ಮೂಲವ್ಯಾಧಿ ಬಂದರೆ ಆತಂಕ ಬೇಡ! ಇಲ್ಲಿದೆ ನೋಡಿ ಮನೆಮದ್ದುಗಳು

By: manu
Subscribe to Boldsky

ಆ ನೋವು, ಕಿರಿಕಿರಿ ಶತ್ರುವಿಗೆ ಬೇಡ, ಅದು ನನ್ನಿಂದಲೇ ಕೊನೆಗೊಳ್ಳಲಿ ಎಂದು ಪ್ರತಿಯೊಬ್ಬ ಪೈಲ್ಸ್ (ಮೂಲವ್ಯಾಧಿ) ರೋಗಿಯು ಬೇಡಿಕೊಳ್ಳುತ್ತಾನೆ. ಅದರ ನೋವು ಅಪಾರ. ಕೆಲವೊಮ್ಮೆ ಶೌಚಾಲಯದಲ್ಲಿ ಕುಳಿತುಕೊಳ್ಳಲು ಆಗದು. ನೋವಿನಿಂದ ನರಳಾಟ ಯಾರಿಗೂ ಬೇಡ ಎನ್ನುವಂತಾಗುತ್ತದೆ. ಆದರೆ ಜೀವನಶೈಲಿಯಿಂದಾಗಿ ಬರುವ ಇದನ್ನು ನಾವು ಸ್ವೀಕರಿಸಲೇ ಬೇಕು ಮತ್ತು ನೋವನ್ನು ಅನುಭವಿಸಬೇಕು. ಮೂಲವ್ಯಾಧಿಗೆ ಆಯುರ್ವೇದ ಚಿಕಿತ್ಸೆ-ತ್ವರಿತ ಸಾಂತ್ವನ  

ರಕ್ತನಾಳಗಳು ಗುದನಾಳದ ಪ್ರದೇಶದಲ್ಲಿ ಉಬ್ಬಿ ಮತ್ತು ಊತ ಉಂಟಾದಾಗ ನೋವು ಹಾಗೂ ಅತಿಯಾದ ರಕ್ತಸ್ರಾವ ಉಂಟಾಗುತ್ತದೆ. ಮಲಬದ್ಧತೆ, ಜೀರ್ಣಾಂಗದ ಸಮಸ್ಯೆ, ಭಾರವಾದ ವಸ್ತುಗಳನ್ನು ಎತ್ತುವುದು, ಕರುಳನ್ನು ಕೆರಳಿಸುವ ಸಹಲಕ್ಷಣಗಳು, ಗರ್ಭಧಾರಣೆ ವೇಳೆ ಕರುಳಿಗೆ ಒತ್ತಡ ಬೀಳುವುದು, ಬೊಜ್ಜು ಮತ್ತು ಗುದ ಸಂಭೋಗ ಇತ್ಯಾದಿ ಪೈಲ್ಸ್ ಅಥವಾ ಮೂಲವ್ಯಾಧಿ ಕಾಣಿಸಿಕೊಳ್ಳಲು ಪ್ರಮುಖ ಕಾರಣವಾಗಿದೆ...ಚಿಂತಿಸದಿರಿ ಪೈಲ್ಸ್ ರೋಗಕ್ಕೆ ಅನಾವಶ್ಯಕ ದುಡ್ಡು ಖರ್ಚು ಮಾಡುವುದರ ಬದಲು ಈ ಮನೆಮದ್ದನ್ನು ಒಮ್ಮೆ ಪ್ರಯತ್ನಿಸಿ ನೋಡಿ....  

ಮೂಲಂಗಿಯ ಜ್ಯೂಸ್ ಮಾಡಿ ಕುಡಿಯಿರಿ...

ಮೂಲಂಗಿಯ ಜ್ಯೂಸ್ ಮಾಡಿ ಕುಡಿಯಿರಿ...

ಒಂದೆರಡು ಮೂಲಂಗಿಯನ್ನು ಚೆನ್ನಾಗಿ ತೊಳೆದು, ಸಣ್ಣಗೆ ಕತ್ತರಿಸಿ ಮಿಕ್ಸಿಯಲ್ಲಿ ನೀರಿನೊಂದಿಗೆ ಗೊಟಾಯಿಸಿ ಇದಕ್ಕೆ ಕೊಂಚವೇ ಉಪ್ಪು ಸೇರಿಸಿ ದಿನಕ್ಕೆ ಎರಡು ಬಾರಿ ಒಂದೊಂದು ಲೋಟ ಕುಡಿಯಿದರೆ, ಮೂಲವ್ಯಾಧಿ ನಿಯಂತ್ರಣಕ್ಕೆ ಬರುವುದು.

ಮುಟ್ಟಿದರೆ ಮುನಿ ಗಿಡದ ಎಲೆಗಳು

ಮುಟ್ಟಿದರೆ ಮುನಿ ಗಿಡದ ಎಲೆಗಳು

ಮುಟ್ಟಿದರೆ ಮುನಿ (ನಾಚಿಕೆ ಮುಳ್ಳು) ಗಿಡದ ಎಲೆಗಳನ್ನು ಒಣಗಿಸಿ ಪುಡಿ ಮಾಡಿ ಒಂದು ಲೋಟ ನೀರಿಗೆ ಒಂದು ಚಮಚ ಪುಡಿ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮೂಲವ್ಯಾಧಿ ಸಮಸ್ಯೆ ನಿವಾರಣೆಗೆ ಒಳ್ಳೆಯದು.

ಸುವರ್ಣ ಗೆಡ್ಡೆಯ ಸಿಪ್ಪೆ

ಸುವರ್ಣ ಗೆಡ್ಡೆಯ ಸಿಪ್ಪೆ

ಸುವರ್ಣ ಗೆಡ್ಡೆಯನ್ನು ಸಿಪ್ಪೆ ತೆಗೆದು ಒಣಗಿಸಿ ಕುಟ್ಟಿ ಪುಡಿ ಮಾಡಿ, ಆ ಪುಡಿಯನ್ನು ಪ್ರತಿ ದಿನ ಒಂದು ಚಮಚದಂತೆ ಜೇನುತುಪ್ಪಬೆರೆಸಿ ತಿನ್ನುವುದು ಒಳ್ಳೆಯದು.

ಸರಿಯಾಗಿ ನೀರು ಕುಡಿಯಿರಿ

ಸರಿಯಾಗಿ ನೀರು ಕುಡಿಯಿರಿ

ಸಾಕಷ್ಟು ನೀರು ಕುಡಿಯಿರಿ, ತುಂಬಾ ನೀರು ಕುಡಿದರೆ ಮಲಬದ್ಧತೆ ಸಮಸ್ಯೆ ಉಂಟಾಗುವುದಿಲ್ಲ. ನೀರು ಕಮ್ಮಿ ಕುಡಿದು ಮಲಬದ್ಧತೆ ಸಮಸ್ಯೆ ಕಾಣಿಸಿದರೆ ಪೈಲ್ಸ್ ಕಾಯಿಲೆ ಉಂಟಾಗುವುದು, ಆದ್ದರಿಂದ ಸಾಕಷ್ಟು ನೀರು ಕುಡಿಯಿರಿ.

ಬಾಳೆಹಣ್ಣು

ಬಾಳೆಹಣ್ಣು

ಬಾಳೆ ಹಣ್ಣನ್ನು ಒಂದು ಕಪ್ ನೀರಿನಲ್ಲಿ ಹಾಕಿ ಬೇಯಿಸಿ, ಈ ನೀರನ್ನು ದಿನದಲ್ಲಿ 3 ಬಾರಿ ಕುಡಿಯಿರಿ. ಈ ರೀತಿ ಕುಡಿಯುವುದರಿಂದ ಮೂಲವ್ಯಾಧಿ ಸಮಸ್ಯೆ ನೈಸರ್ಗಿಕವಾಗಿ ಕಡಿಮೆಯಾಗುವುದು.

ಮಾವಿನ ಗೊರಟು

ಮಾವಿನ ಗೊರಟು

ಮಾವಿನ ಗೊರಟು ಸಂಗ್ರಹಿಸಿ ನೆರಳಲ್ಲಿ ಒಣಗಿಸಿ ಪುಡಿಮಾಡಿ ಇಡುತ್ತಾರೆ. ಈ ಪುಡಿ ಆಯುರ್ವೇದ ಅಂಗಡಿಯಲ್ಲೂ ಸಿಗುತ್ತದೆ. ಅದರ ಪುಡಿಯನ್ನು ದಿನಕ್ಕೆ ಎರಡು ಚಮಚದಂತೆ ಮುಂಜಾನೆ ಮತ್ತು ಸಂಜೆ ಜೇನಿನೊಡನೆ ಸೇವಿಸಿ.

ನೆಲ್ಲಿಕಾಯಿ ಪುಡಿ

ನೆಲ್ಲಿಕಾಯಿ ಪುಡಿ

ಒಂದು ಚಮಚ ನೆಲ್ಲಿಕಾಯಿ ಪುಡಿಯನ್ನು ಮೊಸರಿನಲ್ಲಿ ಬೆರೆಸಿ ಸೇವಿಸಬೇಕು.... ಇನ್ನೊಂದು ವಿಧಾನವೆಂದರೆ ಮೂಲಂಗಿಯನ್ನು ಅರೆದು ಪೇಸ್ಟ್ ಮಾಡಿ ಹಾಲಿನಲ್ಲಿ ಮಿಶ್ರ ಮಾಡಿ ಅದನ್ನು ಗುದದ್ವಾರದ ಸುತ್ತಲೂ ಹಚ್ಚಿದರೆ ಊತ ಕಡಿಮೆ ಆಗುತ್ತದೆ.

ಹಾಗಾಲಕಾಯಿ

ಹಾಗಾಲಕಾಯಿ

ಹಾಗಾಲಕಾಯಿಯ ಖಾದ್ಯಗಳನ್ನು ತಿನ್ನುವುದು ಒಳ್ಳೆಯದು. ಅದರ ಎಲೆಯನ್ನು ಹಿಂಡಿ ರಸ ತೆಗೆದು ಆ ರಸವನನ್ನು ಊದಿದ ಭಾಗಕ್ಕೆ ಹಚ್ಚಿದರೆ ಉರಿ ಕಡಿಮೆಯಾಗುವುದು.

English summary

Home remedies to cure piles permanently

There are several medications available for treating piles, but above all, natural remedies have been found to have an effective cure for it. Check out for five such effective natural remedies to cure piles, here.
Subscribe Newsletter