For Quick Alerts
ALLOW NOTIFICATIONS  
For Daily Alerts

ಮಾವಿನ ಎಲೆಗಳಲ್ಲಿದೆ, ಲೆಕ್ಕಕ್ಕೆ ಸಿಗದಷ್ಟು ಗುಣಗಳು

By Manu
|

ಶುಭಸಂದರ್ಭಕ್ಕೆ ಮಾವಿನ ಎಲೆಗಳ ತೋರಣ ಕಟ್ಟುವುದು ಒಂದು ಸಂಪ್ರದಾಯ. ಆದರೆ ಈ ಎಲೆಗಳ ಔಷಧೀಯ ಗುಣಗಳನ್ನು ಅರಿಯದವರು ಎಲೆಗಳನ್ನು ಹಾಗೇ ಎಸೆದುಬಿಡುತ್ತಾರೆ. ಮಾವಿನ ಎಲೆಗಳಲ್ಲಿಯೂ ಹಲವು ಔಷಧೀಯ ಗುಣಗಳಿವೆ. ವಿಶೇಷವಾಗಿ ಇದರಲ್ಲಿರುವ ಟ್ಯಾನಿನ್ ಎಂಬ ಪೋಷಕಾಂಶ ಪ್ರಾರಂಭಿಕ ಹಂತದಲ್ಲಿರುವ ಮಧುಮೇಹವನ್ನು ಗುಣಪಡಿಸುವ ಶಕ್ತಿ ಹೊಂದಿದೆ.

ಈ ಎಲೆಗಳನ್ನು ಹಲವು ವಿಧದಲ್ಲಿ ಬಳಸಬಹುದು. ಚೆನ್ನಾಗಿ ಬಲಿತ ಎಲೆಗಳನು ಚೆನ್ನಾಗಿ ಒಣಗಿಸಿ ಕುಟ್ಟಿ ಪುಡಿ ಮಾಡಿ ಇಡಿಯ ವರ್ಷ ಬಳಸಬಹುದು. ಮಾವಿನ ಎಲೆ: ಮಧುಮೇಹ, ಅಸ್ತಮಾ ರೋಗಕ್ಕೆ ರಾಮಬಾಣ

ಇನ್ನೊಂದು ವಿಧಾನದಲ್ಲಿ ಇವನ್ನು ಕುದಿಸಿ ಭಟ್ಟಿ ಇಳಿಸಿ ಇದರ ರಸವನ್ನು ಸಂಗ್ರಹಿಸುವುದು. ಮಾವಿನ ಎಲೆಯಲ್ಲಿ ವಿಟಮಿನ್ ಎ, ಬಿ.ಸಿ, ಫೆನಾಲ್ ಮತ್ತು ಫ್ಲೇವನಾಯ್ಡುಗಳಿವೆ. ಬನ್ನಿ, ಮಾವಿನ ಎಲೆಗಳ ಪ್ರಯೋಜನಗಳ ಬಗ್ಗೆ ಈಗ ನೋಡೋಣ....

ಕಿವಿಯಲ್ಲಿ ನೋವಿದ್ದಾಗ

ಕಿವಿಯಲ್ಲಿ ನೋವಿದ್ದಾಗ

ಒಂದು ವೇಳೆ ಕಿವಿಯಲ್ಲಿ ನೋವಿದ್ದರೆ ಮಾವಿನ ಹಸಿ ಎಲೆಯನ್ನು ಅರೆದು ಇದರ ರಸವನ್ನು ನೇರವಾಗಿ ಕಿವಿಗೆ ಬಿಡಿ. ಇದರಿಂದ ನೋವು ಶೀಘ್ರವಾಗಿ ಇಲ್ಲವಾಗುತ್ತದೆ. ರಸವನ್ನು ಕೊಂಚವೇ ಬಿಸಿ ಮಾಡುವುದು ಅಗತ್ಯ. ಕಿವಿ ನೋವಿಗೆ ಅಂತ್ಯಹಾಡುವ ಸರಳ ಮನೆಮದ್ದುಗಳು

ಉಸಿರಾಟದ ತೊಂದರೆ ಇದ್ದರೆ

ಉಸಿರಾಟದ ತೊಂದರೆ ಇದ್ದರೆ

ಎರಡು ಕಪ್ ನೀರಿನಲ್ಲಿ ಕೆಲವು ಮಾವಿನ ಎಲೆಗಳನ್ನು ಚಿಕ್ಕದಾಗಿ ಕತ್ತರಿಸಿ ಸೇರಿಸಿ ಬೇಯಿಸಿ. ಕುದಿಯಲು ಆರಂಭವಾದ ಬಳಿಕ ಉರಿ ಆರಿಸಿ ತಣಿಯಲು ಬಿಡಿ. ಹದಿನೈದು ನಿಮಿಷದ ಬಳಿಕ ಈ ನೀರನ್ನು ಸೋಸಿ ಇದಕ್ಕೆ ಮೂರು ಹನಿ ಜೇನು ಸೇರಿಸಿ ಕುಡಿಯಿರಿ. ಇದರಿಂದ ಕೆಮ್ಮು, ಶ್ವಾಸನಾಳಗಳಲ್ಲಿ ಕಟ್ಟಿಕೊಂಡಿದ್ದ ಕಫ ಸಡಿಲವಾಗಿ ಉಸಿರಾಟ ಸರಾಗವಾಗುತ್ತದೆ.

ಆಮಶಂಕೆ

ಆಮಶಂಕೆ

ಒಂದು ವೇಳೆ ಆಮಶಂಕೆ ಅಥವಾ ಅತಿಸಾರದಂತಹ ತೊಂದರೆ ಎದುರಾದರೆ ಅರ್ಧ ಚಿಕ್ಕಚಮಚ ಮಾವಿನ ಒಣ ಎಲೆಗಳ ಪುಡಿಯನ್ನು ಒಂದು ಕಪ್ ನೀರಿನಲ್ಲಿ ಬೆರೆಸಿ ದಿನಕ್ಕೆ ಮೂರು ಬಾರಿ ರೋಗಿಗೆ ಕುಡಿಸಿ.

ಮಧುಮೇಹ

ಮಧುಮೇಹ

ಒಂದು ವೇಳೆ ಮಧುಮೇಹ ಪ್ರಾರಂಭಿಕ ಹಂತದಲ್ಲಿದ್ದರೆ ಈ ವಿಧಾನ ಅನುಸರಿಸಿ. ಒಂದು ಪಾತ್ರೆಯಲ್ಲಿ ನೀರು ತುಂಬಿಸಿ ಇದರಲ್ಲಿ ಹಸಿ ಎಲೆಗಳನ್ನು ಕತ್ತರಿಸಿ ಸೇರಿಸಿ. ಈ ನೀರನ್ನು ಇಡಿಯ ರಾತ್ರಿ ನೆನೆಯಲು ಬಿಡಿ. ಬೆಳಿಗ್ಗೆ ಈ ನೀರನ್ನು ಪ್ರಥಮ ಆಹಾರವಾಗಿ ಸೇವಿಸಿ. ಇದರಿಂದ ಪ್ರಾರಂಭಿಕ ಹಂತದಲ್ಲಿರುವ ಮಧುಮೇಹವನ್ನು ನಿಯಂತ್ರಿಸುತ್ತದೆ. ಮಾವಿನ ಎಲೆ ಮಧುಮೇಹ ನಿಯಂತ್ರಿಸಬಲ್ಲದು!

ಮನಸ್ಸಿನ ನಿರಾಳತೆಗೆ

ಮನಸ್ಸಿನ ನಿರಾಳತೆಗೆ

ಒಂದು ವೇಳೆ ಮಾನಸಿಕರಾಗಿ ಬಹಳ ಒತ್ತಡ ಅನುಸರಿಸುತ್ತಿದ್ದರೆ ನೀವು ಸ್ನಾನ ಮಾಡುವ ಬಕೆಟ್ಟಿನ ನೀರಿಗೆ ಎರಡು ಅಥವಾ ಮೂರು ಕಪ್ ಒಣಮಾವಿನ ಎಲೆಗಳ ಪುಡಿಯನ್ನು ಕುದಿಸಿ ಸೋಸಿದ ನೀರನ್ನು ಬೆರೆಸಿ. ಈ ನೀರಿನಿಂದ ಸ್ನಾನ ಮಾಡುವ ಮೂಲಕ ಮನಸ್ಸು ನಿರಾಳವಾಗುತ್ತದೆ.

ರಕ್ತದೊತ್ತಡ ನಿಯಂತ್ರಿಸಲು

ರಕ್ತದೊತ್ತಡ ನಿಯಂತ್ರಿಸಲು

ಒಣ ಮಾವಿನ ಎಲೆಗಳ ಪುಡಿಯನ್ನು ಕುದಿಸಿ ತಯಾರಿಸಿದ ಟೀ ಕುಡಿಯುವ ಮೂಲಕ ರಕ್ತದೊತ್ತಡ ನಿಯಂತ್ರಣದಲ್ಲಿರಿಸುತ್ತದೆ. ಅಲ್ಲದೇ ರಕ್ತನಾಳಗಳನ್ನೂ ಸುಸ್ಥಿತಿಯಲ್ಲಿರಿಸುತ್ತದೆ.

ಮೂತ್ರಪಿಂಡಗಳ ಕಲ್ಲುಗಳನ್ನು ಕರಗಿಸಲು

ಮೂತ್ರಪಿಂಡಗಳ ಕಲ್ಲುಗಳನ್ನು ಕರಗಿಸಲು

ಒಂದು ಚಿಕ್ಕಚಮಚ ಒಣಮಾವಿನ ಎಲೆಗಳ ಪುಡಿಯನ್ನು ಒಂದು ಕಪ್ ನೀರಿನಲ್ಲಿ ಬೆರೆಸಿ ಇಡಿಯ ರಾತ್ರಿ ಹಾಗೇ ಬಿಡಿ. ಮರುದಿನ ಬೆಳಿಗ್ಗೆ ಈ ನೀರನ್ನು ಸೋಸಿ ಪ್ರಥಮ ಆಹಾರವಾಗಿ ಸೇವಿಸಿ. ಇದರಿಂದ ಮೂತ್ರಪಿಂಡಗಳಲಿದ್ದ ಕಲ್ಮಶಗಳು ಕರಗಿ ಕಲ್ಲುಗಳಾಗುವ ಸಂಭವ ಕಡಿಮೆಯಾಗುತ್ತದೆ ಹಾಗೂ ಕಲ್ಲುಗಳಿದ್ದರೆ ಕರಗಿ ಚಿಕ್ಕದಾಗಿ ಹೊರಹೋಗಲೂ ಸಾಧ್ಯವಾಗುತ್ತದೆ.

ಸುಟ್ಟಗಾಯಗಳಿಗೆ

ಸುಟ್ಟಗಾಯಗಳಿಗೆ

ಒಂದು ವೇಳೆ ಸುಟ್ಟಗಾಯವಾದರೆ ತಕ್ಷಣ ಒಣ ಮಾವಿನ ಎಲೆಯನ್ನು ಸುಟ್ಟು ಇದರ ಬೂದಿಯನ್ನು ಸಂಗ್ರಹಿಸಿ ಸುಟ್ಟ ಭಾಗದ ಮೇಲೆ ಹಚ್ಚಿ. ಇದರಿಂದ ಹೊಸ ಚರ್ಮ ಬೇಗನೇ ಬೆಳೆಯಲು ಸಾಧ್ಯವಾಗುತ್ತದೆ. ಸುಟ್ಟ ಗಾಯಗಳಿಗೆ ಕೆಲವು ಮನೆಮದ್ದು

English summary

Health Benefits Of Mango Leaves

Everyone knows the potential of mangoes but very less people know that even the leaves of the mango tree offer some health benefits. Yes, they do have some medicinal properties. In fact, the tannins present in them may help a lot in treating diabetes if its in its early stages. There are many ways to use the leaves. Drying them and grinding them will give you fine powder. Now, let us discuss about their benefits.
X
Desktop Bottom Promotion