ್ತು ಒಸಡುಗಳ ಆರೋಗ್ಯ ಉತ್ತಮಗೊಳ್ಳುತ್ತದೆ. ದುರ್ವಾಸನೆಯೂ ಕಡಿಮೆಯಾಗುತ್ತದೆ.

ಮೊಡವೆಗಳನ್ನು ನಿವಾರಿಸುತ್ತದೆ

ಮೊಡವೆಗಳನ್ನು ನಿವಾರಿಸುತ್ತದೆ

ಮಾವಿನ ಹಣ್ಣಿನ ತಿರುಳನ್ನು ಮುಖದ ಮೇಲೆ ಉಜ್ಜಿ ಅಥವಾ ಇಡಿ. ನಂತರ 10 ನಿಮಿಷಗಳ ನಂತರ ಮುಖ ತೊಳೆಯಿರಿ. ಇದರಿಂದ ಮೊಡವೆಗಳು ನಿಯಂತ್ರಣಕ್ಕೆ ಬರುತ್ತವೆ. ಮಾವಿನ ಹಣ್ಣನ್ನು ತಿನ್ನುವುದರಿಂದ ಸಹ ಮೊಡವೆಗಳನ್ನು ನಿಯಂತ್ರಿಸಬಹುದು.

ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ

ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ

ಮಾವು ಅತಿ ಹೆಚ್ಚು ವಿಟಮಿನ್‍ಗಳನ್ನು ಹೊಂದಿದೆ. ಹಾಗಾಗಿ ಇದು ಆರೋಗ್ಯಕ್ಕೆ ಉತ್ತಮವೆಂದು ಬೇರೆ ಹೇಳಬೇಕಿಲ್ಲ. ಅಲ್ಲದೆ ಮಾವಿನಲ್ಲಿ ರಂಜಕ (4% ಪ್ರತಿ 156 ಮಿ.ಗ್ರಾಂ) ಮತ್ತು ಮ್ಯಾಗ್ನಿಷಿಯಂ (2% ಪ್ರತಿ 9 ಮಿ.ಗ್ರಾಂ) ಇರುತ್ತದೆ. ಹೀಗಾಗಿ ಮಾವಿನಹಣ್ಣು ರಕ್ತದೊತ್ತಡವನ್ನು ನಿವಾರಿಸಲು ಇರುವ ಪ್ರಕೃತಿ ದತ್ತ ಪರಿಹಾರವಾಗಿದೆ.

English summary

It's The Season For Mangoes! Read To Know Its Health Benefits

Most of us love mangoes and there is hardly any reason for anybody to dislike this delicious fruit. No wonder, it's known as the King Of Fruits. But did you know that this fruit is not all about taste alone?It has some surprising health benefits as well that not many people are aware of.
X
Desktop Bottom Promotion