ಹಕ್ಕಿ ಜ್ವರ ವಿರುದ್ಧ ಹೋರಾಡುವ ಜಬರ್ದಸ್ತ್ ಮನೆಮದ್ದು

By: Deepu
Subscribe to Boldsky

ಹಕ್ಕಿ ಜ್ವರವೆಂದರೆ ಕೇವಲ ಹಕ್ಕಿಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ ಎಂದು ಭಾವಿಸುತ್ತೇವೆ. ಆದರೆ ಹಕ್ಕಿ ಜ್ವರವು ಹೆಚ್ಚಾಗಿ ಕೋಳಿಗಳಲ್ಲಿ ಕಂಡುಬರುತ್ತದೆ. ಹಕ್ಕಿಜ್ವರ ಕಂಡು ಬಂದರೆ ಕೋಳಿಗಳನ್ನು ಸಾಮೂಹಿಕವಾಗಿ ಸಂಹಾರ ನಡೆಸಲಾಗುತ್ತದೆ. ಹಕ್ಕಿಜ್ವರ ಬಂದ ಪ್ರದೇಶದ ಕೋಳಿಗಳ ರಫ್ತನ್ನು ನಿಷೇಧಿಸಲಾಗುತ್ತದೆ. ಇಂತಹ ಹಕ್ಕಿ ಜ್ವರ ಮಾನವರಲ್ಲೂ ಕಾಣಿಸಿಕೊಳ್ಳುವುದು. ಅದರಲ್ಲೂ ಏವಿಯನ್ ಫ್ಲೂ ಎಂದು ಕರೆಯಲ್ಪಡುವಂತಹ ಹಕ್ಕಿಜ್ವರವು ತುಂಬಾ ಅಪಾಯಕಾರಿ ಮತ್ತು ಇದು ಪ್ರಾಣಕ್ಕೆ ಸಂಚಕಾರ ತರಬಲ್ಲದು.  ಈ ಕಾಯಿಲೆ ಬಂದರೆ ಇಪ್ಪತ್ತನಾಲ್ಕು ಗಂಟೆಯಲ್ಲಿ ಸಾವು ಖಚಿತ!

ಕೊಳಕು ನೀರು ಮತ್ತು ಧೂಳಿನ ಮೂಲಕವಾಗಿ ಏವಿಯನ್ ಫ್ಲೂ ಹರಡುತ್ತದೆ. ಈ ಜ್ವರಕ್ಕೆ ಯಾವುದೇ ಸಾಂಪ್ರದಾಯಿಕ ಚಿಕಿತ್ಸಾ ವಿಧಾನವಿಲ್ಲ. ಕೆಮ್ಮು, ಗಂಟಲು ನೋವು, ಜ್ವರ, ಸ್ನಾಯುಗಳ ನೋವು ಮತ್ತು ಕಣ್ಣಿನ ಸೋಂಕು ಹಕ್ಕಿಜ್ವರದ ಲಕ್ಷಣಗಳಾಗಿವೆ. ಇದಕ್ಕೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳುವುದು ಅತ್ಯಗತ್ಯ. ಕೆಲವೊಂದು ಮಾತ್ರೆಗಳಿಗೆ ಕೂಡ ಈ ವೈರಸ್ ಅನ್ನು ಕೊಲ್ಲಲು ಸಾಧ್ಯವಾಗುವುದಿಲ್ಲ. ಇದರಿಂದ ಹಕ್ಕಿ ಜ್ವರದ ಸೋಂಕಿನ ವಿರುದ್ಧ ಹೋರಾಡುವುದು ತುಂಬಾ ಕಠಿಣ. 

ಆದರೆ ಕೆಲವೊಂದು ಮನೆಮದ್ದನ್ನು ಬಳಸಿಕೊಂಡು ಹಕ್ಕಿಜ್ವರವನ್ನು ಆರಂಭಿಕ ಹಂತದಲ್ಲಿ ಹೇಗೆ ತಡೆಯಬಹುದು ಎಂದು ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ. ಈ ಮನೆಮದ್ದುಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಹಕ್ಕಿಜ್ವರದ ವಿರುದ್ಧ ಹೋರಾಡಲು ದೇಹಕ್ಕೆ ಶಕ್ತಿಯನ್ನು ತುಂಬಲಿದೆ. ಹಕ್ಕಿ ಜ್ವರಕ್ಕೆ ಮನೆಮದ್ದುಗಳು ಯಾವುದು ಎಂದು ತಿಳಿಯಲು ಲೇಖನ ಓದುವುದನ್ನು ಮುಂದುವರಿಸಿ......   

ಬೆಳ್ಳುಳ್ಳಿ

ಬೆಳ್ಳುಳ್ಳಿ

ಭಾರತೀಯ ಅಡುಗೆಗಳು ಬೆಳ್ಳುಳ್ಳಿಯಿಲ್ಲದೆ ಅಪೂರ್ಣ. ಈ ಪುಟ್ಟ ಬೆಳ್ಳುಳ್ಳಿಯು ಉತ್ತಮ ಆರೋಗ್ಯಕ್ಕೆ ಬೇಕಾದ ಅಂಶಗಳ ಕಣಜವಾಗಿದೆ. ಇದು ನೋಡಲು ಗಟ್ಟಿಯಾಗಿದೆ ಮತ್ತು ರುಚಿಯಲ್ಲಿ ಕಹಿ ಆದರೆ ನಂಬಲಸಾಧ್ಯವಾದ ರೀತಿಯಲ್ಲಿ ಅಡುಗೆಗೆ ರುಚಿ ನೀಡುತ್ತದೆ. ಅಂತೆಯೇ ವೈರಲ್ ವಿರೋಧಿ ಮತ್ತು ನಂಜುನಿರೋಧಕ ಗುಣವನ್ನು ಹೊಂದಿರುವ ಬೆಳ್ಳುಳ್ಳಿಯು ಹಕ್ಕಿ ಜ್ವರದ ವೈರಸ್ ವಿರುದ್ಧ ಹೋರಾಡುವುದು ಮತ್ತು ರಕ್ಷಣೆ ನೀಡುವುದು. ಇದು ಹಕ್ಕಿ ಜ್ವರಕ್ಕೆ ಅತ್ಯುತ್ತಮ ಮನೆಮದ್ದು ಎನ್ನಲಾಗಿದೆ... ಹಾಗಾಗಿ ನಿಯಮಿತವಾಗಿ ಆಹಾರ ಪದಾರ್ಥಗಳಲ್ಲಿ ಬೆಳ್ಳುಳ್ಳಿಯನ್ನು ಬಳಸಿ....ಅಚ್ಚರಿಗೆ ತಳ್ಳುವ ಈ ಪುಟ್ಟ ಬೆಳ್ಳುಳ್ಳಿಯ ಕಾರುಬಾರು!

ಅರಿಶಿನ

ಅರಿಶಿನ

ಆಯುರ್ವೇದದಲ್ಲಿ ಚಿನ್ನದ ದೇವತೆ ಎಂದೇ ಕರೆಯಲ್ಪಡುವ ಅರಿಶಿನದಲ್ಲಿ ರೋಗನಿರೋಧಕ ಶಕ್ತಿಯು ಅಧಿಕವಿದ್ದು ಚರ್ಮದ ಎಂತಹ ಸೋಂಕನ್ನಾದರೂ ನಿವಾರಣೆ ಮಾಡುವ ಗುಣವನ್ನು ಹೊಂದಿರುವುದರಿಂದ ಇದು ನಿಜಕ್ಕೂ ಆರೋಗ್ಯದ ದೇವತೆಯೇ ಸರಿ, ಅದರಲ್ಲೂ ಅರಿಶಿನದಲ್ಲಿ ಕುರ್ಕುಮಿನ್ ಎನ್ನುವ ಉರಿಯೂತ ಶಮನಕಾರಿ ಅಂಶಗಳನ್ನು ಹೊಂದಿರುವುದರಿಂದ ಇದು ಪ್ರತಿರೋಧಕವನ್ನು ಉತ್ತೇಜಿಸುತ್ತದೆ, ಹಾಗೂ ಹಕ್ಕಿಜ್ವರದ ಉರಿಯೂತದ ಅಪಾಯವನ್ನು ತಗ್ಗಿಸುತ್ತದೆ, ಹಾಗಾಗಿ ಸಾಧ್ಯವಾದಷ್ಟು ನಿಯಮಿತವಾಗಿ ಆಹಾರ ಪದಾರ್ಥಗಳಲ್ಲಿ ಅರಿಶಿನವನ್ನು ಬಳಸಿ.... ಅಡುಗೆ ಮನೆಯ ಬಂಗಾರ 'ಅರಿಶಿನ'ದ ಚಿನ್ನದಂತಹ ಗುಣಗಳು

ಮೆಣಸಿನ ಹುಡಿ

ಮೆಣಸಿನ ಹುಡಿ

ಮೆಣಸಿನ ಹುಡಿಯು ದೇಹದಲ್ಲಿನ ರಂಧ್ರಗಳನ್ನು ಹಿಗ್ಗಿಸಿ ಬೆವರು ಬರುವಂತೆ ಮಾಡುವುದು. ಇದು ವಿಷವನ್ನು ಹೊರಹಾಕಲು ನೆರವಾಗುವುದು ಮತ್ತು ಹಕ್ಕಿಜ್ವರದ ವೈರಸ್ ವಿರುದ್ಧ ಹೋರಾಡಲು ನೆರವಾಗುವುದರೊಂದಿಗೆ ಪ್ರತಿರೋಧಕ ವ್ಯವಸ್ಥೆಯನ್ನು ಬಲಪಡಿಸುವುದು. ಪ್ರತಿದಿನ ಆಹಾರ ಪದಾರ್ಥಗಳಲ್ಲಿ ನಿಯಮಿತವಾಗಿ ಬೆರೆಸಿ ಸೇವಿಸಿದರೆ ಹಕ್ಕಿಜ್ವರ ತಡೆಗಟ್ಟಬಹುದು.

ಆಲಿವ್ ಎಲೆಗಳ ಸತ್ವ

ಆಲಿವ್ ಎಲೆಗಳ ಸತ್ವ

ಇದರಲ್ಲಿ ವೈರಲ್ ವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಇದು ಪ್ರತಿರೋಧಕ ಶಕ್ತಿಯನ್ನು ಬಲಪಡಿಸುವುದು. ಹಕ್ಕಿಜ್ವರದ ವಿರುದ್ಧ ಹೋರಾಡಲು ರಕ್ತ ಹಾಗೂ ದುಗ್ಧನಾಳ ವ್ಯವಸ್ಥೆಗೆ ಇದು ನೆರವಾಗುವುದು. ಹಕ್ಕಿ ಜ್ವರದ ಚಿಕಿತ್ಸೆಗೆ ಇದು ಅತ್ಯುತ್ತಮ ಮನೆಮದ್ದು ಎನ್ನಲಾಗಿದೆ.ವೈದ್ಯಲೋಕವನ್ನೇ ತಲ್ಲಣಗೊಳಿಸಿದ ಆಲಿವ್ ಎಲೆಗಳ ವೈಶಿಷ್ಟ್ಯವೇನು?

ಆಸ್ಟ್ರಾಗಲುಸ್

ಆಸ್ಟ್ರಾಗಲುಸ್

ಇದೊಂದು ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಗಿಡಮೂಲಿಕೆಯಾಗಿದೆ. ಪ್ರತಿರೋಧಕ ಪ್ರೋಟೀನ್ ಅನ್ನು ಹೆಚ್ಚಿಸಿ ಅಸ್ಥಿಮಜ್ಜೆಗೆ ಬಲ ನೀಡುವುದು. ರೋಗಗಳ ವಿರುದ್ಧ ಹೋರಾಡಲು ಇದು ರಕ್ತಕಣಗಳನ್ನು ಉತ್ಪತ್ತಿ ಮಾಡುತ್ತದೆ. ದೇಹದಲ್ಲಿ ಹಕ್ಕಿಜ್ವರದ ವೈರಸ್ ವಿರುದ್ಧ ಹೋರಾಡಲು ಮತ್ತು ರಕ್ಷಣೆ ನೀಡಲು ಇದು ನೆರವಾಗುತ್ತದೆ.

 
English summary

Herbal Home Remedies To Fight Bird Flu Virus

Bird flu, also known as Avian flu, is a flu that was believed to affect only birds, mostly chickens. Later, it was found that even humans were also affected by this disease because of the deadly bird flu virus.
Story first published: Tuesday, February 14, 2017, 23:32 [IST]
Please Wait while comments are loading...
Subscribe Newsletter