For Quick Alerts
ALLOW NOTIFICATIONS  
For Daily Alerts

ಬಿಕ್ಕಳಿಕೆ ತಡೆಗೆ ಸರಳ ಟ್ರಿಕ್ಸ್- ಕೂಡಲೇ ಕಡಿಮೆಯಾಗುವುದು!

ಬಿಕ್ಕಳಿಕೆ ಯಾವ ಸಮಯದಲ್ಲಿ ಬೇಕಾದರೂ ಬರಬಹುದು. ಬಿಕ್ಕಳಿಕೆ ಒಂದು ಸಲ ಬಂದು ನಿಂತರೆ ಸರಿ, ಆದರೆ ಕೆಲವೊಮ್ಮೆ ತುಂಬಾ ಹೊತ್ತಿನವರೆಗೆ ಬಿಕ್ಕಳಿಕೆ ಬರುತ್ತಾ ಇರುತ್ತದೆ. ಚಿಂತಿಸದಿರಿ ಇಲ್ಲಿದೆ ನೋಡಿ ಸರಳ ಟ್ರಿಕ್ಸ್

By Manu
|

ಕೆಲವು ಸಮಯದಲ್ಲಿ ನಮ್ಮ ಮಾನ ಕಳೆಯಲೆಂದೇ ಬಿಕ್ಕಳಿಕೆ ಬರಬಾರದ ಸಮಯದಲ್ಲಿಯೇ ಬಂದುಬಿಡುತ್ತದೆ. ಹಿರಿಯರು ಬಿಕ್ಕಳಿಕೆ ಬಂದಾಗ 'ನಿಮ್ಮನ್ನು ಯಾರೋ ನೆನಪಿಸಿಕೊಳ್ಳುತ್ತಿದ್ದಾರೆ' ಎನ್ನುತ್ತಾರೆ. ಬಿಕ್ಕಳಿಗೆ ಏಕಾಗಿ ಮತ್ತು ಯಾವ ಸಮಯದಲ್ಲಿ ಬರುತ್ತದೆ ಎಂಬ ಪ್ರಶ್ನೆಗೆ ಇದುವರೆಗೆ ಸ್ಪಷ್ಟವಾದ ಉತ್ತರವಿಲ್ಲ. ಬಿಕ್ಕಳಿಕೆಯನ್ನು ತಕ್ಷಣ ನಿಲ್ಲಿಸಲು ಟಿಪ್ಸ್

ಆದರೆ ಊಟದ ನಡುವೆ ತುತ್ತನ್ನು ಅವಸರವಾಗಿ ನುಂಗುವಾಗ ಅಥವಾ ಊಟದ ಕೊಂಚ ಹೊತ್ತಿನ ಬಳಿಕ, ವಪೆಯಲ್ಲಿ (ಅನ್ನನಾಳದ ಹತ್ತಿರ) ತೊಂದರೆ ಇದ್ದಾಗ, ಒತ್ತಡ, ಉದ್ವೇಗದ ಸಮಯದಲ್ಲಿಯೂ ಬಿಕ್ಕಳಿಕೆ ಎದುರಾಗುತ್ತದೆ. ಕಾರಣವೇನೇ ಇರಲಿ, ಇದು ಬಂದ ಬಳಿಕ ಕಡಿಮೆ ಮಾಡುವುದು ಹೇಗೆ ಎಂಬ ಪ್ರಶ್ನೆಗೆ ಐದು ಉತ್ತರಗಳನ್ನು ಕೆಳಗೆ ನೀಡಲಾಗಿದೆ...


ಸಕ್ಕರೆ

ಸಕ್ಕರೆ

ಬಿಕ್ಕಳಿಕೆ ಎದುರಾದ ತಕ್ಷಣ ಒಂದು ಚಿಕ್ಕಚಮಚ ಸಕ್ಕರೆಯನ್ನು ಬಾಯಿಗೆ ಹಾಕಿಕೊಂಡು ಜೊಲ್ಲಿನಲ್ಲಿ ಕರಗಿದ ಬಳಿಕ ನುಂಗುವುದರಿಂದ ಬಿಕ್ಕಳಿಕೆ ಕಡಿಮೆಯಾಗುತ್ತದೆ. ಸಕ್ಕರೆಯ ಬದಲು ಪೀನಟ್ ಬಟರ್ ಸಹಾ ಉಪಯೋಗಿಸಬಹುದು. ಸಕ್ಕರೆ ಹಿಂದಿರುವ ಕರಾಳ ಸತ್ಯ: ಇಲ್ಲಿದೆ 10 ಪುರಾವೆಗಳು

ಸಕ್ಕರೆ

ಸಕ್ಕರೆ

ಕರಗಿದ ಸಕ್ಕರೆ ಗಂಟಲಿನಲ್ಲಿ ಇಳಿಯುವಾಗ ಗಂಟಲಿನ ಒಳಭಾಗಕ್ಕೆ ಪ್ರಚೋದನೆ ನೀಡುವ ಮೂಲಕ ಬಿಕ್ಕಳಿಕೆಯನ್ನು ಕಡಿಮೆಗೊಳಿಸುತ್ತದೆ ಎನ್ನಲಾಗುತ್ತದೆ, ಆದರೆ ಈ ವಿಧಾನವನ್ನು ಪ್ರಮಾಣಿಸಿಯೇ ನೋಡಬೇಕು.

ದೀರ್ಘ ಉಸಿರಾಟ

ದೀರ್ಘ ಉಸಿರಾಟ

ಬಹಳ ಹಿಂದಿನ ಈ ವಿಧಾನದಲ್ಲಿ ಬಿಕ್ಕಳಿಕೆಯ ಸಮಯದಲ್ಲಿ ನಿಮ್ಮ ಉಸಿರನ್ನು ಆಳವಾಗಿ ಒಳಗೆಳೆದು ಸಾಧ್ಯವಿದ್ದಷ್ಟು ಹೊತ್ತು ಉಸಿರುಗಟ್ಟುವ ಮೂಲಕ ಬಿಕ್ಕಳಿಕೆಯನ್ನು ನಿಯಂತ್ರಿಸಬಹುದು. ಉಸಿರುಗಟ್ಟುವ ಮೂಲಕ ಮೆದುಳಿನ ಸೂಚನೆಯನ್ನು ವಪೆಯ ಬದಲು ಬೇರೆಡೆಗೆ ತಿರುಗಿಸುವುದೇ ಇದರ ಹಿಂದಿನ ತಂತ್ರ.

ನೀರು ಕುಡಿಯುವುದು

ನೀರು ಕುಡಿಯುವುದು

ನೀರು ಕುಡಿಯುವಾಗ ನಮ್ಮ ಶ್ವಾಸನಾಳವನ್ನು ಕಿರುನಾಲಿಗೆ ಮುಚ್ಚಿಬಿಡುವ ಕಾರಣ ಬಿಕ್ಕಳಿಕೆಗೆ ಕಾರಣವಾದ ತೊಂದರೆಯನ್ನೂ ಇಲ್ಲವಾಗಿಸುತ್ತದೆ. ಬಿಕ್ಕಳಿಕೆ ಎದುರಾದ ತಕ್ಷಣ ನೀರನ್ನು ನೇರವಾಗಿ, ಸ್ಟ್ರಾ ಮೂಲಕ, ಎತ್ತಿ ಹಿಡಿದು ಅಥವಾ ಬಗ್ಗಿ, ಒಟ್ಟರೆ ಹೇಗೆ ಸೂಕ್ತವೆನಿಸಿತೋ ಹಾಗೇ ತಕ್ಷಣ ನೀರು ಕುಡಿದುಬಿಡಬೇಕು.ಕುಡಿಯುವ ನೀರನ್ನು ಈ ಹತ್ತು ವಿಧಾನಗಳಲ್ಲಿ ರುಚಿಯಾಗಿಸಿ!

ಹೆದರಿಸುವುದು

ಹೆದರಿಸುವುದು

ಓರ್ವ ವ್ಯಕ್ತಿಯನ್ನು ಆತನ ಗಮನಕ್ಕೆ ತರದಂತೆ ಥಟ್ಟನೇ ಹೆದರಿಸುವ ಮೂಲಕ ದೇಹದಲ್ಲಿ ಭಯದ ಛಳಕು ಮೂಡುತ್ತದೆ. ಈ ಛಳಕು ಬಿಕ್ಕಳಿಕೆಯನ್ನು ಇಲ್ಲವಾಗಿಸುತ್ತದೆ. ಬಿಕ್ಕಳಿಸುತ್ತಿರುವ ವ್ಯಕ್ತಿಯ ಹಿಂದೆ ಖಾಲಿ ಕಾಗದದ ಪೊಟ್ಟಣದಲ್ಲಿ ಗಾಳಿ ತುಂಬಿ ಆತನಿಗೆ ಅರಿವಿಲ್ಲದಂತೆಯೇ ಜೋರಾಗಿ ಹೊಡೆದು ಶಬ್ದ ಬರಿಸುವ ಮೂಲಕ ವ್ಯಕ್ತಿಗೆ ಕೊಂಚ ಗಾಬರಿ ಹುಟ್ಟಿಸಿ ಬಿಕ್ಕಳಿಕೆಯನ್ನು ದೂರಾಗಿಸಬಹುದಂತೆ!!

ಹುಳಿ ತಿನ್ನುವುದು

ಹುಳಿ ತಿನ್ನುವುದು

ಬಿಕ್ಕಳಿಕೆ ಸತತವಾಗಿದ್ದರೆ ತಕ್ಷಣ ಅಥವಾ ಶಿರ್ಕಾವನ್ನು ರುಚಿನೋಡಬೇಕು. ಹುಳಿಯ ಕಾರಣ ಗಂಟಿಕ್ಕುವ ಮುಖ ಬಿಕ್ಕಳಿಕೆಯನ್ನು ಮರೆಸಲು ನೆರವಾಗುತ್ತದೆ.

English summary

Home remedies: Top remedies for cure hiccups

Hiccups comes with a vengeance and it seems like a dying battle to cut it short. There are no explanations for the causes for hiccups, but hiccups are associated with eating quickly, discomfort of the diaphragm, stress and anxiety. Here are top 5 cures for hiccups.
X
Desktop Bottom Promotion