ಗಂಟಲು ನೋವಿನ ಶಮನಕ್ಕೆ-ಅಡುಗೆಮನೆಯ 'ಬೆಳ್ಳುಳ್ಳಿ' ಸಾಕು!

By: Hemanth
Subscribe to Boldsky

ನಾವು ಬಳಸುವಂತಹ ಪ್ರತಿಯೊಂದು ಸಾಂಬಾರ ಪದಾರ್ಥಗಳಲ್ಲಿಯೂ ಔಷಧೀಯ ಗುಣಗಳು ಇವೆ ಎನ್ನುವುದು ನಮಗೆ ಈಗಾಗಲೇ ತಿಳಿದಿರುವ ವಿಚಾರ. ಇದರಿಂದಾಗಿಯೇ ಹಿಂದಿನಿಂದಲೂ ಸಾಂಬಾರ ಪದಾರ್ಥಗಳಿಂದಲೇ ಕೆಲವೊಂದು ಮನೆಮದ್ದನ್ನು ತಯಾರಿಸಿಕೊಂಡು ಕಾಯಿಲೆಗಳನ್ನು ನಿವಾರಣೆ ಮಾಡಲಾಗುತ್ತಾ ಇತ್ತು. ಇಂದಿನ ದಿನಗಳಲ್ಲಿಯೂ ಕೆಲವರು ಮನೆಮದ್ದಿನಿಂದಲೇ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾರೆ. ಇದರಲ್ಲಿ ಪ್ರಮುಖವಾಗಿ ಬೆಳ್ಳುಳ್ಳಿ ಹಾಗೂ ಶುಂಠಿಯಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇವೆ. ಇನ್ನು ಗಂಟಲು ನೋವಿಗೆ ವೈದ್ಯರ ಬಳಿ ಓಡಬೇಡಿ...!

ಬೆಳ್ಳುಳ್ಳಿಯು ಔಷಧೀಯ ಗುಣಗಳ ಆಗರವಾಗಿದೆ. ಹಲವಾರು ಅಧ್ಯಯನಗಳು ಕೂಡ ಬೆಳ್ಳುಳ್ಳಿಯಲ್ಲಿ ಇರುವಂತಹ ಔಷಧೀಯ ಗುಣಗಳನ್ನು ದೃಢಪಡಿಸಿವೆ. ಬೆಳ್ಳುಳ್ಳಿಯಿಂದ ಗಂಟಲು ನೋವು, ಜ್ವರ, ಶೀತ ಇತ್ಯಾದಿಗಳನ್ನು ನಿವಾರಣೆ ಮಾಡಬಹುದು. ಬೆಳ್ಳುಳ್ಳಿಯಿಂದ ಗಂಟಲು ನೋವನ್ನು ನಿವಾರಿಸುವುದು ಹೇಗೆ ಎಂದು ಬೋಲ್ಡ್ ಸ್ಕೈ ನಿಮಗೆ ಹೇಳಿಕೊಡಲಿದೆ. ಗಂಟಲು ನೋವಿನ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು. ಇದನ್ನು ಕಡೆಗಣಿಸಿದರೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ಬೆಳ್ಳುಳ್ಳಿಯಿಂದ ಗಂಟಲು ನೋವನ್ನು ನಿವಾರಿಸುವುದು ಹೇಗೆ ಎಂದು ತಿಳಿಯಲು ಮುಂದಕ್ಕೆ ಓದಿಕೊಳ್ಳಿ. ಬೆಳ್ಳುಳ್ಳಿ ಜಜ್ಜಿ ಹಾಕಿದ ಹಾಲು ಕುಡಿದರೆ, ಆರೋಗ್ಯ ವೃದ್ಧಿ

ಸೂಚನೆ: ಬೆಳ್ಳುಳ್ಳಿಯಿಂದ ಅಲರ್ಜಿ ಆಗುವುದಿದ್ದರೆ ಅಥವಾ ಯಾವುದೇ ಆರೋಗ್ಯ ಸಮಸ್ಯೆಯಿದ್ದರೆ ಆಗ ಬೆಳ್ಳುಳ್ಳಿ ಸೇವನೆ ಮೊದಲು ನೀವು ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯುವುದು ಒಳ್ಳೆಯದು.... 

ಬೆಳ್ಳುಳ್ಳಿ ಮತ್ತು ಜೇನುತುಪ್ಪ

ಬೆಳ್ಳುಳ್ಳಿ ಮತ್ತು ಜೇನುತುಪ್ಪ

ಬೆಳ್ಳುಳ್ಳಿ ಹಾಗೂ ಜೇನುತುಪ್ಪದಲ್ಲಿ ಇರುವಂತಹ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಗಂಟಲು ನೋವಿಗೆ ತುಂಬಾ ಪರಿಣಾಮಕಾರಿ ಔಷಧಿಯಾಗಿದೆ. ಕೆಲವು ಎಸಲು ಬೆಳ್ಳುಳ್ಳಿಯನ್ನು ಜಜ್ಜಿಕೊಂಡು ಅದಕ್ಕೆ ಜೇನುತುಪ್ಪವನ್ನು ಸೇರಿಸಿಕೊಂಡು ಸರಿಯಾಗಿ ಮಿಶ್ರಣ ಮಾಡಿ ಸಿರಪ್ ನಂತೆ ಸೇವಿಸಿ. ಗಂಟಲು ನೋವನ್ನು ಕಡಿಮೆ ಮಾಡಲು ದಿನಾಲೂ ಇದನ್ನು ಸೇವಿಸಿ.

ಬೆಳ್ಳುಳ್ಳಿ ಎಸಲುಗಳು

ಬೆಳ್ಳುಳ್ಳಿ ಎಸಲುಗಳು

ಬೆಳ್ಳುಳ್ಳಿ ಹೆಚ್ಚಿನ ಘಾಟನ್ನು ಹೊಂದಿರುವ ಕಾರಣದಿಂದಾಗಿ ಹಸಿಯಾಗಿ ಇದನ್ನು ತಿನ್ನಲು ಹೆಚ್ಚಿನವರು ಇಷ್ಟಪಡುವುದಿಲ್ಲ. ಹಸಿ ಬೆಳ್ಳುಳ್ಳಿಯ ಒಂದೆರಡು ಎಸಳು ತಿಂದರೆ ಅದಕ್ಕಿಂತ ಒಳ್ಳೆಯ ಔಷಧಿ ಬೇರೊಂದಿಲ್ಲ. ಎರಡು ಎಸಲು ಹಸಿ ಬೆಳ್ಳುಳ್ಳಿಯನ್ನು ಸೇವಿಸಿದರೆ ಗಂಟಲು ನೋವು ಕಡಿಮೆಯಾಗಿ ಸೋಂಕು ಹೆಚ್ಚಾಗುವುದನ್ನು ತಡೆಯಬಹುದು.ಉಪಹಾರಕ್ಕಿಂತ ಮುಂಚೆಯೇ ಬೆಳ್ಳುಳ್ಳಿ ಸೇವಿಸಿ, ಆರೋಗ್ಯವೃದ್ಧಿಸಿ!

ಬೆಳ್ಳುಳ್ಳಿ ಮತ್ತು ಲಿಂಬೆ

ಬೆಳ್ಳುಳ್ಳಿ ಮತ್ತು ಲಿಂಬೆ

ಗಂಟಲು ನೋವನ್ನು ಬೆಳ್ಳುಳ್ಳಿಯಿಂದ ಕಡಿಮೆ ಮಾಡುವ ಮತ್ತೊಂದು ವಿಧಾನವಿದು. ಬೆಳ್ಳುಳ್ಳಿ ರಸ ಮತ್ತು ಲಿಂಬೆರಸವನ್ನು ಮಿಶ್ರಣ ಮಾಡಿಕೊಳ್ಳಿ. ದಿನದಲ್ಲಿ ಒಂದು ಅಥವಾ ಎರಡು ಸಲ ಇದನ್ನು ಸೇವಿಸಿದರೆ ಗಂಟಲು ನೋವು ಕಡಿಮೆಯಾಗುವುದು ಮತ್ತು ಕಫ ಜಮೆಯಾಗುವುದು ತಪ್ಪುವುದು.

ಬೆಳ್ಳುಳ್ಳಿ ಚಹಾ

ಬೆಳ್ಳುಳ್ಳಿ ಚಹಾ

ಇದನ್ನು ವಿಶ್ವದೆಲ್ಲೆಡೆಯಲ್ಲಿ ಬಳಸಿ ಅದರ ಫಲಿತಾಂಶವನ್ನು ಕೂಡ ಪಡೆದಿದ್ದಾರೆ. ಇದು ಗಂಟಲು ನೋವಿಗೆ ತುಂಬಾ ಪರಿಣಾಮಕಾರಿ ಔಷಧಿಯಾಗಿದೆ. ಒಂದು ಕಪ್ ಬೆಳ್ಳುಳ್ಳಿ ಚಹಾವನ್ನು ದಿನದಲ್ಲಿ ಹಲವಾರು ಬಾರಿ ಕುಡಿಯುತ್ತಾ ಇರಿ. ಈ ಚಹಾ ಗಂಟಲು ನೋವಿನಿಂದ ಮುಕ್ತಿ ನೀಡುವುದು.

ಆಲಿವ್ ತೈಲದೊಂದಿಗೆ ಬೆಳ್ಳುಳ್ಳಿ

ಆಲಿವ್ ತೈಲದೊಂದಿಗೆ ಬೆಳ್ಳುಳ್ಳಿ

ಈ ಮದ್ದನ್ನು ತಯಾರಿಸಲು ಆಲಿವ್ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಬೇಕು. ಇದರಲ್ಲಿ ಜಜ್ಜಿಕೊಂಡ ಬೆಳ್ಳುಳ್ಳಿಯನ್ನು ಹಾಕಬೇಕು. ಒಂದು ಚಮಚ ತೆಗೆದುಕೊಂಡು ಇದನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ತಣ್ಣಗಾದ ಬಳಿಕ ಸಿರಪ್ ನಂತೆ ಸೇವಿಸಿ. ಈ ಮನೆಮದ್ದು ಗಂಟಲಿನಲ್ಲಿ ಉಂಟಾಗುವ ಕಿರಿಕಿರಿ ಮತ್ತು ನೋವಿನಿಂದ ಪರಿಹಾರ ನೀಡುವುದು.

 
English summary

How To Use Garlic To Get Rid Of Sore Throat?

Sore throat is a highly common and unpleasant health issue. And if it is not taken care of, then the infection may spread and worsen the symptoms. Read on to know more about these effective methods that are safe and natural. Note: If you're suffering from a health issue or have experienced any side effects after consuming garlic in the past, then we suggest you consult your dietitian before trying any of the following remedies.
Subscribe Newsletter