ಹೊಟ್ಟೆಯೊಳಗೆ ನಾವು ಸೇವಿಸುವ ಆಹಾರಗಳ ಪಯಣ!

By: manu
Subscribe to Boldsky

ನಮ್ಮ ದೇಹದ ಎಲ್ಲಾ ಚಟುವಟಿಕೆಗಳಿಗೆ ಸತತವಾಗಿ ಪೋಷಕಾಂಶಗಳ ಪೂರೈಕೆ ಆಗುತ್ತಲೇ ಇರಬೇಕು. ಈ ಪೋಷಕಾಂಶಗಳನ್ನು ಆಹಾರದ ಮೂಲಕ ನಾವು ಪಡೆಯುತ್ತೇವೆ. ನಮ್ಮ ಉಳಿವಿಕೆಗೆ ಆಹಾರ ಸೇವನೆ ಅತಿ ಅಗತ್ಯ. ವ್ಯಂಗ್ಯವಾಗಿ ಹೇಳಬೇಕೆಂದರೆ ಈ ಜಗತ್ತಿನಲ್ಲಿ ಎರಡು ಬಗೆಯ ವ್ಯಕ್ತಿಗಳಿದ್ದಾರೆ. ಮೊದಲನೆಯವರು ಜೀವಂತವಿರಲು ತಿನ್ನುವವರು, ಎರಡನೆಯವರು ತಿನ್ನುವುದಕ್ಕೇ ಜೀವಂತವಿರುವವರು. ನೀವು ಯಾವ ಬಗೆಯವರು? ಉತ್ತರ ನಗೆ ಬರಿಸಿದರೂ ನಾವೆಲ್ಲಾ ಮೊದಲನೆಯ ವರ್ಗಕ್ಕೇ ಸೇರಿದ್ದೇವೆ. ಲವಲವಿಕೆಯ ಜೀವನ ಶೈಲಿಗೆ ಪ್ರೋಟೀನ್‌ಯುಕ್ತ ಆಹಾರಗಳು...

ಇಂದು ಆಹಾರ ಸೇವನೆ ಎಂದರೆ ಇದು ಹೊಟ್ಟೆಯ ಅಗತ್ಯತೆಯನ್ನು ಪೂರೈಸುವುದಕ್ಕಿಂತಲೂ ಹೆಚ್ಚಾಗಿ ನಮ್ಮ ಮನಸ್ಸಿನ ಬಯಕೆಗಳನ್ನೇ ಹೆಚ್ಚು ಪೂರೈಸುತ್ತದೆ. ಹಾಗಾಗಿ ಇಂದು ಆಹಾರ ಪೌಷ್ಟಿಕವಾಗಿರಬೇಕು ಎಂಬುದಕ್ಕಿಂತ ಆಹಾರ 'ನೋಡಲು ಸುಂದರವಾಗಿರಬೇಕು' ಎಂದೇ ಆಗಿದೆ. ಅಷ್ಟಿಲ್ಲದಿದ್ದರೆ ಹೋಟೆಲಿನಲ್ಲಿ ಬಡಿಸುವ ಆಹಾರಗಳನ್ನು ಎಷ್ಟು ಚೆನ್ನಾಗಿ ಅಲಂಕರಿಸುವುದೇಕೆ? ಆರೋಗ್ಯ ಟಿಪ್ಸ್: ಜಗಿದು ತಿಂದರೆ ಜಿಗಿಯುವುದು ಆರೋಗ್ಯ!

ಆಹಾರ ಒಮ್ಮೆ ಬಾಯಿಯಿಂದ ಜಗಿದು ಹೊಟ್ಟೆಗೆ ಹೋದ ಬಳಿಕ ಯಾವ ಸೌಂದರ್ಯವೂ ಉಳಿಯುವುದಿಲ್ಲ. ಬದಲಿಗೆ ಇದರ ಪೋಷಕಾಂಶಗಳು ಮತ್ತು ಹಾನಿ ಎಸಗುವ ಸಾಮಗ್ರಿಗಳು ಮಾತ್ರ. ಮುಂದೇನಾಗುತ್ತದೆ? ಹೊಟ್ಟೆಯಲ್ಲಿ ಜೀರ್ಣಗೊಂಡ ಆಹಾರ ವಿಸರ್ಜನೆಯವರೆಗೂ ಯಾವ ರೀತಿಯಾಗಿ ರೂಪಾಂತರ ಹೊಂದುತ್ತದೆ? ಈ ಬಗ್ಗೆ ಕೆಲವು ಮಾಹಿತಿಗಳನ್ನು ನೋಡೋಣ....

ವಾಸ್ತವಾಂಶ #1

ವಾಸ್ತವಾಂಶ #1

ಆಹಾರ ಸೇವಿಸಿದ ಬಳಿಕ ಇದರ ಪೋಷಕಾಂಶಗಳು ಹೀರಲ್ಪಟ್ಟು ತ್ಯಾಜ್ಯಗಳು ವಿಸರ್ಜನೆಗೊಳ್ಳಲು ಒಂದು ದಿನದಿಂದ ಹಿಡಿದು ಎರಡು ದಿನಗಳವರೆಗೆ ಬೇಕಾಗಬಹುದು.

ವಾಸ್ತವಾಂಶ #2

ವಾಸ್ತವಾಂಶ #2

ಆಹಾರ ಹೊಟ್ಟೆಗೆ ಹೋದ ಬಳಿಕ ವಿಸರ್ಜನೆಗೊಳ್ಳಲು ಹಲವಾರು ವಿಷಯಗಳನ್ನು ಅವಲಂಬಿಸಿರುತ್ತದೆ. ಆಹಾರದಲ್ಲಿ ನಾರಿನ ಪ್ರಮಾಣ, ಘನ ಮತ್ತು ದ್ರವಾಹಾರ, ಆಹಾರವನ್ನು ನೀವು ಎಷ್ಟು ಚೆನ್ನಾಗಿ ಜಗಿಯುತ್ತೀರಿ, ಆಹಾರದ ಪ್ರಮಾಣ ಮೊದಲಾದ ವಿಷಯಗಳು ಈ ಆಹಾರ ಜೀರ್ಣಾಂಗಗಳಲ್ಲಿ ಎಷ್ಟು ಹೊತ್ತು ಇರಬೇಕೆಂದು ನಿರ್ಧರಿಸುತ್ತವೆ.

ವಾಸ್ತವಾಂಶ #3

ವಾಸ್ತವಾಂಶ #3

ಆಹಾರವನ್ನು ಜಗಿಯುವುದು ತುಂಬಾ ಅವಶ್ಯವಾಗಿದೆ. ಪ್ರತಿ ತುತ್ತನ್ನೂ ಚೆನ್ನಾಗಿ ಜಗಿದು ದ್ರವದಂತೆ ಮಾಡಿದ ಬಳಿಕವೇ ನುಂಗುವುದು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಇಲ್ಲದಿದ್ದರೆ ಹೊಟ್ಟೆಯಲ್ಲಿ ಈ ಘನ ಆಹಾರಗಳನ್ನು ಜೀರ್ಣಿಸಿಕೊಳ್ಳಲು ಹೆಚ್ಚಿನ ಶ್ರಮ ಮತ್ತು ಆಮ್ಲಗಳು ಬೇಕಾಗುತ್ತವೆ. ಇದರಿಂದ ಆಮ್ಲೀಯತೆ, ಹೊಟ್ಟೆಯುರಿ ಮೊದಲಾದ ತೊಂದರೆಗಳು ಎದುರಾಗಬಹುದು.

ವಾಸ್ತವಾಂಶ #4

ವಾಸ್ತವಾಂಶ #4

ಜೀರ್ಣಕ್ರಿಯೆ ಸುಲಭಗೊಳ್ಳಲು ನಮ್ಮ ಯಕೃತ್ ಹಾಗೂ ಮೇದೋಜೀರಕ ಗ್ರಂಥಿಗಳು ಸ್ರವಿಸುವ ರಸಗಳೂ ಅಗತ್ಯವಾಗಿವೆ. ಬಳಿಕ ದ್ರವರೂಪದ ಆಹಾರ ಸಣ್ಣ ಕರುಳಿಗೆ ಧಾವಿಸಿ ಅಲ್ಲಿ ಪೋಷಕಾಂಶಗಳು ಹೀರಲ್ಪಡುತ್ತವೆ.

ವಾಸ್ತವಾಂಶ #5

ವಾಸ್ತವಾಂಶ #5

ಬಳಿಕ ದೊಡ್ಡ ಕರುಳಿಗೆ ಹಾದು ಅಲ್ಲಿ ನೀರು ಮತ್ತು ಇತರ ಪೋಷಕಾಂಶಗಳನ್ನು ಹೀರಿ ತ್ಯಾಜ್ಯವನ್ನು ಹೊರಹಾಕಲಾಗುತ್ತದೆ. ತ್ಯಾಜ್ಯವನ್ನು ಹೊರದೂಡಬೇಕೆಂದರೆ ಇದು ಸಾಕಷ್ಟು ಮೃದುವಾಗಿರಬೇಕು. ಆದ್ದರಿಂದ ಆಹಾರದಲ್ಲಿ ಕರಗದ ನಾರು ಇರಬೇಕು. ನಾರು ಇಲ್ಲದಿದ್ದಲ್ಲಿ ಈ ತ್ಯಾಜ್ಯ ಹೆಚ್ಚು ಹೆಚ್ಚು ಗಟ್ಟಿಯಾಗುತ್ತಾ ವಿಸರ್ಜನೆಯನ್ನು ಕಷ್ಟಕರವಾಗಿಸುತ್ತದೆ.

ವಾಸ್ತವಾಂಶ #6

ವಾಸ್ತವಾಂಶ #6

ಆಹಾರದಲ್ಲಿ ಕರಗುವ ಮತ್ತು ಕರಗದ ನಾರು ಇದ್ದಷ್ಟೂ ವಿಸರ್ಜನಾ ಕಾರ್ಯ ಸುಲಭವಾಗುತ್ತದೆ. ಅಲ್ಲದೇ ದೊಡ್ಡ ಕರುಳಿನ ಒಳಗೆ ತ್ಯಾಜ್ಯಗಳು ಚಲಿಸುವುದು ಸುಲಭವಾಗುತ್ತದೆ. ನಾರಿನ ಕೊರತೆಯಿಂದ ತ್ಯಾಜ್ಯ ಗಟ್ಟಿಯಾದರೆ ಇದು ಕರುಳಿನ ಮತ್ತು ಗುದದ್ವಾರದ ಒಳಗೋಡೆಗಳ ಮೇಲೆ ಹೆಚ್ಚಿನ ಒತ್ತಡ ಹೇರಿ ಮೂಲವ್ಯಾಧಿಗೆ ಕಾರಣವಾಗುತ್ತವೆ.

ವಾಸ್ತವಾಂಶ #7

ವಾಸ್ತವಾಂಶ #7

ನಮ್ಮ ಜೀರ್ಣಕ್ರಿಯೆಗೆ ಉತ್ತಮವಾದ ಆಹಾರಗಳೆಂದರೆ ಇಡಿಯ ಧಾನ್ಯಗಳು, ದ್ವಿದಳ ಧಾನ್ಯಗಳು, ಹಸಿರು ತರಕಾರಿಗಳು ಮತ್ತು ಹೆಚ್ಚು ನಾರಿನ ಅಂಶವಿರುವ ಆಹಾರಗಳು. ಸಿದ್ದ ಆಹಾರಗಳನ್ನು ನಾರಿನ ಅಂಶ ಇಲ್ಲದೇ ಇರುವ ಮೈದಾಹಿಟ್ಟಿನಿಂದ ತಯಾರಿಸಲಾಗುತ್ತಿದ್ದು ಇವು ಜೀರ್ಣಾಂಗಗಳಿಗೆ ಸದಾ ಸವಾಲೊಡ್ಡುತ್ತವೆ. ಆದ್ದರಿಂದ ಜೀರ್ಣಾಂಗಗಳಿಗೆ ಸುಲಭವಾಗಲು ಹೆಚ್ಚು ಹೆಚ್ಚು ನೈಸರ್ಗಿಕ ಆಹಾರಗಳನ್ನೇ ಸೇವಿಸುವುದು ಉತ್ತಮ.

 
English summary

How Food Moves Through Intestines

We eat food not for the sake of pleasure but to derive nutrients and survive. Of course, most of us have turned this process into a pleasure. The food that you eat undergoes several changes when it passes through the stomach and intestines. The nutrients in it are derived by the body in several ways.Once all nutrients are absorbed, the waste material is eliminated. Read on to know more...
Subscribe Newsletter