ಅಸ್ತಮಾ ರೋಗ ನಿಯಂತ್ರಣಕ್ಕೆ 'ಕೆಂಪು ಈರುಳ್ಳಿ' ಪರ್ಫೆಕ್ಟ್ ಮದ್ದು

By: manu
Subscribe to Boldsky

ಪ್ರತಿಯೊಂದು ಅಡುಗೆ ಮನೆಯಲ್ಲಿ ಕಡ್ಡಾಯವಾಗಿ ಇರಬೇಕಾದ ತರಕಾರಿ ಎಂದರೆ ಈರುಳ್ಳಿ ಮತ್ತು ಆಲೂಗಡ್ಡೆ. ಸಾಮಾನ್ಯವಾಗಿ ಇವುಗಳನ್ನು ಹೆಚ್ಚಿನ ಕಾಲ ಕೆಡದೇ ಸಾಮಾನ್ಯ ತಾಪಮಾನದಲ್ಲಿಡಬಹುದಾದುದರಿಂದ ಹೆಚ್ಚು ಬಳಕೆಯಲ್ಲಿದ್ದರೂ ಈರುಳ್ಳಿಯನ್ನು ಹೆಚ್ಚಿನ ಖಾದ್ಯಗಳಲ್ಲಿ ಮೂಲಸಾಮಾಗ್ರಿಯಾಗಿ ಬಳಸಲಾಗುತ್ತದೆ.  ಅಸ್ತಮಾ ರೋಗವನ್ನು ಸೋಲಿಸುವ ಪವರ್ ಫುಲ್ ಮನೆಮದ್ದುಗಳು

ಈರುಳ್ಳಿಯ ಒಂದೇ ತೊಂದರೆ ಎಂದರೆ ಇದರ ಘಾಟಿಗೆ ಕಣ್ಣಿನಲ್ಲಿ ಉರಿ ಕಾಣಿಸಿಕೊಂಡು ನೀರು ಸುರಿಯುವುದು. ಅದನ್ನು ಬಿಟ್ಟರೆ ಇದನ್ನು ಬಳಸದಿರಲು ಯಾವುದೇ ಕಾರಣ ಉಳಿಯುವುದಿಲ್ಲ. ಈರುಳ್ಳಿ ಕೇವಲ ಅಡುಗೆ ಸಾಮಾಗ್ರಿಯಾಗಿ ಮಾತ್ರವಲ್ಲ, ಔಷಧೀಯ ರೂಪದಲ್ಲಿಯೂ ನೆರವಿಗೆ ಬರುತ್ತದೆ. ವಿಶೇಷವಾಗಿ ಅಸ್ತಮಾ ರೋಗಿಗಳಿಗೆ ಈರುಳ್ಳಿ ಶೀಘ್ರ ಉಪಶಮನ ನೀಡುತ್ತದೆ.

ಈರುಳ್ಳಿಯಲ್ಲಿ ಕೆಲವಾರು ಬಗೆಗಳಿದ್ದರೂ ಪ್ರಮುಖವಾಗಿ ಕೆಲವು ಬಗೆಗಳಿವೆ. ಅವೆಂದರೆ ಬಿಳಿ ಈರುಳ್ಳಿ ಹಾಗೂ ಕೆಂಪು ಈರುಳ್ಳಿ. ಕೆಂಪು ಈರುಳ್ಳಿಯೇ ಹೆಚ್ಚಾಗಿ ಲಭ್ಯವಿದ್ದು ಇದರಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳಿವೆ. ಅಲ್ಲದೇ ಇದರಲ್ಲಿ ಉರಿಯೂತ ನಿವಾರಕ ಗುಣವೂ ಇದೆ. ಹೆಚ್ಚಿನ ಪ್ರಮಾಣದ ವಿಟಮಿನ್ ಸಿ, ಗಂಧಕದ ಸಂಯುಕ್ತಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಹಾಗೂ ಈರುಳ್ಳಿಯಲ್ಲಿ ಬ್ಯಾಕ್ಟೀರಿಯಾ ನಿವಾರಕ ಹಾಗೂ ವೈರಸ್ ನಿವಾರಕ ಗುಣಗಳೂ ಇವೆ.

ಈ ಗುಣಗಳೆಲ್ಲವೂ ಕೂಡಿ ಅಸ್ತಮಾ ರೋಗವನ್ನು ನೈಸರ್ಗಿಕವಾಗಿ ನಿವಾರಿಸಲು ಅತ್ಯುತ್ತಮವಾಗಿದ್ದು ಯಾವುದೇ ಅಡ್ಡಪರಿಣಾಮವಿಲ್ಲದೇ ರೋಗವನ್ನು ಶೀಘ್ರವಾಗಿ ಗುಣಪಡಿಸುವ ಅದ್ಭುತ ಔಷಧಿಯಾಗಿದೆ. ಕೆಲವು ಸಂಶೋಧನೆಗಳ ಮೂಲಕ ಕಂಡುಕೊಂಡಿರುವಂತೆ ಈರುಳ್ಳಿಯಲ್ಲಿರುವ ಥಯೋಸಲ್ಫಿನೇಟ್ (thiosulphinate) ಎಂಬ ಸಂಯುಕ್ತ ಪೋಷಕಾಂಶ ಅತ್ಯುತ್ತಮವಾದ ಉರಿಯೂತ ನಿವಾರಕವಾಗಿದೆ.  ಮಧುಮೇಹ, ಅಸ್ತಮಾ ನಿಯಂತ್ರಣಕ್ಕೆ ಬೆಂಡೆಕಾಯಿ ರಾಮಬಾಣ

ಇದರ ಜೊತೆಗೆ ಕ್ವೆರ್ಸೆಟಿನ್ (quercetin) ಮತ್ತು ಆಂಥೋಸಯಾನಿನ್ ಸಯನಿಡಿನ್ (anthocyanin cyanidin) ಎಂಬ ಫ್ಲೇವನಾಯ್ಡುಗಳು ದೇಹದ ಹಲವಾರು ಅಲರ್ಜಿಗಳನ್ನು ನಿವಾರಿಸಲು ಸಮರ್ಥವಾಗಿವೆ. ವಾಸ್ತವವಾಗಿ ಅಸ್ತಮಾ ಸಹಾ ಅಲರ್ಜಿಯ ಒಂದು ರೂಪವೇ ಆಗಿದ್ದು ಈ ಅಲರ್ಜಿಯನ್ನು ದೂರಗೊಳಿಸಲೂ ಈ ಫ್ಲೇವನಾಯ್ಡುಗಳು ಸಕ್ಷಮವಾಗಿವೆ. ಆದ್ದರಿಂದಲೇ ಅಸ್ತಮಾ ನಿವಾರಣೆಗೆ ಈರುಳ್ಳಿಯ ಸೇವನೆ ಅತ್ಯುತ್ತಮವಾದ ಪರಿಹಾರ ಒದಗಿಸುತ್ತದೆ. ಬನ್ನಿ, ಅಸ್ತಮಾ ರೋಗವನ್ನು ನಿವಾರಿಸಲು ಈರುಳ್ಳಿಯನ್ನು ಹೇಗೆ ಬಳಸಬೇಕು ಎಂಬುದನ್ನು ನೋಡೋಣ....  

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

*ಅರ್ಧ ಕೇಜಿಯಷ್ಟು ಕೆಂಪು ಈರುಳ್ಳಿ (ಚಿಕ್ಕದಾಗಿ ಹೆಚ್ಚಿದ್ದು)

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

*ಸುಮಾರು ಆರರಿಂದ ಎಂಟು ದೊಡ್ಡಚಮಚ ಜೇನು

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

*300 ಗ್ರಾಂ ನಷ್ಟು ಕಂದು ಸಕ್ಕರೆ (ಅಥವಾ ಸಾವಯವ ವಿಧಾನದ ಕಪ್ಪು ಬೆಲ್ಲ)

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

*ಎರಡು ಲಿಂಬೆ ಹಣ್ಣು

ಅಗತ್ಯವಿರುವ ಸಾಮಾಗ್ರಿಗಳು

ಅಗತ್ಯವಿರುವ ಸಾಮಾಗ್ರಿಗಳು

*ಐದರಿಂದ ಆರು ಲೋಟ ನೀರು.

ತಯಾರಿಕಾ ವಿಧಾನ

ತಯಾರಿಕಾ ವಿಧಾನ

ಇವೆಲ್ಲವೂ ಹಿಡಿಸುವಷ್ಟು ದೊಡ್ಡ ಪಾತ್ರೆಯಲ್ಲಿ ಸಕ್ಕರೆ ಹಾಕಿ ಚಿಕ್ಕ ಉರಿಯಲ್ಲಿ ಬಿಸಿಮಾಡಿ. ಸಕ್ಕರೆ ಕರಗಲು ತೊಡಗಿದ ತಕ್ಷಣವೇ ಹೆಚ್ಚಿದ ಈರುಳ್ಳಿ ಹಾಕಿ ಅಲುಗಾಡಿಸುತ್ತಾ ಇರಬೇಕು.

ತಯಾರಿಕಾ ವಿಧಾನ

ತಯಾರಿಕಾ ವಿಧಾನ

ಈರುಳ್ಳಿ ಕೊಂಚವೇ ಕಂದು ಬಣ್ಣ ಬರುವ ವೇಳೆಗೆ ನೀರು ಹಾಕಿ ಕುದಿಸಿ. ನೀರು ಕುದಿದು ಆವಿಯಾಗುತ್ತಾ ಸುಮಾರು ಮೂರರಲ್ಲಿ ಒಂದರಷ್ಟು ಮಟ್ಟಕ್ಕೆ ಇಳಿದ ಬಳಿಕ ಉರಿ ಆರಿಸಿ ತಣಿಯಲು ಬಿಡಿ.

ತಯಾರಿಕಾ ವಿಧಾನ

ತಯಾರಿಕಾ ವಿಧಾನ

ತಣಿದ ಬಳಿಕ ಲಿಂಬೆಹಣ್ಣು ಮತ್ತು ಜೇನು ಬೆರೆಸಿ.ಈ ಮಿಶ್ರಣವನ್ನು ಗಾಜಿನ ಜಾಡಿ ಅಥವಾ ಬಾಟಲಿಯಲ್ಲಿಟ್ಟು ಇಡಿಯ ರಾತ್ರಿ ಹಾಗೇ ಇರಲು ಬಿಡಿ.

ಸೇವನೆಯ ವಿಧಾನ

ಸೇವನೆಯ ವಿಧಾನ

ಅಸ್ತಮಾ ತೊಂದರೆ ಇರುವ ವಯಸ್ಕರಾದರೆ ಒಂದು ದೊಡ್ಡ ಚಮಚದಷ್ಟು ಪ್ರಮಾಣವನ್ನು ಪ್ರತಿ ಊಟಕ್ಕೂ ಮುನ್ನ ಸೇವಿಸಬೇಕು. ಮಕ್ಕಳಿಗೆ ಒಂದು ಚಿಕ್ಕ ಚಮಚದಷ್ಟು ಪ್ರಮಾಣ ಸಾಕಾಗುತ್ತದೆ.

ಸೇವನೆಯ ವಿಧಾನ

ಸೇವನೆಯ ವಿಧಾನ

ನಿಧಾನವಾಗಿ ಅಸ್ತಮಾ ಪರಿಣಾಮ ಕಡಿಮೆಯಾಗುತ್ತಾ ಬಂದು ಸಂಪೂರ್ಣವಾಗಿ ಇಲ್ಲವಾಗುವವರೆಗೆ ಈ ಚಿಕಿತ್ಸೆಯನ್ನು ಮುಂದುವರೆಸಬೇಕು. ಇದರೊಂದಿಗೆ ಊಟದ ಜೊತೆ ಹಸಿ ಈರುಳ್ಳಿಯನ್ನು ಸಹಾ ತಿಂದರೆ ಇನ್ನೂ ಉತ್ತಮ.

 
English summary

Here Is How Red Onions Help Cure Asthma

Onions are a must have ingredient in every kitchen. Though peeling the onions is a great pain, onions are one of the best taste enhancers. Onions are not just used for culinary purpose but also known for their innumerable health benefits. So, today in this article we will be discussing how red onions help in curing asthma.
Subscribe Newsletter