'ಬಾದಾಮಿ ಹಾಲು' ಪ್ರಿಯರಿಗೆ ಇಲ್ಲಿದೆ ನೋಡಿ ಸಿಹಿ-ಸಿಹಿ ಸುದ್ದಿ

By: manu
Subscribe to Boldsky

ಬಾದಾಮಿ ಹಾಲು ಎಂದು ಇತ್ತೀಚೆಗೆ ಒಂದು ಪೇಯ ಮಾರುಕಟ್ಟೆಯಲ್ಲಿ ದೊರಕುತ್ತಿದೆ. ಹಿಂದೆಯೋ ಬಾದಾಮಿ ಹಾಲು ಎಂಬ ಪೊಟ್ಟಣ ಸಿಗುತ್ತಿತ್ತು, ಇದನ್ನು ಬರೆ ಬಿಸಿಹಾಲಿಗೆ ಬೆರೆಸಿ ಕುಡಿಯುತ್ತಿದ್ದೆವು. ಆದರೆ ಇದು ಕೇವಲ ಬಾದಾಮಿಯ ರುಚಿ ಹೊಂದಿದ್ದ ಅಗ್ಗದ ಪೇಯವಾಗಿತ್ತು.   ಬಾದಾಮಿ ಹಾಲು+ ಜೇನುತುಪ್ಪದ ಜೋಡಿಗೆ ನಮ್ಮದೊಂದು ಸಲಾಂ!

ಆದರೆ ಇಂದು ಸಿಗುತ್ತಿರುವ ಬಾದಾಮಿ ಹಾಲು ಹಸುವಿನ ಹಾಲಿನಷ್ಟೇ ದಪ್ಪಗಿದ್ದು ವೈದ್ಯರಿಂದ ಹಿಡಿದು ಸಾಮಾನ್ಯ ನಾಗರಿಕರವರೆಗೆ ಹಸುವಿನ ಹಾಲಿಗಿಂತಲೂ ಇದೇ ಆರೋಗ್ಯಕರ ಎಂದು ಪರಿಗಣಿಸಿ ಹಸುವಿನ ಹಾಲಿನ ಬದಲಿಗೆ ಇದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ಹಾಲಿನಲ್ಲಿ ಸಕ್ಕರೆ ಅತಿ ಕಡಿಮೆ ಪ್ರಮಾಣದಲ್ಲಿರುವುದು ಈ ಆಯ್ಕೆಗೆ ಪ್ರಮುಖ ಕಾರಣ. ಅಲ್ಲದೇ ಹಸುವಿನ ಹಾಲಿಗಿಂತಲೂ ಹೆಚ್ಚು ಆರೋಗ್ಯಕರ ಮತ್ತು ಪೌಷ್ಟಿಕ ಎಂದೂ ಹೇಳಲಾಗುತ್ತಿದೆ. ಆದರೂ, ನಿಮ್ಮ ಮನಸ್ಸಿನಲ್ಲಿ ಇನ್ನೂ ಕೆಲವು ಪ್ರಶ್ನೆಗಳು ಉಳಿದಿದ್ದರೆ ಇಂದಿನ ಲೇಖನ ನಿಮ್ಮ ಎಲ್ಲಾ ಸಂದೇಹಗಳನ್ನು ಪರಿಹರಿಸಲಿದೆ.  ಹಾಲು v/s ಬಾದಾಮಿ ಹಾಲು ಇವೆರಡರಲ್ಲಿ ಯಾರು ಹಿತವರು?

ಈ ಹಾಲಿನಲ್ಲಿ ಕ್ಯಾಲೋರಿಗಳು ಮತ್ತು ಕೊಬ್ಬು ಅತ್ಯಂತ ಕಡಿಮೆ ಪ್ರಮಾಣದಲ್ಲಿರುವುದು ಇನ್ನೊಂದು ಪ್ರಮುಖ ಕಾರಣ. ಅಲ್ಲದೇ ಇದರ ಸೇವನೆಯಿಂದ ಪಡೆಯಬಹುದಾದ ಪ್ರಯೋಜನಗಳಲ್ಲಿ ತೂಕದಲ್ಲಿ ಇಳಿಕೆ, ಉತ್ತಮಗೊಂಡಿರುವ ದೃಷ್ಟಿ, ಗಟ್ಟಿಗೊಂಡಿರುವ ಮೂಳೆಗಳು ಮತ್ತು ಆರೋಗ್ಯವಂತ ಹೃದಯ ಪ್ರಮುಖವಾಗಿವೆ. ಅಲ್ಲದೇ ಸ್ನಾಯುಗಳು ಬಲಗೊಳ್ಳಲು, ರಕ್ತದ ಒತ್ತಡ ಸಮತೋಲನದಲ್ಲಿರಿಸಲು, ಮೂತ್ರಪಿಂಡಗಳ ಕ್ಷಮತೆ ಹೆಚ್ಚಿಸಲು ಸಹಾ ನೆರವಾಗುತ್ತದೆ. ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈಗ ನೋಡೋಣ.....  

ಇದರಲ್ಲಿದೆ ಪರಿಪೂರ್ಣ ಪೋಷಕಾಂಶಗಳ ಆಗರ

ಇದರಲ್ಲಿದೆ ಪರಿಪೂರ್ಣ ಪೋಷಕಾಂಶಗಳ ಆಗರ

ಬಾದಾಮಿ ಹಾಲಿನಲ್ಲಿ ವಿಟಮಿನ್ ಡಿ, ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಹೇರಳವಾಗಿವೆ. ಅಲ್ಲದೇ ಇತರ ವಿಟಮಿನ್ನುಗಳು, ಖನಿಜಗಳು ಹಾಗೂ ವಿಶೇಷವಾಗಿ ವಿಟಮಿನ್ ಇ ಸಹಾ ಉತ್ತಮ ಪ್ರಮಾಣದಲ್ಲಿವೆ.

ಹೃದಯಕ್ಕೂ ಒಳ್ಳೆಯದು

ಹೃದಯಕ್ಕೂ ಒಳ್ಳೆಯದು

ಇದರಲ್ಲಿ ಪೂರ್ಣ ಆರ್ದ್ರವಾದ ಅಥವಾ ಸ್ಯಾಚುರೇಟೆಡ್ ಕೊಬ್ಬು ಇಲ್ಲವೇ ಇಲ್ಲ. ಅಲ್ಲದೇ ಇದರಲ್ಲಿ ಸೋಡಿಯಂ ಲವಣ ಅತಿ ಕಡಿಮೆ ಪ್ರಮಾಣದಲ್ಲಿದ್ದು ಒಮೆಗಾ ಕೊಬ್ಬಿನ ಆಮ್ಲಗಳು ಉತ್ತಮ ಪ್ರಮಾಣದಲ್ಲಿವೆ. ಇವು ರಕ್ತದ ಒತ್ತಡವನ್ನು ಕಡಿಮೆಗೊಳಿಸಿ ಹೃದಯದ ಕ್ಷಮತೆಯನ್ನು ಹೆಚ್ಚಿಸುತ್ತವೆ.

ಮಧುಮೇಹಿಗಳಿಗೂ ಉತ್ತಮ

ಮಧುಮೇಹಿಗಳಿಗೂ ಉತ್ತಮ

ಬಾದಾಮಿ ಹಾಲು ನಿಧಾನವಾಗಿ ಜೀರ್ಣಗೊಳ್ಳುವ ಅಂದರೆ ಗೈಸಮಿಕ್ ಇಂಡೆಕ್ಸ್ ಎಂಬ ಕೋಷ್ಟಕದಲ್ಲಿ ಹೆಚ್ಚಿನ ಮಾಪನ ಹೊಂದಿರುವ ಆಹಾರವಾಗಿದೆ. ಇದರಲ್ಲಿರುವ ಎಲ್ಲಾ ಪೋಷಕಾಂಶಗಳು ಜೀರ್ಣಿಸಲ್ಪಟ್ಟು ಬಳಕೆಯಾಗುತ್ತವೆಯೇ ವಿನಃ ಹಸುವಿನ ಹಾಲಿನಂತೆ ಕೊಬ್ಬು ದೇಹದಲ್ಲಿ ಸಂಗ್ರಹವಾಗುವುದಿಲ್ಲ. ಇದೇ ಕಾರಣಕ್ಕೆ ಈ ಹಾಲು ಮಧುಮೇಹಿಗಳಿಗೆ ಹೆಚ್ಚು ಸೂಕ್ತವಾಗಿದೆ.

ಸ್ನಾಯುಗಳ ಬಲ ಹೆಚ್ಚಿಸುತ್ತದೆ

ಸ್ನಾಯುಗಳ ಬಲ ಹೆಚ್ಚಿಸುತ್ತದೆ

ಇದರಲ್ಲಿರುವ ಕಬ್ಬಿಣ, ರೈಬೋಫ್ಲೀವಿನ್ ನಂತಹ ಬಿ-ವಿಟಮಿನ್ ಗುಂಪಿಗೆ ಸೇರಿದ ಪೋಷಕಾಂಶಗಳು ಸ್ನಾಯುಗಳನ್ನು ಬಲಬಡಿಸಲು, ವೃದ್ಧಿಸಲು ಹಾಗೂ ಘಾಸಿಗೊಂಡ ಸ್ನಾಯುಗಳನ್ನು ಗುಣಪಡಿಸಲು ನೆರವಾಗುತ್ತವೆ.

ವಿಟಮಿನ್ ಡಿ ಸಹಾ ಹೆಚ್ಚಿನ ಪ್ರಮಾಣದಲ್ಲಿದೆ

ವಿಟಮಿನ್ ಡಿ ಸಹಾ ಹೆಚ್ಚಿನ ಪ್ರಮಾಣದಲ್ಲಿದೆ

ವಿಟಮಿನ್ ಡಿ ಕೊರತೆಯಿಂದ ಮೂಳೆಗಳು ಶಿಥಿಲಗೊಳ್ಳುತ್ತವೆ. ಅಲ್ಲದೇ ಸುಸ್ತು ಹಾಗೂ ಸ್ನಾಯುಗಳಲ್ಲಿ ಬಲವಿಲ್ಲದಿರುವಿಕೆಯೂ ಆವರಿಸುತ್ತದೆ. ಬಾದಾಮಿ ಹಾಲಿನ ಸೇವನೆಯಿಂದ ಈ ಕೊರತೆಗಳು ಕಡಿಮೆಯಾಗುತ್ತವೆ. ಬಾದಾಮಿ ಹಾಲಿನ ಸೇವನೆಯ ಅತ್ಯುತ್ತಮ ಪ್ರಯೋಜನಗಳಲ್ಲಿ ಇದು ಪ್ರಮುಖವಾಗಿದೆ.

ಕಡಿಮೆ ಕ್ಯಾಲೋರಿಗಳು

ಕಡಿಮೆ ಕ್ಯಾಲೋರಿಗಳು

ಈ ಹಾಲಿನಲ್ಲಿ ಅತಿ ಕಡಿಮೆ ಕ್ಯಾಲೋರಿಗಳಿದ್ದರೂ ಇತರ ಪೋಷಕಾಂಶಗಳು ಉತ್ತಮ ಪ್ರಮಾಣದಲ್ಲಿದ್ದು ದಿನದ ಚಟುವಟಿಕೆಯ ಅಗತ್ಯವನ್ನು ಪೂರೈಸುತ್ತದೆ. ಇದು ಸಹಾ ಬಾದಾಮಿ ಹಾಲಿನ ಅತ್ಯುತ್ತಮ ಪ್ರಯೋಜನಗಳಲ್ಲೊಂದಾಗಿದೆ.

 
English summary

Is Almond Milk Good for You? Here are 6 Health Benefits

This milk is also known to have very less calories and is low in fat content as well. The health benefits of almond milk include weight loss, better vision, strong bones and healthy heart. It also is useful in building strong muscles, regulating high blood pressure and it helps the kidney to function properly. Continue scrolling to know more about the top health benefits of almond milk.
Please Wait while comments are loading...
Subscribe Newsletter