For Quick Alerts
ALLOW NOTIFICATIONS  
For Daily Alerts

  ಹುಷಾರ್, ಬಂದಿದೆ ಚೀನಾದ ಪ್ಲಾಸ್ಟಿಕ್ ಮೊಟ್ಟೆ! ಪತ್ತೆ ಹಚ್ಚುವುದು ಹೇಗೆ?

  By Manu
  |

  ನಿಮಗೆ ಅಚ್ಚರಿಯಾಗಬಹುದು, ಅಗ್ಗವಾಗಿಯೇ ಸಿಗುವ ಕೋಳಿಮೊಟ್ಟೆಯೂ ಈಗ ಕೃತಕವಾಗಿ (ಪ್ಲಾಸ್ಟಿಕ್ ಮೊಟ್ಟೆ) ತಯಾರಿಸಲ್ಪಟ್ಟು ಮಾರುಕಟ್ಟೆಯಲ್ಲಿ ದೊರಕುತ್ತಿದೆ. ಮೊಟ್ಟೆಗಿಂತಲೂ ಅಗ್ಗವಾಗಿ ಈ ರಾಸಾಯನಿಕ ಆಧಾರಿತ ಮೊಟ್ಟೆಗಳನ್ನು ತಯಾರಿಸಿ ಮೋಸ ಮಾಡುತ್ತಿದ್ದಾರೆ ಎಂದರೆ ಇದು ಎಷ್ಟು ಕಳಪೆ ಮಟ್ಟದ್ದಿರಬಹುದು ಎಂದು ಯೋಚಿಸಿ.

  ಜನಸಾಮಾನ್ಯರು ಈ ಮೊಟ್ಟೆಗಳನ್ನು ನಿಜವಾದುದೆಂದೇ ತಿಳಿದು ಅರಿಯದೇ ಸೇವಿಸುತ್ತಾ ಬಂದಿದ್ದಾರೆ. ಏಕೆಂದರೆ ಇದು ಕೃತಕ ಎಂದೇ ಹೆಚ್ಚಿನವರಿಗೆ ಗೊತ್ತಿಲ್ಲ. ನೋಡಲಿಕ್ಕೂ, ರುಚಿಯಲ್ಲೂ ಅಪ್ಪಟ ಕೋಳಿಮೊಟ್ಟೆಯಂತೆಯೇ ಕಾಣುವ ಈ ಮೊಟ್ಟೆಗಳಿಗೆ ಕೆಮಿಕಲ್ ಎಗ್ಸ್ ಅಥವಾ ರಾಸಾಯನಿಕ ಮೊಟ್ಟೆ ಎಂದೂ ಕರೆಯುತ್ತಾರೆ.  

  ಮೊಟ್ಟೆಯ ಹಿಂದಿರುವ ಸತ್ಯಾಸತ್ಯತೆ- ಎಲ್ಲವೂ ಹಣ ಮಾಡುವ ಕುತಂತ್ರ!

  ಈ ಮೊಟ್ಟೆಗಳು ತಯಾರಾದುದಾದರೂ ಎಲ್ಲಿ? ನಿಮ್ಮ ಎಣಿಕೆ ನಿಜ! ಚೀನಾದಲ್ಲಿ ಇದು ಸಾಮಾನ್ಯವಾಗಿ ಸಿಗುತ್ತಿದ್ದು ಇತ್ತೀಚಿನ ವರ್ಷಗಳಲ್ಲಿ ಬಾಂಗ್ಲಾದೇಶ, ಭಾರತ, ಥಾಯ್ಲೆಂಡ್, ಪಾಕಿಸ್ತಾನಗಳಲ್ಲಿಯೂ ಲಭ್ಯವಾಗುತ್ತಿದೆ. ಅಷ್ಟು ದೂರದ ಚೀನಾದಿಂದ ಅಗ್ಗವಾದ ಮೊಟ್ಟೆಯನ್ನು ಭಾರೀ ಸಾಗಾಟದ ಖರ್ಚು ನೀಡಿದ ಬಳಿಕವೂ ಭಾರತದಲ್ಲಿಯೇ ಸ್ಥಳೀಯವಾಗಿ ಉತ್ಪಾದನೆಯಾದ ಮೊಟ್ಟೆಗಿಂತಲೂ ಅಗ್ಗವಾಗಿ ನೀಡಬೇಕಾದರೆ ಇದು ಎಷ್ಟು ಅಗ್ಗದ ರಾಸಾಯನಿಕಗಳಿರಬಹುದು?

  ಆದರೆ ನೋಡಲಿಕ್ಕೆ ಮೊಟ್ಟೆ ಅಲ್ಲವೆಂದು ಹೇಳಲು ಸಾಧ್ಯವೇ ಆಗದ ಕಾರಣ ಜನಸಾಮಾನ್ಯರು ಮೋಸ ಹೋಗುತ್ತಿದ್ದಾರೆ. ಆದರೆ ಈಗ ಈ ಮೊಟ್ಟೆಗಳನ್ನು ಹೇಗೆ ಗುರುತಿಸುವುದು ಎಂಬುದನ್ನು ವಿವರಿಸಲಾಗಿದ್ದು ಈ ಮೂಲಕ ಕೃತಕ ಮೊಟ್ಟೆಗಳನ್ನು ಕೊಳ್ಳದೇ ಇರಲು ಸಾಧ್ಯವಾಗುತ್ತದೆ..... 

  ಪ್ಲಾಸ್ಟಿಕ್ ಮೊಟ್ಟೆಗಳನ್ನು ಹೀಗೆ ತಯಾರಿಸುತ್ತಾರೆ ಗೊತ್ತಾ?

  ಪ್ಲಾಸ್ಟಿಕ್ ಮೊಟ್ಟೆಗಳನ್ನು ಹೀಗೆ ತಯಾರಿಸುತ್ತಾರೆ ಗೊತ್ತಾ?

  * ಮೊದಲು ಉಗುರುಬೆಚ್ಚನೆಯ ಬಿಸಿನೀರಿನಲ್ಲಿ Sodium Alginate ಎಂಬ ರಾಸಾಯನಿಕವನ್ನು ಬೆರೆಸಲಾಗುತ್ತದೆ.

  * ಇನ್ನು ಇದನ್ನು ಚೆನ್ನಾಗಿ ಮಿಶ್ರಣ ಮಾಡಿದ ಬಳಿಕ ಇದಕ್ಕೆ ಜಿಲ್ಯಾಟಿನ್, benzoic acid ಹಾಗೂ alum ಎಂಬ ರಾಸಾಯನಿಕಗಳನ್ನು ಒಂದು ಪ್ರಮಾಣದಲ್ಲಿ ಬೆರೆಸಿ ಮಿಶ್ರಣ ಮಾಡಲಾಗುತ್ತದೆ. ಇದು ಮೊಟ್ಟೆಯ ಬಿಳಿಭಾಗವಾಯಿತು.

  ಪ್ಲಾಸ್ಟಿಕ್ ಮೊಟ್ಟೆಗಳನ್ನು ಹೀಗೆ ತಯಾರಿಸುತ್ತಾರೆ ಗೊತ್ತಾ?

  ಪ್ಲಾಸ್ಟಿಕ್ ಮೊಟ್ಟೆಗಳನ್ನು ಹೀಗೆ ತಯಾರಿಸುತ್ತಾರೆ ಗೊತ್ತಾ?

  * ಬಳಿಕ ಇನ್ನೊಂದು ಪಾತ್ರೆಯಲ್ಲಿ ಆಹಾರಕ್ಕೆ ಬೆರೆಸುವ ಹಳದಿ ಬಣ್ಣವನ್ನು ಈ ಬಿಳಿಭಾಗದ ಕೊಂಚ ಪ್ರಮಾಣಕ್ಕೆ ಬೆರೆಸಿ ಮೊಟ್ಟೆಯ ಹಳದಿ ಭಾಗವಾಗಿಸುತ್ತದೆ.

  *ಇನ್ನೊಂದು ಪಾತ್ರೆಯಲ್ಲಿ ಈ ಮಿಶ್ರಣವನ್ನು Calcium Chloride ಎಂಬ ರಾಸಾಯನಿಕದೊಂದಿಗೆ ಮಿಶ್ರಣ ಮಾಡಲಾಗುತ್ತದೆ. ಈ ಮಿಶ್ರಣವನ್ನು ಮೊಟ್ಟೆಯ ಕವಚದ ಒಳಭಾಗದ ಪದರವನ್ನು ತಯಾರಿಸಲು ಬಳಸಲಾಗುತ್ತದೆ.

  ಪ್ಲಾಸ್ಟಿಕ್ ಮೊಟ್ಟೆಗಳನ್ನು ಹೀಗೆ ತಯಾರಿಸುತ್ತಾರೆ ಗೊತ್ತಾ?

  ಪ್ಲಾಸ್ಟಿಕ್ ಮೊಟ್ಟೆಗಳನ್ನು ಹೀಗೆ ತಯಾರಿಸುತ್ತಾರೆ ಗೊತ್ತಾ?

  ಮೊಟ್ಟೆಯ ಕವಚವನ್ನು ಪ್ಯಾರಾಫಿನ್ ಮೇಣ, ಜಿಪ್ಸಂ ಪ್ಪೌಡರ್, ಕ್ಯಾಲ್ಸಿಯಂ ಕಾರ್ಬೋನೇಟ್ ಹಾಗೂ ಇತರ ರಾಸಾಯನಿಕಗಳನ್ನು ಬೆರೆಸಿ ಕವಚ ತಯಾರಿಸುವ ಅಚ್ಚುಗಳಿಗೆ ಸುರಿದು ಕವಚಗಳನ್ನು ತಯಾರಿಸಲಾಗುತ್ತದೆ.

  ಈ ಪ್ಲಾಸ್ಟಿಕ್ ಮೊಟ್ಟೆಗಳನ್ನು ಗುರುತಿಸುವುದು ಹೇಗೆ?

  ಈ ಪ್ಲಾಸ್ಟಿಕ್ ಮೊಟ್ಟೆಗಳನ್ನು ಗುರುತಿಸುವುದು ಹೇಗೆ?

  * ಈ ಮೊಟ್ಟೆಗಳನ್ನು ಒಡೆದು ಪಾತ್ರೆಯಲ್ಲಿ ಸುರುವಿದ ಕೆಲವೇ ಕ್ಷಣಗಳಲ್ಲಿ ಬಿಳಿ ಮತ್ತು ಹಳದಿ ಭಾಗಗಳು ಬೆರೆಯತೊಡಗುತ್ತವೆ. ನಿಜವಾದ ಮೊಟ್ಟೆಯಲ್ಲಿ ಇವು ತಾವಾಗಿಯೇ ಎಂದೂ ಬೆರೆಯುವುದಿಲ್ಲ.

  ಈ ಪ್ಲಾಸ್ಟಿಕ್ ಮೊಟ್ಟೆಗಳನ್ನು ಗುರುತಿಸುವುದು ಹೇಗೆ?

  ಈ ಪ್ಲಾಸ್ಟಿಕ್ ಮೊಟ್ಟೆಗಳನ್ನು ಗುರುತಿಸುವುದು ಹೇಗೆ?

  *ಪ್ಲಾಸ್ಟಿಕ್ ಮೊಟ್ಟೆಯ ಕವಚ ಕೊಂಚ ಹೆಚ್ಚಿನ ಹೊಳಪು ಹೊಂದಿರುತ್ತದೆ. ಇದು ತುಂಬಾ ಸೂಕ್ಷ್ಮವಾದ ವ್ಯತ್ಯಾಸವಾಗಿದ್ದು ಹೆಚ್ಚಿನವರ ಗಮನಕ್ಕೆ ಬರದೇ ಹೋಗುತ್ತದೆ.

  ಈ ಪ್ಲಾಸ್ಟಿಕ್ ಮೊಟ್ಟೆಗಳನ್ನು ಗುರುತಿಸುವುದು ಹೇಗೆ?

  ಈ ಪ್ಲಾಸ್ಟಿಕ್ ಮೊಟ್ಟೆಗಳನ್ನು ಗುರುತಿಸುವುದು ಹೇಗೆ?

  ಕೃತಕ ಮೊಟ್ಟೆಯ ಕವಚವನ್ನು ಸವರಿದರೆ ಇದರ ಹೊರಮೈ ಕೊಂಚ ಹೆಚ್ಚೇ ದೊರಗಾಗಿರುವಂತೆ ತೋರುತ್ತದೆ. ನಿಜವಾದ ಮೊಟ್ಟೆ ಹೆಚ್ಚು ದೊರಗಾಗಿರುವುದಿಲ್ಲ.

  ಈ ಪ್ಲಾಸ್ಟಿಕ್ ಮೊಟ್ಟೆಗಳನ್ನು ಗುರುತಿಸುವುದು ಹೇಗೆ?

  ಈ ಪ್ಲಾಸ್ಟಿಕ್ ಮೊಟ್ಟೆಗಳನ್ನು ಗುರುತಿಸುವುದು ಹೇಗೆ?

  ಮೊಟ್ಟೆಯನ್ನು ಒಡೆಯುವ ಮೊದಲೇ ಇದನ್ನು ಕಿವಿಯ ಹತ್ತಿರ ಅಲುಗಾಡಿಸಿದರೆ ಒಳಗೆ ಗಾಳಿಗುಳ್ಳೆಯೊಂದು ಚಲಿಸುವ ಅತಿ ಚಿಕ್ಕ ಸದ್ದಾಗುತ್ತದೆ. ಆದರೆ ನಿಜವಾದ ಮೊಟ್ಟೆಯಲ್ಲಿ ಯಾವುದೇ ಸದ್ದು ಬರುವುದಿಲ್ಲ.

  ಈ ಪ್ಲಾಸ್ಟಿಕ್ ಮೊಟ್ಟೆಗಳನ್ನು ಗುರುತಿಸುವುದು ಹೇಗೆ?

  ಈ ಪ್ಲಾಸ್ಟಿಕ್ ಮೊಟ್ಟೆಗಳನ್ನು ಗುರುತಿಸುವುದು ಹೇಗೆ?

  ನಿಜವಾದ ಮೊಟ್ಟೆಗಳ ವಾಸನೆ ಕೊಂಚ ಮಟ್ಟಿಗೆ ಹಸಿ ಮಾಂಸದ ವಾಸನೆಯನ್ನು ಹೊಂದಿರುತ್ತದೆ.

  ದಿನಕ್ಕೊಂದು ಮೊಟ್ಟೆ ತಿನ್ನುವವರು ಓದಲೇಬೇಕಾದ ಲೇಖನವಿದು...

  ಈ ಪ್ಲಾಸ್ಟಿಕ್ ಮೊಟ್ಟೆಗಳನ್ನು ಗುರುತಿಸುವುದು ಹೇಗೆ?

  ಈ ಪ್ಲಾಸ್ಟಿಕ್ ಮೊಟ್ಟೆಗಳನ್ನು ಗುರುತಿಸುವುದು ಹೇಗೆ?

  ಎರಡೂ ಮೊಟ್ಟೆಗಳ ಮೇಲೆ ಉಗುರಿನಿಂದ ನಯವಾಗಿ ಬಡಿಯಿರಿ. ನಿಜವಾದ ಮೊಟ್ಟೆಯ ಮೇಲಿನ ಸದ್ದು ಸ್ಪಷ್ಟ ಹಾಗೂ ತುಂಬಿದಂತೆ ಇರುತ್ತದೆ. ಆದರೆ ಕೃತಕ ಮೊಟ್ಟೆಗೆ ಹೊಡೆದ ಸದ್ದು ಭಾರವಾಗಿರುತ್ತದೆ.

  ಈ ಪ್ಲಾಸ್ಟಿಕ್ ಮೊಟ್ಟೆಗಳನ್ನು ಗುರುತಿಸುವುದು ಹೇಗೆ?

  ಈ ಪ್ಲಾಸ್ಟಿಕ್ ಮೊಟ್ಟೆಗಳನ್ನು ಗುರುತಿಸುವುದು ಹೇಗೆ?

  ಕೃತಕ ಮೊಟ್ಟೆಯನ್ನು ಒಡೆದ ಬಳಿಕ ಕೊಂಚ ಎತ್ತರದಿಂದ ಪಾತ್ರೆಗೆ ಬೀಳಿಸಿದರೆ ಬಿಳಿ ಮತ್ತು ಹಳದಿ ಭಾಗ ತಕ್ಷಣವೇ ಬೆರೆತು ಬಿಡುತ್ತವೆ. ಏಕೆಂದರೆ ಇವೆರಡರ ಮೂಲವಸ್ತುಗಳು ಒಂದೇ ಆಗಿವೆ. ಆದರೆ ನಿಜವಾದ ಮೊಟ್ಟೆಯಲ್ಲಿ ಇವು ಬೆರೆಯುವುದಿಲ್ಲ.

  ಈ ಪ್ಲಾಸ್ಟಿಕ್ ಮೊಟ್ಟೆಗಳನ್ನು ಗುರುತಿಸುವುದು ಹೇಗೆ?

  ಈ ಪ್ಲಾಸ್ಟಿಕ್ ಮೊಟ್ಟೆಗಳನ್ನು ಗುರುತಿಸುವುದು ಹೇಗೆ?

  ಕೃತಕ ಮೊಟ್ಟೆಯನ್ನು ಎಚ್ಚರಿಕೆಯಿಂದ ಹಳದಿ ಭಾಗ ಒಡೆಯದಂತೆ ಕಾವಲಿಯ ಮೇಲೆ ಹಾಕಿದರೂ, ಬಿಸಿಕಾವಲಿಯ ಮೇಲೆ ಬಿದ್ದ ತಕ್ಷಣವೇ ಬಿಳಿ ಮತ್ತು ಹಳದಿ ಎರಡೂ ಭಾಗಗಳು ತಕ್ಷಣವೇ ಬೆರೆತು ಕಾವಲಿಯಲ್ಲಿ ಹರಡಿಕೊಳ್ಳುತ್ತವೆ. ನಿಜವಾದ ಮೊಟ್ಟೆಯಲ್ಲಿ ಬಿಳಿಭಾಗದ ಮೇಲೆ ಹಳದಿ ಭಾಗ ತೇಲುತ್ತದೆ.

  ಮೊಟ್ಟೆ ಚಿಪ್ಪು ಎಸೆಯದಿರಿ, ಅದರ ಉಪಯೋಗ ತಿಳಿಯಿರಿ!

  English summary

  How to Identify Fake Eggs – Chemical Eggs

  Fake eggs are commonly available now in China as well as outside of China – Bangladesh, India, Thailand, Pakistan etc. China is exporting fake eggs to Bangladesh, India etc countries. People are not aware, that is why, they are being cheated. Let us see, how to identify fake chicken eggs from the real ones. This post will help you step by step.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more