ಅಧ್ಯಯನ ವರದಿ: ಔಷಧಿಗಳ ವಿಚಾರದಲ್ಲಿ ಸ್ವಯಂ ವೈದ್ಯರಾಗಬೇಡಿ

By: Suhani B
Subscribe to Boldsky

ಜನರಿಗೆ ಅಸೌಖ್ಯ ಬರುವುದು ಸಹಜ ಈ ರೀತಿ ಅಸೌಖ್ಯ ಬಂದಾಗ ವೈದ್ಯರ ಸಲಹೆ ಸೂಚನೆ ಪಡೆಯದೆ ಸಾಮಾನ್ಯವಾಗಿ ತಾವೇ ವೈದ್ಯರಾಗಿ ನಿರಂತರ ಔಷಧಿ ಸೇವನೆ ಮಾಡಿದಲ್ಲಿ ಎದೆಯುರಿ, ಕರುಳು ಹುಣ‍್ಣು ಹಾಗೂ ದೊಡ್ಡ ಕರುಳಿಗೆ ಸಂಬಂಧ ಪಟ್ಟ ಕಾಯಿಲೆಗಳಿಗೆ ಮತ್ತು ಸಾವಿನೆಡೆಗೆ ಬೇಗನೆ ಗುರಿಯಾಗುತ್ತೇವೆ ಎಂದು ವೈದ್ಯಕೀಯ ಸಂಶೋಧಕರು ಎಚ್ಚರಿಸಿದ್ದಾರೆ.

ನಾವೇ ವೈದ್ಯರಾಗುವುದಕ್ಕಿಂತ ರೋಗದ ಗುಣಲಕ್ಷಣಗಳ ಬಗ್ಗೆ ವೈದ್ಯರ ಸಲಹೆಯಂತೆ ನಡೆದು ಕೊಂಡಾಗ ಆರೋಗ್ಯದೆಡೆಗೆ ಮುನ್ನೆಡೆಯಬಹುದು. ಈ ರೀತಿ ಔಷಧಿ ಸೇವನೆ ಮಾಡುವ ಶೇ. 50 ರಷ್ಟು ಜನರು ಮುಂದಿನ 5 ವರ್ಷಗಳಲ್ಲಿ ಬೇಗನೆ ಸಾವಿಗೆ ಈಡಾಗುತ್ತಾರೆ.

Drugs

ಜನರಿಗೆ PPIs ಸೇವನೆ ತುಂಬಾ ಸುಲಭವಾಗಿ ದೊರೆಯುವ ಔಷಧಿ ಎಂಬ ನಂಬಿಕೆಯಿಂದ ದೀರ್ಘಾವಧಿ ಸೇವನೆ ಮಾಡುತ್ತಾ ಬಂದಲ್ಲಿ ಅನೇಕ ಆರೋಗ್ಯಕರ ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಎಂದು ಪ್ರೊಫೆಸರ್ ಜಿಯಾದ್ - ಅಲ್ - ಅಲಿ ವಾಷಿಂಗ್ಟನ್ ಸ್ಕೂಲ್ ಆಫ್ ಮೆಡಿಸಿನ್ ಸೈಂಟ್ ಲೂಯಿಸ್ ನವರ ಚಿಂತನೆಯಾಗಿದೆ.

ಅವರ ಅಭಿಪ್ರಾಯ ತಿಳಿಸುತ್ತಾ 50 ಜನರಲ್ಲಿ ಈ ರೀತಿ ಔಷಧಿ ಸೇವನೆಯಿಂದಲೇ ಮೃತ ಪಟ್ಟಿರುತ್ತಾರೆ. PPIs ಸೇವನೆಯಿಂದ ಮೂತ್ರಪಿಂಡ ತೊಂದರೆ ಎಲುಬು ಸವಕಳಿ, ಎಲುಬು ಮುರಿತ, ಮರೆಗುಳಿತನಕ್ಕೆ ಈಡಾಗುವರೆಂದು ತಿಳಿಸಿದ್ದಾರೆ.

Drugs

BMJ ನಿಯತಕಾಲಿಕದಲ್ಲಿ ವೈದ್ಯಕೀಯ ಸಂಶೋಧನಾ ಬರವಣಿಗೆಗಳ ಪ್ರಕಾರ ಅಂದಾಜು 2,75000 PPIs ಸೇವನೆ ಮಾಡಿದವರು ಮತ್ತು 7,500 ಜನರು H2 ಎಂದು ಗುರುತಿಸಲ್ಪಟ್ಟ ಔಷಧಿ ಸೇವನಾಕಾರರು ಹೊಟ್ಟೆ ನೋವಿನ ಕಾಯಿಲೆಗಳಿಗೆ ಮತ್ತು ದೊಡ್ಡ ಕರುಳಿನಲ್ಲಿ ರಕ್ತ ಸೋರುವಿಕೆ, ಹೊಟ್ಟ ಉರಿ ಮತ್ತು ಮುಖದ ಕ್ಯಾನ್ಸರ್‌ಗೆ ಗುರಿಯಾಗುತ್ತಾರೆ. ಸಂಶೋಧನಾಕಾರರ ಪ್ರಕಾರ ಶೇ.25% ಜನರು H2 ಔಷಧಿ ಸೇವನೆ ಗುಂಪಿನವರಿಗಿಂತ ಸಾವಿನೆಡೆಗೆ ತುತ್ತಾಗುತ್ತಾರೆ. ಮಿತ್ರರೇ ನಾವೇ ವೈದ್ಯರಾಗುವುದಕ್ಕಿಂತ ವೈದ್ಯರ ಸಲಹೆ ಸೂಚನೆ ಪಡೆಯುವುದೇ ಲೇಸು ಅಲ್ಲವೇ?

English summary

Heartburn Drugs May Up Death Risk - Finds Study

Individuals who take drugs that are commonly used to treat heartburn, ulcers and other gastrointestinal problems for a prolonged time may be at an increased risk of death, researchers warned.The findings showed that people taking these drugs called as proton pump inhibitors (PPIs) had a 50 per cent increased risk of dying over the next five years.
Story first published: Thursday, July 20, 2017, 23:33 [IST]
Subscribe Newsletter