For Quick Alerts
ALLOW NOTIFICATIONS  
For Daily Alerts

ಕಣ್ಣಲ್ಲಿ ನೀರು ತರಿಸಿದರೂ ಆರೋಗ್ಯಕ್ಕೆ ಒಳ್ಳೆಯದು ಈರುಳ್ಳಿ

ಈರುಳ್ಳಿ ಹೆಚ್ಚುವಾಗ ಕಣ್ಣೀರು ಬರಬಹುದು, ಆದರೆ ಈರುಳ್ಳಿಯಲ್ಲಿ ಎಷ್ಟೊಂದು ಔಷಧೀಯ ಗುಣಗಳಿವೆ ಎಂಬುದರ ಬಗ್ಗೆ ಗಮನ ಹರಿಸಲೇ ಬೇಕು. ಈರುಳ್ಳಿ ಒಂದು ಉತ್ತಮ ಮನೆಮದ್ದು. ಇದರಿಂದ ಸಾಕಷ್ಟು ರೋಗಗಳನ್ನು ತಡೆಗಟ್ಟಬಹುದು

By Manu
|

ಈರುಳ್ಳಿಯನ್ನು ಕತ್ತರಿಸುವಾಗ ನೀರು ಬರುತ್ತದೆಂದು ಯಾರೂ ಈರುಳ್ಳಿಯ ಬಳಕೆಯನ್ನು ನಿಲ್ಲಿಸಿಲ್ಲ. ಏಕೆಂದರೆ ಇದು ನಮ್ಮ ಹೆಚ್ಚಿನ ಅಡುಗೆಗಳಲ್ಲಿ ಅನಿವಾರ್ಯವಾದ ತರಕಾರಿಯಾಗಿದೆ. ಈರುಳ್ಳಿಯಲ್ಲಿ ಆಂಟಿ ಆಕ್ಸಿಡೆಂಟುಗಳೂ, ಉರಿಯೂತ ನಿವಾರಕ ಗುಣ ಮತ್ತು ಗುಣಪಡಿಸುವ ಗುಣಗಳಿವೆ. ಆದರೆ ಹಸಿ ಈರುಳ್ಳಿಯಲ್ಲಿ ಕೆಲವು ವಿಷಕಾರಿ ರಾಸಾಯನಿಕಗಳೂ ಇವೆ. ಈರುಳ್ಳಿ ಕತ್ತರಿಸುವಾಗ ಕಣ್ಣಿನಲ್ಲಿ ನೀರು ಬರುತ್ತಿದೆಯೇ? ಚಿಂತೆ ಬಿಡಿ!

ಈರುಳ್ಳಿಯ ಪೋಷಕಾಂಶಗಳಿಗೆ ಕೆಟ್ಟ ಕೊಲೆಸ್ಟ್ರಾಲ್ ತೊಲಗಿಸುವ ಶಕ್ತಿಯೂ ಇದೆ. ಈರುಳ್ಳಿಯನ್ನು ಹಸಿಯಾಗಿಯೂ ಸಾಲಾಡ್‌ನೊಂದಿಗೆ ಸೇವಿಸಬಹುದು. ಭಾರತದಲ್ಲಂತೂ ಯಾವುದೇ ಮಸಾಲೆಯುಕ್ತ ಖಾದ್ಯ ಈರುಳ್ಳಿಯ ಹೊರತಾಗಿ ತಯಾರಿಸುವುದು ಸಾಧ್ಯವೇ ಇಲ್ಲವೆಂಬಷ್ಟು ಮಟ್ಟಿಗೆ ಇದರ ಬಳಕೆ ಇದೆ. ಈರುಳ್ಳಿ ಹಾಕಿದ ಸಾಕ್ಸ್‌ ಧರಿಸಿ-ವ್ಯತ್ಯಾಸ ನೀವೇ ನೋಡಿ!

ಅಗ್ಗವೂ, ಸದಾ ಲಭಿಸುವಂತಹದ್ದೂ, ವಾರಗಟ್ಟಲೇ ಕೊಳೆಯದೇ ಇರುವ ತರಕಾರಿಯಾಗಿರುವ ಕಾರಣ ಇದು ಎಲ್ಲರ ಮನೆಯ ಅಡುಗೆಮನೆಯಲ್ಲಿ ಶಾಶ್ವತ ಸ್ಥಾನ ಪಡೆದಿದೆ. ಬನ್ನಿ, ಈರುಳ್ಳಿಯನ್ನು ಔಷಧಿಯ ರೂಪದಲ್ಲಿ ಹೇಗೆ ಬಳಸಬಹುದು ಎಂಬುದನ್ನು ನೋಡೋಣ...

ನರಹುಲಿ (Warts)

ನರಹುಲಿ (Warts)

ಸಾಮಾನ್ಯವಾಗಿ ಪಾದಗಳ ಬೆರಳುಗಳ ಅಂಚಿನಲ್ಲಿ ಚರ್ಮದ ಅಡಿಯಲ್ಲಿ ಗಟ್ಟಿಯಾದ ಗಂಟಿನಂತೆ ಅಂಗಾಶ ಗಟ್ಟಿಯಾಗುತ್ತದೆ. ಇದನ್ನು ನಿವಾರಿಸಲು ಹಸಿ ಈರುಳ್ಳಿಯ ಒಂದು ಬಿಲ್ಲೆಯನ್ನು ಗಂಟಿನ ಭಾಗವನ್ನು ಆವರಿಸುವಷ್ಟು ದೊಡ್ಡದಾಗಿ ವೃತ್ತಾಕಾರದಲ್ಲಿ ಕತ್ತರಿಸಿ ಗಂಟಿನ ಮೇಲಿಟ್ಟು ಇದರ ಮೇಲೆ ಬಟ್ಟೆಯ ಪಟ್ಟಿಯೊಂದನ್ನು ಕಟ್ಟಿ ಈರುಳ್ಳಿಯ ಬಿಲ್ಲೆ ಅಲ್ಲಾಡದಂತೆ ಇಡಿಯ ರಾತ್ರಿ ಇರಿಸಿ. ಮರುದಿನ ಬೆಳಿಗ್ಗೆ ಪಟ್ಟಿಯನ್ನು ನಿವಾರಿಸಿ. ಈ ವಿಧಾನವನ್ನು ಮುಂದಿನ ಕೆಲವು ದಿನಗಳವರೆಗೆ ಮುಂದುವರೆಸಿದರೆ ಗಂಟು ಕರಗಿ ಹೋಗಿ ಸಾಮಾನ್ಯ ಚರ್ಮ ಬೆಳೆಯುತ್ತದೆ.

ಕೆಮ್ಮು

ಕೆಮ್ಮು

ಒಂದು ಈರುಳ್ಳಿಯನ್ನು ಚಿಕ್ಕದಾಗಿ ತುಂಡರಿಸಿ ಮಿಕ್ಸಿಯಲ್ಲಿ ಕಡೆದು ಹಿಂಡಿ ರಸ ಸಂಗ್ರಹಿಸಿ. ಇದಕ್ಕೆ ಕೆಲವು ಹನಿ ಜೇನು ಬೆರೆಸಿ ದಿನಕ್ಕೆ ಎರಡು ಬಾರಿ ಸೇವಿಸಿದರೆ ಕೆಮ್ಮು ಕಡಿಮೆಯಾಗುತ್ತದೆ.

ಸುಟ್ಟ ಗಾಯಕ್ಕೆ

ಸುಟ್ಟ ಗಾಯಕ್ಕೆ

ಚಿಕ್ಕ ಪುಟ್ಟ ಸುಟ್ಟ ಗಾಯಗಳಾದರೆ ಈರುಳ್ಳಿಯ ಒಂದು ಬಿಲ್ಲೆಯನ್ನು ಅಡ್ಡಲಾಗಿ ಕತ್ತರಿಸಿ ಸುಟ್ಟ ಭಾಗದ ಮೇಲೆ ಸುಮಾರು ಎರಡು ನಿಮಿಷವಿರಿಸಿ. ಇದರಿಂದ ಉರಿ ಕಡಿಮೆಯಾಗಿ ಹೊಸ ಚರ್ಮ ಬೆಳೆಯಲು ನೆರವಾಗುತ್ತದೆ.

ಸಾಮಾನ್ಯ ಶೀತಕ್ಕೆ

ಸಾಮಾನ್ಯ ಶೀತಕ್ಕೆ

ಒಂದು ವೇಳೆ ಶೀತವಾಗಿದ್ದರೆ ಮಲಗುವಾಗ ದಿಂಬಿನ ಪಕ್ಕದಲ್ಲಿ ಒಂದು ಈರುಳ್ಳಿಯನ್ನು ಅರ್ಧ ಕತ್ತರಿಸಿ ಇಡಿ. ಇದು ಅತಿಸೂಕ್ಷ್ಮ ವೈರಾಣುಗಳನ್ನು ಮತ್ತು ಕೆರಳಿಸುವ ಕ್ರಿಮಿಗಳನ್ನು ಹೀರಿಕೊಳ್ಳುತ್ತದೆ.

ಜ್ವರ

ಜ್ವರ

ಒಂದು ಈರುಳ್ಳಿ, ಒಂದು ಆಲೂಗಡ್ಡೆ, ಎರಡು ಬೆಳ್ಳುಳ್ಳಿಯ ಎಸಳು ಇಷ್ಟನ್ನೂ ಚಿಕ್ಕದಾಗಿ ತುಂಡರಿಸಿ ಸ್ವಲ್ಪವೇ ಜಜ್ಜಿ ರಸ ಒಸರುವಂತೆ ಮಾಡಿ. ರಾತ್ರಿ ಮಲಗುವ ಮುನ್ನ ಈ ಮಿಶ್ರಣವನ್ನು ಎರಡೂ ಕಾಲುಚೀಲಗಳ ಒಳಗೆ ಹಾಕಿ ಪಾದಗಳ ಕೆಳಗೆ ಬರುವಂತೆ ಮಾಡಿ ಧರಿಸಿ ಮಲಗಿ. ಬೆಳಿಗ್ಗೆದ್ದಾಗ ಜ್ವರ ಕಡಿಮೆಯಾಗಿರುತ್ತದೆ.

ಸೈನಸ್ ಸೋಂಕು

ಸೈನಸ್ ಸೋಂಕು

ಕುಹರ ಅಥವಾ ಸೈನಸ್‌ನಲ್ಲಿ ಸೋಂಕು ಉಂಟಾಗಿದ್ದು ತಲೆನೋವು ಎದುರಾಗಿದ್ದರೆ ಕೆಲವು ಈರುಳ್ಳಿಗಳನ್ನು ಹಸಿಯಾಗಿ ಸೇವಿಸಿ. ಇದರ ಜೊತೆಗೆ ಕೊಂಚ ಈರುಳ್ಳಿ ಮತ್ತು ಹಸಿಶುಂಠಿಯನ್ನು ಹಾಲಿಲ್ಲದ ಟೀ ಜೊತೆ ಬೆರೆಸಿ ಕುಡಿಯಿರಿ.ಸೈನಸ್ ಸೋಂಕಿನಿಂದ ಬಳಲುತ್ತಿದ್ದೀರಾ? ಇನ್ನು ಚಿಂತೆ ಬಿಡಿ!

ಈರುಳ್ಳಿ ಲೈಂಗಿಕಾಸಕ್ತಿ ವೃದ್ಧಿಸುತ್ತದೆ

ಈರುಳ್ಳಿ ಲೈಂಗಿಕಾಸಕ್ತಿ ವೃದ್ಧಿಸುತ್ತದೆ

ಈರುಳ್ಳಿ ಆರೋಗ್ಯಕರ ಸೆಕ್ಸ್ ಆಸಕ್ತಿ ವೃದ್ಧಿಸುತ್ತದೆ.ಒಂದು ಚಮಚ ಈರುಳ್ಳಿ ರಸವನ್ನು ಒಂದು ಚಮಚ ಶುಂಠಿ ರಸದೊಂದಿಗೆ ಸೇವಿಸಿದರೆ ಲೈಂಗಿಕ ಆಸಕ್ತಿ ಆರೋಗ್ಯಕರವಾಗಿ ಹೆಚ್ಚುತ್ತದೆ.

ಕಿವಿ ನೋವನ್ನು ನಿವಾರಿಸುತ್ತದೆ

ಕಿವಿ ನೋವನ್ನು ನಿವಾರಿಸುತ್ತದೆ

ನೀವು ಕಿವಿ ನೋವಿನಿಂದ ಬಳಲುತ್ತಿದ್ದರೆ ಒಂದೆರಡು ಹನಿ ಈರುಳ್ಳಿ ರಸ ಕಿವಿ ನೋವನ್ನು ನಿವಾರಿಸುವ ಗುಣವನ್ನು ಹೊಂದಿದೆ.ಕಿವಿಯಲ್ಲಿ ಗೊಯ್ ಎಂಬ ಶಬ್ದ ಬರುತ್ತಿದ್ದರೆ ಕಿವಿಗೆ ಹತ್ತಿ ಬಟ್ಟೆಯಲ್ಲಿ ಈರುಳ್ಳಿ ರಸ ಹಾಕಿ ಎರಡು ಹನಿ ಬಿಟ್ಟರೆ ತಕ್ಷಣಕ್ಕೆ ಕಡಿಮೆ ಆಗುತ್ತದೆ.ಕಿವಿ ನೋವಿಗೆ ಅಂತ್ಯಹಾಡುವ ಸರಳ ಮನೆಮದ್ದುಗಳು

English summary

How To Use Onion As Medicine

Most of us use union in various dishes to enjoy its taste but the use of onion as medicine is not much known. Here are some ways onion can cure certain health issues...
X
Desktop Bottom Promotion